ಕೀರ್ತನೆಗಳು 77 : 1 (OCVKN)
ನನ್ನ ಸಹಾಯಕ್ಕಾಗಿ ದೇವರ ಕಡೆಗೆ ಕೂಗುತ್ತೇನೆ. ಹೌದು, ನನ್ನ ಸ್ವರದಿಂದ ದೇವರ ಕಡೆಗೆ ಕೂಗುತ್ತೇನೆ, ನನಗೆ ದೇವರು ಕಿವಿಗೊಡುವರು.
ಕೀರ್ತನೆಗಳು 77 : 2 (OCVKN)
ನನ್ನ ಇಕ್ಕಟ್ಟಿನ ದಿವಸದಲ್ಲಿ ಯೆಹೋವ ದೇವರನ್ನು ಹುಡುಕಿದೆನು. ನಾನು ರಾತ್ರಿಯೆಲ್ಲಾ ಬೇಸರವಿಲ್ಲದೆ ಕೈಚಾಚಿದೆ. ನನ್ನ ಮನಸ್ಸಿಗೆ ಶಾಂತಿ ಇರಲಿಲ್ಲ.
ಕೀರ್ತನೆಗಳು 77 : 3 (OCVKN)
ನಾನು ವ್ಯಥೆಪಡುತ್ತಿರುವಾಗ, ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿಸುವುದರಿಂದ ನನ್ನ ಆತ್ಮವು ಬಳಲಿ ಹೋಯಿತು.
ಕೀರ್ತನೆಗಳು 77 : 4 (OCVKN)
ನನ್ನ ಕಣ್ಣುಗಳನ್ನು ಮುಚ್ಚದಿರುವಾಗ, ನಾನು ಮಾತನಾಡಲಾರದಂತೆ ಕಳವಳಪಟ್ಟೆನು.
ಕೀರ್ತನೆಗಳು 77 : 5 (OCVKN)
ಪೂರ್ವದ ದಿವಸಗಳನ್ನೂ ಆದಿಕಾಲದ ವರ್ಷಗಳನ್ನೂ ಯೋಚಿಸಿದೆ.
ಕೀರ್ತನೆಗಳು 77 : 6 (OCVKN)
ನನ್ನ ಹಾಡನ್ನು ರಾತ್ರಿಯಲ್ಲಿ ಜ್ಞಾಪಕಮಾಡಿಕೊಂಡೆನು. ನನ್ನ ಹೃದಯದಲ್ಲಿ ನಾನು ಧ್ಯಾನ ಮಾಡಿದೆ. ನನ್ನ ಆತ್ಮದಲ್ಲಿ ಪ್ರಶ್ನೆ ಹೀಗೆ ಮೂಡುತ್ತಿತ್ತು:
ಕೀರ್ತನೆಗಳು 77 : 7 (OCVKN)
“ನಿರಂತರವಾಗಿ ಯೆಹೋವ ದೇವರು ತಳ್ಳಿಬಿಡುವರೋ? ಇನ್ನೆಂದಿಗೂ ದಯೆತೋರದೆ ಇರುವರೋ?
ಕೀರ್ತನೆಗಳು 77 : 8 (OCVKN)
ದೇವರ ಒಡಂಬಡಿಕೆಯ ಪ್ರೀತಿಯು ಸದಾಕಾಲಕ್ಕೆ ನಿಂತು ಹೋಯಿತೋ? ತಲತಲಾಂತರಕ್ಕೂ ವಾಗ್ದಾನ ಮುಗಿದು ಹೋಯಿತೋ?
ಕೀರ್ತನೆಗಳು 77 : 9 (OCVKN)
ದೇವರು ಕರುಣಿಸುವುದನ್ನು ಮರೆತು ಬಿಟ್ಟಿದ್ದಾರೋ? ತಮ್ಮ ಅಂತಃಕರಣವನ್ನು ಬೇಸರದಿಂದ ತಡೆಹಿಡಿದಿದ್ದಾರೋ?”
ಕೀರ್ತನೆಗಳು 77 : 10 (OCVKN)
ನಂತರ ನಾನು ಯೋಚಿಸಿದ್ದೇನಂದರೆ, “ಹೀಗೆ ನೆನಸಿದ್ದು ನನ್ನ ಬಲಹೀನತೆಯೇ. ಮಹೋನ್ನತ ದೇವರ ಬಲಗೈಯ ಪರಾಕ್ರಮದ ವರ್ಷಗಳನ್ನು ನಾನು ಸ್ಮರಿಸುವೆನು.
