ಕೀರ್ತನೆಗಳು 145 : 1 (OCVKN)
ಅರಸರಾಗಿರುವ ನನ್ನ ದೇವರೇ, ನಿಮ್ಮನ್ನು ಘನಪಡಿಸುವೆನು; ನಿಮ್ಮ ಹೆಸರನ್ನು ಎಂದೆಂದಿಗೂ ಸ್ತುತಿಸುವೆನು.
ಕೀರ್ತನೆಗಳು 145 : 2 (OCVKN)
ಪ್ರತಿದಿನ ನಿಮ್ಮನ್ನು ಸ್ತುತಿಸುವೆನು; ಎಂದೆಂದಿಗೂ ಸ್ತುತಿಸುವೆನು.
ಕೀರ್ತನೆಗಳು 145 : 3 (OCVKN)
ಯೆಹೋವ ದೇವರು ಮಹೋನ್ನತರೂ, ಬಹುಸ್ತುತಿಪಾತ್ರರೂ ಆಗಿದ್ದಾರೆ. ಅವರ ಮಹತ್ವವು ಅಗಮ್ಯವಾದದ್ದು.
ಕೀರ್ತನೆಗಳು 145 : 4 (OCVKN)
ದೇವರೇ ಒಂದು ತಲಾಂತರವು ಇನ್ನೊಂದು ತಲಾಂತರಕ್ಕೆ ನಿಮ್ಮ ಕೆಲಸಗಳನ್ನು ಪ್ರಕಟಿಸುತ್ತದೆ; ಜನರು ನಿಮ್ಮ ಪರಾಕ್ರಮಗಳನ್ನು ತಿಳಿಸುತ್ತಾರೆ.
ಕೀರ್ತನೆಗಳು 145 : 5 (OCVKN)
ನಿಮ್ಮ ಘನತೆಯ ಪ್ರಭಾವದ ಮಹಿಮೆಗಳ ವಿಷಯವಾಗಿಯೂ ನಿಮ್ಮ ಅದ್ಭುತಕಾರ್ಯಗಳ ವಿಷಯವಾಗಿಯೂ ನಾನು ಧ್ಯಾನಿಸುತ್ತಿರುವೆನು,
ಕೀರ್ತನೆಗಳು 145 : 6 (OCVKN)
ನಿಮ್ಮ ಅತಿಶಯ ಶಕ್ತಿಯ ವಿಷಯವಾಗಿ ಅವರು ಹೇಳುವರು; ನಿಮ್ಮ ಮಹಾಕಾರ್ಯವನ್ನು ನಾನು ಸಾರುವೆನು.
ಕೀರ್ತನೆಗಳು 145 : 7 (OCVKN)
ನಿಮ್ಮ ಬಹು ಒಳ್ಳೆಯತನದ ಜ್ಞಾಪಕವನ್ನು ಅವರು ನುಡಿಯುವರು; ನಿಮ್ಮ ನೀತಿಯ ನಿಮಿತ್ತ ಉತ್ಸಾಹಧ್ವನಿ ಮಾಡುವರು.
ಕೀರ್ತನೆಗಳು 145 : 8 (OCVKN)
ಯೆಹೋವ ದೇವರು ಕೃಪಾಳುವೂ, ಅನುಕಂಪವೂ, ದೀರ್ಘಶಾಂತಿಯೂ, ಪ್ರೀತಿ ಪೂರ್ಣರೂ ಆಗಿದ್ದಾರೆ.
ಕೀರ್ತನೆಗಳು 145 : 9 (OCVKN)
ಯೆಹೋವ ದೇವರು ಸರ್ವರಿಗೂ ಒಳ್ಳೆಯವರು. ಅವರ ಅನುಕಂಪವು ತಮ್ಮ ಎಲ್ಲಾ ಸೃಷ್ಟಿಗಳ ಮೇಲೆ ಇದೆ.
ಕೀರ್ತನೆಗಳು 145 : 10 (OCVKN)
ಯೆಹೋವ ದೇವರೇ, ನಿಮ್ಮ ನಂಬಿಗಸ್ತರು ನಿಮ್ಮನ್ನು ಸ್ತುತಿಸುವರು.
ಕೀರ್ತನೆಗಳು 145 : 11 (OCVKN)
ನಿಮ್ಮ ರಾಜ್ಯದ ಮಹಿಮೆಯನ್ನು ಹೇಳುವರು; ನಿಮ್ಮ ಪರಾಕ್ರಮವನ್ನು ನುಡಿಯುವರು.
