ಕೀರ್ತನೆಗಳು 126 : 1 (OCVKN)
ಯೆಹೋವ ದೇವರು ಚೀಯೋನನ್ನು ಸೆರೆಯಿಂದ ಬಿಡಿಸಿದಾಗ ನಾವು ಕನಸು ಕಂಡವರ ಹಾಗಿದ್ದೆವು.
ಕೀರ್ತನೆಗಳು 126 : 2 (OCVKN)
ಆಗ ನಮ್ಮ ಬಾಯಿ ನಗೆಯಿಂದಲೂ, ನಮ್ಮ ಬಾಯಿ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು; ಆಗ ಜನಾಂಗಗಳು, “ಯೆಹೋವ ದೇವರು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ,” ಎಂದು ಹೇಳಿದರು.
ಕೀರ್ತನೆಗಳು 126 : 3 (OCVKN)
ಯೆಹೋವ ದೇವರು ನಮಗೆ ಮಹತ್ಕಾರ್ಯಗಳನ್ನು ಮಾಡಿದ್ದಾರೆ; ಆದಕಾರಣ ಸಂತೋಷಿಸುತ್ತಾ ಇದ್ದೇವೆ.
ಕೀರ್ತನೆಗಳು 126 : 4 (OCVKN)
ಯೆಹೋವ ದೇವರೇ, ನೆಗೆವನಲ್ಲಿರುವ* ನೆಗೆವನಲ್ಲಿರುವ ಅಂದರೆ ದೇಶದ ದಕ್ಷಿಣ ಪ್ರಾಂತ್ಯ ಹೊಳೆಗಳ ಹಾಗೆ ಉಳಿದಿರುವವರನ್ನು ಸಹ ಸೆರೆಯಿಂದ ತಿರುಗಿ ಬರಮಾಡಿರಿ.
ಕೀರ್ತನೆಗಳು 126 : 5 (OCVKN)
ಕಣ್ಣೀರಿನಿಂದ ಬಿತ್ತುವವರು, ಆನಂದ ಗೀತದೊಡನೆ ಕೊಯ್ಯುವರು;
ಕೀರ್ತನೆಗಳು 126 : 6 (OCVKN)
ಬಿತ್ತಲು ಬೀಜವನ್ನು ಹೊತ್ತುಕೊಂಡು ಅಳುತ್ತಾ ಹೋಗುವವರು, ತಮ್ಮ ಸಿವುಡುಗಳನ್ನು ಹೊತ್ತುಕೊಂಡು ಆನಂದ ಗೀತದೊಡನೆ ತಿರುಗಿ ಬರುವರು.

1 2 3 4 5 6