ಕೀರ್ತನೆಗಳು 13 : 1 (OCVKN)
ಯೆಹೋವ ದೇವರೇ, ಎಷ್ಟರವರೆಗೆ ನನ್ನನ್ನು ಮರೆಯುವಿರಿ? ಎಂದೆಂದಿಗೂ ನನ್ನನ್ನು ಮರೆಯುವಿರೋ? ಎಷ್ಟರವರೆಗೆ ನಿಮ್ಮ ಮುಖವನ್ನು ನನ್ನಿಂದ ಮರೆಮಾಡುವಿರಿ?
ಕೀರ್ತನೆಗಳು 13 : 2 (OCVKN)
ಇನ್ನೆಷ್ಟರವರೆಗೆ ನನ್ನ ಆಲೋಚನೆಗಳೊಂದಿಗೆ ನಾನು ಹೋರಾಡುತ್ತಿರಬೇಕು? ದಿನನಿತ್ಯವು ನಾನು ನನ್ನ ಹೃದಯದಲ್ಲಿ ನೊಂದಿರಬೇಕೆ? ಇನ್ನೆಷ್ಟರವರೆಗೆ ನನ್ನ ಶತ್ರುವು ನನ್ನ ಮೇಲೆ ಜಯ ಹೊಂದಿರಬೇಕು?
ಕೀರ್ತನೆಗಳು 13 : 3 (OCVKN)
ನನ್ನ ದೇವರಾದ ಯೆಹೋವ ದೇವರೇ, ನನ್ನನ್ನು ನೋಡಿ ನನಗೆ ಸದುತ್ತರ ಕೊಡಿರಿ. ನನಗೆ ಮರಣ ನಿದ್ರೆ ಉಂಟಾಗದಂತೆ ನನ್ನ ಕಣ್ಣುಗಳನ್ನು ಬೆಳಗಿಸಿರಿ.
ಕೀರ್ತನೆಗಳು 13 : 4 (OCVKN)
“ನಾನು ಅವನನ್ನು ಸೋಲಿಸಿದ್ದೇನೆ,” ಎಂದು ನನ್ನ ಶತ್ರು ಹೇಳದಿರಲಿ, ನಾನು ಬೀಳುವಾಗ ನನ್ನ ಶತ್ರುಗಳು ಆನಂದಿಸದಿರಲಿ.
ಕೀರ್ತನೆಗಳು 13 : 5 (OCVKN)
ನಾನಾದರೋ ನಿಮ್ಮ ಒಡಂಬಡಿಕೆಯ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೇನೆ. ನಿಮ್ಮ ರಕ್ಷಣೆಯಲ್ಲಿ ನನ್ನ ಹೃದಯವು ಉಲ್ಲಾಸಪಡುವುದು.
ಕೀರ್ತನೆಗಳು 13 : 6 (OCVKN)
ನಾನು ಯೆಹೋವ ದೇವರಿಗೆ ಸ್ತುತಿ ಹಾಡುವೆನು, ಏಕೆಂದರೆ ಅವರು ನನಗೆ ಒಳ್ಳೆಯವರಾಗಿದ್ದಾರೆ.
❮
❯