ಕೀರ್ತನೆಗಳು 29 : 1 (OCVKN)
ದೇವದೂತರೇ, ಬಲವು ಯೆಹೋವ ದೇವರದೇ, ಮಹಿಮೆ ಯೆಹೋವ ದೇವರದೇ ಎಂದು ಹೇಳಿ ಕೊಂಡಾಡಿರಿ.
ಕೀರ್ತನೆಗಳು 29 : 2 (OCVKN)
ಯೆಹೋವ ದೇವರ ನಾಮಕ್ಕೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಪರಿಶುದ್ಧತ್ವವೆಂಬ ವಸ್ತ್ರದೊಡನೆ ಯೆಹೋವ ದೇವರನ್ನು ಆರಾಧಿಸಿರಿ.
ಕೀರ್ತನೆಗಳು 29 : 3 (OCVKN)
ಯೆಹೋವ ದೇವರ ಧ್ವನಿಯು ಜಲರಾಶಿಗಳ ಮೇಲೆ ಇದೆ; ಮಹಿಮೆಯ ದೇವರು ಇದ್ದಾರೆ; ಯೆಹೋವ ದೇವರು ಮಹಾಸಾಗರಗಳ ಮೇಲೆ ಇದ್ದಾರೆ.
ಕೀರ್ತನೆಗಳು 29 : 4 (OCVKN)
ಯೆಹೋವ ದೇವರ ಧ್ವನಿಯು ಶಕ್ತಿಯುಳ್ಳದ್ದು; ಯೆಹೋವ ದೇವರ ಧ್ವನಿಯು ವೈಭವವುಳ್ಳದ್ದು.
ಕೀರ್ತನೆಗಳು 29 : 5 (OCVKN)
ಯೆಹೋವ ದೇವರ ಧ್ವನಿಯು ದೇವದಾರು ವೃಕ್ಷಗಳನ್ನು ಮುರಿಯುತ್ತದೆ; ಯೆಹೋವ ದೇವರು ಲೆಬನೋನಿನ ದೇವದಾರು ವೃಕ್ಷಗಳನ್ನು ಮುರಿಯುತ್ತಾರೆ.
ಕೀರ್ತನೆಗಳು 29 : 6 (OCVKN)
ಲೆಬನೋನ್ ಪರ್ವತವು ಕರುವಿನ ಹಾಗೆಯೂ ಸಿರ್ಯೋನ್ ಬೆಟ್ಟವು ಎಳೆಯ ಕಾಡುಕೋಣದ ಹಾಗೆಯೂ ಹಾರಾಡುವಂತೆ ಮಾಡುತ್ತಾರೆ.
ಕೀರ್ತನೆಗಳು 29 : 7 (OCVKN)
ಯೆಹೋವ ದೇವರ ಧ್ವನಿಯು ಸಿಡಿಲಿನ ಮಿಂಚಿನಂತೆ ಅಪ್ಪಳಿಸುತ್ತದೆ.
ಕೀರ್ತನೆಗಳು 29 : 8 (OCVKN)
ಯೆಹೋವ ದೇವರ ಶಬ್ದವು ಮರುಭೂಮಿಯನ್ನು ನಡುಗಿಸುತ್ತದೆ; ಯೆಹೋವ ದೇವರು ಕಾದೇಶ್ ಮರುಭೂಮಿಯನ್ನು ನಡುಗಿಸುತ್ತಾರೆ.
ಕೀರ್ತನೆಗಳು 29 : 9 (OCVKN)
ಯೆಹೋವ ದೇವರ ಧ್ವನಿಯು ಜಿಂಕೆಗಳು ಈಯುವಂತೆ ಮಾಡಿ ಅಡವಿಗಳನ್ನು ಬಯಲು ಮಾಡುತ್ತದೆ; ದೇವರ ಮಂದಿರದಲ್ಲಿ ಪ್ರತಿಯೊಬ್ಬರೂ “ಮಹಿಮೆ!” ಎಂದು ಘೋಷಿಸುತ್ತಾರೆ.
ಕೀರ್ತನೆಗಳು 29 : 10 (OCVKN)
ಯೆಹೋವ ದೇವರು ಪ್ರಳಯದ ಮೇಲೆ ಕುಳಿತುಕೊಳ್ಳುತ್ತಾರೆ; ಯುಗಯುಗಕ್ಕೂ ಯೆಹೋವ ದೇವರು ಅರಸರಾಗಿ ಕುಳಿತುಕೊಂಡಿದ್ದಾರೆ.
ಕೀರ್ತನೆಗಳು 29 : 11 (OCVKN)
ಯೆಹೋವ ದೇವರು ತಮ್ಮ ಜನರಿಗೆ ಬಲವನ್ನು ಕೊಡುವರು; ಯೆಹೋವ ದೇವರು ತಮ್ಮ ಜನರನ್ನು ಸಮಾಧಾನದಿಂದ ಆಶೀರ್ವದಿಸುವರು.

1 2 3 4 5 6 7 8 9 10 11