ಕೀರ್ತನೆಗಳು 49 : 1 (OCVKN)
ಎಲ್ಲಾ ಜನರೇ, ಇದನ್ನು ಕೇಳಿರಿ; ಭೂಲೋಕದ ನಿವಾಸಿಗಳೇ,
ಕೀರ್ತನೆಗಳು 49 : 2 (OCVKN)
ಸಾಮಾನ್ಯರೇ, ಉನ್ನತರೇ, ಐಶ್ವರ್ಯವಂತರೇ, ಬಡವರೇ ಎಲ್ಲರೂ ಕಿವಿಗೊಡಿರಿ.
ಕೀರ್ತನೆಗಳು 49 : 3 (OCVKN)
ನನ್ನ ಬಾಯಿ ಜ್ಞಾನವನ್ನು ನುಡಿಯುವುದು, ನನ್ನ ಹೃದಯದ ಧ್ಯಾನವು ವಿವೇಕವಾಗಿರುವುದು.
ಕೀರ್ತನೆಗಳು 49 : 4 (OCVKN)
ಸಾಮ್ಯಕ್ಕೆ ನನ್ನ ಕಿವಿಗೊಟ್ಟು ಒಗಟನ್ನು ಕಿನ್ನರಿಯಿಂದ ಬಿಚ್ಚುವೆನು.
ಕೀರ್ತನೆಗಳು 49 : 5 (OCVKN)
ಕೇಡಿನ ದಿವಸಗಳಲ್ಲಿ ನನಗೆ ಒಳಸಂಚು ಮಾಡುವವರ ಅಕ್ರಮವು ನನ್ನನ್ನು ಸುತ್ತಿಕೊಳ್ಳುವಾಗ ನಾನು ಏಕೆ ಭಯಪಡಬೇಕು?
ಕೀರ್ತನೆಗಳು 49 : 6 (OCVKN)
ಅವರು ತಮ್ಮ ಸಂಪತ್ತಿನಲ್ಲಿ ಭರವಸೆಯಿಟ್ಟು, ತಮ್ಮ ಅಧಿಕ ಐಶ್ವರ್ಯಗಳಲ್ಲಿ ಜಂಭಪಡುವರು.
ಕೀರ್ತನೆಗಳು 49 : 7 (OCVKN)
ಯಾರೂ ಇನ್ನೊಬ್ಬರ ಜೀವವನ್ನು ವಿಮೋಚಿಸಲಾರರು; ಅಥವಾ ಇತರರಿಗಾಗಿ ಯಾರೂ ದೇವರಿಗೆ ಈಡು ಕೊಡಲಾರರು.
ಕೀರ್ತನೆಗಳು 49 : 8 (OCVKN)
ಆತ್ಮದ ವಿಮೋಚನೆಯು ಬಹು ಬೆಲೆಯುಳ್ಳದ್ದು, ಅದಕ್ಕೆ ಸಾಕಷ್ಟು ಬೆಲೆಯನ್ನು ಕಟ್ಟಲು ಯಾರಿಗೂ ಸಾಧ್ಯವಿಲ್ಲ.
ಕೀರ್ತನೆಗಳು 49 : 9 (OCVKN)
ಮನುಷ್ಯರು ಮರಣ ನಾಶವನ್ನು ಕಾಣದೆ, ಶಾಶ್ವತವಾಗಿ ಬದುಕುವಂತೆ ಮಾಡಲು ಯಾರಿಗೂ ಸಾಧ್ಯವಿಲ್ಲ.
ಕೀರ್ತನೆಗಳು 49 : 10 (OCVKN)
ಏಕೆಂದರೆ, ಜ್ಞಾನಿಗಳು ಸಾಯುವುದನ್ನು ಕಾಣುತ್ತೇವೆ. ಹಾಗೆಯೇ ಮೂರ್ಖರೂ ಜ್ಞಾನಹೀನರೂ ಸಹ ನಾಶವಾಗುತ್ತಾರೆ. ಅವರ ಆಸ್ತಿಯನ್ನು ಇತರರು ಪಡೆಯುತ್ತಾರೆ.
