ಕೀರ್ತನೆಗಳು 115 : 1 (OCVKN)
ನಮಗಲ್ಲ ಯೆಹೋವ ದೇವರೇ, ನಮಗಲ್ಲ, ನಿಮ್ಮ ಹೆಸರಿಗೆ ಮಾತ್ರ ಮಹಿಮೆ, ನಿಮ್ಮ ಪ್ರೀತಿ ಮತ್ತು ಸತ್ಯತೆಯ ನಿಮಿತ್ತ ನಿಮಗೆ ಮಹಿಮೆಯಾಗಲಿ.
ಕೀರ್ತನೆಗಳು 115 : 2 (OCVKN)
“ಅವರ ದೇವರು ಎಲ್ಲಿ?” ಎಂದು ಜನಾಂಗಗಳು ಏಕೆ ಹೇಳಬೇಕು?
ಕೀರ್ತನೆಗಳು 115 : 3 (OCVKN)
ನಮ್ಮ ದೇವರು ಪರಲೋಕದಲ್ಲಿದ್ದಾರೆ; ಅವರು ಇಚ್ಛಿಸುವುದನ್ನೆಲ್ಲಾ ಮಾಡುತ್ತಾರೆ.
ಕೀರ್ತನೆಗಳು 115 : 4 (OCVKN)
ಜನರ ವಿಗ್ರಹಗಳು ಬೆಳ್ಳಿ, ಬಂಗಾರದವುಗಳು, ಅವು ಮನುಷ್ಯರ ಕೈಯಿಂದ ಮಾಡಲಾಗಿವೆ.
ಕೀರ್ತನೆಗಳು 115 : 5 (OCVKN)
ಅವುಗಳಿಗೆ ಬಾಯಿಯಿದೆ, ಮಾತನಾಡುವುದಿಲ್ಲ; ಕಣ್ಣುಗಳಿವೆ, ಕಾಣುವುದಿಲ್ಲ.
ಕೀರ್ತನೆಗಳು 115 : 6 (OCVKN)
ಕಿವಿಗಳಿವೆ, ಕೇಳಿಸಿಕೊಳ್ಳುವುದಿಲ್ಲ; ಮೂಗು ಉಂಟು, ಮೂಸುವದಿಲ್ಲ.
ಕೀರ್ತನೆಗಳು 115 : 7 (OCVKN)
ಕೈಗಳುಂಟು, ಮುಟ್ಟುವುದಿಲ್ಲ; ಕಾಲುಗಳುಂಟು, ನಡೆಯುವುದಿಲ್ಲ; ಅವರ ಗಂಟಲಿನಿಂದ ಧ್ವನಿ ಉಚ್ಚರಿಸಲು ಸಾಧ್ಯವಿಲ್ಲ.
ಕೀರ್ತನೆಗಳು 115 : 8 (OCVKN)
ಅವುಗಳನ್ನು ಮಾಡುವವರು ಅವುಗಳಂತೆಯೇ ಇದ್ದಾರೆ; ಅವುಗಳಲ್ಲಿ ಭರವಸವಿಡುವವರು ಅವುಗಳಂತಾಗುವರು.
ಕೀರ್ತನೆಗಳು 115 : 9 (OCVKN)
ಇಸ್ರಾಯೇಲರ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.
ಕೀರ್ತನೆಗಳು 115 : 10 (OCVKN)
ಆರೋನನ ಮನೆಯವರೇ, ಯೆಹೋವ ದೇವರಲ್ಲಿ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ, ಗುರಾಣಿಯೂ ಆಗಿದ್ದಾರೆ.
ಕೀರ್ತನೆಗಳು 115 : 11 (OCVKN)
ಯೆಹೋವ ದೇವರಿಗೆ ಭಯಪಡುವವರೇ, ನೀವು ಯೆಹೋವ ದೇವರಲ್ಲಿಯೇ ಭರವಸೆ ಇಡಿರಿ; ಅವರೇ ನಿಮ್ಮ ಸಹಾಯವೂ ಗುರಾಣಿಯೂ ಆಗಿದ್ದಾರೆ.
ಕೀರ್ತನೆಗಳು 115 : 12 (OCVKN)
ಯೆಹೋವ ದೇವರು ನಮ್ಮನ್ನು ಜ್ಞಾಪಕ ಮಾಡಿಕೊಂಡಿದ್ದಾರೆ, ಅವರು ನಮ್ಮನ್ನು ಆಶೀರ್ವದಿಸುವರು; ಇಸ್ರಾಯೇಲರ ಮನೆಯನ್ನು ಆಶೀರ್ವದಿಸುವರು; ಆರೋನನ ಮನೆಯನ್ನು ಆಶೀರ್ವದಿಸುವರು.
ಕೀರ್ತನೆಗಳು 115 : 13 (OCVKN)
ಯೆಹೋವ ದೇವರಿಗೆ ಭಯ ಪಡುವವರಾದ ಹಿರಿಯರನ್ನೂ ಕಿರಿಯರನ್ನೂ ಬೇಧವಿಲ್ಲದೇ ಆಶೀರ್ವದಿಸುವರು.
ಕೀರ್ತನೆಗಳು 115 : 14 (OCVKN)
ಯೆಹೋವ ದೇವರು ನಿಮ್ಮನ್ನು ಅಭಿವೃದ್ಧಿಪಡಿಸುವರು ನಿಮ್ಮ ಮಕ್ಕಳನ್ನೂ ಅಭಿವೃದ್ಧಿ ಮಾಡುವರು.
ಕೀರ್ತನೆಗಳು 115 : 15 (OCVKN)
ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದ ಯೆಹೋವ ದೇವರಿಂದ ನೀವು ಆಶೀರ್ವಾದ ಹೊಂದಿದವರು.
ಕೀರ್ತನೆಗಳು 115 : 16 (OCVKN)
ಉನ್ನತ ಆಕಾಶಗಳು ಯೆಹೋವ ದೇವರದೇ, ಆದರೆ ಅವರು ಭೂಮಿಯನ್ನು ಮಾನವರಿಗೆ ಕೊಟ್ಟಿದ್ದಾರೆ.
ಕೀರ್ತನೆಗಳು 115 : 17 (OCVKN)
ಸತ್ತವರೂ ಮೌನಲೋಕವನ್ನು ಇಳಿದವರೆಲ್ಲರೂ ಯೆಹೋವ ದೇವರನ್ನು ಸ್ತುತಿಸುವುದಿಲ್ಲ.
ಕೀರ್ತನೆಗಳು 115 : 18 (OCVKN)
ಆದರೆ ನಾವು ಈಗಲೂ ಯುಗಯುಗಕ್ಕೂ ಯೆಹೋವ ದೇವರನ್ನು ಸ್ತುತಿಸುವೆವು. ಯೆಹೋವ ದೇವರನ್ನು ಸ್ತುತಿಸಿರಿ.

1 2 3 4 5 6 7 8 9 10 11 12 13 14 15 16 17 18