ಕೀರ್ತನೆಗಳು 119 : 1 (OCVKN)
{א ಆಲೆಫ್ } ಯೆಹೋವ ದೇವರ ನಿಯಮಕ್ಕೆ ಅನುಸಾರವಾಗಿದ್ದು, ದೋಷರಹಿತ ಮಾರ್ಗದಲ್ಲಿ ನಡೆದುಕೊಳ್ಳುವವರೂ ಧನ್ಯರು.
ಕೀರ್ತನೆಗಳು 119 : 2 (OCVKN)
ಸಂಪೂರ್ಣ ಹೃದಯದಿಂದ ದೇವರನ್ನು ಹುಡುಕುತ್ತಾ ಅವರ ಶಾಸನಗಳನ್ನು ಕೈಗೊಳ್ಳುವವರೂ ಧನ್ಯರು
ಕೀರ್ತನೆಗಳು 119 : 3 (OCVKN)
ಅಂಥವರು ಅನ್ಯಾಯವನ್ನು ಮಾಡದೆ, ದೇವರ ಮಾರ್ಗಗಳಲ್ಲಿ ನಡೆದುಕೊಳ್ಳುವರು.
ಕೀರ್ತನೆಗಳು 119 : 4 (OCVKN)
ದೇವರೇ, ನಿಮ್ಮ ಸೂತ್ರಗಳನ್ನು ಪೂರ್ಣವಾಗಿ ಕೈಗೊಳ್ಳಬೇಕೆಂದು ನೀವು ಆಜ್ಞಾಪಿಸಿದ್ದೀರಿ.
ಕೀರ್ತನೆಗಳು 119 : 5 (OCVKN)
ನಿಮ್ಮ ತೀರ್ಪುಗಳನ್ನು ಪಾಲಿಸುವುದರಲ್ಲಿ ನನ್ನ ಮಾರ್ಗಗಳು ಸ್ಥಿರವಾಗಿರಲಿ!
ಕೀರ್ತನೆಗಳು 119 : 6 (OCVKN)
ನಿಮ್ಮ ಎಲ್ಲಾ ಅಪ್ಪಣೆಗಳನ್ನು ಪರಿಗಣಿಸುವಾಗ ನಾನು ನಾಚಿಕೆಗೆ ಗುರಿಯಾಗುವುದಿಲ್ಲ.
ಕೀರ್ತನೆಗಳು 119 : 7 (OCVKN)
ನಾನು ನಿಮ್ಮ ನೀತಿಯುಳ್ಳ ನಿಯಮಗಳನ್ನು ಕಲಿಯುತ್ತಿರುವಾಗೆಲ್ಲಾ, ಯಥಾರ್ಥ ಹೃದಯದಿಂದ ನಿಮ್ಮನ್ನು ಕೊಂಡಾಡುವೆನು.
ಕೀರ್ತನೆಗಳು 119 : 8 (OCVKN)
ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು; ನನ್ನನ್ನು ಸಂಪೂರ್ಣವಾಗಿ ಕೈಬಿಡಬೇಡಿರಿ.
ಕೀರ್ತನೆಗಳು 119 : 9 (OCVKN)
{ב ಬೇತ್ } ಯೌವನಸ್ಥನು ಯಾವುದರಿಂದ ತನ್ನ ನಡತೆಯನ್ನು ಶುದ್ಧವಾಗಿಟ್ಟುಕೊಳ್ಳುವನು? ನಿಮ್ಮ ವಾಕ್ಯದ ಪ್ರಕಾರ ಜೀವಿಸುವುದರಿಂದಲೇ.
ಕೀರ್ತನೆಗಳು 119 : 10 (OCVKN)
ನನ್ನ ಪೂರ್ಣಹೃದಯದಿಂದ ನಿಮ್ಮನ್ನು ಹುಡುಕಿದ್ದೇನೆ; ನಿಮ್ಮ ಆಜ್ಞೆಗಳಿಂದ ನಾನು ತಪ್ಪಿಹೋಗದಂತೆ ಮಾಡಿರಿ.
ಕೀರ್ತನೆಗಳು 119 : 11 (OCVKN)
ನಿಮಗೆ ವಿರೋಧವಾಗಿ ಪಾಪಮಾಡದ ಹಾಗೆ ನನ್ನ ಹೃದಯದಲ್ಲಿ ನಿಮ್ಮ ವಾಕ್ಯವನ್ನು ಬಚ್ಚಿಟ್ಟುಕೊಂಡಿದ್ದೇನೆ.
ಕೀರ್ತನೆಗಳು 119 : 12 (OCVKN)
ಯೆಹೋವ ದೇವರೇ, ನಿಮಗೆ ಸ್ತುತಿಯುಂಟಾಗಲಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ.
ಕೀರ್ತನೆಗಳು 119 : 13 (OCVKN)
ನಿಮ್ಮ ಬಾಯಿಂದ ಬರುವ ನಿಯಮಗಳನ್ನೆಲ್ಲಾ ನನ್ನ ತುಟಿಗಳಿಂದ ನಾನು ವರ್ಣಿಸಿದ್ದೇನೆ.
ಕೀರ್ತನೆಗಳು 119 : 14 (OCVKN)
ಮಹಾ ಸಂಪತ್ತಿನಲ್ಲಿ ಒಬ್ಬ ವ್ಯಕ್ತಿ ಆನಂದಿಸುವ ಹಾಗೆ ನಾನು ನಿಮ್ಮ ಶಾಸನಗಳನ್ನು ಅನುಸರಿಸುವುದರಲ್ಲಿ ಆನಂದಿಸುವೆನು.
ಕೀರ್ತನೆಗಳು 119 : 15 (OCVKN)
ನಿಮ್ಮ ಸೂತ್ರಗಳನ್ನು ಧ್ಯಾನಮಾಡಿ, ನಿಮ್ಮ ಮಾರ್ಗಗಳನ್ನು ದೃಷ್ಟಿಸುವೆನು.
ಕೀರ್ತನೆಗಳು 119 : 16 (OCVKN)
ನಿಮ್ಮ ತೀರ್ಪುಗಳಲ್ಲಿ ಉಲ್ಲಾಸಗೊಂಡು, ನಿಮ್ಮ ವಾಕ್ಯವನ್ನು ತಿರಸ್ಕರಿಸದಿರುವೆನು.
ಕೀರ್ತನೆಗಳು 119 : 17 (OCVKN)
{ג ಗಿಮೆಲ್ } ನಾನು ಜೀವದಿಂದಿದ್ದು ನಿಮ್ಮ ವಾಕ್ಯವನ್ನು ಕೈಗೊಳ್ಳುವಂತೆ ನಿಮ್ಮ ಸೇವಕನ ಮೇಲೆ ದಯೆಯಿಡಿರಿ.
ಕೀರ್ತನೆಗಳು 119 : 18 (OCVKN)
ನಿಮ್ಮ ನಿಯಮದೊಳಗಿನ ಅದ್ಭುತಗಳನ್ನು ಕಾಣುವಂತೆ ನನ್ನ ಕಣ್ಣುಗಳನ್ನು ತೆರೆಯಿರಿ.
ಕೀರ್ತನೆಗಳು 119 : 19 (OCVKN)
ಈ ಭೂಮಿಯಲ್ಲಿ ನಾನೊಬ್ಬ ಪ್ರವಾಸಿಯಾಗಿದ್ದೇನೆ; ನಿಮ್ಮ ಆಜ್ಞೆಗಳನ್ನು ನನಗೆ ಮರೆಮಾಡಬೇಡಿರಿ.
ಕೀರ್ತನೆಗಳು 119 : 20 (OCVKN)
ನಿಮ್ಮ ನಿಯಮಗಳನ್ನು ಯಾವಾಗಲೂ ಹಂಬಲಿಸುತ್ತಿರುವುದರಿಂದ, ನನ್ನ ಪ್ರಾಣವು ಕರಗಿಹೋಗುತ್ತಿದೆ.
ಕೀರ್ತನೆಗಳು 119 : 21 (OCVKN)
ನಿಮ್ಮ ಆಜ್ಞೆಗಳನ್ನು ಅನುಸರಿಸದೆ ತಪ್ಪಿಹೋಗುವ ಶಾಪಗ್ರಸ್ತರಾದ ಗರ್ವಿಷ್ಠರನ್ನು ನೀವು ಗದರಿಸುತ್ತೀರಿ.
ಕೀರ್ತನೆಗಳು 119 : 22 (OCVKN)
ನಾನು ನಿಮ್ಮ ಶಾಸನಗಳನ್ನು ಕೈಗೊಂಡ ಕಾರಣ, ಗರ್ವಿಷ್ಠರ ನಿಂದೆಯನ್ನೂ, ತಿರಸ್ಕಾರವನ್ನೂ ನನ್ನಿಂದ ತೊಲಗಿಸಿರಿ.
ಕೀರ್ತನೆಗಳು 119 : 23 (OCVKN)
ಅಧಿಕಾರಿಗಳು ನನಗೆ ವಿರೋಧವಾಗಿ ಕುಳಿತುಕೊಂಡು ಮಾತನಾಡಿಕೊಂಡರೂ, ನಿಮ್ಮ ಸೇವಕನು ನಿಮ್ಮ ತೀರ್ಪುಗಳನ್ನೇ ಧ್ಯಾನಿಸುತ್ತಿರುವೆನು.
