ರೋಮಾಪುರದವರಿಗೆ 3 : 1 (OCVKN)
ದೇವರ ನಂಬಿಗಸ್ತಿಕೆ ಹಾಗಾದರೆ ಯೆಹೂದ್ಯರಾಗಿರುವುದರಿಂದ ಪ್ರಯೋಜನವೇನು? ಅಥವಾ ಸುನ್ನತಿಯಿಂದ ಲಾಭವೇನು?
ರೋಮಾಪುರದವರಿಗೆ 3 : 2 (OCVKN)
ಎಲ್ಲಾ ವಿಷಯಗಳಲ್ಲಿಯೂ ಬಹಳ ಪ್ರಯೋಜನವಿದೆ. ಮೊದಲನೆಯದಾಗಿ ದೇವರ ವಾಕ್ಯಗಳು ಯೆಹೂದ್ಯರ ವಶಕ್ಕೆ ಒಪ್ಪಿಸಲಾಗಿವೆ.
ರೋಮಾಪುರದವರಿಗೆ 3 : 3 (OCVKN)
ಅವರಲ್ಲಿ ಕೆಲವರು ನಂಬದೆ ಹೋಗಿದ್ದರೇನು? ಅವರ ಅಪನಂಬಿಕೆಯು ದೇವರ ಪ್ರಾಮಾಣಿಕತೆಯನ್ನು ರದ್ದುಗೊಳಿಸುವುದೇ?
ರೋಮಾಪುರದವರಿಗೆ 3 : 4 (OCVKN)
ಎಂದಿಗೂ ಹಾಗೆ ಆಗದಿರಲಿ. ಆದರೆ ಪ್ರತಿ ಮನುಷ್ಯನು ಸುಳ್ಳುಗಾರನಾದರೂ ದೇವರು ಸತ್ಯವಂತರೇ. ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ನೀನು ನಿನ್ನ ಮಾತುಗಳಲ್ಲಿಯೇ ನೀತಿವಂತನೆಂದು ನಿರ್ಣಯಿಸಲಾಗುವೆ. ನಿನ್ನ ಮೇಲೆ ತೀರ್ಪು ಮಾಡುವಾಗ ನೀನು ಜಯಿಸಬೇಕು.”* ಕೀರ್ತನೆ 51:4
ರೋಮಾಪುರದವರಿಗೆ 3 : 5 (OCVKN)
ಹೀಗೆ ನಮ್ಮ ಅನೀತಿಯೂ ದೇವರ ನೀತಿಯನ್ನು ಪ್ರಸಿದ್ಧಿಗೆ ತರುವುದಾದರೆ, ಕೋಪವನ್ನು ಸುರಿಸುವ ದೇವರು ಅನ್ಯಾಯಗಾರರೇನು? ನಾನು ಮಾನವ ರೀತಿಯಲ್ಲಿ ಮಾತನಾಡಿದ್ದೇನೆ.
ರೋಮಾಪುರದವರಿಗೆ 3 : 6 (OCVKN)
ಎಂದಿಗೂ ಹಾಗೆ ಆಗದಿರಲಿ. ದೇವರು ಅನ್ಯಾಯಗಾರರಾಗಿದ್ದರೆ ಲೋಕಕ್ಕೆ ನ್ಯಾಯತೀರಿಸುವುದು ಹೇಗೆ?
ರೋಮಾಪುರದವರಿಗೆ 3 : 7 (OCVKN)
“ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೊಂಡು ಅವರ ಮಹಿಮೆಯನ್ನು ಹೆಚ್ಚಿಸುವುದಾದರೆ ನನಗೆ ಪಾಪಿಯೆಂದು ಇನ್ನು ತೀರ್ಪಾಗುವುದು ಏಕೆ?”
