ರೋಮಾಪುರದವರಿಗೆ 1 : 1 (OCVKN)
ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನಾಗುವುದಕ್ಕೆ ಕರೆಹೊಂದಿದವನೂ ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಗೊಂಡವನೂ ಆಗಿರುವ ಪೌಲನು ಬರೆಯುವ ಪತ್ರ.
ರೋಮಾಪುರದವರಿಗೆ 1 : 2 (OCVKN)
ದೇವರು ಮುಂಚಿತವಾಗಿ ಪವಿತ್ರ ವೇದಗಳಲ್ಲಿ ತಮ್ಮ ಪ್ರವಾದಿಗಳ ಮೂಲಕ ವಾಗ್ದಾನಮಾಡಿದ,
ರೋಮಾಪುರದವರಿಗೆ 1 : 3 (OCVKN)
ಈ ಸುವಾರ್ತೆಯು ದೇವಪುತ್ರನ ವಿಷಯವಾದದ್ದು. ಯೇಸು ಮನುಷ್ಯತ್ವದ ಪ್ರಕಾರ ದಾವೀದನ ಸಂತಾನದವರೂ
ರೋಮಾಪುರದವರಿಗೆ 1 : 4 (OCVKN)
ಸತ್ತವರೊಳಗಿಂದ ಪುನರುತ್ಥಾನಗೊಂಡು ಪರಿಶುದ್ಧತೆಯ ಆತ್ಮದ ಪ್ರಕಾರ ದೇವಪುತ್ರರೆಂದು ಪ್ರಬಲವಾಗಿ ನಿರ್ಣಯಿಸಲಾದವರೂ ಆಗಿದ್ದಾರೆ. ಇವರೇ ನಮ್ಮ ಕರ್ತ ಯೇಸು ಕ್ರಿಸ್ತ.
ರೋಮಾಪುರದವರಿಗೆ 1 : 5 (OCVKN)
ಯೇಸುವಿನ ನಾಮದ ಮಹಿಮೆಗಾಗಿ ಯೆಹೂದ್ಯರಲ್ಲದವರಲ್ಲಿಯೂ ನಂಬಿಕೆಯ ವಿಧೇಯತೆ ಉಂಟಾಗುವುದಕ್ಕಾಗಿ ನಾವು ಯೇಸುವಿನ ಮೂಲಕವಾಗಿ ಕೃಪೆಯನ್ನೂ ಅಪೊಸ್ತಲರಾಗಿರುವುದನ್ನೂ ಹೊಂದಿದೆವು.
ರೋಮಾಪುರದವರಿಗೆ 1 : 6 (OCVKN)
ಯೇಸು ಕ್ರಿಸ್ತನವರಾಗಲು ಕರೆಯಲಾದವರಲ್ಲಿ ಯೆಹೂದ್ಯರಲ್ಲದವರಲ್ಲಿ ನೀವೂ ಸಹ ಸೇರಿದ್ದೀರಿ.
ರೋಮಾಪುರದವರಿಗೆ 1 : 7 (OCVKN)
ರೋಮ್ ನಗರದಲ್ಲಿ ದೇವರಿಗೆ ಪ್ರಿಯರೂ ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲಾದವರೂ ಆಗಿರುವವರೆಲ್ಲರಿಗೂ: ನಮ್ಮ ತಂದೆಯಾದ ದೇವರಿಂದಲೂ ಕರ್ತ ಯೇಸು ಕ್ರಿಸ್ತರಿಂದಲೂ ಕೃಪೆಯೂ ಶಾಂತಿಯೂ ಆಗಲಿ.
