ರೋಮಾಪುರದವರಿಗೆ 13 : 1 (OCVKN)
ಅಧಿಕಾರಿಗಳಿಗೆ ಅಧೀನನಾಗಿರುವುದು ಪ್ರತಿಯೊಬ್ಬನೂ ಮೇಲಧಿಕಾರಿಗಳಿಗೆ ಅಧೀನನಾಗಿರಬೇಕು, ಏಕೆಂದರೆ ದೇವರು ನೇಮಿಸಿದ ಅಧಿಕಾರದ ಹೊರತು ಬೇರೆ ಯಾವದೂ ಇರುವುದಿಲ್ಲ. ಇರುವ ಅಧಿಕಾರಗಳು ದೇವರಿಂದಲೇ ನೇಮಕಗೊಂಡಿವೆ.
ರೋಮಾಪುರದವರಿಗೆ 13 : 2 (OCVKN)
ಆದ್ದರಿಂದ ಅಧಿಕಾರಕ್ಕೆ ಎದುರು ಬೀಳುವವನು ದೇವರ ನೇಮಕವನ್ನು ಎದುರಿಸುವವನಾಗಿರುತ್ತಾನೆ. ಹಾಗೆ ಎದುರಿಸುವವರು ತೀರ್ಪಿಗೆ ಗುರಿಯಾಗುವರು.
ರೋಮಾಪುರದವರಿಗೆ 13 : 3 (OCVKN)
ಕೆಟ್ಟದ್ದನ್ನು ಮಾಡುವವನಿಗೆ ಅಧಿಪತಿಗಳ ಭಯವಿರುವುದೇ ಹೊರತು, ಒಳ್ಳೆಯದನ್ನು ಮಾಡುವವನಿಗೆ ಅಲ್ಲ. ಅಧಿಕಾರಿಗಳಿಗೆ ಭಯಪಡಬಾರದೇ? ಒಳ್ಳೆಯದನ್ನು ಮಾಡು. ಅದರಿಂದ ನಿನಗೆ ಪ್ರಶಂಸೆ ದೊರಕುವುದು.
ರೋಮಾಪುರದವರಿಗೆ 13 : 4 (OCVKN)
ಏಕೆಂದರೆ, ಅವನು ನಿನಗೆ ಒಳ್ಳೆಯದನ್ನು ಮಾಡುವುದಕ್ಕೋಸ್ಕರ ಇರುವ ದೇವರ ಸೇವಕನಾಗಿರುತ್ತಾನೆ. ಆದರೆ ನೀನು ಕೆಟ್ಟದ್ದನ್ನು ಮಾಡುವವನಾಗಿದ್ದರೆ ಭಯಪಡಬೇಕು. ಏಕೆಂದರೆ ಅವನು ವ್ಯರ್ಥವಾಗಿ ಅಧಿಕಾರವನ್ನು ಪಡೆದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಅಭ್ಯಾಸ ಮಾಡುವವನಿಗೆ ದಂಡನೆಯನ್ನು ವಿಧಿಸುತ್ತಾನೆ.
ರೋಮಾಪುರದವರಿಗೆ 13 : 5 (OCVKN)
ಆದ್ದರಿಂದ, ಭಯದ ನಿಮಿತ್ತದಿಂದ ಮಾತ್ರವಲ್ಲ ಮನಸ್ಸಾಕ್ಷಿಯ ನಿಮಿತ್ತವೂ ಅಧಿಕಾರಿಗಳಿಗೆ ಅಧೀನನಾಗಿರುವುದು ಅಗತ್ಯವಾಗಿರುತ್ತದೆ.
ರೋಮಾಪುರದವರಿಗೆ 13 : 6 (OCVKN)
ಇದರ ನಿಮಿತ್ತವಾಗಿಯೇ ನೀವು ತೆರಿಗೆಯನ್ನು ಪಾವತಿ ಮಾಡುತ್ತೀರಿ. ಏಕೆಂದರೆ, ಅಧಿಕಾರಿಗಳು ಇದರಲ್ಲಿಯೇ ನಿರತರಾಗಿರುವ ದೇವರ ಸೇವಕರಾಗಿರುತ್ತಾರೆ.
ರೋಮಾಪುರದವರಿಗೆ 13 : 7 (OCVKN)
ನೀವು ಯಾರಿಗೆ ಏನು ಸಲ್ಲಿಸಬೇಕೋ ಅದನ್ನು ಸಲ್ಲಿಸಿರಿ. ತೆರಿಗೆ ಕಟ್ಟಬೇಕಾಗಿದ್ದರೆ ತೆರಿಗೆಯನ್ನು, ಸುಂಕ ಕೊಡಬೇಕಾಗಿದ್ದರೆ ಸುಂಕವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು, ಗೌರವ ಸಲ್ಲಿಸಬೇಕಾಗಿದ್ದರೆ ಗೌರವವನ್ನು ಸಲ್ಲಿಸಿರಿ.
