ರೋಮಾಪುರದವರಿಗೆ 10 : 1 (OCVKN)
ಪ್ರಿಯರೇ, ನನ್ನ ಹೃದಯದ ಬಯಕೆಯು, ನಾನು ದೇವರಿಗೆ ಸಲ್ಲಿಸುವ ಪ್ರಾರ್ಥನೆಯು ಇಸ್ರಾಯೇಲರು ರಕ್ಷಣೆ ಹೊಂದಬೇಕೆಂಬುದೇ.
ರೋಮಾಪುರದವರಿಗೆ 10 : 2 (OCVKN)
ಅವರು ದೇವರಿಗಾಗಿ ಆಸಕ್ತರು ಎಂಬುದಾಗಿ ನಾನು ಸಾಕ್ಷಿಕೊಡುತ್ತೇನೆ. ಆದರೆ ಅವರ ಆಸಕ್ತಿಯು ಜ್ಞಾನಕ್ಕೆ ಅನುಸಾರವಾದದ್ದು ಅಲ್ಲ.
ರೋಮಾಪುರದವರಿಗೆ 10 : 3 (OCVKN)
ಅವರು ದೇವರಿಂದ ಬರುವ ನೀತಿಯನ್ನು ತಿಳಿಯದವರಾಗಿ ತಮ್ಮದೇ ಆದ ನೀತಿಯನ್ನು ಸ್ಥಾಪಿಸಲು ಪ್ರಯತ್ನಪಟ್ಟದ್ದರಿಂದ ಅವರು ತಮ್ಮನ್ನು ದೇವರ ನೀತಿಗೆ ಒಳಪಡಿಸಲಿಲ್ಲ.
ರೋಮಾಪುರದವರಿಗೆ 10 : 4 (OCVKN)
ಕ್ರಿಸ್ತ ಯೇಸುವನ್ನು ನಂಬುವ ಪ್ರತಿಯೊಬ್ಬರಿಗೂ ನೀತಿಯು ದೊರಕುವಂತೆ ಕ್ರಿಸ್ತ ಯೇಸು ಮೋಶೆಯ ನಿಯಮದ ಅಂತ್ಯವಾಗಿರುತ್ತಾರೆ.
ರೋಮಾಪುರದವರಿಗೆ 10 : 5 (OCVKN)
ನಿಯಮದಿಂದ ಬರುವ ನೀತಿಯ ಬಗ್ಗೆ ಮೋಶೆಯು ಬರೆದಿರುವುದು ಏನೆಂದರೆ: “ನಿಯಮದಲ್ಲಿ ಬರೆದಿರುವ ಎಲ್ಲವನ್ನೂ ಮಾಡುವವರೇ ಬಾಳುವವರು,”* ಯಾಜಕ 18:5 ಎಂಬುದಾಗಿ ಬರೆದನು.
ರೋಮಾಪುರದವರಿಗೆ 10 : 6 (OCVKN)
ಆದರೆ ವಿಶ್ವಾಸದಿಂದ ಬರುವ ನೀತಿಯ ಬಗ್ಗೆ ಮೋಶೆಯು ಹೇಳುವುದೇನೆಂದರೆ: “ ‘ಕ್ರಿಸ್ತನನ್ನು ಕೆಳಗೆ ತರಲು ಪರಲೋಕಕ್ಕೆ ಯಾರು ಏರಿ ಹೋಗುವರು?’† ಧರ್ಮೋ 30:12
ರೋಮಾಪುರದವರಿಗೆ 10 : 7 (OCVKN)
ಅಥವಾ, ‘ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿಕೊಂಡು ಬರಲು ಯಾರು ಪಾತಾಳಕ್ಕೆ ಇಳಿದು ಹೋಗುವರು?’‡ ಧರ್ಮೋ 30:13 ಎಂದು ಮನಸ್ಸಿನಲ್ಲಿ ಹೇಳಿಕೊಳ್ಳಬೇಡ.”
ರೋಮಾಪುರದವರಿಗೆ 10 : 8 (OCVKN)
ಆದರೆ ಇದು ಏನು ಹೇಳುತ್ತದೆ, “ತಕ್ಕ ವಾಕ್ಯವು ನಿನ್ನ ಬಳಿಯಲ್ಲಿ ಇದೆ, ಅದು ನಿನ್ನ ಬಾಯಿಯಲ್ಲಿಯೂ ಹೃದಯದಲ್ಲಿಯೂ ಇದೆ.”§ ಧರ್ಮೋ 30:14 ಅದೇ ನಾವು ಸಾರುವ ವಿಶ್ವಾಸದ ವಾಕ್ಯ.