ಕೀರ್ತನೆಗಳು 145 : 12 (OCVKN)
ಮಾನವರಿಗೆ ನಿಮ್ಮ ಪರಾಕ್ರಮ ಕ್ರಿಯೆಗಳನ್ನೂ, ನಿಮ್ಮ ರಾಜ್ಯದ ಪ್ರಭೆಯ ಘನವನ್ನೂ ತಿಳಿಯಪಡಿಸುವರು.
ಕೀರ್ತನೆಗಳು 145 : 13 (OCVKN)
ನಿಮ್ಮ ರಾಜ್ಯವು ಶಾಶ್ವತವಾದ ರಾಜ್ಯವಾಗಿದೆ; ನಿಮ್ಮ ಅಧಿಪತ್ಯವು ಎಲ್ಲಾ ತಲತಲಾಂತರಗಳಲ್ಲಿ ಇರುವುದು. ಯೆಹೋವ ದೇವರು ತಮ್ಮ ಎಲ್ಲಾ ಪ್ರತಿಜ್ಞೆಗಳಲ್ಲಿ ನಂಬಿಗಸ್ತರಾಗಿರುತ್ತಾರೆ. ಎಲ್ಲಾ ಕಾರ್ಯಗಳಲ್ಲಿಯೂ ಅವರ ಅನುಗ್ರಹ ಉಳಿದಿದೆ.
ಕೀರ್ತನೆಗಳು 145 : 14 (OCVKN)
ಯೆಹೋವ ದೇವರು ಬೀಳುವವರೆಲ್ಲರನ್ನು ಉದ್ಧಾರ ಮಾಡುತ್ತಾರೆ. ತಗ್ಗಿಸಿಕೊಳ್ಳುವವರೆಲ್ಲರನ್ನು ಎತ್ತುತ್ತಾರೆ.
ಕೀರ್ತನೆಗಳು 145 : 15 (OCVKN)
ದೇವರೇ, ಎಲ್ಲರ ಕಣ್ಣುಗಳು ನಿಮಗಾಗಿ ಕಾಯುತ್ತಿರುತ್ತವೆ. ನೀವು ಅವರಿಗೆ ಆಹಾರವನ್ನು ತಕ್ಕ ಕಾಲದಲ್ಲಿ ಕೊಡುತ್ತೀರಿ.
ಕೀರ್ತನೆಗಳು 145 : 16 (OCVKN)
ನಿಮ್ಮ ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ಪೂರೈಸುತ್ತೀರಿ.
ಕೀರ್ತನೆಗಳು 145 : 17 (OCVKN)
ಯೆಹೋವ ದೇವರು ತಮ್ಮ ಎಲ್ಲಾ ಮಾರ್ಗಗಳಲ್ಲಿ ನೀತಿವಂತರೂ ತಮ್ಮ ಸೃಷ್ಟಿಗೆಲ್ಲಾ ಪ್ರೀತಿ ತೋರಿಸುವವರೂ ಆಗಿದ್ದಾರೆ.
ಕೀರ್ತನೆಗಳು 145 : 18 (OCVKN)
ಯೆಹೋವ ದೇವರನ್ನು ಕರೆಯುವವರು ಯಥಾರ್ಥವಾಗಿ ಕರೆಯುವುದಾದರೆ, ಅವರು ಅವರಿಗೆ ಸಮೀಪವಾಗಿದ್ದಾರೆ.
ಕೀರ್ತನೆಗಳು 145 : 19 (OCVKN)
ತಮಗೆ ಭಯಪಡುವವರ ಇಷ್ಟವನ್ನು ನೆರವೇರಿಸುತ್ತಾರೆ. ಅವರ ಮೊರೆಯನ್ನು ಕೇಳಿ, ಅವರನ್ನು ರಕ್ಷಿಸುತ್ತಾರೆ.
ಕೀರ್ತನೆಗಳು 145 : 20 (OCVKN)
ಯೆಹೋವ ದೇವರು, ತಮ್ಮನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾರೆ. ಆದರೆ ದುಷ್ಟರೆಲ್ಲರನ್ನು ದಂಡಿಸುತ್ತಾರೆ.
ಕೀರ್ತನೆಗಳು 145 : 21 (OCVKN)
ನನ್ನ ಬಾಯಿ ಯೆಹೋವ ದೇವರ ಸ್ತೋತ್ರವನ್ನು ನುಡಿಯಲಿ; ಸಮಸ್ತ ಜೀವಿಗಳು ಆತನ ಪರಿಶುದ್ಧವಾದ ಹೆಸರನ್ನು ಯುಗಯುಗಾಂತರಗಳಿಗೂ ಸ್ತುತಿಸಲಿ.
❮
❯
1
2
3
4
5
6
7
8
9
10
11
12
13
14
15
16
17
18
19
20
21