ರೋಮಾಪುರದವರಿಗೆ 13 : 8 (OCVKN)
ಪ್ರೀತಿಯು ಮೋಶೆಯ ನಿಯಮವನ್ನು ನೆರವೇರಿಸುವುದು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲವೇ ಹೊರತು ನಿಮಗೆ ಬೇರೆ ಯಾವ ಸಾಲವೂ ಇರಬಾರದು. ಏಕೆಂದರೆ ಮತ್ತೊಬ್ಬರನ್ನು ಪ್ರೀತಿಸುವವನು ಮೋಶೆಯ ನಿಯಮವನ್ನೇ ನೆರವೇರಿಸಿದ್ದಾನೆ.
ರೋಮಾಪುರದವರಿಗೆ 13 : 9 (OCVKN)
ಏಕೆಂದರೆ, “ವ್ಯಭಿಚಾರ ಮಾಡಬೇಡ, ಕೊಲೆ ಮಾಡಬೇಡ, ಕದಿಯಬೇಡ, ದುರಾಶೆ ಪಡಬೇಡ,”* ವಿಮೋ 20:13-15,17; ಧರ್ಮೋ 5:17-19,21 ಎನ್ನುವ ಹಾಗೂ ಇತರ ಯಾವ ಆಜ್ಞೆಗಳೇ ಇರಲಿ ಅವೆಲ್ಲವೂ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” † ಯಾಜಕ 19:18 ಎಂಬ ಒಂದೇ ಮಾತಿನಲ್ಲಿವೆ.
ರೋಮಾಪುರದವರಿಗೆ 13 : 10 (OCVKN)
ಪ್ರೀತಿಯು ತನ್ನ ನೆರೆಯವನಿಗೆ ಹಾನಿ ಮಾಡುವುದಿಲ್ಲ. ಆದ್ದರಿಂದ ಪ್ರೀತಿಯು ನಿಯಮದ ನೆರವೇರಿಕೆಯಾಗಿರುತ್ತದೆ.
ರೋಮಾಪುರದವರಿಗೆ 13 : 11 (OCVKN)
ಕಡೆಯದಿನವು ಸಮೀಪವಾಗಿದೆ ಈಗಿನ ಕಾಲವನ್ನು ತಿಳಿದು ಇದನ್ನೆಲ್ಲಾ ಮಾಡಿರಿ. ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಗಳಿಗೆಯಾಗಿದೆ. ಏಕೆಂದರೆ, ನಮ್ಮ ರಕ್ಷಣೆಯು ನಾವು ಮೊದಲು ವಿಶ್ವಾಸವಿಟ್ಟಿದಕ್ಕಿಂತ ಈಗ ಹತ್ತಿರವಾಗಿರುತ್ತದೆ.
ರೋಮಾಪುರದವರಿಗೆ 13 : 12 (OCVKN)
ರಾತ್ರಿಯು ಬಹಳಷ್ಟು ಕಳೆದು ಹಗಲು ಸಮೀಪಿಸಿದೆ. ಆದ್ದರಿಂದ ನಾವು ಕತ್ತಲೆಯ ಕೃತ್ಯಗಳನ್ನು ಎಸೆದು ಬೆಳಕಿನ ಆಯುಧಗಳನ್ನು ಧರಿಸಿಕೊಳ್ಳೋಣ.
ರೋಮಾಪುರದವರಿಗೆ 13 : 13 (OCVKN)
ಪಕ್ಷತನ ಕುಡಿಕತನಗಳಲ್ಲಾಗಲಿ, ಕಾಮವಿಲಾಸ ನಿರ್ಲಜ್ಯ ಕೃತ್ಯಗಳಲ್ಲಾಗಲಿ, ಮತ್ಸರಗಳಲ್ಲಾಗಲಿ ನಿರತರಾಗಿರದೆ ಹಗಲಿನಲ್ಲಿರುವವರಂತೆ ಸಭ್ಯತೆಯಿಂದ ನಡೆದುಕೊಳ್ಳೋಣ.
ರೋಮಾಪುರದವರಿಗೆ 13 : 14 (OCVKN)
ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಧರಿಸಿಕೊಳ್ಳಿರಿ. ದೈಹಿಕ ಆಶೆಗಳನ್ನು ನೆರವೇರಿಸಲು ಯೋಚಿಸಬೇಡಿರಿ.
❮
❯
1
2
3
4
5
6
7
8
9
10
11
12
13
14