ರೋಮಾಪುರದವರಿಗೆ 5 : 1 (OCVKN)
ಸಮಾಧಾನ ಮತ್ತು ನಿರೀಕ್ಷೆ ಹೀಗಿರುವುದರಿಂದ, ವಿಶ್ವಾಸದ ಮೂಲಕ ನೀತಿವಂತರೆಂಬ ನಿರ್ಣಯ ಹೊಂದಿದ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಮಗೆ ದೇವರೊಂದಿಗೆ ಸಮಾಧಾನವಿರುತ್ತದೆ.
ರೋಮಾಪುರದವರಿಗೆ 5 : 2 (OCVKN)
ಯೇಸುವಿನ ಮೂಲಕವೇ ನಾವು ಈಗ ಈ ಕೃಪೆಯಲ್ಲಿ ವಿಶ್ವಾಸದಿಂದ ಪ್ರವೇಶಮಾಡಿದ್ದೇವೆ. ಈ ಕೃಪೆಯಲ್ಲಿಯೇ ಈಗ ನಿಂತಿದ್ದೇವೆ. ನಾವು ದೇವರ ಮಹಿಮೆಯಲ್ಲಿ ಪಾಲುಗೊಳ್ಳುತ್ತೆವೆಂಬ ನಿರೀಕ್ಷೆಯಲ್ಲಿ ಆನಂದಪಡುತ್ತೇವೆ.
ರೋಮಾಪುರದವರಿಗೆ 5 : 3 (OCVKN)
ಅಷ್ಟು ಮಾತ್ರವೇ ಅಲ್ಲ, ನಮ್ಮ ಕಷ್ಟಸಂಕಟಗಳಲ್ಲಿಯೂ ಸಂತೋಷ ಪಡುವವರಾಗಿರುತ್ತೇವೆ. ಏಕೆಂದರೆ ಕಷ್ಟಸಂಕಟವು ತಾಳ್ಮೆಯನ್ನು ಉಂಟುಮಾಡುತ್ತದೆಂದೂ
ರೋಮಾಪುರದವರಿಗೆ 5 : 4 (OCVKN)
ತಾಳ್ಮೆಯು ಸದ್ಗುಣವನ್ನೂ ಸದ್ಗುಣವು ನಿರೀಕ್ಷೆಯನ್ನೂ ಉಂಟು ಮಾಡುತ್ತದೆಂದು ಬಲ್ಲೆವು.
ರೋಮಾಪುರದವರಿಗೆ 5 : 5 (OCVKN)
ಈ ನಿರೀಕ್ಷೆಯು ನಮ್ಮನ್ನು ನಿರಾಶೆ ಪಡಿಸುವುದಿಲ್ಲ. ಏಕೆಂದರೆ ದೇವರು ನಮಗೆ ಅನುಗ್ರಹಿಸಿರುವ ಪವಿತ್ರಾತ್ಮ ಮೂಲಕ ನಮ್ಮ ಹೃದಯಗಳಲ್ಲಿ ತಮ್ಮ ಪ್ರೀತಿಯನ್ನು ಧಾರಾಳವಾಗಿ ಸುರಿಸಿದ್ದಾರೆ.
ರೋಮಾಪುರದವರಿಗೆ 5 : 6 (OCVKN)
ನಾವು ಇನ್ನೂ ಬಲಹೀನರಾಗಿದ್ದಾಗಲೇ, ಸೂಕ್ತ ಸಮಯದಲ್ಲಿ ಕ್ರಿಸ್ತ ಯೇಸು ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟರು.
ರೋಮಾಪುರದವರಿಗೆ 5 : 7 (OCVKN)
ನೀತಿವಂತನಿಗೋಸ್ಕರ ಯಾರಾದರೂ ಪ್ರಾಣಕೊಡುವುದು ಅಪರೂಪ. ಒಬ್ಬ ಸತ್ಪುರುಷನಿಗಾಗಿ ಯಾರಾದರೂ ಪ್ರಾಣಕೊಡುವುದಕ್ಕೆ ಧೈರ್ಯ ಮಾಡಬಹುದು.
ರೋಮಾಪುರದವರಿಗೆ 5 : 8 (OCVKN)
ಆದರೆ ಕ್ರಿಸ್ತ ಯೇಸು ನಾವು ಇನ್ನೂ ಪಾಪಿಗಳಾಗಿದ್ದಾಗಲೇ ನಮಗೋಸ್ಕರ ಪ್ರಾಣ ಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ಇಟ್ಟಿರುವ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ.
