ಕೀರ್ತನೆಗಳು 146 : 1 (OCVKN)
ಯೆಹೋವ ದೇವರನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಯೆಹೋವ ದೇವರನ್ನು ಸ್ತುತಿಸು.
ಕೀರ್ತನೆಗಳು 146 : 2 (OCVKN)
ನಾನು ಬದುಕುವವರೆಗೂ ಯೆಹೋವ ದೇವರನ್ನು ಸ್ತುತಿಸುವೆನು; ನಾನು ಇರುವವರೆಗೂ ನನ್ನ ದೇವರನ್ನು ಸ್ತುತಿಸುವೆನು.
ಕೀರ್ತನೆಗಳು 146 : 3 (OCVKN)
ಅಧಿಪತಿಗಳಲ್ಲಿಯೂ ರಕ್ಷಿಸಲಾಗದ ಮಾನವರಲ್ಲಿಯೂ ಭರವಸವಿಡಬೇಡಿರಿ.
ಕೀರ್ತನೆಗಳು 146 : 4 (OCVKN)
ಅವರ ಶ್ವಾಸವು ಹೋಗಲು ಮಣ್ಣಿಗೆ ಸೇರುತ್ತಾರೆ, ಅದೇ ದಿವಸದಲ್ಲಿ ಅವರ ಆಲೋಚನೆಗಳೆಲ್ಲಾ ನಾಶವಾಗುತ್ತವೆ.
ಕೀರ್ತನೆಗಳು 146 : 5 (OCVKN)
ಯಾಕೋಬನ ದೇವರನ್ನು ತಮ್ಮ ಸಹಾಯಕರಾಗಿ ಮಾಡಿಕೊಂಡವನು ಧನ್ಯನು; ಅವನು ತನ್ನ ದೇವರಾದ ಯೆಹೋವ ದೇವರ ಮೇಲೆ ನಿರೀಕ್ಷೆ ಇಡುವನು.
ಕೀರ್ತನೆಗಳು 146 : 6 (OCVKN)
ಆಕಾಶವನ್ನೂ, ಭೂಮಿಯನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಎಲ್ಲವನ್ನೂ ಉಂಟುಮಾಡಿದ ದೇವರೇ ಎಂದೆಂದಿಗೂ ನಂಬಿಗಸ್ತರು.
ಕೀರ್ತನೆಗಳು 146 : 7 (OCVKN)
ಅವರು ದಬ್ಬಾಳಿಕೆಯಾದ ನ್ಯಾಯತೀರಿಸುತ್ತಾರೆ, ಹಸಿದವರಿಗೆ ಆಹಾರವನ್ನು ಕೊಡುತ್ತಾರೆ. ಯೆಹೋವ ದೇವರು ಸೆರೆಯವರನ್ನು ಬಿಡಿಸುತ್ತಾರೆ.
ಕೀರ್ತನೆಗಳು 146 : 8 (OCVKN)
ಯೆಹೋವ ದೇವರು ಕುರುಡರ ಕಣ್ಣುಗಳನ್ನು ತೆರೆಯುತ್ತಾರೆ. ಅವರು ದೀನರನ್ನು ಎತ್ತುತ್ತಾರೆ. ನೀತಿವಂತರನ್ನು ಪ್ರೀತಿಸುತ್ತಾರೆ.
ಕೀರ್ತನೆಗಳು 146 : 9 (OCVKN)
ಯೆಹೋವ ದೇವರು ಪರದೇಶಸ್ಥರನ್ನು ಕಾಪಾಡುತ್ತಾರೆ. ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಉದ್ಧರಿಸುತ್ತಾರೆ. ಆದರೆ ದುಷ್ಟರ ಮಾರ್ಗವನ್ನು ಬೇಸರಪಡಿಸುತ್ತಾರೆ.
ಕೀರ್ತನೆಗಳು 146 : 10 (OCVKN)
ಚೀಯೋನೇ, ನಿಮ್ಮ ದೇವರಾದ ಯೆಹೋವ ದೇವರು ತಲತಲಾಂತರಕ್ಕೂ, ಸರ್ವ ಸಂತತಿಗಳವರೆಗೂ ಆಳಿಕೆ ಮಾಡುತ್ತಾರೆ. ಯೆಹೋವ ದೇವರಿಗೆ ಸ್ತೋತ್ರ.
❮
❯