ಕೀರ್ತನೆಗಳು 119 : 24 (OCVKN)
ನಿಮ್ಮ ಶಾಸನಗಳು ನನಗೆ ಉಲ್ಲಾಸಕರವಾಗಿವೆ; ಅವೇ ನನ್ನ ಸಮಾಲೋಚಕರು.
ಕೀರ್ತನೆಗಳು 119 : 25 (OCVKN)
{ד ದಾಲಿತ್ } ನಾನು ಧೂಳಿನಲ್ಲಿ ಬಿದ್ದಿದ್ದೇನೆ; ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀವಿಸಿರಿ.
ಕೀರ್ತನೆಗಳು 119 : 26 (OCVKN)
ನಾನು ನನ್ನ ಮಾರ್ಗಗಳನ್ನು ಲೆಕ್ಕ ಒಪ್ಪಿಸಲು, ನೀವು ನನಗೆ ಸದುತ್ತರವನ್ನು ಕೊಟ್ಟಿರುವಿರಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿಕೊಡಿರಿ.
ಕೀರ್ತನೆಗಳು 119 : 27 (OCVKN)
ನಿಮ್ಮ ಸೂತ್ರಗಳ ಮಾರ್ಗವನ್ನು ನಾನು ಅರ್ಥಮಾಡಿಕೊಳ್ಳಲು ಸಹಾಯಿಸಿರಿ, ಆಗ ನಿಮ್ಮ ಅದ್ಭುತಕಾರ್ಯಗಳನ್ನು ಧ್ಯಾನ ಮಾಡುವೆನು.
ಕೀರ್ತನೆಗಳು 119 : 28 (OCVKN)
ನನ್ನ ಪ್ರಾಣವು ದುಃಖದಿಂದ ಬಲಹೀನವಾಗಿದೆ; ನಿಮ್ಮ ವಾಕ್ಯದಿಂದ ನನ್ನನ್ನು ಬಲಪಡಿಸಿರಿ.
ಕೀರ್ತನೆಗಳು 119 : 29 (OCVKN)
ವಂಚನೆಯುಳ್ಳ ಮಾರ್ಗದಿಂದ ನನ್ನನ್ನು ಕಾಪಾಡಿರಿ; ನನಗೆ ಕೃಪೆ ನೀಡಿ ನಿಮ್ಮ ನಿಯಮವನ್ನು ನನಗೆ ಬೋಧನೆ ಮಾಡಿರಿ.
ಕೀರ್ತನೆಗಳು 119 : 30 (OCVKN)
ನಂಬಿಗಸ್ತಿಕೆಯ ಮಾರ್ಗವನ್ನು ಆರಿಸಿಕೊಂಡಿದ್ದೇನೆ; ನಾನು ನಿಮ್ಮ ನಿಯಮಗಳ ಮೇಲೆ ನನ್ನ ಹೃದಯವನ್ನಿಟ್ಟುಕೊಂಡಿದ್ದೇನೆ.
ಕೀರ್ತನೆಗಳು 119 : 31 (OCVKN)
ಯೆಹೋವ ದೇವರೇ, ನಾನು ನಿಮ್ಮ ಶಾಸನಗಳನ್ನು ಬಿಗಿಯಾಗಿಟ್ಟುಕೊಂಡಿದ್ದೇನೆ; ನನ್ನನ್ನು ನಾಚಿಕೆಗೆ ಗುರಿಪಡಿಸಬೇಡಿರಿ.
ಕೀರ್ತನೆಗಳು 119 : 32 (OCVKN)
ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ಓಡುವೆನು, ಏಕೆಂದರೆ ನೀವು ನನ್ನ ವಿವೇಕವನ್ನು ವಿಸ್ತಾರ ಮಾಡಿದ್ದೀರಿ.
ಕೀರ್ತನೆಗಳು 119 : 33 (OCVKN)
{ה ಹೇ } ಯೆಹೋವ ದೇವರೇ, ನಿಮ್ಮ ತೀರ್ಪುಗಳ ವಿವರವನ್ನು ನನಗೆ ಬೋಧಿಸಿರಿ; ಆಗ ನಾನು ಅವುಗಳನ್ನು ಅಂತ್ಯದವರೆಗೂ ಹಿಂಬಾಲಿಸುವೆನು.
ಕೀರ್ತನೆಗಳು 119 : 34 (OCVKN)
ನಿಮ್ಮ ನಿಯಮವನ್ನು ಹಿಂಬಾಲಿಸಿ, ಅದನ್ನು ಪೂರ್ಣಹೃದಯದಿಂದ ಕೈಕೊಳ್ಳಲು ನನಗೆ ವಿವೇಚನೆಯನ್ನು ನೀಡಿರಿ.
ಕೀರ್ತನೆಗಳು 119 : 35 (OCVKN)
ನಿಮ್ಮ ಆಜ್ಞೆಗಳ ಮಾರ್ಗದಲ್ಲಿ ನನ್ನನ್ನು ನಡೆಸಿರಿ, ಏಕೆಂದರೆ ನಾನು ಅದರಲ್ಲಿ ಆನಂದಿಸುತ್ತೇನೆ.
ಕೀರ್ತನೆಗಳು 119 : 36 (OCVKN)
ಸ್ವಾರ್ಥದ ಲಾಭಗಳ ಕಡೆಗಲ್ಲ, ಆದರೆ ನಿಮ್ಮ ಶಾಸನಗಳ ಕಡೆಗೆ ನನ್ನ ಹೃದಯವನ್ನು ತಿರುಗಿಸಿರಿ.
ಕೀರ್ತನೆಗಳು 119 : 37 (OCVKN)
ವ್ಯರ್ಥವಾದವುಗಳಿಂದ ನನ್ನ ಕಣ್ಣುಗಳನ್ನು ತಿರುಗಿಸಿ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ.
ಕೀರ್ತನೆಗಳು 119 : 38 (OCVKN)
ನಿಮಗೆ ಭಯಪಡುವವರಿಗಾಗಿ ನೀಡುವ ವಾಗ್ದಾನವನ್ನು ನಿಮ್ಮ ಸೇವಕನಿಗೆ ನೆರವೇರಿಸಿರಿ.
ಕೀರ್ತನೆಗಳು 119 : 39 (OCVKN)
ನಾನು ಭಯಪಡುವ ನನ್ನ ನಿಂದೆಯನ್ನು ನನ್ನಿಂದ ತೊಲಗಿಸಿರಿ, ಏಕೆಂದರೆ ನಿಮ್ಮ ನಿಯಮಗಳು ಒಳ್ಳೆಯವುಗಳೇ.
ಕೀರ್ತನೆಗಳು 119 : 40 (OCVKN)
ಇಗೋ ನಿಮ್ಮ ಸೂತ್ರಗಳಿಗಾಗಿ ನಾನು ಎಷ್ಟೋ ಹಂಬಲಿಸುತ್ತೇನೆ! ನಿಮ್ಮ ನೀತಿಗನುಸಾರವಾಗಿ ನನ್ನ ಜೀವವನ್ನು ಕಾಪಾಡಿರಿ.
ಕೀರ್ತನೆಗಳು 119 : 41 (OCVKN)
{ו ವಾವ್ } ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ದೊರಕಲಿ, ನಿಮ್ಮ ವಾಗ್ದಾನದ ರಕ್ಷಣೆಯು ನನಗೆ ಉಂಟಾಗಲಿ;
ಕೀರ್ತನೆಗಳು 119 : 42 (OCVKN)
ಆಗ ನನ್ನನ್ನು ನಿಂದಿಸುವವನಿಗೆ ಉತ್ತರಕೊಡುವೆನು, ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ಭರವಸೆಯಿಟ್ಟಿದ್ದೇನೆ.
ಕೀರ್ತನೆಗಳು 119 : 43 (OCVKN)
ಸತ್ಯವಾಕ್ಯವನ್ನು ನನ್ನ ಬಾಯಿಂದ ತೆಗೆಯಬೇಡಿರಿ, ಏಕೆಂದರೆ ನಿಮ್ಮ ನಿಯಮಗಳಲ್ಲಿ ನಾನು ನನ್ನ ನಿರೀಕ್ಷೆಯನ್ನಿಟ್ಟಿದ್ದೇನೆ.
ಕೀರ್ತನೆಗಳು 119 : 44 (OCVKN)
ನಾನು ನಿಮ್ಮ ನಿಯಮವನ್ನು ಯಾವಾಗಲೂ ಮತ್ತು ಎಂದೆಂದಿಗೂ ಪಾಲಿಸುವೆನು.
ಕೀರ್ತನೆಗಳು 119 : 45 (OCVKN)
ನಿಮ್ಮ ಸೂತ್ರಗಳನ್ನು ನಾನು ಹುಡುಕುವುದರಿಂದ, ನಾನು ಸ್ವತಂತ್ರವಾಗಿಯೇ ಜೀವಿಸುವೆನು.
ಕೀರ್ತನೆಗಳು 119 : 46 (OCVKN)
ಅರಸರ ಮುಂದೆ ನಿಮ್ಮ ಶಾಸನಗಳನ್ನು ಮಾತಾಡುವೆನು, ಅವುಗಳ ಬಗ್ಗೆ ನಾನೆಂದೂ ನಾಚಿಕೆಪಡುವುದಿಲ್ಲ.