ರೋಮಾಪುರದವರಿಗೆ 10 : 9 (OCVKN)
ನೀನು, “ಯೇಸುವೇ ಕರ್ತ,” ಎಂದು ಬಾಯಿಂದ ಅರಿಕೆಮಾಡಿ, ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದರೆಂದು ಹೃದಯದಲ್ಲಿ ನಂಬಿದರೆ ನೀನು ರಕ್ಷಣೆ ಹೊಂದುವೆ.
ರೋಮಾಪುರದವರಿಗೆ 10 : 10 (OCVKN)
ನೀನು ನಿನ್ನ ಹೃದಯದಿಂದ ನಂಬಿ ನೀತಿವಂತನೆಂದು ಎಣಿಸಿಕೊಳ್ಳುವಿ ಮತ್ತು ನಿನ್ನ ಬಾಯಿಂದ ನಿನ್ನ ವಿಶ್ವಾಸವನ್ನು ಅರಿಕೆ ಮಾಡಿದಾಗ ರಕ್ಷಣೆ ಹೊಂದುತ್ತಿ.
ರೋಮಾಪುರದವರಿಗೆ 10 : 11 (OCVKN)
ಪವಿತ್ರ ವೇದದಲ್ಲಿ ಹೇಳಿರುವಂತೆ, “ಅವರ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದೇ ಇಲ್ಲ.”* ಯೆಶಾಯ 28:16
ರೋಮಾಪುರದವರಿಗೆ 10 : 12 (OCVKN)
ಈ ವಿಷಯದಲ್ಲಿ ಯೆಹೂದ್ಯರಿಗೂ ಯೆಹೂದ್ಯರಲ್ಲದವರಿಗೂ ಯಾವ ವ್ಯತ್ಯಾಸವೂ ಇಲ್ಲ. ಎಲ್ಲರಿಗೂ ಕರ್ತ ಆಗಿರುವ ಒಬ್ಬರೇ ಕರ್ತ; ಅವರು ತಮ್ಮನ್ನು ಕರೆಯುವವರೆಲ್ಲರನ್ನು ಹೇರಳವಾಗಿ ಆಶೀರ್ವದಿಸುತ್ತಾರೆ.
ರೋಮಾಪುರದವರಿಗೆ 10 : 13 (OCVKN)
ಏಕೆಂದರೆ, “ಕರ್ತನ ಹೆಸರನ್ನು ಕರೆಯುವವರೆಲ್ಲರಿಗೆ ರಕ್ಷಣೆ ಆಗುವುದು.”† ಯೋಯೇಲ 2:32
ರೋಮಾಪುರದವರಿಗೆ 10 : 14 (OCVKN)
ಆದರೆ, ತಾವು ವಿಶ್ವಾಸವಿಡದ ಕರ್ತನನ್ನು ಕರೆಯುವುದಾದರೂ ಹೇಗೆ? ತಾವು ಕೇಳದ ಕರ್ತನ ಬಗ್ಗೆ ಅವರು ವಿಶ್ವಾಸವಿಡುವುದು ಹೇಗೆ? ಕರ್ತನ ಬಗ್ಗೆ ಸಾರುವವನಿಲ್ಲದೆ ಅವರು ಕೇಳುವುದಾದರೂ ಹೇಗೆ?
ರೋಮಾಪುರದವರಿಗೆ 10 : 15 (OCVKN)
ಅವರು ಕಳುಹಿಸದ ಹೊರತು ಸಾರುವುದಾದರೂ ಹೇಗೆ? ಆದ್ದರಿಂದಲೇ, “ಶುಭವರ್ತಮಾನವನ್ನು ಸಾರುವವರ ಪಾದಗಳು ಎಷ್ಟೊಂದು ಅಂದವಾಗಿವೆ!”‡ ಯೆಶಾಯ 52:7 ಎಂದು ಬರೆಯಲಾಗಿದೆ.
ರೋಮಾಪುರದವರಿಗೆ 10 : 16 (OCVKN)
ಆದರೆ ಇಸ್ರಾಯೇಲರಲ್ಲಿ ಎಲ್ಲರೂ ಸುವಾರ್ತೆಯನ್ನು ಸ್ವೀಕರಿಸಲಿಲ್ಲ. ಏಕೆಂದರೆ, “ಕರ್ತನೇ, ನಮ್ಮ ಸಂದೇಶವನ್ನು ಯಾರು ನಂಬಿದರು?”§ ಯೆಶಾಯ 53:1 ಎಂದು ಯೆಶಾಯ ಪ್ರವಾದಿಯು ಹೇಳುತ್ತಾನೆ.