ರೋಮಾಪುರದವರಿಗೆ 5 : 9 (OCVKN)
ಈಗ ನಾವು ಕ್ರಿಸ್ತ ಯೇಸುವಿನ ರಕ್ತದಿಂದ ನೀತಿವಂತರೆಂದು ನಿರ್ಣಯ ಹೊಂದಿರುವುದರಿಂದ, ಕ್ರಿಸ್ತ ಯೇಸುವಿನ ಮೂಲಕವಾಗಿಯೇ ದೇವರ ಕೋಪದಿಂದ ರಕ್ಷಿಸಲಾಗುವುದು ಇನ್ನೂ ಖಂಡಿತವಲ್ಲವೆ?
ರೋಮಾಪುರದವರಿಗೆ 5 : 10 (OCVKN)
ನಾವು ದೇವರ ಶತ್ರುಗಳಾಗಿದ್ದಾಗಲೇ ಅವರು ನಮ್ಮನ್ನು ತಮ್ಮ ಪುತ್ರನ ಮರಣದ ಮೂಲಕ ಸಂಧಾನ ಮಾಡಿಕೊಂಡಿರುವುದಾದರೆ, ಕ್ರಿಸ್ತ ಯೇಸುವಿನ ಜೀವದ ಮೂಲಕ ಎಷ್ಟೋ ಹೆಚ್ಚಾಗಿ ನಾವು ರಕ್ಷಿಸುವುದು ಇನ್ನೂ ಖಚಿತವಲ್ಲವೆ?
ರೋಮಾಪುರದವರಿಗೆ 5 : 11 (OCVKN)
ಇಷ್ಟು ಮಾತ್ರವೇ ಅಲ್ಲ, ಈಗ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಾವು ದೇವರೊಂದಿಗೆ ಮಿತ್ರರಾಗಿ, ಯೇಸುವಿನ ಮೂಲಕವೇ ದೇವರಲ್ಲಿ ಉಲ್ಲಾಸ ಪಡುತ್ತೇವೆ.
ರೋಮಾಪುರದವರಿಗೆ 5 : 12 (OCVKN)
ಆದಾಮನ ಮೂಲಕ ಮರಣ, ಕ್ರಿಸ್ತ ಯೇಸುವಿನ ಮೂಲಕ ಜೀವ
ರೋಮಾಪುರದವರಿಗೆ 5 : 13 (OCVKN)
ಆದ್ದರಿಂದ, ಒಬ್ಬ ಮನುಷ್ಯನ ಮೂಲಕ ಪಾಪವೂ ಪಾಪದ ಮೂಲಕ ಮರಣವೂ ಲೋಕದೊಳಗೆ ಪ್ರವೇಶಿಸಿದ ಹಾಗೆಯೇ ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು. ನಿಯಮವು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿ ಇತ್ತು. ಆದರೆ ನಿಯಮವು ಇಲ್ಲದಿದ್ದಾಗ ಪಾಪವು ಲೆಕ್ಕಕ್ಕೆ ಬರುವುದಿಲ್ಲ.
ರೋಮಾಪುರದವರಿಗೆ 5 : 14 (OCVKN)
ಆದರೂ ಮರಣವು ಆದಾಮನಿಂದ ಮೋಶೆಯವರೆಗೂ ದೊರೆತನ ಮಾಡುತ್ತಿತ್ತು. ಆದಾಮನು ಮಾಡಿದ ಅಪರಾಧಕ್ಕೆ ಸಮಾನವಾಗಿ ಪಾಪಮಾಡಿದವರ ಮೇಲೆಯೂ ಅದು ದೊರೆತನ ಮಾಡುತ್ತಿತ್ತು. ಆದಾಮನು ಮುಂದೆ ಬರಲಿಕ್ಕಿದ್ದ ಒಬ್ಬಾತನಿಗೆ ಸಂಕೇತವಾಗಿದ್ದಾನೆ.