ಕೀರ್ತನೆಗಳು 119 : 47 (OCVKN)
ನಿಮ್ಮ ಆಜ್ಞೆಗಳನ್ನು ನಾನು ಪ್ರೀತಿಸುವುದರಿಂದ, ನಾನು ಅವುಗಳಲ್ಲಿ ಆನಂದಿಸುವೆನು.
ಕೀರ್ತನೆಗಳು 119 : 48 (OCVKN)
ನಾನು ಪ್ರೀತಿಸುವ ನಿಮ್ಮ ಆಜ್ಞೆಗಳ ಕಡೆಗೆ ನನ್ನ ಕೈಗಳನ್ನೆತ್ತಿ, ನಿಮ್ಮ ತೀರ್ಪುಗಳನ್ನು ಧ್ಯಾನ ಮಾಡುವೆನು.
ಕೀರ್ತನೆಗಳು 119 : 49 (OCVKN)
{ז ಸಾಯಿನ್ } ನಿಮ್ಮ ಸೇವಕನಿಗೋಸ್ಕರ ನಿಮ್ಮ ವಾಕ್ಯವನ್ನು ನೀವು ಜ್ಞಾಪಕಮಾಡಿಕೊಳ್ಳಿರಿ, ಏಕೆಂದರೆ ನೀವು ನನಗೆ ನಿರೀಕ್ಷೆಯನ್ನು ಕೊಟ್ಟಿದ್ದೀರಿ.
ಕೀರ್ತನೆಗಳು 119 : 50 (OCVKN)
ನಿಮ್ಮ ವಾಗ್ದಾನವು ನನ್ನ ಜೀವದ ಸಂರಕ್ಷಣೆಯಾಗಿದೆ. ಅವು ನನ್ನ ಸಂಕಷ್ಟಗಳಲ್ಲಿ ಆದರಣೆಯಾಗಿವೆ.
ಕೀರ್ತನೆಗಳು 119 : 51 (OCVKN)
ಅಹಂಕಾರಿಗಳು ನನ್ನನ್ನು ಕರುಣಿಸದೆ ಹಾಸ್ಯ ಮಾಡಿದರೂ, ನಾನು ನಿಮ್ಮ ನಿಯಮದಿಂದ ತೊಲಗುವುದಿಲ್ಲ.
ಕೀರ್ತನೆಗಳು 119 : 52 (OCVKN)
ಯೆಹೋವ ದೇವರೇ, ನಿಮ್ಮ ಪುರಾತನ ನಿಯಮಗಳನ್ನು ನಾನು ನೆನಪು ಮಾಡಿಕೊಂಡು, ಅವುಗಳಲ್ಲಿ ಆದರಣೆಯನ್ನು ಪಡೆದುಕೊಂಡಿದ್ದೇನೆ.
ಕೀರ್ತನೆಗಳು 119 : 53 (OCVKN)
ನಿಮ್ಮ ನಿಯಮವನ್ನು ಬಿಟ್ಟುಬಿಡುವ ದುಷ್ಟರ ನಿಮಿತ್ತ, ರೋಷವು ನನ್ನನ್ನು ಆವರಿಸಿಕೊಂಡಿದೆ.
ಕೀರ್ತನೆಗಳು 119 : 54 (OCVKN)
ನನ್ನ ಪ್ರವಾಸದ ಮನೆಯಲ್ಲಿ ನಿಮ್ಮ ತೀರ್ಪುಗಳು ನನಗೆ ಗಾನ ವಿಷಯವಾಗಿದೆ.
ಕೀರ್ತನೆಗಳು 119 : 55 (OCVKN)
ಯೆಹೋವ ದೇವರೇ, ರಾತ್ರಿಯಲ್ಲಿ ನಿಮ್ಮ ನಾಮಸ್ಮರಣೆ ಮಾಡುವುದರಿಂದ, ನಿಮ್ಮ ನಿಯಮವನ್ನು ಕೈಕೊಳ್ಳುತ್ತೇನೆ.
ಕೀರ್ತನೆಗಳು 119 : 56 (OCVKN)
ನಾನು ನಿಮ್ಮ ಸೂತ್ರಗಳನ್ನು ಕೈಗೊಂಡಿದ್ದೇನೆ: ಇದೇ ನನ್ನ ಜೀವನದ ಶೈಲಿಯಾಗಿದೆ.
ಕೀರ್ತನೆಗಳು 119 : 57 (OCVKN)
{ח ಕೇತ್ } ಯೆಹೋವ ದೇವರೇ, ನೀವೇ ನನ್ನ ಪಾಲು; ನಿಮ್ಮ ವಾಕ್ಯಗಳನ್ನು ಪಾಲಿಸುವೆನೆಂದು ನಾನು ಪ್ರಮಾಣ ಮಾಡಿದ್ದೇನೆ.
ಕೀರ್ತನೆಗಳು 119 : 58 (OCVKN)
ಪೂರ್ಣಹೃದಯದಿಂದ ನಾನು ನಿಮ್ಮ ಮುಖವನ್ನು ಹುಡುಕಿದ್ದೇನೆ; ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ಕರುಣಿಸಿರಿ.
ಕೀರ್ತನೆಗಳು 119 : 59 (OCVKN)
ನಾನು ನನ್ನ ನಡತೆಯನ್ನು ಪರಿಶೋಧಿಸುತ್ತಾ ನನ್ನ ಹೆಜ್ಜೆಗಳನ್ನು ನಿಮ್ಮ ಶಾಸನಗಳ ಕಡೆಗೆ ತಿರುಗಿಸಿದ್ದೇನೆ.
ಕೀರ್ತನೆಗಳು 119 : 60 (OCVKN)
ನಿಮ್ಮ ಆಜ್ಞೆಗಳನ್ನು ಪಾಲಿಸಲು ನಾನು ತಡಮಾಡದೆ ತ್ವರೆಪಟ್ಟಿದ್ದೇನೆ.
ಕೀರ್ತನೆಗಳು 119 : 61 (OCVKN)
ದುಷ್ಟರ ಪಾಶಗಳು ನನ್ನನ್ನು ಸುತ್ತಿಕೊಂಡಿದ್ದರೂ, ನಿಮ್ಮ ನಿಯಮವನ್ನು ನಾನು ಮರೆಯಲಿಲ್ಲ.
ಕೀರ್ತನೆಗಳು 119 : 62 (OCVKN)
ನಿಮ್ಮ ನೀತಿಯುಳ್ಳ ನಿಯಮಗಳಿಗಾಗಿ ನಿಮಗೆ ಕೃತಜ್ಞತೆ ಸಲ್ಲಿಸಲು ಮಧ್ಯರಾತ್ರಿಯಲ್ಲಿ ಏಳುವೆನು.
ಕೀರ್ತನೆಗಳು 119 : 63 (OCVKN)
ನಿಮಗೆ ಭಯಪಡುವವರೆಲ್ಲರಿಗೂ, ನಿಮ್ಮ ಸೂತ್ರಗಳನ್ನು ಹಿಂಬಾಲಿಸುವವರಿಗೂ ನಾನು ಮಿತ್ರನಾಗಿದ್ದೇನೆ.
ಕೀರ್ತನೆಗಳು 119 : 64 (OCVKN)
ಯೆಹೋವ ದೇವರೇ, ಭೂಮಿಯು ನಿಮ್ಮ ಪ್ರೀತಿಯಿಂದ ತುಂಬಿದೆ; ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
ಕೀರ್ತನೆಗಳು 119 : 65 (OCVKN)
{ט ಟೇತ್ } ಯೆಹೋವ ದೇವರೇ, ನಿಮ್ಮ ವಾಕ್ಯದ ಪ್ರಕಾರ ನಿಮ್ಮ ಸೇವಕನಿಗೆ ಒಳ್ಳೆಯದನ್ನು ಮಾಡಿರಿ.
ಕೀರ್ತನೆಗಳು 119 : 66 (OCVKN)
ತಿಳುವಳಿಕೆಯನ್ನೂ ಒಳ್ಳೆಯ ವಿವೇಚನೆಯನ್ನೂ, ನನಗೆ ಕಲಿಸಿರಿ, ಏಕೆಂದರೆ ನಿಮ್ಮ ಆಜ್ಞೆಗಳಲ್ಲಿ ಭರವಸೆ ಇಟ್ಟಿದ್ದೇನೆ.
ಕೀರ್ತನೆಗಳು 119 : 67 (OCVKN)
ನಾನು ಬಾಧೆಪಡುವುದಕ್ಕಿಂತ ಮುಂಚೆ ದಾರಿತಪ್ಪಿಹೋಗುತ್ತಿದ್ದೆನು, ಆದರೆ ಈಗ ನಿಮ್ಮ ವಾಕ್ಯವನ್ನು ಪಾಲಿಸುತ್ತಿದ್ದೇನೆ.
ಕೀರ್ತನೆಗಳು 119 : 68 (OCVKN)
ನೀವು ಒಳ್ಳೆಯವರೂ, ಒಳ್ಳೆಯದನ್ನು ಮಾಡುವವರೂ ಆಗಿದ್ದೀರಿ; ನಿಮ್ಮ ತೀರ್ಪುಗಳನ್ನು ನನಗೆ ಕಲಿಸಿರಿ.
ಕೀರ್ತನೆಗಳು 119 : 69 (OCVKN)
ಅಹಂಕಾರಿಗಳು ನನಗೆ ವಿರೋಧವಾಗಿ ಸುಳ್ಳು ಕಲ್ಪಿಸಿದರು, ನಾನಾದರೋ ಪೂರ್ಣಹೃದಯದಿಂದ ನಿಮ್ಮ ಸೂತ್ರಗಳನ್ನು ಕೈಗೊಳ್ಳುವೆನು.
