ರೂತಳು 4 : 1 (OCVKN)
ಬೋವಜನು ರೂತಳನ್ನು ಮದುವೆಯಾದದ್ದು
ರೂತಳು 4 : 2 (OCVKN)
ಬೋವಜನು ಪಟ್ಟಣದ ಬಾಗಿಲ ಬಳಿ ಹೋಗಿ ಕುಳಿತುಕೊಂಡನು. ಆಗ ಬೋವಜನು ಹೇಳಿದ್ದ ಆ ವಿಮೋಚಕ ಬಂಧುವು ಹಾದುಹೋಗುತ್ತಿದ್ದನು. ಬೋವಜನು ಅವನಿಗೆ, “ನನ್ನ ಸ್ನೇಹಿತನೇ, ಈ ಕಡೆಗೆ ಬಂದು ಇಲ್ಲಿ ಕುಳಿತುಕೋ,” ಎಂದನು. ಅವನು ಬಂದು ಕುಳಿತುಕೊಂಡನು. ಆಗ ಬೋವಜನು ಪಟ್ಟಣದ ಹಿರಿಯರಲ್ಲಿ ಹತ್ತು ಮಂದಿಯನ್ನು ಕರೆದು ಅವರಿಗೆ, “ಇಲ್ಲಿ ಕುಳಿತುಕೊಳ್ಳಿರಿ,” ಎಂದನು. ಅವರು ಕುಳಿತರು.
ರೂತಳು 4 : 3 (OCVKN)
ಆಗ ಬೋವಜನು ಆ ವಿಮೋಚಕ ಬಂಧುವಿಗೆ ಹೇಳಿದ್ದೇನೆಂದರೆ, “ಮೋವಾಬ್ ಸೀಮೆಯಿಂದ ತಿರುಗಿ ಬಂದ ನೊವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನಿಗೆ ಇದ್ದ ಹೊಲದ ಪಾಲನ್ನು ಮಾರಿಬಿಡಬೇಕೆಂದಿರುತ್ತಾಳೆ.
ರೂತಳು 4 : 4 (OCVKN)
ನಿವಾಸಿಗಳ ಮುಂದೆಯೂ ನನ್ನ ಜನರಾದ ಹಿರಿಯರ ಮುಂದೆಯೂ ಅದನ್ನು ಕೊಂಡು ಬಿಡಿಸಿಕೊಂಡರೆ ಬಿಡಿಸಿಕೋ. ಬಿಡಿಸಿಕೊಳ್ಳದಿದ್ದರೆ ನಾನು ತಿಳಿದುಕೊಳ್ಳುವ ಹಾಗೆ ನನಗೆ ಹೇಳು. ಏಕೆಂದರೆ ನೀನೂ ನಿನ್ನ ತರುವಾಯ ನಾನೂ ಅಲ್ಲದೆ ಬಿಡಿಸಿಕೊಳ್ಳುವವನು ಯಾರೂ ಇಲ್ಲ,” ಎಂದು ಹೇಳಿದನು.
ರೂತಳು 4 : 5 (OCVKN)
ಅದಕ್ಕೆ ಅವನು, “ನಾನು ಬಿಡಿಸಿಕೊಳ್ಳುವೆನು,” ಎಂದನು.
ರೂತಳು 4 : 6 (OCVKN)
ಆಗ ಬೋವಜನು, “ನೀನು ನೊವೊಮಿಯಿಂದ ಆ ಹೊಲವನ್ನು ಕೊಂಡುಕೊಳ್ಳುವ ದಿವಸದಲ್ಲಿ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡುವ ಹಾಗೆ ಅವನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ತೆಗೆದುಕೊಳ್ಳಬೇಕು,” ಎಂದನು.
ರೂತಳು 4 : 7 (OCVKN)
ಅದಕ್ಕೆ ಆ ಬಂಧುವು, “ನಾನು ನನ್ನ ಬಾಧ್ಯತೆಯನ್ನು ನಷ್ಟಪಡಿಸಿಕೊಳ್ಳದ ಹಾಗೆ ಅದನ್ನು ಬಿಡಿಸಿಕೊಳ್ಳಲಾರೆನು. ನಾನು ಬಿಡಿಸಿಕೊಳ್ಳತಕ್ಕದ್ದನ್ನು ನೀನು ಬಿಡಿಸಿಕೋ; ಏಕೆಂದರೆ ನಾನು ಬಿಡಿಸಿಕೊಳ್ಳಲಾರೆನು,” ಎಂದನು.