ರೋಮಾಪುರದವರಿಗೆ 3 : 8 (OCVKN)
“ಒಳ್ಳೆಯದಾಗುವಂತೆ ಕೆಟ್ಟದ್ದನ್ನು ಮಾಡೋಣ,” ಎಂದು ನಾವು ಹೇಳುತ್ತಿರುವುದಾಗಿ, ಕೆಲವರು ನಮ್ಮ ಬಗ್ಗೆ ದೂಷಿಸಿ ಹೇಳುವ ಪ್ರಕಾರ ನಾವೇಕೆ ಹೇಳಬಾರದು? ಅಂಥವರಿಗೆ ದಂಡನೆಯ ತೀರ್ಪಾಗುವುದು ನ್ಯಾಯವೇ!
ರೋಮಾಪುರದವರಿಗೆ 3 : 9 (OCVKN)
ಯಾರೂ ನೀತಿವಂತರಲ್ಲ ಹಾಗಾದರೆ ಏನು? ಯೆಹೂದ್ಯರಾದ ನಾವು ಯೆಹೂದ್ಯರಲ್ಲದವರಿಗಿಂತಲೂ ಶ್ರೇಷ್ಠರೋ? ಎಂದಿಗೂ ಇಲ್ಲವಲ್ಲ. ಯೆಹೂದ್ಯರಾಗಲಿ, ಯೆಹೂದ್ಯರಲ್ಲದವರಾಗಲಿ ಎಲ್ಲರೂ ಪಾಪದ ಶಕ್ತಿಗೆ ಒಳಗಾದವರೆಂದು ನಾವು ಈಗಾಗಲೇ ತೋರಿಸಿದ್ದೇವೆ.
ರೋಮಾಪುರದವರಿಗೆ 3 : 10 (OCVKN)
ಪವಿತ್ರ ವೇದಗಳಲ್ಲಿ ಬರೆದಿರುವಂತೆ: “ನೀತಿವಂತನು ಇಲ್ಲ, ಒಬ್ಬನೂ ಇಲ್ಲ.
ರೋಮಾಪುರದವರಿಗೆ 3 : 11 (OCVKN)
ಅರ್ಥಮಾಡಿಕೊಳ್ಳುವವನು ಒಬ್ಬನೂ ಇಲ್ಲ. ದೇವರನ್ನು ಹುಡುಕುವವನು ಒಬ್ಬನೂ ಇಲ್ಲ.
ರೋಮಾಪುರದವರಿಗೆ 3 : 12 (OCVKN)
ಎಲ್ಲರೂ ದಾರಿತಪ್ಪಿ ಹೋಗಿದ್ದಾರೆ, ಎಲ್ಲರೂ ಕೆಲಸಕ್ಕೆ ಬಾರದವರಾಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ ಒಬ್ಬನಾದರೂ ಇಲ್ಲ.” ಕೀರ್ತನೆ 14:1-3; 53:1-3; ಪ್ರಸಂಗಿ 7:20
ರೋಮಾಪುರದವರಿಗೆ 3 : 13 (OCVKN)
“ಅವರ ಗಂಟಲುಗಳು ತೆರೆದ ಸಮಾಧಿಗಳು. ಅವರ ನಾಲಿಗೆಯು ವಂಚನೆಯನ್ನು ನುಡಿಯುತ್ತದೆ.” ಕೀರ್ತನೆ 5:9 “ಅವರ ತುಟಿಗಳಲ್ಲಿ ಹಾವಿನ ವಿಷವಿದೆ.” § ಕೀರ್ತನೆ 140:3
ರೋಮಾಪುರದವರಿಗೆ 3 : 14 (OCVKN)
“ಅವರ ಬಾಯಿ ಶಾಪದಿಂದಲೂ ಕಹಿಯಿಂದಲೂ ತುಂಬಿರುತ್ತವೆ.”* ಕೀರ್ತನೆ 10:7
ರೋಮಾಪುರದವರಿಗೆ 3 : 15 (OCVKN)
“ಅವರ ಕಾಲುಗಳು ರಕ್ತಪಾತಕ್ಕೆ ಆತುರಗೊಂಡಿವೆ.
ರೋಮಾಪುರದವರಿಗೆ 3 : 16 (OCVKN)
ನಾಶ, ಸಂಕಟಗಳು ಅವರ ಮಾರ್ಗಗಳಲ್ಲಿ ಹಿಂಬಾಲಿಸುತ್ತವೆ.
