ಕೀರ್ತನೆಗಳು 91 : 1 (OCVKN)
ಮಹೋನ್ನತ ದೇವರ ಆಶ್ರಯದಲ್ಲಿ ವಾಸಿಸುವವರು ಸರ್ವಶಕ್ತರ ನೆರಳಿನಲ್ಲಿ ವಿಶ್ರಮಿಸುವರು.
ಕೀರ್ತನೆಗಳು 91 : 2 (OCVKN)
“ನನ್ನ ಆಶ್ರಯವೂ, ನನ್ನ ಕೋಟೆಯೂ, ನಾನು ಭರವಸೆ ಇಡುವ ನನ್ನ ದೇವರೂ ಎಂದು ನಾನು ಯೆಹೋವ ದೇವರಿಗೆ ಹೇಳುವೆನು.”
ಕೀರ್ತನೆಗಳು 91 : 3 (OCVKN)
ನಿಶ್ಚಯವಾಗಿ ದೇವರು ನಿಮ್ಮನ್ನು ಬೇಡನ ಉರುಲಿನಿಂದ ರಕ್ಷಿಸುವರು. ಮರಣಾಂತಿಕವಾದ ಸಾಂಕ್ರಾಮಿಕ ರೋಗದಿಂದಲೂ ಬಿಡಿಸುವರು.
ಕೀರ್ತನೆಗಳು 91 : 4 (OCVKN)
ತಮ್ಮ ರೆಕ್ಕೆಗಳಿಂದ ನಿಮ್ಮನ್ನು ಹೊದಿಸುವರು. ದೇವರ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿರಿ. ದೇವರ ಸತ್ಯತೆಯು ನಿಮ್ಮ ಖೇಡ್ಯವೂ ಕೋಟೆಯೂ ಆಗಿರುವುದು.
ಕೀರ್ತನೆಗಳು 91 : 5 (OCVKN)
ರಾತ್ರಿಯ ಭಯಂಕರತೆಗೆ ನೀನು ಅಂಜಬೇಕಾಗಿಲ್ಲ, ಹಗಲಿನಲ್ಲಿ ಹಾರುವ ಬಾಣಕ್ಕೂ ಹೆದರಬೇಕಾಗಿರುವುದಿಲ್ಲ.
ಕೀರ್ತನೆಗಳು 91 : 6 (OCVKN)
ಅಂಧಕಾರದಲ್ಲಿ ಬೆನ್ನಟ್ಟಿ ಬರುವ ವಿಪತ್ತಿಗೆ ಕಳವಳಪಡದಿರುವೆ. ಮಧ್ಯಾಹ್ನದಲ್ಲಿ ಹಾಳುಮಾಡುವ ವ್ಯಾಧಿಗೂ ನೀನು ಭಯಪಡದಿರುವೆ.
ಕೀರ್ತನೆಗಳು 91 : 7 (OCVKN)
ನಿಮ್ಮ ಪಕ್ಕದಲ್ಲಿ ಸಾವಿರ ಜನರು ಬಿದ್ದರೂ ನಿಮ್ಮ ಬಲಗಡೆಯಲ್ಲಿ ಹತ್ತು ಸಾವಿರ ಜನರು ಬಿದ್ದಾಗ್ಯೂ, ನಿಮ್ಮ ಸಮೀಪಕ್ಕೆ ಅದು ಬರುವುದಿಲ್ಲ.
ಕೀರ್ತನೆಗಳು 91 : 8 (OCVKN)
ನಿನ್ನ ಕಣ್ಣುಗಳಿಂದ ಮಾತ್ರ ನೀನು ಗಮನಿಸುವೆ. ದುಷ್ಟರಿಗೆ ಪ್ರತಿದಂಡನೆ ಆಗುವುದನ್ನು ಸಹ ನೀನು ಕಾಣುವೆ.
ಕೀರ್ತನೆಗಳು 91 : 9 (OCVKN)
“ಮಹೋನ್ನತ ದೇವರು ನಮ್ಮ ಆಶ್ರಯ,” ಎಂದು ಹೇಳುವದಾದರೆ, ಯೆಹೋವ ದೇವರು ನಿಮ್ಮ ನಿವಾಸವಾಗಿ ಮಾಡಿಕೊಂಡರೆ,
ಕೀರ್ತನೆಗಳು 91 : 10 (OCVKN)
ಯಾವ ಕೇಡೂ ನಿಮ್ಮನ್ನು ಮುಟ್ಟದು, ಯಾವ ವಿಪತ್ತು ನಿಮ್ಮನ್ನು ಸಮೀಪಿಸುವುದಿಲ್ಲ.
ಕೀರ್ತನೆಗಳು 91 : 11 (OCVKN)
ಏಕೆಂದರೆ ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವುದಕ್ಕೆ ದೇವರು ತಮ್ಮ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವರು.
ಕೀರ್ತನೆಗಳು 91 : 12 (OCVKN)
ನಿಮ್ಮ ಪಾದಗಳು ಕಲ್ಲಿಗೆ ತಗಲದಂತೆ ದೇವದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.
ಕೀರ್ತನೆಗಳು 91 : 13 (OCVKN)
ಸಿಂಹದ ಮೇಲೆಯೂ ಸರ್ಪದ ಮೇಲೆಯೂ ನಡೆಯುವೆ. ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದುಬಿಡುವೆ.
ಕೀರ್ತನೆಗಳು 91 : 14 (OCVKN)
“ಆತನು ನನ್ನನ್ನು ಪ್ರೀತಿಸುವುದರಿಂದ ಆತನನ್ನು ಸಂರಕ್ಷಿಸುವೆನು. ಆತನು ನನ್ನ ನಾಮವನ್ನು ಸ್ವೀಕರಿಸಿದ್ದರಿಂದ ಆತನನ್ನು ಕಾಪಾಡುವೆನು.
ಕೀರ್ತನೆಗಳು 91 : 15 (OCVKN)
ಆತನು ನನ್ನನ್ನು ಕರೆಯುವನು ನಾನು ಆತನಿಗೆ ಉತ್ತರಕೊಡುವೆನು. ಇಕ್ಕಟ್ಟಿನಲ್ಲಿ ನಾನು ಆತನ ಸಂಗಡ ಇದ್ದು, ಆತನನ್ನು ಘನಪಡಿಸುವೆನು.
ಕೀರ್ತನೆಗಳು 91 : 16 (OCVKN)
ದೀರ್ಘಾಯುಷ್ಯದಿಂದ ಆತನನ್ನು ತೃಪ್ತಿಪಡಿಸಿ, ನನ್ನ ರಕ್ಷಣೆಯನ್ನು ಆತನಿಗೆ ತೋರಿಸುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.

1 2 3 4 5 6 7 8 9 10 11 12 13 14 15 16