ರೋಮಾಪುರದವರಿಗೆ 1 : 8 (OCVKN)
ರೋಮ್ ಪಟ್ಟಣ ಸಂದರ್ಶಿಸಬೇಕೆಂಬ ಪೌಲನ ಬಯಕೆ ಮೊದಲನೆಯದಾಗಿ, ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಕ್ರಿಸ್ತ ಯೇಸುವಿನ ಮೂಲಕ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
ರೋಮಾಪುರದವರಿಗೆ 1 : 9 (OCVKN)
ದೇವಪುತ್ರನ ಸುವಾರ್ತೆಯನ್ನು ಸಾರುವುದರಿಂದ ದೇವರನ್ನೇ ನನ್ನ ಆತ್ಮದಲ್ಲಿ ಸೇವೆ ಮಾಡುವವನಾಗಿದ್ದೇನೆ. ಇದಕ್ಕೆ ದೇವರೇ ನನ್ನ ಸಾಕ್ಷಿ.
ರೋಮಾಪುರದವರಿಗೆ 1 : 10 (OCVKN)
ನಾನು ಪ್ರಾರ್ಥನೆ ಮಾಡುವಾಗಲೆಲ್ಲಾ ತಪ್ಪದೆ ನಿಮಗೋಸ್ಕರ ವಿಜ್ಞಾಪನೆ ಮಾಡುತ್ತಾ ಇನ್ನು ಮೇಲಾದರೂ ನಿಮ್ಮ ಬಳಿಗೆ ಬರುವುದಕ್ಕೆ ದೇವರ ಚಿತ್ತದಿಂದ ನನಗೆ ಯಾವ ರೀತಿಯಲ್ಲಾದರೂ ಅನುಕೂಲವಾಗಬೇಕೆಂದು ಬೇಡಿಕೊಳ್ಳುತ್ತೇನೆ.
ರೋಮಾಪುರದವರಿಗೆ 1 : 11 (OCVKN)
ನಿಮ್ಮನ್ನು ದೃಢಪಡಿಸುವುದಕ್ಕಾಗಿ ನಾನು ನಿಮಗೆ ಕೆಲವು ಆತ್ಮಿಕ ವರಗಳನ್ನು ಕೊಡಲು ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.
ರೋಮಾಪುರದವರಿಗೆ 1 : 12 (OCVKN)
ಹೀಗೆ ನಾವು ಒಬ್ಬರಿಂದೊಬ್ಬರ ನಂಬಿಕೆಯಿಂದ ಪರಸ್ಪರ ಪ್ರೋತ್ಸಾಹಗೊಳ್ಳಬೇಕು.
ರೋಮಾಪುರದವರಿಗೆ 1 : 13 (OCVKN)
ಪ್ರಿಯರೇ, ನನ್ನ ಸೇವೆಯು ಯೆಹೂದ್ಯರಲ್ಲದವರಲ್ಲಿ ಫಲಉಂಟಾದಂತೆ ನಿಮ್ಮಲ್ಲಿಯೂ ಫಲಉಂಟಾಗಬೇಕೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಉದ್ದೇಶಿಸಿದೆನು. ಆದರೆ ಅದಕ್ಕೆ ಇಂದಿನವರೆಗೂ ಅಡ್ಡಿಯಾಯಿತೆಂದು ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ.
ರೋಮಾಪುರದವರಿಗೆ 1 : 14 (OCVKN)
ಗ್ರೀಕರಿಗೂ ಗ್ರೀಕರಲ್ಲದವರಿಗೂ ಜ್ಞಾನಿಗಳಿಗೂ ಮೂಢರಿಗೂ ನಾನು ಸಾಲಗಾರನಾಗಿದ್ದೇನೆ.
ರೋಮಾಪುರದವರಿಗೆ 1 : 15 (OCVKN)
ಹೀಗಿರುವುದರಿಂದ ರೋಮ್ ನಗರದಲ್ಲಿರುವ ನಿಮಗೂ ಸಹ ಸುವಾರ್ತೆಯನ್ನು ಸಾರುವುದಕ್ಕೆ ನಾನು ಉತ್ಸುಕನಾಗಿದ್ದೇನೆ.