ರೋಮಾಪುರದವರಿಗೆ 5 : 15 (OCVKN)
ಆದರೆ ಆ ಅಪರಾಧಕ್ಕೂ ದೇವರ ವರಕ್ಕೂ ಬಹಳ ವ್ಯತ್ಯಾಸವಿದೆ. ಹೇಗೆಂದರೆ, ಆದಾಮನ ಅಪರಾಧದಿಂದ ಎಲ್ಲ ಮನುಷ್ಯರೂ ಸತ್ತರು. ಕ್ರಿಸ್ತ ಯೇಸುವೆಂಬ ಈ ಒಬ್ಬ ಮನುಷ್ಯನ ಕೃಪೆಯಿಂದ ಸಿಕ್ಕುವ ದೇವರ ಕೃಪೆಯ ವರವು ಅನೇಕರಿಗೆ ಇನ್ನೂ ಹೆಚ್ಚಾಗಿ ಸಿಕ್ಕುವುದು ನಿಶ್ಚಯವಲ್ಲವೇ?
ರೋಮಾಪುರದವರಿಗೆ 5 : 16 (OCVKN)
ಇದಲ್ಲದೆ ಪಾಪಮಾಡಿದ ಒಬ್ಬನಿಂದಲೇ ದುಷ್ಪಲ ಬಂದಂತೆ ಈ ವರವು ಬರಲಿಲ್ಲ. ಹೇಗೆಂದರೆ, ಒಬ್ಬನೇ ಮನುಷ್ಯನ ಪಾಪದ ದೆಸೆಯಿಂದ ಸಾಯಬೇಕೆಂಬ ದಂಡನಾತೀರ್ಪು ಉಂಟಾಯಿತು. ಆದರೆ ದೇವರ ಕೃಪೆಯು ಅನೇಕರ ಅಪರಾಧಗಳಿಂದ ಅವರನ್ನು ನೀತಿವಂತರೆಂದು ನಿರ್ಣಯಿಸುವುದಾಗಿದೆ.
ರೋಮಾಪುರದವರಿಗೆ 5 : 17 (OCVKN)
ಒಬ್ಬ ಮನುಷ್ಯನು ಮಾಡಿದ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ಮುಖಾಂತರ ಮರಣವು ಆಳುವುದಾದರೆ, ದೇವರ ಧಾರಾಳವಾದ ಕೃಪೆಯನ್ನೂ ನೀತಿಯ ವರವನ್ನೂ ಹೊಂದಿದವರಾಗಿ ಕ್ರಿಸ್ತ ಯೇಸುವೆಂಬ ಒಬ್ಬಾತನ ಮೂಲಕ ಜೀವದಲ್ಲಿ ಆಳುವುದು ಇನ್ನೂ ಹೆಚ್ಚಾದದ್ದಲ್ಲವೆ!
ರೋಮಾಪುರದವರಿಗೆ 5 : 18 (OCVKN)
ಹೀಗೆ, ಒಂದು ಅಪರಾಧದ ನಿಮಿತ್ತ ಎಲ್ಲಾ ಜನರ ಮೇಲೆ ದಂಡನಾತೀರ್ಪು ಬಂದಂತೆಯೇ ಒಂದು ನೀತಿಯ ಕೃತ್ಯದಿಂದ ಎಲ್ಲಾ ಜನರಿಗೂ ಜೀವವನ್ನುಂಟು ಮಾಡುವ ನೀತಿಕರಣವು ಉಂಟಾಯಿತು.
ರೋಮಾಪುರದವರಿಗೆ 5 : 19 (OCVKN)
ಒಬ್ಬ ಮನುಷ್ಯನ ಅವಿಧೇಯತೆಯಿಂದಾಗಿ ಅನೇಕರು, ಪಾಪಿಗಳು ಆದಂತೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದಾಗಿ ಅನೇಕರು ನೀತಿವಂತರಾಗುವರು.
ರೋಮಾಪುರದವರಿಗೆ 5 : 20 (OCVKN)
ಅಪರಾಧವು ಹೆಚ್ಚುವಂತೆ ನಿಯಮವು ಪ್ರವೇಶಿಸಿತು. ಆದರೆ ಪಾಪವು ಹೆಚ್ಚಾದಾಗ, ಕೃಪೆಯು ಇನ್ನೂ ಹೆಚ್ಚಾಯಿತು.
ರೋಮಾಪುರದವರಿಗೆ 5 : 21 (OCVKN)
ಹೀಗೆ ಪಾಪವು ಮರಣದ ಮೂಲಕ ಆಳಿದಂತೆಯೇ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ನಿತ್ಯಜೀವವನ್ನುಂಟು ಮಾಡಲು ಕೃಪೆಯು ನೀತಿಯ ಮೂಲಕ ಆಳುವುದು.
❮
❯
1
2
3
4
5
6
7
8
9
10
11
12
13
14
15
16
17
18
19
20
21