ಕೀರ್ತನೆಗಳು 49 : 11 (OCVKN)
ಜಮೀನುಗಳಿಗೆ ತಮ್ಮ ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ಆದರೂ ಸಮಾಧಿಯೇ ಅವರಿಗೆ ಶಾಶ್ವತಮಂದಿರವು. ಅದೇ ಅವರ ತಲತಲಾಂತರಕ್ಕೂ ನಿವಾಸಸ್ಥಾನ.
ಕೀರ್ತನೆಗಳು 49 : 12 (OCVKN)
ಮನುಷ್ಯನು ಎಷ್ಟು ಆಸ್ತಿ ಗೌರವ ಸಂಪಾದಿಸಿದ್ದರೂ, ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ.
ಕೀರ್ತನೆಗಳು 49 : 13 (OCVKN)
ತಮ್ಮಲ್ಲಿಯೇ ಭರವಸೆ ಇಟ್ಟುಕೊಳ್ಳುವವರಿಗೂ ಇದೇ ಗತಿ. ಅಂಥವರ ಮಾತುಗಳನ್ನು ಒಪ್ಪಿ ಅನುಸರಿಸುವವರ ಗತಿಯೂ ಇದೆ.
ಕೀರ್ತನೆಗಳು 49 : 14 (OCVKN)
ಅವರು ಕುರಿಗಳಂತೆ ಸಾಯಲು ನೇಮಕವಾಗಿದ್ದಾರೆ. ಮರಣವೇ ಅವರ ಕುರುಬ; ಅವರ ವೈಭವ ನಿವಾಸದಿಂದ ದೂರ ಸಮಾಧಿಯಲ್ಲಿರುವುದು ಅವರ ರೂಪ ಕ್ಷಯವಾಗುವುದು. ಆದರೆ ಯಥಾರ್ಥರು ಬೆಳಿಗ್ಗೆ ಅವರನ್ನು ಬಿಟ್ಟು ಸಾಗುತ್ತಿರುವರು.
ಕೀರ್ತನೆಗಳು 49 : 15 (OCVKN)
ಆದರೆ ದೇವರು ನನ್ನ ಪ್ರಾಣವನ್ನು ಮರಣದಿಂದ ವಿಮೋಚನೆ ಮಾಡುವರು. ದೇವರು ನನ್ನನ್ನು ತಮಗಾಗಿ ಅಂಗೀಕರಿಸುವರು.
ಕೀರ್ತನೆಗಳು 49 : 16 (OCVKN)
ಒಬ್ಬನು ಐಶ್ವರ್ಯವಂತನಾದರೆ ಮತ್ತು ಅವನ ಮನೆಯ ಘನತೆ ದೊಡ್ಡದಾದರೆ ಕಳವಳ ಪಡಬೇಡ.
ಕೀರ್ತನೆಗಳು 49 : 17 (OCVKN)
ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗಲಾರನಷ್ಟೆ; ಅವನ ವೈಭವವು ಅವನೊಡನೆ ಹೋಗುವುದಿಲ್ಲ.
ಕೀರ್ತನೆಗಳು 49 : 18 (OCVKN)
ಸಿರಿ ಬಂದಾಗ ಜನರ ಹೊಗಳಿಕೆ ತಪ್ಪದು ಎಂಬಂತೆ ಅವನು ಜೀವಮಾನದಲ್ಲಿ ಆತ್ಮಸ್ತುತಿಯಿಂದಲೂ, ಜನಸ್ತುತಿಯಿಂದಲೂ ಕೂಡಿದವನಾದರೂ
ಕೀರ್ತನೆಗಳು 49 : 19 (OCVKN)
ಅವನು ತನ್ನ ಪೂರ್ವಿಕರ ಬಳಿಗೆ ಹೋಗುವನು; ಅವರು ಸದಾಕಾಲಕ್ಕೂ ಜೀವ ಬೆಳಕನ್ನು ಕಾಣುವುದಿಲ್ಲ.
ಕೀರ್ತನೆಗಳು 49 : 20 (OCVKN)
ಮನುಷ್ಯನು ಎಷ್ಟು ಘನತೆಯಲ್ಲಿದ್ದು ವಿವೇಕವಿಲ್ಲದವರಾದರೆ ಮಡಿದು ಹೋಗುವ ಪಶುಗಳಿಗೆ ಸಮಾನವಾಗಿದ್ದಾನೆ.

1 2 3 4 5 6 7 8 9 10 11 12 13 14 15 16 17 18 19 20