ಕೀರ್ತನೆಗಳು 81 : 1 (OCVKN)
ನಮ್ಮ ಬಲವಾಗಿರುವ ದೇವರಿಗೆ ಗಟ್ಟಿಯಾದ ಧ್ವನಿಯಿಂದ ಹಾಡಿರಿ; ಯಾಕೋಬನ ದೇವರಿಗೆ ಜಯಧ್ವನಿ ಗೈಯಿರಿ.
ಕೀರ್ತನೆಗಳು 81 : 2 (OCVKN)
ವಾದ್ಯ ಪ್ರಾರಂಭಿಸಿರಿ; ದಮ್ಮಡಿಯನ್ನೂ, ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ಬಾರಿಸಿರಿ.
ಕೀರ್ತನೆಗಳು 81 : 3 (OCVKN)
ಅಮಾವಾಸ್ಯೆಯಲ್ಲಿಯೂ ಉತ್ಸವ ದಿವಸವಾಗಿರುವ ಪೂರ್ಣಿಮೆಯಲ್ಲಿಯೂ ಕೊಂಬನ್ನು ಊದಿರಿ.
ಕೀರ್ತನೆಗಳು 81 : 4 (OCVKN)
ಏಕೆಂದರೆ ಇದು ಇಸ್ರಾಯೇಲಿಗೆ ಕಟ್ಟಳೆ. ಯಾಕೋಬನ ದೇವರ ನ್ಯಾಯ ಪ್ರಮಾಣವೇ.
ಕೀರ್ತನೆಗಳು 81 : 5 (OCVKN)
ದೇವರು ಈಜಿಪ್ಟಿಗೆ ವಿರೋಧವಾಗಿ ಹೊರಟಾಗ, ಅದನ್ನು ಯೋಸೇಫನಲ್ಲಿ ಸಾಕ್ಷಿಯಾಗಿ ನೇಮಿಸಿದನು. ನಾವು ತಿಳಿಯದ ಭಾಷೆಯನ್ನು ಕೇಳಿದಾಗ:
ಕೀರ್ತನೆಗಳು 81 : 6 (OCVKN)
“ಅವರ ಹೆಗಲ ಮೇಲಿಂದ ಭಾರವನ್ನು ತೆಗೆದುಹಾಕಿದೆನು, ಬುಟ್ಟಿಗಳಿಂದ ಅವರ ಕೈಗಳು ಬಿಡುಗಡೆಯಾದವು.
ಕೀರ್ತನೆಗಳು 81 : 7 (OCVKN)
ಇಕ್ಕಟ್ಟಿನಲ್ಲಿ ನೀವು ಕರೆಮಾಡಿದಿರಿ, ಆಗ ನಾನು ನಿಮ್ಮನ್ನು ವಿಮೋಚಿಸಿದೆನು. ಗುಡುಗಿನ ಮರೆಯಲ್ಲಿ ನಿನಗೆ ಉತ್ತರಕೊಟ್ಟೆನು. ಮೆರೀಬಾ ನೀರಿನ ಹತ್ತಿರ ನಿಮ್ಮನ್ನು ಪರೀಕ್ಷಿಸಿದೆನು.
ಕೀರ್ತನೆಗಳು 81 : 8 (OCVKN)
ನನ್ನ ಜನರೇ ಕೇಳಿರಿ, ಇಸ್ರಾಯೇಲೇ, ನೀನು ನನ್ನ ಮಾತನ್ನು ಕೇಳಬೇಕೆಂದು ನಿಮ್ಮನ್ನು ಎಚ್ಚರಿಸುತ್ತೇನೆ.
ಕೀರ್ತನೆಗಳು 81 : 9 (OCVKN)
ನಿಮ್ಮಲ್ಲಿ ಅನ್ಯದೇವರು ಇರಬಾರದು; ಪರದೇವರಿಗೆ ಅಡ್ಡ ಬೀಳಬಾರದು.
ಕೀರ್ತನೆಗಳು 81 : 10 (OCVKN)
ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಯೆಹೋವ ದೇವರು ನಾನೇ; ನಿಮ್ಮ ಬಾಯಿಯನ್ನು ಅಗಲವಾಗಿ ತೆರೆ, ಆಗ ಅದನ್ನು ತುಂಬಿಸುವೆನು.
ಕೀರ್ತನೆಗಳು 81 : 11 (OCVKN)
“ಆದರೆ ನನ್ನ ಜನರು ನನ್ನ ಮಾತನ್ನು ಕೇಳಲಿಲ್ಲ; ಇಸ್ರಾಯೇಲು ನನಗೆ ಅಧೀನವಾಗಲಿಲ್ಲ.
ಕೀರ್ತನೆಗಳು 81 : 12 (OCVKN)
ಆದ್ದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಂತೆ ನಡೆದುಕೊಂಡರು.
ಕೀರ್ತನೆಗಳು 81 : 13 (OCVKN)
“ಹಾ, ನನ್ನ ಜನರು ನನ್ನ ಮಾತನ್ನು ಕೇಳಿದರೆ ಒಳ್ಳೆದಾಗಿತ್ತು! ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ ಮೇಲಾಗುತ್ತಿತ್ತು,
ಕೀರ್ತನೆಗಳು 81 : 14 (OCVKN)
ತೀವ್ರವಾಗಿ ಅವರ ಶತ್ರುಗಳನ್ನು ಧೀನಪಡಿಸುವೆನು. ಅವರ ವೈರಿಗಳ ಮೇಲೆ ನನ್ನ ಕೈಯನ್ನು ತಿರುಗಿಸುವೆನು.
ಕೀರ್ತನೆಗಳು 81 : 15 (OCVKN)
ಯೆಹೋವ ದೇವರನ್ನು ದ್ವೇಷಿಸುವವರು ತಮ್ಮನ್ನು ತಾವೇ ದೇವರಿಗೆ ಒಪ್ಪಿಸಿಕೊಡುವರು. ಆದರೂ ಅವರಿಗೆ ಶಿಕ್ಷೆ ತಪ್ಪುವುದಿಲ್ಲ.
ಕೀರ್ತನೆಗಳು 81 : 16 (OCVKN)
ನಿಮಗಾದರೋ ಉತ್ತಮವಾದ ಗೋಧಿಯನ್ನು ಊಟಕ್ಕೆ ಕೊಟ್ಟು, ಬಂಡೆಯೊಳಗಿನ ಜೇನಿನಿಂದ ನಿಮ್ಮನ್ನು ತೃಪ್ತಿಪಡಿಸುವೆನು.”

1 2 3 4 5 6 7 8 9 10 11 12 13 14 15 16