ರೋಮಾಪುರದವರಿಗೆ 1 : 16 (OCVKN)
ನಾನು ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವನಲ್ಲ. ಏಕೆಂದರೆ ಅದು ಮೊದಲು ಯೆಹೂದ್ಯರಿಗೆ ಆಮೇಲೆ ಯೆಹೂದ್ಯರಲ್ಲದವರಿಗೆ, ಹೀಗೆ ನಂಬುವವರೆಲ್ಲರಿಗೂ ರಕ್ಷಣೆಯನ್ನು ಉಂಟುಮಾಡುವ ದೇವರ ಶಕ್ತಿಯಾಗಿದೆ.
ರೋಮಾಪುರದವರಿಗೆ 1 : 17 (OCVKN)
ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ಪ್ರಕಟವಾಗಿದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನು,”* ಹಬ 2:4 ಎಂದು ಬರೆದಿರುವ ಪ್ರಕಾರ, ಆ ನೀತಿಯು ಪ್ರಾರಂಭದಿಂದ ಕೊನೆಯವರೆಗೆ ನಂಬಿಕೆಯಿಂದಲೇ ಆದದ್ದು.
ರೋಮಾಪುರದವರಿಗೆ 1 : 18 (OCVKN)
ದೇವರ ಕೋಪಾಗ್ನಿ ದುಷ್ಟತನದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆ ಹಾಗೂ ದುಷ್ಟತನದ ಮೇಲೆ ದೇವರ ರೌದ್ರವು ಪರಲೋಕದಿಂದ ಪ್ರಕಟವಾಗುತ್ತಿದೆ.
ರೋಮಾಪುರದವರಿಗೆ 1 : 19 (OCVKN)
ದೇವರ ವಿಷಯವಾಗಿ ತಿಳಿಯಬಹುದಾದದ್ದನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ. ಏಕೆಂದರೆ ಅದನ್ನು ಅವರಿಗೆ ದೇವರೇ ಪ್ರಕಟಿಸಿದರು.
ರೋಮಾಪುರದವರಿಗೆ 1 : 20 (OCVKN)
ಹೇಗೆಂದರೆ ಕಣ್ಣಿಗೆ ಕಾಣದ ಗುಣಲಕ್ಷಣಗಳಾಗಿರುವ ದೇವರ ಗುಣವೂ ನಿತ್ಯಶಕ್ತಿಯೂ ದೈವಸ್ವಭಾವವೂ ಜಗದ ಸೃಷ್ಟಿ ದಿನದಿಂದ ಅವರು ಸೃಷ್ಟಿಸಿದವುಗಳ ಮೂಲಕ ಸ್ಪಷ್ಟವಾಗಿ ಕಂಡುಬರುತ್ತಿವೆ. ಹೀಗಿರುವುದರಿಂದ ಜನರಿಗೆ ತಪ್ಪಿಸಿಕೊಳ್ಳಲು ನೆಪ ಇಲ್ಲವಾಗಿದೆ.
ರೋಮಾಪುರದವರಿಗೆ 1 : 21 (OCVKN)
ಏಕೆಂದರೆ ದೇವರನ್ನು ಅವರು ತಿಳಿದಿದ್ದರೂ ದೇವರೆಂದು ಮಹಿಮೆ ಪಡಿಸಲಿಲ್ಲ, ದೇವರ ಉಪಕಾರ ಸ್ಮರಿಸಲಿಲ್ಲ. ಆದರೆ ಅವರು ತಮ್ಮ ವಿಚಾರಗಳಲ್ಲಿ ವ್ಯರ್ಥರಾದರು. ವಿವೇಕವಿಲ್ಲದ ಅವರ ಹೃದಯವು ಕತ್ತಲಾಯಿತು.
ರೋಮಾಪುರದವರಿಗೆ 1 : 22 (OCVKN)
ತಾವು ಜ್ಞಾನಿಗಳೆಂದು ಹೇಳಿಕೊಂಡರೂ ಮೂಢರಾಗಿದ್ದಾರೆ.
ರೋಮಾಪುರದವರಿಗೆ 1 : 23 (OCVKN)
ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಶು, ಪಕ್ಷಿ, ಸರ್ಪಾದಿಗಳ ಮೂರ್ತಿಗಳೊಂದಿಗೆ ಬದಲಿಸಿಕೊಂಡರು.
