ಕೀರ್ತನೆಗಳು 17 : 1 (OCVKN)
ಯೆಹೋವ ದೇವರೇ, ನನ್ನ ಬೇಡಿಕೆ ನ್ಯಾಯವಾದದ್ದು, ನನ್ನ ಮೊರೆಗೆ ಕಿವಿಗೊಡಿರಿ. ನನ್ನ ಪ್ರಾರ್ಥನೆಯನ್ನು ಕೇಳಿರಿ, ಅದು ಕಪಟ ತುಟಿಗಳಿಂದ ಬಂದದ್ದಲ್ಲ.
ಕೀರ್ತನೆಗಳು 17 : 2 (OCVKN)
ನನ್ನ ನ್ಯಾಯವು ನಿಮ್ಮಿಂದಲೇ ಬರಲಿ, ನಿಮ್ಮ ಕಣ್ಣುಗಳು ಸರಿಯಾದವುಗಳನ್ನೇ ನೋಡುತ್ತವೆ.
ಕೀರ್ತನೆಗಳು 17 : 3 (OCVKN)
ನೀವು ನನ್ನ ಹೃದಯವನ್ನು ಶೋಧಿಸಿದರೂ, ನೀವು ರಾತ್ರಿಯಲ್ಲಿ ನನ್ನನ್ನು ಪರೀಕ್ಷಿಸಿ ವಿಚಾರಿಸಿದರೂ, ನಾನು ಕೆಟ್ಟಯೋಜನೆ ಮಾಡಿಕೊಳ್ಳಲಿಲ್ಲವೆಂದು ನೀವು ಕಂಡುಕೊಳ್ಳುವಿರಿ; ನನ್ನ ಬಾಯಿಯೂ ಅತಿಕ್ರಮಿಸುವುದಿಲ್ಲವೆಂದು ನಾನು ತೀರ್ಮಾನಿಸಿಕೊಂಡಿದ್ದೇನೆ.
ಕೀರ್ತನೆಗಳು 17 : 4 (OCVKN)
ಮನುಷ್ಯರು ನನಗೆ ಲಂಚ ನೀಡಲು ಪ್ರಯತ್ನಿಸಿದರೂ, ನಿಮ್ಮ ತುಟಿಗಳ ಆಜ್ಞಾನುಸಾರ ನಾನು ಹಿಂಸಕರ ಮಾರ್ಗಗಳಿಂದ ನನ್ನನ್ನು ದೂರವಾಗಿಟ್ಟುಕೊಂಡಿದ್ದೇನೆ.
ಕೀರ್ತನೆಗಳು 17 : 5 (OCVKN)
ನನ್ನ ಹೆಜ್ಜೆಗಳು ಜಾರದ ಹಾಗೆ ನನ್ನ ನಡೆಗಳನ್ನು ನಿಮ್ಮ ದಾರಿಯಲ್ಲಿ ಸ್ಥಿರಪಡಿಸಿಕೊಂಡಿದ್ದೇನೆ.
ಕೀರ್ತನೆಗಳು 17 : 6 (OCVKN)
ನನ್ನ ದೇವರೇ, ನೀವು ನನಗೆ ಉತ್ತರ ಕೊಡುವುದರಿಂದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನೀವು ನಿಮ್ಮ ಕಿವಿಯನ್ನು ನನ್ನ ಕಡೆ ತಿರುಗಿಸಿ, ನನ್ನ ಪ್ರಾರ್ಥನೆಯನ್ನು ಆಲಿಸಿರಿ.
ಕೀರ್ತನೆಗಳು 17 : 7 (OCVKN)
ನಿಮ್ಮ ಒಡಂಬಡಿಕೆಯ ಪ್ರೀತಿಯ ಅದ್ಭುತವನ್ನು ನನಗೆ ತೋರಿಸಿರಿ. ತಮ್ಮ ವೈರಿಗಳಿಂದ ಓಡಿಬಂದು ನಿಮ್ಮಲ್ಲಿ ಆಶ್ರಯ ಪಡೆಯುವವರಿಗೆ ಭುಜಬಲದಿಂದ ರಕ್ಷಿಸುವವರು ನೀವೇ.
ಕೀರ್ತನೆಗಳು 17 : 8 (OCVKN)
ನಿಮ್ಮ ಕಣ್ಣುಗುಡ್ಡೆಯ ಹಾಗೆ ನನ್ನನ್ನು ಕಾಪಾಡಿರಿ, ನಿಮ್ಮ ರೆಕ್ಕೆಗಳ ನೆರಳಿನಲ್ಲಿ ನನ್ನನ್ನು ಮರೆಮಾಡಿರಿ.
