ಕೀರ್ತನೆಗಳು 3 : 1 (OCVKN)
ಯೆಹೋವ ದೇವರೇ, ನನ್ನ ವೈರಿಗಳು ಬಹುಜನ! ನನಗೆ ವಿರೋಧವಾಗಿ ಏಳುವವರು ಎಷ್ಟೋ ಜನ!
ಕೀರ್ತನೆಗಳು 3 : 2 (OCVKN)
“ದೇವರು ಅವನನ್ನು ಬಿಡುಗಡೆ ಮಾಡುವುದಿಲ್ಲ,” ಎಂದು ಅನೇಕರು ನನ್ನ ಬಗ್ಗೆ ಹೇಳುತ್ತಾರೆ.
ಕೀರ್ತನೆಗಳು 3 : 3 (OCVKN)
ಆದರೆ ಯೆಹೋವ ದೇವರೇ, ನೀವೇ ನನ್ನ ಸುತ್ತಲಿರುವ ಗುರಾಣಿಯೂ, ನನ್ನ ಮಹಿಮೆಯೂ ನನ್ನ ತಲೆ ಮೇಲೆತ್ತುವವರೂ* ತಲೆ ಮೇಲೆತ್ತುವವರೂ ಇದರ ಅರ್ಥ ನೀವು ಜಯವನ್ನೂ ಮಹಾ ಘನತೆಯನ್ನೂ ಕೊಡುವವರಾಗಿದ್ದೀರಿ ಆಗಿದ್ದೀರಿ.
ಕೀರ್ತನೆಗಳು 3 : 4 (OCVKN)
ನಾನು ನನ್ನ ಧ್ವನಿಯೆತ್ತಿ ಯೆಹೋವ ದೇವರಿಗೆ ಮೊರೆಯಿಡುವೆನು, ಅವರು ತಮ್ಮ ಪರಿಶುದ್ಧ ಪರ್ವತದಿಂದ ನನಗೆ ಉತ್ತರಕೊಡುವರು.
ಕೀರ್ತನೆಗಳು 3 : 5 (OCVKN)
ನಾನು ಮಲಗಿ ನಿದ್ರಿಸುವೆನು; ಯೆಹೋವ ದೇವರು ನನ್ನನ್ನು ಕಾಪಾಡಿದ್ದರಿಂದ ನಾನು ಎಚ್ಚರಗೊಂಡೆನು.
ಕೀರ್ತನೆಗಳು 3 : 6 (OCVKN)
ಸಾವಿರಾರು ಜನರು ನನಗೆ ವಿರೋಧವಾಗಿ ನನ್ನ ಸುತ್ತುವರಿದರೂ ನಾನು ಭಯಪಡೆನು.
ಕೀರ್ತನೆಗಳು 3 : 7 (OCVKN)
ಯೆಹೋವ ದೇವರೇ, ಏಳಿರಿ! ನನ್ನ ದೇವರೇ, ನನ್ನನ್ನು ರಕ್ಷಿಸಿರಿ. ನನ್ನ ಶತ್ರುಗಳೆಲ್ಲರ ದವಡೆಗೆ ಹೊಡೆಯಿರಿ; ದುಷ್ಟರ ಹಲ್ಲುಗಳನ್ನು ಮುರಿದುಬಿಡಿರಿ.
ಕೀರ್ತನೆಗಳು 3 : 8 (OCVKN)
ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು. ನಿಮ್ಮ ಜನರ ಮೇಲೆ ನಿಮ್ಮ ಆಶೀರ್ವಾದವಿರಲಿ.
❮
❯
1
2
3
4
5
6
7
8