ರೋಮಾಪುರದವರಿಗೆ 1 : 24 (OCVKN)
ಆದಕಾರಣ ಅವರು ತಮ್ಮ ಹೃದಯದ ದುರಾಶೆಗಳಂತೆ ನಡೆದು ತಮ್ಮ ದೇಹಗಳನ್ನು ಮಲಿನ ಮಾಡಿಕೊಳ್ಳಲಿ ಎಂದು ದೇವರು ಅವರನ್ನು ಅಶುದ್ಧತೆಗೆ ಒಪ್ಪಿಸಿಬಿಟ್ಟರು.
ರೋಮಾಪುರದವರಿಗೆ 1 : 25 (OCVKN)
ಅವರು ದೇವರ ಸತ್ಯವನ್ನು ಸುಳ್ಳನ್ನಾಗಿ ಬದಲಿಸಿಕೊಂಡು, ಸೃಷ್ಟಿಕರ್ತನನ್ನು ಆರಾಧಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವೆ ಸಲ್ಲಿಸುವವರಾದರು. ಸೃಷ್ಟಿ ಕರ್ತನೇ ನಿರಂತರವಾಗಿ ಸ್ತುತಿ ಹೊಂದತಕ್ಕವರು. ಆಮೆನ್.
ರೋಮಾಪುರದವರಿಗೆ 1 : 26 (OCVKN)
ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗೆ ಒಪ್ಪಿಸಿಬಿಟ್ಟರು. ಹೇಗೆಂದರೆ ಅವರ ಸ್ತ್ರೀಯರು ಸಹ ಸ್ವಾಭಾವಿಕವಾದ ಭೋಗವನ್ನು ಬಿಟ್ಟು, ಅಸ್ವಾಭಾವಿಕವಾದದ್ದನ್ನು ಅನುಸರಿಸಿದರು.
ರೋಮಾಪುರದವರಿಗೆ 1 : 27 (OCVKN)
ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರೊಂದಿಗೊಬ್ಬರು ಕಾಮಾತುರದಿಂದ ತಾಪಗೊಂಡರು. ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣ ಕೃತ್ಯಗಳನ್ನು ನಡೆಸಿ ತಮ್ಮ ತಪ್ಪಿಗೆ ತಕ್ಕ ದಂಡನೆಯನ್ನು ಹೊಂದುವವರಾದರು.
ರೋಮಾಪುರದವರಿಗೆ 1 : 28 (OCVKN)
ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು.
ರೋಮಾಪುರದವರಿಗೆ 1 : 29 (OCVKN)
ಅವರು ಸಕಲ ವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ, ದುಷ್ಟತ್ವ, ಹೊಟ್ಟೆಕಿಚ್ಚು, ಕೊಲೆ, ಜಗಳ, ಕಪಟ, ಹಗೆತನಗಳಿಂದಲೂ ತುಂಬಿದವರಾದರು.
ರೋಮಾಪುರದವರಿಗೆ 1 : 30 (OCVKN)
ಅವರು ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿ ಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ
ರೋಮಾಪುರದವರಿಗೆ 1 : 31 (OCVKN)
ವಿವೇಚನೆಯಿಲ್ಲದವರೂ ನಂಬಿಕೆಯಿಲ್ಲದವರೂ ಮಮತೆಯಿಲ್ಲದವರೂ ಕರುಣೆಯಿಲ್ಲದವರೂ ಆದರು.
ರೋಮಾಪುರದವರಿಗೆ 1 : 32 (OCVKN)
ಇಂಥವುಗಳನ್ನು ನಡೆಸುವವರು ಮರಣಕ್ಕೆ ಪಾತ್ರರಾಗಿದ್ದಾರೆಂಬ ದೈವವಿಧಿಯನ್ನು ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವುದಲ್ಲದೆ ಹಾಗೆ ಮಾಡುವವರನ್ನು ಮೆಚ್ಚುತ್ತಾರೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32