ರೋಮಾಪುರದವರಿಗೆ 3 : 17 (OCVKN)
ಸಮಾಧಾನದ ಮಾರ್ಗವನ್ನೇ ಅವರು ಅರಿಯರು.” ಯೆಶಾಯ 59:7,8
ರೋಮಾಪುರದವರಿಗೆ 3 : 18 (OCVKN)
“ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ.” ಕೀರ್ತನೆ 36:1
ರೋಮಾಪುರದವರಿಗೆ 3 : 19 (OCVKN)
ನಿಯಮವು ಏನೇ ಹೇಳುವುದಾದರೂ ಅದು ನಿಯಮಕ್ಕೆ ಒಳಪಟ್ಟಿರುವವರಿಗೇ ಅನ್ವಯವಾಗುವುದೆಂದು ನಾವು ಬಲ್ಲೆವು. ಹೀಗೆ ಎಲ್ಲರ ಬಾಯಿ ಮುಚ್ಚಿಹೋಗುವುದು ಮತ್ತು ಲೋಕವೆಲ್ಲಾ ದೇವರ ತೀರ್ಪಿಗೆ ಒಳಗಾಗಿರುವುದು.
ರೋಮಾಪುರದವರಿಗೆ 3 : 20 (OCVKN)
ಆದ್ದರಿಂದ ಯಾರೂ ದೇವರ ದೃಷ್ಟಿಯಲ್ಲಿ ನಿಯಮದ ಕೃತ್ಯಗಳಿಂದ ನೀತಿವಂತರೆಂದು ನಿರ್ಣಯಿಸಲಾಗುವುದಿಲ್ಲ. ನಿಯಮದಿಂದ ಪಾಪದ ಪ್ರಜ್ಞೆ ಉಂಟಾಗುತ್ತದಷ್ಟೆ.
ರೋಮಾಪುರದವರಿಗೆ 3 : 21 (OCVKN)
ನಂಬಿಕೆಯ ಮೂಲಕ ನೀತಿವಂತರೆಂಬ ನಿರ್ಣಯ ಆದರೆ ಈಗ ನಿಯಮವಿಲ್ಲದೆ ದೇವರ ನೀತಿಯು ಪ್ರಕಟವಾಗಿದೆ. ಅದಕ್ಕೆ ನಿಯಮವೂ ಪ್ರವಾದಿಗಳೂ ಸಾಕ್ಷಿಕೊಡುತ್ತಾರೆ.
ರೋಮಾಪುರದವರಿಗೆ 3 : 22 (OCVKN)
ದೇವರ ನೀತಿಯು ನಂಬುವವರೆಲ್ಲರಿಗೆ ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸವಿಡುವುದರ ಮೂಲಕ ಲಭಿಸುತ್ತದೆ. ಇಲ್ಲಿ ಯಾವ ಭೇದವೂ ಇರುವುದಿಲ್ಲ.
ರೋಮಾಪುರದವರಿಗೆ 3 : 23 (OCVKN)
ಏಕೆಂದರೆ ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.
ರೋಮಾಪುರದವರಿಗೆ 3 : 24 (OCVKN)
ಆದರೆ ಕ್ರಿಸ್ತ ಯೇಸುವಿನಲ್ಲಿ ಬಂದ ವಿಮೋಚನೆಯ ಮೂಲಕ ಅವರು ದೇವರ ಕೃಪೆಯಿಂದ ಉಚಿತವಾಗಿ ನೀತಿವಂತರೆಂದು ನಿರ್ಣಯ ಹೊಂದುತ್ತಾರೆ.