ಕೀರ್ತನೆಗಳು 119 : 70 (OCVKN)
ಅವರ ಹೃದಯವು ಕಠಿಣವೂ ಮಂದವೂ ಆಗಿದೆ, ನಾನಾದರೋ ನಿಮ್ಮ ನಿಯಮದಲ್ಲಿ ಆನಂದಪಡುತ್ತೇನೆ.
ಕೀರ್ತನೆಗಳು 119 : 71 (OCVKN)
ನಾನು ಶ್ರಮೆಪಟ್ಟದ್ದು ನನಗೆ ಒಳ್ಳೆಯದಾಯಿತು ಅದರಿಂದ ನಿಮ್ಮ ತೀರ್ಪುಗಳನ್ನು ಕಲಿತೆನು.
ಕೀರ್ತನೆಗಳು 119 : 72 (OCVKN)
ಸಾವಿರಾರು ಬೆಳ್ಳಿಬಂಗಾರ ನಾಣ್ಯಗಳಿಗಿಂತಲೂ ನಿಮ್ಮ ಬಾಯಿಯ ನಿಯಮವು ನನಗೆ ಹೆಚ್ಚು ಅಮೂಲ್ಯವಾದದ್ದಾಗಿದೆ.
ಕೀರ್ತನೆಗಳು 119 : 73 (OCVKN)
{י ಯೋದ್ } ನಿಮ್ಮ ಕೈಗಳು ನನ್ನನ್ನು ನಿರ್ಮಿಸಿ ರೂಪಿಸಿದವು; ನಿಮ್ಮ ಆಜ್ಞೆಗಳನ್ನು ಕಲಿತುಕೊಳ್ಳಲು ನನಗೆ ಅರಿವನ್ನು ನೀಡಿರಿ.
ಕೀರ್ತನೆಗಳು 119 : 74 (OCVKN)
ನಿಮಗೆ ಭಯಪಡುವವರು ನನ್ನನ್ನು ನೋಡಿ ಆನಂದಿಸಲಿ, ಏಕೆಂದರೆ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷಿಸಿಕೊಂಡಿದ್ದೇನೆ.
ಕೀರ್ತನೆಗಳು 119 : 75 (OCVKN)
ಯೆಹೋವ ದೇವರೇ, ನಿಮ್ಮ ನಿಯಮಗಳು ನೀತಿಯುಳ್ಳವುಗಳು; ನಿಮ್ಮ ನಂಬಿಗಸ್ತಿಕೆಯಿಂದಲೇ ನೀವು ನನ್ನನ್ನು ಕಷ್ಟಪಡಿಸಿದ್ದೀರಿ ಎಂದು ನನಗೆ ಗೊತ್ತಿದೆ.
ಕೀರ್ತನೆಗಳು 119 : 76 (OCVKN)
ನೀವು ನಿಮ್ಮ ಸೇವಕನಿಗೆ ನೀಡಿದ ವಾಗ್ದಾನದ ಪ್ರಕಾರ, ನಿಮ್ಮ ಒಡಂಬಡಿಕೆಯ ಪ್ರೀತಿಯು ನನಗೆ ಆದರಣೆಯಾಗಿರಲಿ.
ಕೀರ್ತನೆಗಳು 119 : 77 (OCVKN)
ನಾನು ಜೀವಿಸುವಂತೆ ನಿಮ್ಮ ಅನುಕಂಪವು ನನಗೆ ಬರಲಿ, ಏಕೆಂದರೆ ನಿಮ್ಮ ನಿಯಮವೇ ನನ್ನ ಆನಂದವಾಗಿದೆ.
ಕೀರ್ತನೆಗಳು 119 : 78 (OCVKN)
ಅಹಂಕಾರಿಗಳು ಕಾರಣವಿಲ್ಲದೆ ನನಗೆ ಕೇಡು ಮಾಡಿದ್ದರಿಂದ ನಾಚಿಕೆಪಡಲಿ; ಆದರೆ ನಾನು ನಿಮ್ಮ ಸೂತ್ರಗಳನ್ನು ಧ್ಯಾನಿಸುತ್ತಿರುವೆನು.
ಕೀರ್ತನೆಗಳು 119 : 79 (OCVKN)
ನಿಮಗೆ ಭಯಪಡುವವರು ನನ್ನ ಬಳಿಗೆ ಬರಲಿ, ನಿಮ್ಮ ಶಾಸನಗಳನ್ನು ಅರ್ಥಮಾಡಿಕೊಳ್ಳುವವರೂ ನನ್ನ ಬಳಿಗೆ ಬರಲಿ.
ಕೀರ್ತನೆಗಳು 119 : 80 (OCVKN)
ನಿಷ್ಕಳಂಕ ಹೃದಯದಿಂದ ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು, ಅದರಿಂದ ನಾನು ನಾಚಿಕೆಗೆ ಗುರಿಯಾಗದಿರುವೆನು.
ಕೀರ್ತನೆಗಳು 119 : 81 (OCVKN)
{כ ಕಾಫ್ } ನನ್ನ ಪ್ರಾಣವು ನಿಮ್ಮ ರಕ್ಷಣೆಯ ಬಯಕೆಯಿಂದಲೇ ಕುಗ್ಗಿ ಹೋಗುತ್ತಿದೆ, ಆದರೂ ನಾನು ನಿಮ್ಮ ವಾಕ್ಯದಲ್ಲಿ ನಿರೀಕ್ಷೆ ಇಟ್ಟಿದ್ದೇನೆ.
ಕೀರ್ತನೆಗಳು 119 : 82 (OCVKN)
ನನ್ನ ಕಣ್ಣುಗಳು ನಿಮ್ಮ ವಾಗ್ದಾನಕ್ಕಾಗಿ ಕಾಯುತ್ತಾ ಮಂದವಾಗುತ್ತಿವೆ; “ನೀವು ಯಾವಾಗ ನನಗೆ ಆದರಣೆ ನೀಡುವಿರಿ?” ಎಂದು ನಾನು ಕೇಳುತ್ತಿರುವೆನು.
ಕೀರ್ತನೆಗಳು 119 : 83 (OCVKN)
ನಾನು ಹೊಗೆಯಲ್ಲಿರುವ ದ್ರಾಕ್ಷಾರಸದ ಚರ್ಮಚೀಲದಂತ್ತಿದ್ದರೂ, ನಿಮ್ಮ ತೀರ್ಪುಗಳನ್ನು ನಾನು ಮರೆಯಲಿಲ್ಲ.
ಕೀರ್ತನೆಗಳು 119 : 84 (OCVKN)
ಎಷ್ಟು ಕಾಲ ನಿಮ್ಮ ಸೇವಕನು ಕಾಯಬೇಕು? ನನ್ನ ಹಿಂಸಕರಿಗೆ ಯಾವಾಗ ನೀವು ಶಿಕ್ಷಿಸುವಿರಿ?
ಕೀರ್ತನೆಗಳು 119 : 85 (OCVKN)
ನಿಮ್ಮ ನಿಯಮಕ್ಕೆ ವಿರೋಧವಾಗಿ ಅಹಂಕಾರಿಗಳು ನನಗೆ ಬಲೆಹಿಡಿಯಲು ಕುಣಿಗಳನ್ನು ಅಗೆದಿದ್ದಾರೆ.
ಕೀರ್ತನೆಗಳು 119 : 86 (OCVKN)
ನಿಮ್ಮ ಆಜ್ಞೆಗಳೆಲ್ಲಾ ಭರವಸೆಗೆ ಯೋಗ್ಯವಾದವುಗಳೇ; ಕಾರಣವಿಲ್ಲದೆ ಜನರು ನನ್ನನ್ನು ಹಿಂಸಿಸುವುದರಿಂದ ನನಗೆ ಸಹಾಯಮಾಡಿರಿ.
ಕೀರ್ತನೆಗಳು 119 : 87 (OCVKN)
ಅವರು ನನ್ನನ್ನು ಬಹುಮಟ್ಟಿಗೆ ಭೂಮಿಯಿಂದ ಅಳಿಸಿಹಾಕಲು ನೋಡಿದರು, ಆದರೆ ನಾನು ನಿಮ್ಮ ಸೂತ್ರಗಳನ್ನು ತಿರಸ್ಕರಿಸಲಿಲ್ಲ.
ಕೀರ್ತನೆಗಳು 119 : 88 (OCVKN)
ನಿಮ್ಮ ಒಡಂಬಡಿಕೆಯ ಪ್ರೀತಿಯಿಂದ ನನ್ನ ಜೀವನವನ್ನು ಪರಿಪಾಲಿಸಿರಿ, ಆಗ ನಿಮ್ಮ ಬಾಯಿಂದ ಹೊರಡುವ ಶಾಸನಗಳನ್ನು ಪಾಲಿಸುವೆನು.
ಕೀರ್ತನೆಗಳು 119 : 89 (OCVKN)
{ל ಲಾಮೆದ್ } ಯೆಹೋವ ದೇವರೇ, ನಿಮ್ಮ ವಾಕ್ಯವು ಶಾಶ್ವತವಾಗಿದೆ; ಅದು ಪರಲೋಕದಲ್ಲಿ ಸ್ಥಿರವಾಗಿದೆ.
