ಪವಿತ್ರ ಬೈಬಲ್

ದೇವರ ಕೃಪೆಯ ಉಡುಗೊರೆ
ಕೀರ್ತನೆಗಳು 120:1

Notes

No Verse Added

ಕೀರ್ತನೆಗಳು 120:1

1
ನನ್ನ ಇಕ್ಕಟ್ಟಿನಲ್ಲಿ ನಾನು ಕರ್ತನಿಗೆ ಕೂಗಿದೆನು; ಆತನು ನನಗೆ ಉತ್ತರ ಕೊಟ್ಟನು.
2
ಕರ್ತನೇ, ನನ್ನ ಪ್ರಾಣವನ್ನು ಸುಳ್ಳು ತುಟಿಯಿಂದಲೂ ಮೋಸದ ನಾಲಿಗೆಯಿಂದಲೂ ಬಿಡಿಸು.
3
ಸುಳ್ಳಿನ ನಾಲಿಗೆಯೇ, ದೇವರು ನಿನಗೇನು ಮಾಡ ಬೇಕು? ಆತನು ನಿನಗೇನು ಕೊಡಬೇಕು?
4
ಪರಾ ಕ್ರಮಶಾಲಿಯ ಹದವಾದ ಬಾಣಗಳು ಮತ್ತು ಜಾಲಿ ಮರದ ಕೆಂಡಗಳು ನಿನಗೆ ಕೊಡಲ್ಪಡಲಿ.
5
ಕೇದಾರಿನ ಗುಡಾರಗಳ ಬಳಿಯಲ್ಲಿ ವಾಸ ಮಾಡಿ ಮೇಷೆಕಿನಲ್ಲಿ ಪ್ರವಾಸಿಯಾಗಿರುವದರಿಂದ ನನಗೆ ಅಯ್ಯೋ!
6
ನನ್ನ ಪ್ರಾಣವು ಸಮಾಧಾನವನ್ನು ಹಗೆ ಮಾಡುವವರ ಸಂಗಡ ವಾಸಮಾಡಿ ಸಾಕಾಯಿತು.
7
ನಾನು ಸಮಾಧಾನವಾಗಿದ್ದೇನೆ; ಆದರೆ ನಾನು ಮಾತಾಡಲು ಅವರು ಯುದ್ಧಮಾಡು ವದಕ್ಕಿದ್ದಾರೆ.
×

Alert

×

kannada Letters Keypad References