ರೋಮಾಪುರದವರಿಗೆ 3 : 25 (OCVKN)
ಇದನ್ನು ನಂಬಿಕೆಯಿಂದ ಕ್ರಿಸ್ತ ಯೇಸುವಿನ ರಕ್ತದ ಮೂಲಕ ದೊರಕುವಂತೆ ದೇವರು ಕ್ರಿಸ್ತ ಯೇಸುವನ್ನು ನಮಗಾಗಿ ಪ್ರಾಯಶ್ಚಿತ್ತ ಬಲಿಯಾಗಿ§ ಯಾಜಕ 16:15,16 ಒಪ್ಪಿಸಿದರು. ದೇವರು ಹಿಂದಿನ ಕಾಲದಲ್ಲಿ ಜನರು ಮಾಡಿರುವ ಪಾಪಗಳನ್ನು ದಂಡಿಸದೆ ತಮ್ಮ ನೀತಿಯನ್ನು ತೋರಿಸಿಕೊಡುವುದಕ್ಕಾಗಿಯೂ
ರೋಮಾಪುರದವರಿಗೆ 3 : 26 (OCVKN)
ಈಗಿನ ಕಾಲದಲ್ಲಿ ದೇವರು ತಮ್ಮ ನೀತಿಯನ್ನು ತೋರ್ಪಡಿಸಲೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕಾಗಿಯೂ ದೀರ್ಘಶಾಂತರಾಗಿದ್ದಾರೆ.
ರೋಮಾಪುರದವರಿಗೆ 3 : 27 (OCVKN)
ಹಾಗಾದರೆ, ನಾವು ಕೊಚ್ಚಿಕೊಳ್ಳುವುದಕ್ಕೆ ಆಸ್ಪದವೆಲ್ಲಿ? ಆಸ್ಪದವೇ ಇಲ್ಲ. ನೀತಿವಂತರೆಂಬ ನಿರ್ಣಯ ನಿಯಮದಿಂದಲೋ? ಕ್ರಿಯೆಗಳಿಂದಲೋ? ಇಲ್ಲ, ಅದು ಇಲ್ಲದೆ ಹೋಯಿತು. ಅದು ನಂಬಿಕೆಯ ನಿಯಮದಿಂದಲೇ.
ರೋಮಾಪುರದವರಿಗೆ 3 : 28 (OCVKN)
ಏಕೆಂದರೆ ನಿಯಮವನ್ನು ಕೈಕೊಳ್ಳುವುದರಿಂದಲೇ. ನಂಬಿಕೆಯಿಂದಲೇ ಒಬ್ಬ ಮನುಷ್ಯನು ನೀತಿವಂತನೆಂದು ನಿರ್ಣಯ ಹೊಂದುತ್ತಾನೆಂದು ಎಣಿಸುತ್ತೇವೆ.
ರೋಮಾಪುರದವರಿಗೆ 3 : 29 (OCVKN)
ದೇವರು ಯೆಹೂದ್ಯರಿಗೆ ಮಾತ್ರ ದೇವರೋ? ದೇವರು ಯೆಹೂದ್ಯರಲ್ಲದವರಿಗೂ ಸಹ ದೇವರಾಗಿರುವುದಿಲ್ಲವೋ? ಹೌದು, ಯೆಹೂದ್ಯರಲ್ಲದವರಿಗೂ ಸಹ ದೇವರಾಗಿದ್ದಾರೆ.
ರೋಮಾಪುರದವರಿಗೆ 3 : 30 (OCVKN)
ಸುನ್ನತಿಯವರಿಗೂ ಸುನ್ನತಿಯಿಲ್ಲದವರಿಗೂ ಒಂದೇ ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ.
ರೋಮಾಪುರದವರಿಗೆ 3 : 31 (OCVKN)
ಹಾಗಾದರೆ, ನಾವು ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸುವುದಕ್ಕೆ ಒಬ್ಬರೇ ದೇವರಿದ್ದಾರೆ. ಹಾಗಾದರೆ, ನಾವು ನಂಬಿಕೆಯ ಮೂಲಕ ನಿಯಮವನ್ನು ನಿರರ್ಥಕಗೊಳಿಸುತ್ತೇವೋ? ಎಂದಿಗೂ ಇಲ್ಲ. ನಾವು ನಿಯಮವನ್ನು ಸ್ಥಿರಪಡಿಸುತ್ತೇವಷ್ಟೇ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31