ಕೀರ್ತನೆಗಳು 119 : 90 (OCVKN)
ನಿಮ್ಮ ನಂಬಿಗಸ್ತಿಕೆಯು ಎಲ್ಲಾ ತಲೆಮಾರಿಗೂ ಮುಂದುವರಿಯುವುದು; ನೀವು ಸ್ಥಾಪಿಸಿದ ಭೂಮಿಯು ನೆಲೆಯಾಗಿರುವುದು.
ಕೀರ್ತನೆಗಳು 119 : 91 (OCVKN)
ನಿಮ್ಮ ನಿಯಮಗಳು ಇಂದಿನವರೆಗೂ ನಿಂತಿರುತ್ತವೆ, ಏಕೆಂದರೆ ಸೃಷ್ಟಿಗಳೆಲ್ಲವೂ ನಿಮ್ಮ ಸೇವೆಯನ್ನು ಮಾಡುತ್ತವೆ.
ಕೀರ್ತನೆಗಳು 119 : 92 (OCVKN)
ನಿಮ್ಮ ನಿಯಮವು ನನಗೆ ಆನಂದವಾಗಿರದಿದ್ದರೆ, ನನ್ನ ಕಷ್ಟದಲ್ಲಿ ನಾನು ನಾಶವಾಗುತ್ತಿದ್ದೆನು.
ಕೀರ್ತನೆಗಳು 119 : 93 (OCVKN)
ನಿಮ್ಮ ಸೂತ್ರಗಳನ್ನು ನಾನು ಎಂದಿಗೂ ಮರೆಯುವುದಿಲ್ಲ, ಏಕೆಂದರೆ ಅವುಗಳಿಂದ ನನ್ನ ಜೀವವನ್ನು ಪರಿಪಾಲಿಸಿದ್ದೀರಿ.
ಕೀರ್ತನೆಗಳು 119 : 94 (OCVKN)
ನನ್ನನ್ನು ರಕ್ಷಿಸಿರಿ, ಏಕೆಂದರೆ ನಾನು ನಿಮ್ಮವನೇ; ನಿಮ್ಮ ಸೂತ್ರಗಳನ್ನು ನಾನು ಹುಡುಕಿದ್ದೇನಲ್ಲಾ.
ಕೀರ್ತನೆಗಳು 119 : 95 (OCVKN)
ದುಷ್ಟರು ನನ್ನನ್ನು ನಾಶಮಾಡುವುದಕ್ಕೆ ನನಗಾಗಿ ಕಾಯುತ್ತಿದ್ದಾರೆ, ನಾನಾದರೋ ನಿಮ್ಮ ಶಾಸನಗಳನ್ನು ಆಲೋಚಿಸುತ್ತಿರುವೆನು.
ಕೀರ್ತನೆಗಳು 119 : 96 (OCVKN)
ಸರ್ವ ಸಂಪೂರ್ಣತೆಗೂ ಒಂದು ಮಿತಿಯಿರುವುದನ್ನು ನಾನು ನೋಡಿದ್ದೇನೆ; ಆದರೆ ನಿಮ್ಮ ಆಜ್ಞೆಗಳು ಮಿತಿಯಿಲ್ಲದವುಗಳಾಗಿವೆ.
ಕೀರ್ತನೆಗಳು 119 : 97 (OCVKN)
{מ ಮೆಮ್ } ನಿಮ್ಮ ನಿಯಮವನ್ನು ನಾನು ಎಷ್ಟೋ ಪ್ರೀತಿಮಾಡುತ್ತೇನೆ! ದಿನವೆಲ್ಲಾ ಅದನ್ನೇ ಧ್ಯಾನಿಸುತ್ತೇನೆ.
ಕೀರ್ತನೆಗಳು 119 : 98 (OCVKN)
ನಿಮ್ಮ ಆಜ್ಞೆಗಳು ಯಾವಾಗಲೂ ನನ್ನೊಂದಿಗೆ ಇರುವುದರಿಂದ ಅವು ನನ್ನನ್ನು ನನ್ನ ಶತ್ರುಗಳಿಗಿಂತ ಜ್ಞಾನಿಯಾಗಿ ಮಾಡಿವೆ.
ಕೀರ್ತನೆಗಳು 119 : 99 (OCVKN)
ನನ್ನ ಒಳನೋಟ ನನ್ನ ಬೋಧಕರೆಲ್ಲರಿಗಿಂತ ದೊಡ್ಡದಾಗಿದೆ. ಏಕೆಂದರೆ ನಿಮ್ಮ ಶಾಸನಗಳು ನನ್ನ ಧ್ಯಾನವಾಗಿವೆ.
ಕೀರ್ತನೆಗಳು 119 : 100 (OCVKN)
ನಿಮ್ಮ ಸೂತ್ರಗಳನ್ನು ಕೈಗೊಂಡಿರುವುದರಿಂದ ನಾನು ಹಿರಿಯರಿಗಿಂತಲೂ ವಿವೇಕಿಯಾಗಿದ್ದೇನೆ.
ಕೀರ್ತನೆಗಳು 119 : 101 (OCVKN)
ನಿಮ್ಮ ವಾಕ್ಯವನ್ನು ಅನುಸರಿಸಬೇಕೆಂದು, ನಾನು ಪ್ರತಿಯೊಂದು ದುರ್ಮಾರ್ಗದಿಂದ ನನ್ನ ಹೆಜ್ಜೆಗಳನ್ನು ಹಿಂದೆಗೆದಿದ್ದೇನೆ.
ಕೀರ್ತನೆಗಳು 119 : 102 (OCVKN)
ನಿಮ್ಮ ನಿಯಮಗಳಿಂದ ನಾನು ತಪ್ಪಿಹೋಗಲಿಲ್ಲ, ಏಕೆಂದರೆ ನೀವೇ ನನಗೆ ಉಪದೇಶಿಸಿದ್ದೀರಿ.
ಕೀರ್ತನೆಗಳು 119 : 103 (OCVKN)
ನಿಮ್ಮ ಮಾತುಗಳು ನನ್ನ ರುಚಿಗೆ ಎಷ್ಟೋ ಸಿಹಿಯಾಗಿವೆ! ಅವು ನನ್ನ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ!
ಕೀರ್ತನೆಗಳು 119 : 104 (OCVKN)
ನಾನು ನಿಮ್ಮ ಸೂತ್ರಗಳಿಂದ ತಿಳುವಳಿಕೆಯನ್ನು ಸಂಪಾದಿಸಿಕೊಂಡಿದ್ದೇನೆ; ಆದ್ದರಿಂದ ಪ್ರತಿಯೊಂದು ದುರ್ಮಾರ್ಗವನ್ನೂ ದ್ವೇಷಿಸುತ್ತೇನೆ.
ಕೀರ್ತನೆಗಳು 119 : 105 (OCVKN)
{נ ನೂನ್ } ನಿಮ್ಮ ವಾಕ್ಯವು ನನ್ನ ಪಾದಕ್ಕೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.
ಕೀರ್ತನೆಗಳು 119 : 106 (OCVKN)
ನಿಮ್ಮ ನೀತಿಯ ನಿಯಮಗಳನ್ನು ಪಾಲಿಸುವೆನೆಂದು ನಾನು ಒಂದು ಶಪಥಮಾಡಿದ್ದೇನೆ; ಅದನ್ನು ನಾನು ದೃಢಪಡಿಸುವೆನು.
ಕೀರ್ತನೆಗಳು 119 : 107 (OCVKN)
ನಾನು ಬಹಳ ಕಷ್ಟ ಅನುಭವಿಸಿದ್ದೇನೆ; ಯೆಹೋವ ದೇವರೇ, ನಿಮ್ಮ ವಾಕ್ಯದ ಅನುಸಾರವಾಗಿ ನನ್ನ ಜೀವನವನ್ನು ಕಾಪಾಡಿರಿ.
ಕೀರ್ತನೆಗಳು 119 : 108 (OCVKN)
ಯೆಹೋವ ದೇವರೇ, ನನ್ನ ಬಾಯಿಂದ ಸಿದ್ಧಮನಸ್ಸಿನ ಸ್ತೋತ್ರಗಳನ್ನು ಸ್ವೀಕರಿಸಿರಿ, ನಿಮ್ಮ ನಿಯಮಗಳನ್ನು ನನಗೆ ಬೋಧಿಸಿರಿ.
ಕೀರ್ತನೆಗಳು 119 : 109 (OCVKN)
ನನ್ನ ಜೀವನ ಆಗಾಗ ಅಪಾಯದಲ್ಲಿದೆ, ಆದಾಗ್ಯೂ ನಾನು ನಿಮ್ಮ ನಿಯಮವನ್ನು ಮರೆಯುವುದಿಲ್ಲ.
ಕೀರ್ತನೆಗಳು 119 : 110 (OCVKN)
ದುಷ್ಟರು ನನಗೆ ಬಲೆಯೊಡ್ಡಿದ್ದಾರೆ; ಆದರೂ ನಾನು ನಿಮ್ಮ ಸೂತ್ರಗಳನ್ನು ಬಿಟ್ಟು ತಪ್ಪಿಹೋಗಲಿಲ್ಲ.
