ಕೀರ್ತನೆಗಳು 73 : 1 (OCVKN)
ಭಾಗ 3
ಕೀರ್ತನೆಗಳು 73–89
ಆಸಾಫನ ಕೀರ್ತನೆ. ದೇವರು ನಿಜವಾಗಿಯೂ ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವರು.
ಕೀರ್ತನೆಗಳು 73 : 2 (OCVKN)
ನನ್ನ ಪಾದಗಳು ಬಹಳಮಟ್ಟಿಗೆ ತಪ್ಪುವ ಹಾಗಿದ್ದವು. ನನ್ನ ಹೆಜ್ಜೆಗಳು ಜಾರುವುದಕ್ಕೆ ಬಹು ಸಮೀಪವಾಗಿದ್ದವು.
ಕೀರ್ತನೆಗಳು 73 : 3 (OCVKN)
ಏಕೆಂದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡಾಗ ಮೂರ್ಖರ ಮೇಲೆ ಹೊಟ್ಟೆಕಿಚ್ಚುಪಟ್ಟೆನು.
ಕೀರ್ತನೆಗಳು 73 : 4 (OCVKN)
ಏಕೆಂದರೆ ಅವರಿಗೆ ಹೋರಾಟಗಳು ಇಲ್ಲ. ಅವರ ದೇಹವು ಆರೋಗ್ಯಕರ ಮತ್ತು ದೃಢವಾಗಿದೆ.
ಕೀರ್ತನೆಗಳು 73 : 5 (OCVKN)
ಇತರರ ಹಾಗೆ ಅವರಿಗೆ ಯಾವುದೇ ಹೊರೆ ಇಲ್ಲ ಮಾನವರಿಗೆ ತಗುಲುವ ಯಾವುದೇ ವ್ಯಾಧಿಯೂ ಅವರಿಗೆ ತಗುಲುವುದಿಲ್ಲ.
ಕೀರ್ತನೆಗಳು 73 : 6 (OCVKN)
ಆದ್ದರಿಂದ ಗರ್ವವು ಕಂಠಮಾಲೆಯಂತೆ ಅವರನ್ನು ಸುತ್ತಿದೆ. ದಬ್ಬಾಳಿಕೆ ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತಿದೆ.
ಕೀರ್ತನೆಗಳು 73 : 7 (OCVKN)
ಅವರ ಹೃದಯವು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ದುಷ್ಕಲ್ಪನೆಗಳಿಗೆ ಮಿತಿಯೇ ಇಲ್ಲ.
ಕೀರ್ತನೆಗಳು 73 : 8 (OCVKN)
ಅವರು ಹಾಸ್ಯಮಾಡುವವರಾಗಿ ಕೇಡನ್ನೇ ಮಾತನಾಡುತ್ತಾರೆ ದಬ್ಬಾಳಿಕೆ ಮಾಡಲು ಗರ್ವದಿಂದ ಅವರು ಬೆದರಿಕೆ ಹಾಕುತ್ತಾರೆ.
ಕೀರ್ತನೆಗಳು 73 : 9 (OCVKN)
ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ. ಭೂಲೋಕದಲ್ಲೆಲ್ಲಾ ಅವರ ಮಾತು ಮುಂದುವರೆದಿದೆ.
ಕೀರ್ತನೆಗಳು 73 : 10 (OCVKN)
ಆದ್ದರಿಂದ ಜನರು ಅವರ ಕಡೆಗೆ ತಿರುಗುತ್ತಾರೆ. ಜನರಿಗೆ ಅವರ ಮಾತು ಬಹಳವಾಗಿ ದೊರೆಯುತ್ತದೆ.
ಕೀರ್ತನೆಗಳು 73 : 11 (OCVKN)
ಅವರು, “ದೇವರಿಗೆ ಹೇಗೆ ಗೊತ್ತಾಗುವುದು? ಮಹೋನ್ನತನಿಗೆ ಏನಾದರೂ ತಿಳಿಯಲು ಸಾಧ್ಯವೇ?” ಎನ್ನುತ್ತಾರೆ.
ಕೀರ್ತನೆಗಳು 73 : 12 (OCVKN)
ದುಷ್ಟರು ನಿಶ್ಚಿಂತರಾಗಿ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.
ಕೀರ್ತನೆಗಳು 73 : 13 (OCVKN)
ನನ್ನ ಹೃದಯವನ್ನು ಶುದ್ಧ ಮಾಡಿಕೊಂಡಿದ್ದು ವ್ಯರ್ಥವೋ? ನನ್ನ ಅಂಗೈಗಳನ್ನು ನಿರಪರಾಧದಲ್ಲಿ ತೊಳೆದಿದ್ದೂ ವ್ಯರ್ಥವೋ?
ಕೀರ್ತನೆಗಳು 73 : 14 (OCVKN)
ಏಕೆಂದರೆ ನಾನು ದಿನವೆಲ್ಲಾ ಬಾಧೆಪಡುತ್ತಿದ್ದೇನೆ. ಪ್ರತಿ ಉದಯವೂ ನನಗೆ ಹೊಸ ಶಿಕ್ಷೆಯಾಗುತ್ತಿದೆ.
ಕೀರ್ತನೆಗಳು 73 : 15 (OCVKN)
ನಾನು ಈ ಪ್ರಕಾರ ಬಾಯಿತೆರೆದು ಮಾತಾಡಿದ್ದರೆ, ನಿಮ್ಮ ಪ್ರಜೆಗೆ ದ್ರೋಹಿಯಾಗುತ್ತಿದ್ದೆನು.
