ಕೀರ್ತನೆಗಳು 72 : 1 (OCVKN)
ದೇವರೇ, ನಿಮ್ಮ ನ್ಯಾಯವನ್ನು ಅರಸನಿಗೆ ಕಲಿಸಿಕೊಡಿರಿ. ನಿಮ್ಮ ನೀತಿಯನ್ನು ರಾಜಕುಮಾರನಿಗೆ ಕಲಿಸಿಕೊಡಿರಿ.
ಕೀರ್ತನೆಗಳು 72 : 2 (OCVKN)
ಅರಸನು ನಿಮ್ಮ ಜನರಿಗೆ ನೀತಿಯಿಂದಲೂ ನಿಮ್ಮ ಬಾಧೆಪಟ್ಟ ಪ್ರಜೆಗೆ ನ್ಯಾಯದಿಂದಲೂ ತೀರ್ಪುಮಾಡಲಿ.
ಕೀರ್ತನೆಗಳು 72 : 3 (OCVKN)
ಬೆಟ್ಟಗುಡ್ಡಗಳಿಂದ ಸಮೃದ್ಧಿಯೂ ನೀತಿಯ ಫಲವೂ ಜನರಿಗೆ ಬರಲಿ.
ಕೀರ್ತನೆಗಳು 72 : 4 (OCVKN)
ಅರಸನು ಬಡವರ ನ್ಯಾಯ ಸ್ಥಾಪಿಸಲಿ. ಅವನು ಅಗತ್ಯತೆಯಲ್ಲಿರುವವರ ಮಕ್ಕಳನ್ನು ರಕ್ಷಿಸಲಿ. ದಬ್ಬಾಳಿಕೆ ಮಾಡುವವರನ್ನು ದಂಡಿಸಲಿ.
ಕೀರ್ತನೆಗಳು 72 : 5 (OCVKN)
ಸೂರ್ಯನೂ ಚಂದ್ರನೂ ಇರುವವರೆಗೆ ತಲತಲಾಂತರಗಳು ಜನರು ಅರಸನಿಗೆ ಭಯಪಡಲಿ.
ಕೀರ್ತನೆಗಳು 72 : 6 (OCVKN)
ಕೊಯ್ದ ಹುಲ್ಲಿನ ಮೇಲೆ ಬೀಳುವ ಮಳೆಯ ಹಾಗೆಯೂ, ಭೂಮಿಯನ್ನು ನೆನಸುತ್ತಾ ಸುರಿಯುವ ಮಳೆಗಳ ಹಾಗೆಯೂ ಅರಸನು ಇರಲಿ.
ಕೀರ್ತನೆಗಳು 72 : 7 (OCVKN)
ಅರಸನ ದಿವಸಗಳಲ್ಲಿ ನೀತಿವಂತರು ವೃದ್ಧಿ ಆಗಲಿ. ಸಮೃದ್ಧಿಯಾದ ಸಮಾಧಾನವು ಚಂದ್ರನು ಇರುವವರೆಗೂ ಇರಲಿ.
ಕೀರ್ತನೆಗಳು 72 : 8 (OCVKN)
ಸಮುದ್ರದಿಂದ ಸಮುದ್ರದವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಅರಸನು ಆಳಲಿ.
ಕೀರ್ತನೆಗಳು 72 : 9 (OCVKN)
ಅರಸನ ಮುಂದೆ ಮರುಭೂಮಿಯ ನಿವಾಸಿಗಳು ಎರಗಲಿ. ಅರಸನ ಶತ್ರುಗಳು ಧೂಳನ್ನು ನೆಕ್ಕಲಿ.
ಕೀರ್ತನೆಗಳು 72 : 10 (OCVKN)
ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ಅರಸನಿಗೆ ಸಲ್ಲಿಸಲಿ. ಶೆಬ ಮತ್ತು ಸೆಬದ ಅರಸರು ದಾನಗಳನ್ನು ತಂದೊಪ್ಪಿಸಲಿ.
