ಕೀರ್ತನೆಗಳು 141 : 1 (OCVKN)
ಯೆಹೋವ ದೇವರೇ, ನಿಮಗೆ ಮೊರೆಯಿಡುತ್ತೇನೆ, ನನ್ನ ಬಳಿಗೆ ಬರಲು ತ್ವರೆಪಡಿರಿ. ನಾನು ನಿಮ್ಮನ್ನು ಕರೆಯುವಾಗ, ನನಗೆ ಕಿವಿಗೊಡಿರಿ.
ಕೀರ್ತನೆಗಳು 141 : 2 (OCVKN)
ನನ್ನ ಪ್ರಾರ್ಥನೆ ನಿಮ್ಮ ಮುಂದೆ ಧೂಪವಾಗಿರಲಿ, ನಾನು ನಿಮ್ಮ ಕಡೆ ಕೈ ಎತ್ತುವುದು ಸಾಯಂಕಾಲದ ಬಲಿಯಂತೆ ನಿಮಗೆ ಸಮರ್ಪಕವಾಗಿರಲಿ.
ಕೀರ್ತನೆಗಳು 141 : 3 (OCVKN)
ಯೆಹೋವ ದೇವರೇ, ನನ್ನ ಬಾಯಿಗೆ ಕಾವಲಿಡಿರಿ; ನನ್ನ ತುಟಿಗಳ ಕದವನ್ನು ಕಾಯಿರಿ;
ಕೀರ್ತನೆಗಳು 141 : 4 (OCVKN)
ಅಪರಾಧ ಮಾಡುವವರ ಸಂಗಡ ನಾನು ಸಹ ಸೇರಿಕೊಂಡು ಕೆಟ್ಟ ಕಾರ್ಯಗಳನ್ನು ಮಾಡಲು ನನ್ನ ಹೃದಯ ಸೆಳೆಯದಂತೆ ಕಾಪಾಡಿರಿ; ಅವರ ಸವಿ ಊಟಗಳನ್ನು ನಾನು ಉಣ್ಣದಿರಲಿ.
ಕೀರ್ತನೆಗಳು 141 : 5 (OCVKN)
ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ. ಅವರು ನನ್ನನ್ನು ಗದರಿಸಲಿ, ಅದು ನನ್ನ ತಲೆಗೆ ಅಭಿಷೇಕ; ನನ್ನ ತಲೆ ಅದನ್ನು ಬೇಡವೆನ್ನದಿರಲಿ; ಆದರೂ ನನ್ನ ಪ್ರಾರ್ಥನೆ ಯಾವಾಗಲೂ ದುಷ್ಟರ ಕಾರ್ಯಗಳಿಗೆ ವಿರೋಧವಾಗಿಯೇ ಇರುವುದು.
ಕೀರ್ತನೆಗಳು 141 : 6 (OCVKN)
ಅವರ ನ್ಯಾಯಾಧಿಪತಿಗಳು ಉನ್ನತ ಸ್ಥಳದಿಂದ ಕೆಳಬಿದ್ದಾಗ ಅವರು ನನ್ನ ಮಾತು ಕೇಳುವರು.
ಕೀರ್ತನೆಗಳು 141 : 7 (OCVKN)
ಅವರು ಹೀಗೆ ಹೇಳುವರು, “ಒಬ್ಬನು ಹೊಲವನ್ನು ಉತ್ತು, ಹೆಂಟೆಗಳನ್ನು ಒಡೆದು ಚದರಿಸುವ ಪ್ರಕಾರವೇ ನಮ್ಮ ಎಲುಬುಗಳು ಪಾತಾಳ ದ್ವಾರದಲ್ಲಿ ಎರಚಲಾಗುವುದು.”
ಕೀರ್ತನೆಗಳು 141 : 8 (OCVKN)
ಆದರೆ ಸಾರ್ವಭೌಮ ಯೆಹೋವ ದೇವರೇ, ನನ್ನ ಕಣ್ಣುಗಳು ನಿಮ್ಮ ಕಡೆ ಇವೆ; ನಿಮ್ಮನ್ನು ಆಶ್ರಯಿಸಿಕೊಂಡಿದ್ದೇನೆ, ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡಿರಿ.
ಕೀರ್ತನೆಗಳು 141 : 9 (OCVKN)
ಅವರು ನನಗೆ ಒಡ್ಡಿದ ಉರುಲಿನಿಂದಲೂ, ಅಪರಾಧಗಳ ನೇಣುಗಳಿಂದಲೂ ನನ್ನನ್ನು ಕಾಪಾಡಿರಿ.
ಕೀರ್ತನೆಗಳು 141 : 10 (OCVKN)
ನಾನು ತಪ್ಪಿಸಿಕೊಂಡು ಸುರಕ್ಷಿತವಾಗಿ ಹೋಗುವಷ್ಟರಲ್ಲಿ ದುಷ್ಟರು ತಮ್ಮ ಬಲೆಗಳಲ್ಲಿಯೇ ಬೀಳಲಿ.

1 2 3 4 5 6 7 8 9 10