ಕೀರ್ತನೆಗಳು 59 : 1 (OCVKN)
ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸಿರಿ. ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸಿರಿ
ಕೀರ್ತನೆಗಳು 59 : 2 (OCVKN)
ಕೆಡುಕನ್ನು ಮಾಡುವವರಿಂದ ನನ್ನನ್ನು ಬಿಡಿಸಿರಿ. ಕೊಲೆಪಾತಕರಿಂದ ನನ್ನನ್ನು ರಕ್ಷಿಸಿರಿ.
ಕೀರ್ತನೆಗಳು 59 : 3 (OCVKN)
ಇಗೋ, ನನ್ನ ಪ್ರಾಣಕ್ಕೆ ಅವರು ಒಳಸಂಚುಮಾಡುತ್ತಾರೆ. ಕ್ರೂರರು ನನಗೆ ವಿರೋಧವಾಗಿ ಕೂಡಿಕೊಳ್ಳುತ್ತಾರೆ. ಯೆಹೋವ ದೇವರೇ, ನನ್ನಲ್ಲಿ ಅಪರಾಧವಿಲ್ಲ, ನಾನು ಯಾವ ತಪ್ಪೂ ಮಾಡಿಲ್ಲ.
ಕೀರ್ತನೆಗಳು 59 : 4 (OCVKN)
ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಹಾನಿಮಾಡಲು ಸಿದ್ಧರಾಗಿದ್ದಾರೆ. ನನ್ನ ಅವಸ್ಥೆಯನ್ನು ನೋಡಿರಿ, ನನಗೆ ಸಹಾಯ ಮಾಡುವುದಕ್ಕೆ ಸಿದ್ಧರಾಗಿರಿ.
ಕೀರ್ತನೆಗಳು 59 : 5 (OCVKN)
ಸರ್ವಶಕ್ತರಾದ ಯೆಹೋವ ದೇವರೇ, ಇಸ್ರಾಯೇಲರ ದೇವರೇ, ನೀವು ಎಲ್ಲಾ ಜನಾಂಗಗಳನ್ನು ನ್ಯಾಯತೀರಿಸುವುದಕ್ಕೆ ಎಚ್ಚರವಾಗಿರಿ. ದುಷ್ಟ ಅಪರಾಧಿಗಳಲ್ಲಿ ಯಾರಿಗೂ ದಯೆಸಿಗದಿರಲಿ.
ಕೀರ್ತನೆಗಳು 59 : 6 (OCVKN)
ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.
ಕೀರ್ತನೆಗಳು 59 : 7 (OCVKN)
ಇಗೋ, ತಮ್ಮ ಬಾಯಿಂದ ಬೊಗಳುತ್ತಾರೆ. ಅವರ ತುಟಿಗಳಲ್ಲಿ ಖಡ್ಗಗಳು ಇವೆ. ಅವರು, “ನಮ್ಮನ್ನು ಕೇಳುವವರು ಯಾರು?” ಎಂದು ಅಂದುಕೊಳ್ಳುತ್ತಾರೆ.
ಕೀರ್ತನೆಗಳು 59 : 8 (OCVKN)
ಆದರೆ ಯೆಹೋವ ದೇವರೇ, ನೀವು ಅವರನ್ನು ನೋಡಿ ನಗುವಿರಿ. ಇತರ ಜನಾಂಗವೆಲ್ಲ ಅಪಹಾಸ್ಯಕ್ಕಿಡಾಗಲಿ.
ಕೀರ್ತನೆಗಳು 59 : 9 (OCVKN)
ದೇವರೇ, ನನ್ನ ಬಲವೇ, ನಿಮಗಾಗಿ ಕಾದುಕೊಂಡಿರುವೆನು. ನನ್ನ ದೇವರೇ, ನೀವು ನನ್ನ ಕೋಟೆಯಾಗಿರುವಿರಿ.