ಕೀರ್ತನೆಗಳು 119 : 111 (OCVKN)
ನಿಮ್ಮ ಶಾಸನಗಳನ್ನು ನಿತ್ಯ ಸೊತ್ತಾಗಿ ತೆಗೆದುಕೊಂಡಿದ್ದೇನೆ; ಏಕೆಂದರೆ ಅವು ನನ್ನ ಹೃದಯಕ್ಕೆ ಉಲ್ಲಾಸಕರವಾಗಿದೆ.
ಕೀರ್ತನೆಗಳು 119 : 112 (OCVKN)
ನಿಮ್ಮ ತೀರ್ಪುಗಳನ್ನು ಕಡೆವರೆಗೂ ಪಾಲಿಸುವುದಕ್ಕೆ ನಾನು ನನ್ನ ಹೃದಯದಲ್ಲಿ ದೃಢಮಾಡಿಕೊಂಡಿದ್ದೇನೆ.
ಕೀರ್ತನೆಗಳು 119 : 113 (OCVKN)
{ס ಸಾಮೆಖ್ } ಎರಡು ಮನಸ್ಸುಳ್ಳವರನ್ನು ನಾನು ದ್ವೇಷಿಸುತ್ತೇನೆ, ಆದರೂ ನಿಮ್ಮ ನಿಯಮವನ್ನು ನಾನು ಪ್ರೀತಿಸುತ್ತೇನೆ.
ಕೀರ್ತನೆಗಳು 119 : 114 (OCVKN)
ನೀವೇ ನನ್ನ ಆಶ್ರಯವೂ, ಗುರಾಣಿಯೂ ಆಗಿದ್ದೀರಿ; ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟುಕೊಂಡಿದ್ದೇನೆ.
ಕೀರ್ತನೆಗಳು 119 : 115 (OCVKN)
ನಿಯಮ ಮೀರುವವರೇ, ನನ್ನಿಂದ ತೊಲಗಿರಿ, ನಾನು ನನ್ನ ದೇವರ ಆಜ್ಞೆಗಳನ್ನು ಪಾಲಿಸಲು ಬಿಡಿರಿ!
ಕೀರ್ತನೆಗಳು 119 : 116 (OCVKN)
ನನ್ನ ದೇವರೇ, ನಿಮ್ಮ ವಾಕ್ಯದ ಪ್ರಕಾರ ನನ್ನನ್ನು ನೆಲೆಗೊಳಿಸಿರಿ, ಆಗ ನಾನು ಬದುಕುವೆನು; ನನ್ನ ನಿರೀಕ್ಷೆ ಮುರಿದುಹೋಗದಿರಲಿ.
ಕೀರ್ತನೆಗಳು 119 : 117 (OCVKN)
ನನ್ನನ್ನು ಎತ್ತಿ ಹಿಡಿಯಿರಿ, ಆಗ ನಾನು ಬಿಡುಗಡೆಯಾಗುವೆನು; ನಿಮ್ಮ ತೀರ್ಪುಗಳಿಗೆ ಯಾವಾಗಲೂ ಗಮನಕೊಡುವೆನು.
ಕೀರ್ತನೆಗಳು 119 : 118 (OCVKN)
ನಿಮ್ಮ ತೀರ್ಪುಗಳನ್ನು ಮೀರಿದವರನ್ನೆಲ್ಲಾ ನೀವು ತಿರಸ್ಕರಿಸುತ್ತೀರಿ, ಏಕೆಂದರೆ ಅವರ ಕುಯುಕ್ತಿಯು ವ್ಯರ್ಥವಾಗುವುದು.
ಕೀರ್ತನೆಗಳು 119 : 119 (OCVKN)
ಭೂಮಿಯಲ್ಲಿರುವ ದುಷ್ಟರೆಲ್ಲರನ್ನು ಕಸದ ಹಾಗೆ ತೆಗೆದು ಹಾಕುತ್ತೀರಿ; ಆದ್ದರಿಂದ ನಾನು ನಿಮ್ಮ ಶಾಸನಗಳನ್ನು ಪ್ರೀತಿಸುತ್ತೇನೆ.
ಕೀರ್ತನೆಗಳು 119 : 120 (OCVKN)
ನಿಮ್ಮ ಭಯದಿಂದ ನನ್ನ ಶರೀರವು ನಡುಗುತ್ತದೆ; ನಿಮ್ಮ ನಿಯಮಗಳಿಗೆ ನಾನು ಭಯಭಕ್ತಿಯುಳ್ಳವನಾಗಿದ್ದೇನೆ.
ಕೀರ್ತನೆಗಳು 119 : 121 (OCVKN)
{ע ಆಯಿನ್ } ನಾನು ನೀತಿನ್ಯಾಯವನ್ನು ನಡೆಸಿದ್ದೇನೆ; ನನ್ನ ಹಿಂಸಕರಿಗೆ ನನ್ನನ್ನು ಒಪ್ಪಿಸಬೇಡಿರಿ.
ಕೀರ್ತನೆಗಳು 119 : 122 (OCVKN)
ನಿಮ್ಮ ಸೇವಕನ ಕ್ಷೇಮವನ್ನು ದೃಢಪಡಿಸಿರಿ; ಅಹಂಕಾರಿಗಳು ನನ್ನನ್ನು ಬಾಧಿಸದಿರಲಿ.
ಕೀರ್ತನೆಗಳು 119 : 123 (OCVKN)
ನಿಮ್ಮ ರಕ್ಷಣೆಯನ್ನೂ ನಿಮ್ಮ ನೀತಿಯ ವಾಗ್ದಾನವನ್ನೂ ಕಾಯುತ್ತಾ, ನನ್ನ ಕಣ್ಣುಗಳು ಮಂದವಾದವು.
ಕೀರ್ತನೆಗಳು 119 : 124 (OCVKN)
ನಿಮ್ಮ ಪ್ರೀತಿಗೆ ಅನುಸಾರವಾಗಿ ನಿಮ್ಮ ಸೇವಕನೊಂದಿಗೆ ವ್ಯವಹರಿಸಿ, ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
ಕೀರ್ತನೆಗಳು 119 : 125 (OCVKN)
ನಾನು ನಿಮ್ಮ ಸೇವಕನು, ನಿಮ್ಮ ಶಾಸನಗಳನ್ನು ನಾನು ಅರ್ಥಮಾಡಿಕೊಳ್ಳುವಂತೆ ನನಗೆ ವಿವೇಚನೆಯನ್ನು ಕೊಡಿರಿ.
ಕೀರ್ತನೆಗಳು 119 : 126 (OCVKN)
ಯೆಹೋವ ದೇವರೇ, ಇದು ನೀವು ಕಾರ್ಯಸಾಧಿಸಲು ಸಮಯವಾಗಿದೆ, ಏಕೆಂದರೆ ನಿಮ್ಮ ನಿಯಮವು ಉಲ್ಲಂಘಿಸಲಾಗಿದೆ.
ಕೀರ್ತನೆಗಳು 119 : 127 (OCVKN)
ಆದ್ದರಿಂದ ನಾನು ನಿಮ್ಮ ಆಜ್ಞೆಗಳನ್ನು ಬಂಗಾರಕ್ಕಿಂತಲೂ ಹೌದು, ಅಪರಂಜಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ,
ಕೀರ್ತನೆಗಳು 119 : 128 (OCVKN)
ಅದರ ನಿಮಿತ್ತ ನಿಮ್ಮ ಸೂತ್ರಗಳೆಲ್ಲವೂ ಸರಿಯಾದವುಗಳೆಂದು ನಾನು ಅಂಗೀಕರಿಸುತ್ತೇನೆ, ಪ್ರತಿಯೊಂದು ಮೋಸ ಮಾರ್ಗವನ್ನೂ ದ್ವೇಷಿಸುತ್ತೇನೆ.
ಕೀರ್ತನೆಗಳು 119 : 129 (OCVKN)
{פ ಪೆ } ನಿಮ್ಮ ಶಾಸನಗಳು ಅದ್ಭುತವಾದವುಗಳೇ; ಆದ್ದರಿಂದ ನಾನು ಅವುಗಳನ್ನು ಅನುಸರಿಸುತ್ತೇನೆ.
ಕೀರ್ತನೆಗಳು 119 : 130 (OCVKN)
ನಿಮ್ಮ ವಾಕ್ಯಗಳನ್ನು ತೆರೆಯುವಾಗ, ಅದು ಬೆಳಕನ್ನು ಕೊಡುವುದು; ಅದು ಮುಗ್ಧರಿಗೆ ಅರಿವನ್ನು ನೀಡುವುದು.
ಕೀರ್ತನೆಗಳು 119 : 131 (OCVKN)
ನಿಮ್ಮ ಆಜ್ಞೆಗಳಿಗಾಗಿರುವ ಬಯಕೆಯು, ನಾನು ಬಾಯಿತೆರೆದು ಹಂಬಲಿಸುವಂತೆ ಮಾಡುತ್ತದೆ.
ಕೀರ್ತನೆಗಳು 119 : 132 (OCVKN)
ನಿಮ್ಮ ನಾಮವನ್ನು ಪ್ರೀತಿಸುವವರಿಗೆ ನೀವು ಯಾವಾಗಲೂ ಮಾಡುವಂತೆ, ನೀವು ನನ್ನ ಕಡೆಗೆ ತಿರುಗಿಕೊಂಡು, ನನ್ನನ್ನು ಕರುಣಿಸಿರಿ.