ಕೀರ್ತನೆಗಳು 72 : 11 (OCVKN)
ಹೌದು, ಎಲ್ಲಾ ಅರಸರು ನಮ್ಮ ಅರಸನ ಮುಂದೆ ಅಡ್ಡಬೀಳಲಿ. ಎಲ್ಲಾ ಜನಾಂಗಗಳು ಅರಸನಿಗೆ ಸೇವೆಸಲ್ಲಿಸಲಿ.
ಕೀರ್ತನೆಗಳು 72 : 12 (OCVKN)
ಏಕೆಂದರೆ ಅರಸನಿಗೆ ಮೊರೆಯಿಡುವ ಬಡವರನ್ನೂ ಸಹಾಯಕನಿಲ್ಲದ ಬಾಧೆಪಡುವವರನ್ನೂ ಬಿಡಿಸುವನು.
ಕೀರ್ತನೆಗಳು 72 : 13 (OCVKN)
ದರಿದ್ರನನ್ನೂ, ಬಡವನನ್ನೂ ಕರುಣಿಸುವನು. ಬಡವರ ಪ್ರಾಣಗಳನ್ನು ರಕ್ಷಿಸುವನು.
ಕೀರ್ತನೆಗಳು 72 : 14 (OCVKN)
ಮೋಸ ದಬ್ಬಾಳಿಕೆಯಿಂದ ಜನರನ್ನು ಬಿಡುಗಡೆ ಮಾಡುವನು. ಜನರ ಜೀವವು ಆತನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.
ಕೀರ್ತನೆಗಳು 72 : 15 (OCVKN)
ಅರಸನು ಬಾಳಲಿ. ಆತನಿಗೆ ಶೆಬದ ಚಿನ್ನವನ್ನು ಕೊಡಲಿ. ಆತನಿಗೋಸ್ಕರ ಯಾವಾಗಲೂ ಪ್ರಾರ್ಥನೆ ಮಾಡಲಿ. ಇಡೀ ದಿನ ಆತನಿಗೆ ಆಶೀರ್ವಾದಗಳು ಉಂಟಾಗಲಿ.
ಕೀರ್ತನೆಗಳು 72 : 16 (OCVKN)
ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯವರೆಗೂ ಇರಲಿ; ಅದರ ಫಲವು ಲೆಬನೋನಿನ ಹಾಗೆ ಸಮೃದ್ಧಿಯಾಗಲಿ; ಪಟ್ಟಣದವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿ ಆಗಲಿ.
ಕೀರ್ತನೆಗಳು 72 : 17 (OCVKN)
ಅರಸನ ನಾಮವು ಎಂದೆಂದಿಗೂ ಇರಲಿ. ಸೂರ್ಯನಿರುವವರೆಗೂ ಆತನ ಹೆಸರು ಇರಲಿ. ಮನುಷ್ಯರು ಅರಸನಲ್ಲಿ ಆಶೀರ್ವಾದ ಹೊಂದಲಿ. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತನೆಂದು ಕರೆಯಲಿ.
ಕೀರ್ತನೆಗಳು 72 : 18 (OCVKN)
ಅದ್ಭುತಗಳನ್ನು ಮಾಡುವುದರಲ್ಲಿ ಸರಿಸಾಟಿಯಿಲ್ಲದ ಇಸ್ರಾಯೇಲರ ದೇವರಾಗಿರುವ ಯೆಹೋವ ದೇವರಿಗೆ ಸ್ತೋತ್ರವಾಗಲಿ.
ಕೀರ್ತನೆಗಳು 72 : 19 (OCVKN)
ದೇವರ ಘನವುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ. ದೇವರ ತೇಜಸ್ಸು ಭೂಮಿಯಲ್ಲೆಲ್ಲಾ ತುಂಬಲಿ. ಆಮೆನ್, ಆಮೆನ್.
ಕೀರ್ತನೆಗಳು 72 : 20 (OCVKN)
ಇಷಯನ ಮಗ ದಾವೀದನ ಪ್ರಾರ್ಥನೆಗಳು ಇಲ್ಲಿಗೆ ಮುಕ್ತಾಯವಾಗುತ್ತವೆ.

1 2 3 4 5 6 7 8 9 10 11 12 13 14 15 16 17 18 19 20