ಕೀರ್ತನೆಗಳು 59 : 10 (OCVKN)
ದೇವರು ಪ್ರಸನ್ನರಾಗಿ ನನ್ನ ಮುಂದೆ ಹೋಗುವರು. ದೇವರು ನನ್ನ ನಿಂದಕರ ಮೇಲೆ ಜಯಿಸುವಂತೆ ಮಾಡುವರು.
ಕೀರ್ತನೆಗಳು 59 : 11 (OCVKN)
ನಮ್ಮ ಗುರಾಣಿಯಾಗಿರುವ ಯೆಹೋವ ದೇವರೇ, ನನ್ನ ಜನರು ಮರೆಯದ ಹಾಗೆ ಅವರು ಉಳಿದಿರಲಿ. ನಿಮ್ಮ ಪರಾಕ್ರಮದಿಂದ ಅವರನ್ನು ದಂಡಿಸಿರಿ.
ಕೀರ್ತನೆಗಳು 59 : 12 (OCVKN)
ಅವರ ಬಾಯಿಯ ಪಾಪಕ್ಕೂ, ಅವರ ತುಟಿಗಳ ಮಾತಿಗೂ, ಅವರು ನುಡಿಯುವ ಶಾಪಕ್ಕೂ ಅವರ ಗರ್ವವೇ ಅವರನ್ನು ಹಿಡಿಯಲಿ.
ಕೀರ್ತನೆಗಳು 59 : 13 (OCVKN)
ಅವರು ದಂಡನೆಗೆ ತುತ್ತಾಗಲಿ. ಅವರು ನಿರ್ನಾಮವಾಗಿಬಿಡಲಿ. ಆಗ ಯಾಕೋಬರನ್ನು ಆಳುವವರು ದೇವರೇ ಎಂಬುದು ಇಡೀ ಲೋಕಕ್ಕೇ ಗೊತ್ತಾಗಲಿ.
ಕೀರ್ತನೆಗಳು 59 : 14 (OCVKN)
ಅವರು ಸಂಜೆಗೆ ಹಿಂದಿರುಗುವರು. ನಾಯಿಯ ಹಾಗೆ ಬೊಗಳುವರು. ಪಟ್ಟಣವನ್ನು ಸುತ್ತುವರು.
ಕೀರ್ತನೆಗಳು 59 : 15 (OCVKN)
ಅವರು ಆಹಾರಕ್ಕಾಗಿ ಅಲೆದಾಡುವರು. ತೃಪ್ತಿಯಾಗದಿದ್ದರೆ ಗೊಣಗುಟ್ಟುವರು.
ಕೀರ್ತನೆಗಳು 59 : 16 (OCVKN)
ಆದರೆ ನಾನು ನಿಮ್ಮ ಬಲವನ್ನು ಕುರಿತು ಹಾಡುವೆನು. ಹೌದು, ಮುಂಜಾನೆ ನಿಮ್ಮ ಪ್ರೀತಿಯ ಕುರಿತು ಹಾಡುವೆನು. ಏಕೆಂದರೆ ನೀವು ನನಗೆ ಭದ್ರಕೋಟೆಯೂ, ನನ್ನ ಇಕ್ಕಟ್ಟಿನಲ್ಲಿ ಆಶ್ರಯವಾಗಿಯೂ ಇದ್ದೀರಿ.
ಕೀರ್ತನೆಗಳು 59 : 17 (OCVKN)
ನನ್ನ ಬಲವಾಗಿರುವವರೇ, ನಿಮ್ಮನ್ನು ಕೊಂಡಾಡುವೆನು. ಏಕೆಂದರೆ ದೇವರೇ, ನೀವು ನನ್ನ ಭದ್ರಕೋಟೆ ಆಗಿದ್ದೀರಿ. ನೀವು ನಾನು ಭರವಸೆ ಇಡುವ ಕರುಣೆಯುಳ್ಳ ದೇವರೂ ಆಗಿದ್ದೀರಿ.

1 2 3 4 5 6 7 8 9 10 11 12 13 14 15 16 17