ಕೀರ್ತನೆಗಳು 17 : 9 (OCVKN)
ನನ್ನನ್ನು ಬಾಧಿಸುವ ದುಷ್ಟರಿಂದಲೂ, ನನ್ನನ್ನು ಸುತ್ತಿಕೊಳ್ಳುವ ನನ್ನ ಪ್ರಾಣಾಂತಕ ಶತ್ರುಗಳಿಂದಲೂ ತಪ್ಪಿಸಿ.
ಕೀರ್ತನೆಗಳು 17 : 10 (OCVKN)
ಅವರು ತಮ್ಮ ಸೊಕ್ಕಿನ ಹೃದಯಗಳನ್ನು ಮುಚ್ಚಿಕೊಂಡಿದ್ದಾರೆ, ತಮ್ಮ ಬಾಯಿಂದ ಅವರು ಗರ್ವವನ್ನು ಮಾತನಾಡುತ್ತಾರೆ.
ಕೀರ್ತನೆಗಳು 17 : 11 (OCVKN)
ನನ್ನನ್ನು ಬೀಳಿಸುವಂತೆ, ಅವರು ಈಗ ನನ್ನನ್ನು ಸುತ್ತಿಕೊಂಡಿದ್ದಾರೆ, ನನ್ನನ್ನು ನೆಲಕ್ಕೆ ಹಾಕಬೇಕೆಂದು ಅವರ ಕಣ್ಣುಗಳು ಕಾದಿವೆ.
ಕೀರ್ತನೆಗಳು 17 : 12 (OCVKN)
ಅವರು ತಮ್ಮ ಬೇಟೆಯ ಹಸಿವೆಯಿಂದಿರುವ ಸಿಂಹದ ಹಾಗೆಯೂ, ಗುಪ್ತಸ್ಥಳಗಳಲ್ಲಿ ಹೊಂಚಿ ಕುಳಿತಿರುವ ಭೀಕರ ಸಿಂಹದ ಹಾಗೆಯೂ ಇದ್ದಾರೆ.
ಕೀರ್ತನೆಗಳು 17 : 13 (OCVKN)
ಯೆಹೋವ ದೇವರೇ, ಎದ್ದು ಅವರನ್ನು ಎದುರಿಸಿ ಕೆಳಗೆ ಕೆಡವಿಬಿಡಿರಿ; ನಿಮ್ಮ ಖಡ್ಗದ ಮೂಲಕ ನನ್ನನ್ನು ದುಷ್ಟರಿಂದ ಕಾಪಾಡಿರಿ.
ಕೀರ್ತನೆಗಳು 17 : 14 (OCVKN)
ಯೆಹೋವ ದೇವರೇ, ಈ ಲೋಕಜೀವನದಲ್ಲಿಯಷ್ಟೇ ಪ್ರತಿಫಲವೆಂದು ತಿಳಿಯುವ ಜನರಿಂದ, ನನ್ನನ್ನು ನಿಮ್ಮ ಹಸ್ತದ ಮೂಲಕ ರಕ್ಷಿಸಿ ಕಾಪಾಡಿರಿ. ಅಂಥ ಜನರಿಗಾಗಿ ನೀವು ಸಂಗ್ರಹಿಸಿ ಇಟ್ಟಿರುವುದು ಅವರ ಹೊಟ್ಟೆ ತುಂಬಲಿ; ಅವರ ಮಕ್ಕಳು ಅದರಿಂದ ಸಮೃದ್ಧಿ ಹೊಂದಲಿ, ಅವರ ಚಿಕ್ಕಮಕ್ಕಳಿಗೂ ಉಳಿದದ್ದು ಸಿಕ್ಕಲಿ.
ಕೀರ್ತನೆಗಳು 17 : 15 (OCVKN)
ನಾನಾದರೋ ನೀತಿಯಲ್ಲಿ ನಿಮ್ಮ ಮುಖವನ್ನು ನೋಡುವೆನು. ನಾನು ಎಚ್ಚೆತ್ತಾಗ ನಿಮ್ಮ ಹೋಲಿಕೆಯನ್ನೇ ಕಂಡು ತೃಪ್ತನಾಗುವೆನು.
❮
❯
1
2
3
4
5
6
7
8
9
10
11
12
13
14
15