ರೂತಳು 4 : 8 (OCVKN)
ಬಿಡಿಸಿಕೊಳ್ಳುವುದರಲ್ಲಿಯೂ ಬದಲು ಮಾಡುವುದರಲ್ಲಿಯೂ ಸಕಲ ಕಾರ್ಯಗಳೂ ದೃಢವಾಗುವ ಹಾಗೆ ಇಸ್ರಾಯೇಲಿನಲ್ಲಿ ಒಂದು ವಾಡಿಕೆಯಿತ್ತು. ಅದು ಕೊಡುವವನು ಕೊಳ್ಳುವವನಿಗೆ ತನ್ನ ಕೆರವನ್ನು ತೆಗೆದು ತನ್ನ ನೆರೆಯವನಿಗೆ ಕೊಡುತ್ತಿದ್ದನು. ಇದು ಇಸ್ರಾಯೇಲಿನಲ್ಲಿ ವ್ಯವಹಾರವನ್ನು ಕಾನೂನು ಬದ್ಧಗೊಳಿಸುವ ವಿಧಾನವಾಗಿತ್ತು.
ರೂತಳು 4 : 9 (OCVKN)
ಹಾಗೆಯೇ ಆ ಬಂಧುವು ಬೋವಜನಿಗೆ, “ನೀನೇ ನಿನಗೋಸ್ಕರ ಅದನ್ನು ಕೊಂಡುಕೋ,” ಎಂದು ತನ್ನ ಕೆರವನ್ನು ತೆಗೆದುಹಾಕಿದನು. ಆಗ ಬೋವಜನು ಹಿರಿಯರಿಗೂ ಸಮಸ್ತ ಜನರಿಗೂ, “ನಾನು ಎಲೀಮೆಲೆಕನಿಗೆ ಇದ್ದ ಎಲ್ಲವನ್ನೂ ಕಿಲ್ಯೋನನಿಗೂ ಮಹ್ಲೋನನಿಗೂ ಇದ್ದ ಎಲ್ಲವನ್ನೂ ನೊವೊಮಿಯ ಕೈಯಿಂದ ಕೊಂಡುಕೊಂಡೆನು ಎಂಬುದಕ್ಕೆ ಈ ದಿನ ನೀವು ಸಾಕ್ಷಿಗಳಾಗಿದ್ದೀರಿ.
ರೂತಳು 4 : 10 (OCVKN)
ಇದಲ್ಲದೆ ಸತ್ತವನ ಹೆಸರನ್ನು ಸ್ಥಿರಮಾಡಲು ನಾನು ಮಹ್ಲೋನನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನಗೆ ಹೆಂಡತಿಯಾಗಿ ಸ್ವೀಕರಿಸಿದ್ದೇನೆ. ಇದರಿಂದ ಹೊಲದ ಖಾತೆಯು ಗತಿಸಿದ ಮಹ್ಲೋನನ ಹೆಸರಿನಲ್ಲಿಯೇ ಉಳಿಯುವುದು. ಅವನ ಹೆಸರೂ ಅವನ ವಂಶವೂ ಊರಲ್ಲಿಯೇ ನೆಲೆಯಾಗಿರುವುದು. ಇದಕ್ಕೆ ಈ ದಿನ ನೀವು ಸಾಕ್ಷಿಗಳಾಗಿದ್ದೀರಿ,” ಎಂದನು.
ರೂತಳು 4 : 11 (OCVKN)
ಆಗ ಊರುಬಾಗಿಲಲ್ಲಿ ಕೂಡಿದ್ದ ಸಮಸ್ತ ಜನರೂ ಹಿರಿಯರೂ, “ನಾವು ಸಾಕ್ಷಿಗಳೇ, ನಿನ್ನ ಮನೆಯಲ್ಲಿ ಬಂದ ಸ್ತ್ರೀಯನ್ನು ಯೆಹೋವ ದೇವರು ಇಸ್ರಾಯೇಲ್ ಮನೆಯನ್ನು ಕಟ್ಟಿದ ಇಬ್ಬರಾದ ರಾಹೇಲಳ ಹಾಗೆಯೂ ಲೇಯಳ ಹಾಗೆಯೂ ಮಾಡಲಿ. ಎಫ್ರಾತದಲ್ಲಿ ಧನವಂತನಾಗಿರು, ಬೇತ್ಲೆಹೇಮಿನಲ್ಲಿ ಘನವಂತನಾಗಿರು.
ರೂತಳು 4 : 12 (OCVKN)
ಈ ಹುಡುಗಿಯಿಂದ ಯೆಹೋವ ದೇವರು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯು ತಾಮಾರಳು ಯೆಹೂದನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ,” ಎಂದರು.