ರೋಮಾಪುರದವರಿಗೆ 10 : 17 (OCVKN)
ಆದಕಾರಣ, ತಕ್ಕ ವಾಕ್ಯವನ್ನು ಕೇಳುವುದರಿಂದಲೇ ವಿಶ್ವಾಸವು ಬರುತ್ತದೆ, ಅದು ಕ್ರಿಸ್ತನ ವಾಕ್ಯವನ್ನು ಕೇಳುವುದರಿಂದಲೇ ಬರುತ್ತದೆ.
ರೋಮಾಪುರದವರಿಗೆ 10 : 18 (OCVKN)
ಆದರೆ ಇಸ್ರಾಯೇಲರು ಎಂದೂ ಸುವಾರ್ತೆಯನ್ನು ಕೇಳಲಿಲ್ಲವೋ ಎಂದು ನಾನು ಪ್ರಶ್ನಿಸುತ್ತೇನೆ? ಅವರು ನಿಶ್ಚಯವಾಗಿ ಕೇಳಿದ್ದಾರೆ. ಪವಿತ್ರ ವೇದದಲ್ಲಿ ಹೇಳಿರುವಂತೆ: “ಅವರ ಸ್ವರವು ಭೂಮಿಯ ಎಲ್ಲಾ ಕಡೆಗಳಲ್ಲಿ ಹೋಗಿರುತ್ತದೆ, ಅವರ ನುಡಿಗಳು ಲೋಕದ ಕಟ್ಟಕಡೆಯವರೆಗೂ ವ್ಯಾಪಿಸಿವೆ.”* ಕೀರ್ತನೆ 19:4
ರೋಮಾಪುರದವರಿಗೆ 10 : 19 (OCVKN)
19 ಆದರೆ ಇಸ್ರಾಯೇಲರಿಗೆ ಅರ್ಥವಾಗಲಿಲ್ಲವೇ? ಎಂದು ನಾನು ಪ್ರಶ್ನಿಸುತ್ತೇನೆ. ಮೊದಲನೆಯದಾಗಿ ಮೋಶೆಯು, “ನಾನು ಜನಾಂಗವಲ್ಲದವರ ಮೂಲಕ ನೀವು ಅಸೂಯೆಪಡುವಂತೆ ಮಾಡುವೆನು. ತಿಳುವಳಿಕೆಯಿಲ್ಲದ ಜನಾಂಗದವರ ಮೂಲಕ ನೀವು ಕೋಪಗೊಳ್ಳುವಂತೆ ಮಾಡುವೆನು,”† ಧರ್ಮೋ 32:21 ಎಂದು ಹೇಳುತ್ತಾನೆ.
ರೋಮಾಪುರದವರಿಗೆ 10 : 20 (OCVKN)
ಆದರೆ ಯೆಶಾಯನು ಬಹು ಧೈರ್ಯವಾಗಿ, “ನನ್ನನ್ನು ಹುಡುಕದವರಿಗೆ ನಾನು ಸಿಕ್ಕಿದೆನು. ನನ್ನ ವಿಷಯವಾಗಿ ವಿಚಾರ ಮಾಡದವರಿಗೂ ಪ್ರತ್ಯಕ್ಷನಾದೆನು,”‡ ಯೆಶಾಯ 65:1 ಎಂದು ಹೇಳುತ್ತಾನೆ.
ರೋಮಾಪುರದವರಿಗೆ 10 : 21 (OCVKN)
ಆದರೆ ಇಸ್ರಾಯೇಲರ ಕುರಿತಾಗಿ, “ನನಗೆ ಅವಿಧೇಯರೂ ಎದುರುಮಾತಾಡುವವರೂ ಆಗಿರುವ ಜನರಿಗೆ, ದಿನವೆಲ್ಲಾ ನಾನು ಕೈಚಾಚಿ ಕರೆದೆನು,”§ ಯೆಶಾಯ 65:2 ಎಂದು ಹೇಳುತ್ತಾನೆ.
❮
❯
1
2
3
4
5
6
7
8
9
10
11
12
13
14
15
16
17
18
19
20
21