ಕೀರ್ತನೆಗಳು 73 : 16 (OCVKN)
ಇದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ನಾನು ಪ್ರಯತ್ನಿಸಿದಾಗ, ಅದು ನನಗೆ ಬಹಳವಾಗಿ ಕಷ್ಟಕರವಾಗಿತ್ತು.
ಕೀರ್ತನೆಗಳು 73 : 17 (OCVKN)
ನಾನು ದೇವರ ಪರಿಶುದ್ಧ ಆಲಯಕ್ಕೆ ಬರುವವರೆಗೆ ನನಗೆ ಅರ್ಥವಾಗಲಿಲ್ಲ. ಅನಂತರ ಅವರ ಅಂತ್ಯವನ್ನು ನನಗೆ ಅರ್ಥವಾಯಿತು.
ಕೀರ್ತನೆಗಳು 73 : 18 (OCVKN)
ನಿಶ್ಚಯವಾಗಿ ನೀವು ಜಾರುವ ಸ್ಥಳಗಳಲ್ಲಿ ಅವರನ್ನು ಬಿಟ್ಟಿದ್ದೀರಿ. ಅವರನ್ನು ದಂಡಿಸಿಬಿಡು.
ಕೀರ್ತನೆಗಳು 73 : 19 (OCVKN)
ಕ್ಷಣಮಾತ್ರದಲ್ಲಿ ಅವರು ನಾಶವಾದರು. ಅವರು ದಿಗಿಲುಬಿದ್ದು ಸಂಪೂರ್ಣವಾಗಿ ನಾಶವಾದರು.
ಕೀರ್ತನೆಗಳು 73 : 20 (OCVKN)
ಅವರು ನಿದ್ದೆಯಿಂದ ಎಚ್ಚರಗೊಂಡ ಕನಸಿನಂತೆ ಇರುತ್ತಾರೆ. ಯೆಹೋವ ದೇವರೇ, ನಿಮ್ಮ ದೃಷ್ಟಿಯಲ್ಲಿ ಅವರು ಅಲ್ಪರಾಗಿರಲಿ.
ಕೀರ್ತನೆಗಳು 73 : 21 (OCVKN)
ನನ್ನ ಹೃದಯವು ದುಃಖಗೊಂಡು, ನನ್ನ ಆತ್ಮವು ಕಹಿಗೊಂಡಿತು.
ಕೀರ್ತನೆಗಳು 73 : 22 (OCVKN)
ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿಮ್ಮ ಮುಂದೆ ಪಶುವಿನಂತೆ ಇದ್ದೆನು.
ಕೀರ್ತನೆಗಳು 73 : 23 (OCVKN)
ಆದರೂ ನಾನು ನಿಮ್ಮ ಸಂಗಡ ಯಾವಾಗಲೂ ಇದ್ದೇನೆ. ನೀವು ನನ್ನ ಬಲಗೈಯನ್ನು ಹಿಡಿದಿದ್ದೀರಿ.
ಕೀರ್ತನೆಗಳು 73 : 24 (OCVKN)
ನಿಮ್ಮ ಆಲೋಚನೆಯಂತೆ ನನ್ನನ್ನು ನಡೆಸಿ, ತರುವಾಯ ಮಹಿಮೆಗೆ ನನ್ನನ್ನು ಸೇರಿಸುವಿರಿ.
ಕೀರ್ತನೆಗಳು 73 : 25 (OCVKN)
ಪರಲೋಕದಲ್ಲಿ ನನಗೆ ನೀವಲ್ಲದೆ ಮತ್ಯಾರಿದ್ದಾರೆ? ಇಹಲೋಕದಲ್ಲಿ ನಿಮ್ಮನ್ನಲ್ಲದೆ ಇನ್ನಾರನ್ನೂ ನಾನು ಬಯಸುವುದಿಲ್ಲ.
ಕೀರ್ತನೆಗಳು 73 : 26 (OCVKN)
ನನ್ನ ತನುಮನಗಳು ಕುಂದುತ್ತವೆ; ಆದರೆ ದೇವರು ಯುಗಯುಗಕ್ಕೂ ನನ್ನ ಹೃದಯದ ಬಲವೂ, ನನ್ನ ಪಾಲೂ ಆಗಿದ್ದಾರೆ.
ಕೀರ್ತನೆಗಳು 73 : 27 (OCVKN)
ದೇವರೇ, ನಿಮ್ಮಿಂದ ದೂರವಾಗಿರುವವರು ನಾಶವಾಗುತ್ತಾರೆ; ನಿಮ್ಮನ್ನು ಬಿಟ್ಟು ದ್ರೋಹ ಮಾಡುವವರೆಲ್ಲರೂ ದಂಡನೆಗೆ ಗುರಿಯಾಗುವರು.
ಕೀರ್ತನೆಗಳು 73 : 28 (OCVKN)
ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದು. ನಿಮ್ಮ ಕ್ರಿಯೆಗಳನ್ನೆಲ್ಲಾ ಸಾರುವುದಕ್ಕೆ ಸಾರ್ವಭೌಮ ಯೆಹೋವ ದೇವರಲ್ಲಿ ನನ್ನ ಭರವಸೆಯನ್ನು ಇಟ್ಟಿದ್ದೇನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28