ಕೀರ್ತನೆಗಳು 119 : 133 (OCVKN)
ನನ್ನ ಹೆಜ್ಜೆಗಳನ್ನು ನಿಮ್ಮ ವಾಕ್ಯದ ಪ್ರಕಾರ ಮುನ್ನಡೆಸಿರಿ; ಯಾವ ಪಾಪವಾದರೂ ನನ್ನನ್ನು ಆಳದಿರಲಿ.
ಕೀರ್ತನೆಗಳು 119 : 134 (OCVKN)
ಜನರ ಬಲಾತ್ಕಾರದಿಂದ ನನ್ನನ್ನು ತಪ್ಪಿಸಿರಿ, ಆಗ ನಿಮ್ಮ ಸೂತ್ರಗಳನ್ನು ನಾನು ಪಾಲಿಸುವೆನು.
ಕೀರ್ತನೆಗಳು 119 : 135 (OCVKN)
ನಿಮ್ಮ ಮುಖವನ್ನು ನಿಮ್ಮ ಸೇವಕನ ಮೇಲೆ ಪ್ರಕಾಶಿಸಿರಿ ಮತ್ತು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿರಿ.
ಕೀರ್ತನೆಗಳು 119 : 136 (OCVKN)
ನಿಮ್ಮ ನಿಯಮವನ್ನು ಕೈಗೊಳ್ಳದೇ ಇರುವಾಗ ನನ್ನ ಕಣ್ಣಿನಿಂದ ಕಣ್ಣೀರು ಧಾರೆಯಾಗಿ ಹರಿಯುತ್ತಿವೆ.
ಕೀರ್ತನೆಗಳು 119 : 137 (OCVKN)
{צ ಸಾದೆ } ಯೆಹೋವ ದೇವರೇ, ನೀವು ನೀತಿವಂತರು, ನಿಮ್ಮ ನಿಯಮಗಳು ಸರಿಯಾದವುಗಳೇ.
ಕೀರ್ತನೆಗಳು 119 : 138 (OCVKN)
ನೀವು ಕೊಟ್ಟ ನಿಮ್ಮ ಶಾಸನಗಳು ನೀತಿಯುಳ್ಳವುಗಳು; ಪೂರ್ಣ ಭರವಸೆಗೆ ಅವು ಯೋಗ್ಯವಾದವುಗಳು.
ಕೀರ್ತನೆಗಳು 119 : 139 (OCVKN)
ನನ್ನ ವೈರಿಗಳು ನಿಮ್ಮ ಮಾತುಗಳನ್ನು ತಿರಸ್ಕರಿಸುವುದರಿಂದ, ನನ್ನ ಆಸಕ್ತಿಯು ನನ್ನನ್ನು ದಹಿಸಿಬಿಟ್ಟಿದೆ.
ಕೀರ್ತನೆಗಳು 119 : 140 (OCVKN)
ನಿಮ್ಮ ವಾಗ್ದಾನಗಳು ಬಹು ಪರಿಶೋಧಿತವಾಗಿವೆ, ಆದ್ದರಿಂದ ನಿಮ್ಮ ಸೇವಕನು ಅವುಗಳನ್ನು ಪ್ರೀತಿಸುತ್ತಾನೆ.
ಕೀರ್ತನೆಗಳು 119 : 141 (OCVKN)
ನಾನು ಅಲ್ಪನೂ, ತಿರಸ್ಕಾರ ಹೊಂದಿದವನು ಆಗಿದ್ದರೂ, ನಿಮ್ಮ ಸೂತ್ರಗಳನ್ನು ನಾನು ಮರೆಯುವುದಿಲ್ಲ.
ಕೀರ್ತನೆಗಳು 119 : 142 (OCVKN)
ನಿಮ್ಮ ನೀತಿಯು ನಿತ್ಯವಾದದ್ದು ನಿಮ್ಮ ನಿಯಮವು ಸತ್ಯವಾದದ್ದು.
ಕೀರ್ತನೆಗಳು 119 : 143 (OCVKN)
ಕಷ್ಟಸಂಕಟಗಳು ನನ್ನನ್ನು ಹಿಡಿದಿವೆ, ಆದರೂ ನಿಮ್ಮ ಆಜ್ಞೆಗಳು ನನಗೆ ಆನಂದದಾಯಕವಾಗಿವೆ.
ಕೀರ್ತನೆಗಳು 119 : 144 (OCVKN)
ನಿಮ್ಮ ಶಾಸನಗಳು ಯಾವಾಗಲೂ ನೀತಿಯುಕ್ತವಾಗಿವೆ; ನಾನು ಬದುಕುವಂತೆ ನನಗೆ ವಿವೇಕವನ್ನು ಕೊಡಿರಿ.
ಕೀರ್ತನೆಗಳು 119 : 145 (OCVKN)
{ק ಖೋಫ್ } ಯೆಹೋವ ದೇವರೇ, ಪೂರ್ಣಹೃದಯದಿಂದ ನಾನು ಮೊರೆಯಿಟ್ಟಿದ್ದೇನೆ; ನನಗೆ ಸದುತ್ತರ ನೀಡಿರಿ; ನಾನು ನಿಮ್ಮ ತೀರ್ಪುಗಳನ್ನು ಪಾಲಿಸುವೆನು.
ಕೀರ್ತನೆಗಳು 119 : 146 (OCVKN)
ನಿಮಗೇ ಮೊರೆಯಿಟ್ಟಿದ್ದೇನೆ; ನನ್ನನ್ನು ರಕ್ಷಿಸಿರಿ ನಾನು ನಿಮ್ಮ ಶಾಸನಗಳನ್ನು ಪಾಲಿಸುವೆನು.
ಕೀರ್ತನೆಗಳು 119 : 147 (OCVKN)
ನಾನು ಸೂರ್ಯೋದಯಕ್ಕೆ ಮೊದಲು ಎದ್ದು ನಿಮಗೆ ಮೊರೆ ಇಟ್ಟಿದ್ದೇನೆ; ನಾನು ನನ್ನ ನಿರೀಕ್ಷೆಯನ್ನು ನಿಮ್ಮ ವಾಕ್ಯದಲ್ಲಿ ಇಟ್ಟಿದ್ದೇನೆ.
ಕೀರ್ತನೆಗಳು 119 : 148 (OCVKN)
ನಾನು ನಿಮ್ಮ ವಾಕ್ಯವನ್ನು ಧ್ಯಾನ ಮಾಡುವಂತೆ, ರಾತ್ರಿಜಾವದಲ್ಲಿ ನನ್ನ ಕಣ್ಣುಗಳು ತೆರೆದಿರುತ್ತವೆ.
ಕೀರ್ತನೆಗಳು 119 : 149 (OCVKN)
ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಮೊರೆಯನ್ನು ಕೇಳಿರಿ; ನಿಮ್ಮ ನಿಯಮಗಳ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ.
ಕೀರ್ತನೆಗಳು 119 : 150 (OCVKN)
ದುಷ್ಟತನಕ್ಕೆ ಒಳಸಂಚು ಮಾಡುವವರು ನನಗೆ ಸಮೀಪವಾಗಿದ್ದಾರೆ; ಆದರೆ ಅವರು ನಿಮ್ಮ ನಿಯಮಕ್ಕೆ ಅವರು ದೂರವಾಗಿದ್ದಾರೆ.
ಕೀರ್ತನೆಗಳು 119 : 151 (OCVKN)
ಯೆಹೋವ ದೇವರೇ, ನೀವು ಸಮೀಪವಾಗಿದ್ದೀರಿ, ನಿಮ್ಮ ಆಜ್ಞೆಗಳೆಲ್ಲಾ ಸತ್ಯವಾಗಿವೆ.
ಕೀರ್ತನೆಗಳು 119 : 152 (OCVKN)
ನಿಮ್ಮ ಶಾಸನಗಳು ಸದಾಕಾಲಕ್ಕೂ ಇರುವಂತೆ ಅವುಗಳನ್ನು ಸ್ಥಾಪಿಸಿದ್ದೀರೆಂದು ಬಹುಕಾಲದ ಹಿಂದೆಯೇ ನಾನು ಕಲಿತುಕೊಂಡಿದ್ದೇವೆ.
ಕೀರ್ತನೆಗಳು 119 : 153 (OCVKN)
{ר ರೇಷ್ } ನನ್ನ ಕಷ್ಟವನ್ನು ನೋಡಿ ನನ್ನನ್ನು ಬಿಡಿಸಿರಿ; ಏಕೆಂದರೆ ನಿಮ್ಮ ನಿಯಮವನ್ನು ನಾನು ಮರೆತಿಲ್ಲ.
ಕೀರ್ತನೆಗಳು 119 : 154 (OCVKN)
ನನ್ನ ಪರವಾಗಿ ವಾದಿಸಿ, ನನ್ನನ್ನು ವಿಮೋಚಿಸಿರಿ; ನಿಮ್ಮ ವಾಗ್ದಾನದ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ.
ಕೀರ್ತನೆಗಳು 119 : 155 (OCVKN)
ದುಷ್ಟರಿಗೆ ರಕ್ಷಣೆಯು ದೂರವಾಗಿದೆ; ಏಕೆಂದರೆ ಅವರು ನಿಮ್ಮ ತೀರ್ಪುಗಳನ್ನು ಹುಡುಕುವುದಿಲ್ಲ.
ಕೀರ್ತನೆಗಳು 119 : 156 (OCVKN)
ಯೆಹೋವ ದೇವರೇ, ನಿಮ್ಮ ಅನುಕಂಪವು ಮಹತ್ತಾದವುಗಳು; ನಿಮ್ಮ ನಿಯಮಗಳ ಪ್ರಕಾರ ನನ್ನ ಬದುಕನ್ನು ಕಾಪಾಡಿರಿ.