ಕೀರ್ತನೆಗಳು 77 : 11 (OCVKN)
ಯೆಹೋವ ದೇವರ ಕ್ರಿಯೆಗಳನ್ನು ಜ್ಞಾಪಕಮಾಡಿಕೊಳ್ಳುವೆನು. ಹೌದು, ಆದಿಯಿಂದಲೂ ನೀವು ನಡೆಸಿದ ಅದ್ಭುತಗಳನ್ನು ನೆನಪುಮಾಡಿಕೊಳ್ಳುವೆನು.
ಕೀರ್ತನೆಗಳು 77 : 12 (OCVKN)
ನಿಮ್ಮ ಮಹಾಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು, ನಿಮ್ಮ ಕೃತ್ಯಗಳನ್ನು ಯೋಚಿಸುವೆನು.”
ಕೀರ್ತನೆಗಳು 77 : 13 (OCVKN)
ದೇವರೇ, ನಿಮ್ಮ ಮಾರ್ಗಗಳು ಪರಿಶುದ್ಧವಾದವುಗಳು. ನಮ್ಮ ದೇವರ ಹಾಗೆ ಮಹಾ ದೇವರು ಯಾರು?
ಕೀರ್ತನೆಗಳು 77 : 14 (OCVKN)
ಅದ್ಭುತಗಳನ್ನು ಮಾಡುವ ದೇವರು ನೀವೇ. ಜನರಲ್ಲಿ ನಿಮ್ಮ ಬಲವನ್ನು ತಿಳಿಯಮಾಡಿದ್ದೀರಿ.
ಕೀರ್ತನೆಗಳು 77 : 15 (OCVKN)
ಯಾಕೋಬನ ಮತ್ತು ಯೋಸೇಫನ ಸಂತತಿಯವರಾದ ನಿಮ್ಮ ಜನರನ್ನು ನಿಮ್ಮ ಬಲವಾದ ತೋಳಿನಿಂದ ವಿಮೋಚಿಸಿದ್ದೀರಿ.
ಕೀರ್ತನೆಗಳು 77 : 16 (OCVKN)
ಜಲರಾಶಿಗಳು ನಿಮ್ಮನ್ನು ಕಂಡವು. ದೇವರೇ, ಜಲರಾಶಿಗಳು ನಿಮ್ಮನ್ನು ಕಂಡು ಹೊರಳಾಡಿದವು. ಅಗಾಧ ಸಾಗರಗಳು ಅಲ್ಲಕಲ್ಲೋಲವಾದವು.
ಕೀರ್ತನೆಗಳು 77 : 17 (OCVKN)
ಮೋಡಗಳು ನೀರನ್ನು ಸುರಿಸಿದವು. ಆಕಾಶಗಳು ಗುಡುಗಿನಿಂದ ಶಬ್ದಮಾಡಿದವು. ನಿಮ್ಮ ಬಾಣಗಳು ಹಿಂದೆಯೂ ಮುಂದೆಯೂ ಹಾರಿ ಬಂದವು.
ಕೀರ್ತನೆಗಳು 77 : 18 (OCVKN)
ನಿಮ್ಮ ಗುಡುಗಿನ ಶಬ್ದವು ಸುಂಟರಗಾಳಿಯಲ್ಲಿ ಕೇಳುತ್ತಿತ್ತು. ಮಿಂಚುಗಳು ಜಗತ್ತನ್ನು ಬೆಳಗಿಸಿದವು. ಭೂಮಿಯು ನಡುಗಿ ಕದಲಿತು.
ಕೀರ್ತನೆಗಳು 77 : 19 (OCVKN)
ನೀವು ಸಮುದ್ರದಲ್ಲಿ ಮಾರ್ಗಮಾಡಿದಿರಿ. ಮಹಾಜಲರಾಶಿಗಳನ್ನು ದಾಟಿದಿರಿ. ಆದರೂ ನಿಮ್ಮ ಹೆಜ್ಜೆಯ ಗುರುತು ಕಾಣಲಿಲ್ಲ.
ಕೀರ್ತನೆಗಳು 77 : 20 (OCVKN)
ಮೋಶೆ ಆರೋನರ ಕೈಯಿಂದ ನಿಮ್ಮ ಜನರನ್ನು ಮಂದೆಯ ಹಾಗೆ ನಡೆಸಿದಿರಿ.
❮
❯
1
2
3
4
5
6
7
8
9
10
11
12
13
14
15
16
17
18
19
20