ರೂತಳು 4 : 13 (OCVKN)
ನೊವೊಮಿ ಒಬ್ಬ ಮಗನನ್ನು ಪಡೆದದ್ದು ಬೋವಜನು ರೂತಳನ್ನು ಮದುವೆಯಾದನು. ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳೊಂದಿಗೆ ಬಾಳಿದಾಗ, ರೂತಳು ಯೆಹೋವ ದೇವರ ಅನುಗ್ರಹದಿಂದ ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆತ್ತಳು.
ರೂತಳು 4 : 14 (OCVKN)
ಆಗ ಸ್ತ್ರೀಯರು ನೊವೊಮಿಗೆ, “ಇಸ್ರಾಯೇಲಿನಲ್ಲಿ ವಿಮೋಚಿಸತಕ್ಕ ಬಾಧ್ಯಸ್ಥನನ್ನು ನಿನಗೆ ಅನುಗ್ರಹಿಸಿದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಈ ಮಗನು ಪ್ರಖ್ಯಾತನಾಗಲಿ.
ರೂತಳು 4 : 15 (OCVKN)
ಅವನು ನಿನಗೆ ಪ್ರಾಣವನ್ನು ಪುನರುಜ್ಜೀವಿಸುವವನಾಗಿಯೂ ನಿನ್ನ ವೃದ್ಧ ವಯಸ್ಸಿನಲ್ಲಿ ಸಂರಕ್ಷಿಸುವವನಾಗಿಯೂ ಇರುವನು. ಏಕೆಂದರೆ ನಿನ್ನನ್ನು ಪ್ರೀತಿ ಮಾಡುವ ಏಳುಮಂದಿ ಮಕ್ಕಳಿಗಿಂತ ನಿನಗೆ ಉತ್ತಮಳಾಗಿರುವ ನಿನ್ನ ಸೊಸೆಯು ಅವನನ್ನು ಹೆತ್ತಳು,” ಎಂದರು.
ರೂತಳು 4 : 16 (OCVKN)
ನೊವೊಮಿಯು ಆ ಮಗುವನ್ನು ಎತ್ತಿ ತನ್ನ ಉಡಿಲಲ್ಲಿ ಇಟ್ಟುಕೊಂಡು ಅದಕ್ಕೆ ದಾದಿಯಾದಳು.
ರೂತಳು 4 : 17 (OCVKN)
ಆಗ ನೆರೆಹೊರೆಯ ಸ್ತ್ರೀಯರು ನೊವೊಮಿಗೆ, “ಒಬ್ಬ ಮಗನು ಹುಟ್ಟಿದ್ದಾನೆ,” ಎಂದು ಹೇಳಿ ಅವನಿಗೆ ಓಬೇದನೆಂದು ಹೆಸರಿಟ್ಟರು. ಇವನೇ ದಾವೀದನ ತಂದೆಯಾದ ಇಷಯನಿಗೆ ತಂದೆಯಾದವನು.
ರೂತಳು 4 : 18 (OCVKN)
ದಾವೀದನ ವಂಶಾವಳಿ ಪೆರೆಚನ ಸಂತತಿಯ ವಿವರ: ಪೆರೆಚನು ಹೆಚ್ರೋನನ ತಂದೆಯಾಗಿದ್ದನು;
ರೂತಳು 4 : 19 (OCVKN)
ಹೆಚ್ರೋನನು ರಾಮನ ತಂದೆಯಾಗಿದ್ದನು; ರಾಮನು ಅಮ್ಮೀನಾದಾಬನ ತಂದೆಯಾಗಿದ್ದನು;
ರೂತಳು 4 : 20 (OCVKN)
ಅಮ್ಮೀನಾದಾಬನು ನಹಶೋನನ ತಂದೆಯಾಗಿದ್ದನು; ನಹಶೋನನು ಸಲ್ಮೋನನ ತಂದೆಯಾಗಿದ್ದನು;
ರೂತಳು 4 : 21 (OCVKN)
ಸಲ್ಮೋನನು ಬೋವಜನ ತಂದೆಯಾಗಿದ್ದನು; ಬೋವಜನು ಓಬೇದನ ತಂದೆಯಾಗಿದ್ದನು;
ರೂತಳು 4 : 22 (OCVKN)
ಓಬೇದನು ಇಷಯನ ತಂದೆಯಾಗಿದ್ದನು; ಇಷಯನು ದಾವೀದನ ತಂದೆಯಾಗಿದ್ದನು.

1 2 3 4 5 6 7 8 9 10 11 12 13 14 15 16 17 18 19 20 21 22