ಕೀರ್ತನೆಗಳು 119 : 157 (OCVKN)
ನನ್ನನ್ನು ಹಿಂಸಿಸುವ ನನ್ನ ವೈರಿಗಳು ಅನೇಕರಾಗಿದ್ದಾರೆ, ನಾನಾದರೋ ನಿಮ್ಮ ಶಾಸನಗಳನ್ನು ಬಿಟ್ಟುಬಿಡಲಿಲ್ಲ.
ಕೀರ್ತನೆಗಳು 119 : 158 (OCVKN)
ನಾನು ಅಪನಂಬಿಗಸ್ತರನ್ನು ಕಂಡು ಅಸಹ್ಯಪಡುತ್ತೇನೆ, ಅವರು ನಿಮ್ಮ ಮಾತನ್ನು ಅಂಗೀಕರಿಸುತ್ತಾಯಿಲ್ಲಾ.
ಕೀರ್ತನೆಗಳು 119 : 159 (OCVKN)
ನಿಮ್ಮ ಸೂತ್ರಗಳನ್ನು ನಾನು ಎಷ್ಟು ಪ್ರೀತಿಸುತ್ತೇನೆ ನೋಡಿರಿ; ಯೆಹೋವ ದೇವರೇ, ನಿಮ್ಮ ಒಡಂಬಡಿಕೆಯ ಪ್ರೀತಿಗೆ ಅನುಸಾರವಾಗಿ ನನ್ನ ಬದುಕನ್ನು ಕಾಪಾಡಿರಿ.
ಕೀರ್ತನೆಗಳು 119 : 160 (OCVKN)
ನಿಮ್ಮ ಮಾತುಗಳೆಲ್ಲಾ ಸತ್ಯವಾದವುಗಳೇ; ನಿಮ್ಮ ನೀತಿ ನಿಯಮಗಳೆಲ್ಲಾ ನಿತ್ಯವಾದವುಗಳೇ.
ಕೀರ್ತನೆಗಳು 119 : 161 (OCVKN)
{ש ಸೀನ್ ಮತ್ತು ಷೀನ್ } ಅಧಿಕಾರಿಗಳು ಕಾರಣವಿಲ್ಲದೆ ನನ್ನನ್ನು ಹಿಂಸಿಸುತ್ತಾರೆ, ಆದರೆ ನನ್ನ ಹೃದಯವು ನಿಮ್ಮ ವಾಕ್ಯಗಳಿಗೆ ನಡುಗುತ್ತದೆ.
ಕೀರ್ತನೆಗಳು 119 : 162 (OCVKN)
ದೊಡ್ಡ ಕೊಳ್ಳೆಯನ್ನು ಕಂಡುಹಿಡಿದವರಂತೆ ನಾನು ನಿಮ್ಮ ವಾಗ್ದಾನದಲ್ಲಿ ಆನಂದಿಸುತ್ತೇನೆ.
ಕೀರ್ತನೆಗಳು 119 : 163 (OCVKN)
ಸುಳ್ಳುತನವನ್ನು ನಾನು ದ್ವೇಷಿಸಿ ಅಸಹ್ಯಪಡುತ್ತೇನೆ ಆದರೆ ನಾನು ನಿಮ್ಮ ನಿಯಮವನ್ನು ಪ್ರೀತಿಸುತ್ತೇನೆ.
ಕೀರ್ತನೆಗಳು 119 : 164 (OCVKN)
ನಿಮ್ಮ ನೀತಿಯ ನಿಯಮಗಳ ನಿಮಿತ್ತ, ನಾನು ದಿನಕ್ಕೆ ಏಳು ಸಾರಿ ನಿಮ್ಮನ್ನು ಸ್ತುತಿಸುತ್ತೇನೆ.
ಕೀರ್ತನೆಗಳು 119 : 165 (OCVKN)
ನಿಮ್ಮ ನಿಯಮ ಪ್ರಿಯರಿಗೆ ಅಪಾರ ಸಮಾಧಾನವಿರುತ್ತದೆ, ಅಂಥವರಿಗೆ ಆತಂಕವೇನೂ ಇರುವುದಿಲ್ಲ.
ಕೀರ್ತನೆಗಳು 119 : 166 (OCVKN)
ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಕಾದುಕೊಂಡಿದ್ದೇನೆ; ನಾನು ನಿಮ್ಮ ಆಜ್ಞೆಗಳನ್ನು ಹಿಂಬಾಲಿಸುತ್ತಿದ್ದೇನೆ.
ಕೀರ್ತನೆಗಳು 119 : 167 (OCVKN)
ನಾನು ನಿಮ್ಮ ಶಾಸನಗಳನ್ನು ಅನುಸರಿಸುವದರಿಂದ, ಅವುಗಳನ್ನು ಅತ್ಯಧಿಕವಾಗಿ ಪ್ರೀತಿಸುತ್ತೇನೆ.
ಕೀರ್ತನೆಗಳು 119 : 168 (OCVKN)
ನಾನು ನಿಮ್ಮ ಸೂತ್ರಗಳನ್ನೂ ಶಾಸನಗಳನ್ನೂ ಪಾಲಿಸುತ್ತೇನೆ, ಏಕೆಂದರೆ ನನ್ನ ಮಾರ್ಗಗಳೆಲ್ಲವೂ ನಿಮಗೆ ತಿಳಿದಿರುತ್ತವೆ.
ಕೀರ್ತನೆಗಳು 119 : 169 (OCVKN)
{ת ತಾವ್ } ಯೆಹೋವ ದೇವರೇ, ನನ್ನ ಮೊರೆ ನಿಮ್ಮ ಸನ್ನಿಧಿ ಸೇರಲಿ; ನಿಮ್ಮ ವಾಕ್ಯದ ಪ್ರಕಾರ ನನಗೆ ಅರಿವನ್ನು ನೀಡಿರಿ.
ಕೀರ್ತನೆಗಳು 119 : 170 (OCVKN)
ನನ್ನ ಬೇಡಿಕೆಯು ನಿಮ್ಮ ಸನ್ನಿಧಿ ಸೇರಲಿ; ನಿಮ್ಮ ವಾಗ್ದಾನದ ಪ್ರಕಾರ ನನ್ನನ್ನು ಬಿಡಿಸಿರಿ.
ಕೀರ್ತನೆಗಳು 119 : 171 (OCVKN)
ನೀವು ನಿಮ್ಮ ತೀರ್ಪುಗಳನ್ನು ನನಗೆ ಬೋಧಿಸಿದಾಗ, ನನ್ನ ತುಟಿಗಳಿಂದ ಸ್ತೋತ್ರವು ಪ್ರವಾಹಿಸಲಿ.
ಕೀರ್ತನೆಗಳು 119 : 172 (OCVKN)
ನಿಮ್ಮ ಆಜ್ಞೆಗಳೆಲ್ಲಾ ನೀತಿಯುಳ್ಳವುಗಳಾಗಿವೆ, ಆದುದರಿಂದ ನನ್ನ ನಾಲಿಗೆಯು ನಿಮ್ಮ ವಾಕ್ಯವನ್ನು ಹಾಡಿ ಹರಸಲಿ.
ಕೀರ್ತನೆಗಳು 119 : 173 (OCVKN)
ನಾನು ನಿಮ್ಮ ಸೂತ್ರಗಳನ್ನು ಆರಿಸಿಕೊಂಡಿರುವುದರಿಂದ, ನಿಮ್ಮ ಕೈ ನನಗೆ ನೆರವಾಗಲಿ.
ಕೀರ್ತನೆಗಳು 119 : 174 (OCVKN)
ಯೆಹೋವ ದೇವರೇ, ನಾನು ನಿಮ್ಮ ರಕ್ಷಣೆಗಾಗಿ ಬಯಸುತ್ತಿದ್ದೇನೆ, ನಿಮ್ಮ ನಿಯಮವೇ ನನಗೆ ಆನಂದವಾಗಿದೆ.
ಕೀರ್ತನೆಗಳು 119 : 175 (OCVKN)
ನಿಮ್ಮನ್ನು ಸ್ತುತಿಸಲು ನಾನು ಬದುಕಿರಲಿ; ನಿಮ್ಮ ನಿಯಮಗಳು ನನ್ನನ್ನು ಕಾಪಾಡಲಿ.
ಕೀರ್ತನೆಗಳು 119 : 176 (OCVKN)
ತಪ್ಪಿಹೋದ ಕುರಿಯಂತೆ ನಾನು ದಾರಿತಪ್ಪಿದ್ದೇನೆ. ನಿಮ್ಮ ಸೇವಕನಾದ ನನ್ನನ್ನು ಬಂದು ಹುಡುಕಿರಿ, ಏಕೆಂದರೆ ನಿಮ್ಮ ಆಜ್ಞೆಗಳನ್ನು ನಾನು ಮರೆಯುವುದಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105 106 107 108 109 110 111 112 113 114 115 116 117 118 119 120 121 122 123 124 125 126 127 128 129 130 131 132 133 134 135 136 137 138 139 140 141 142 143 144 145 146 147 148 149 150 151 152 153 154 155 156 157 158 159 160 161 162 163 164 165 166 167 168 169 170 171 172 173 174 175 176