ಕೀರ್ತನೆಗಳು 113 : 1 (OCVKN)
ಯೆಹೋವ ದೇವರನ್ನು ಸ್ತುತಿಸಿರಿ. ಯೆಹೋವ ದೇವರ ಸೇವಕರೇ, ಯೆಹೋವ ದೇವರ ಹೆಸರನ್ನು ಸ್ತುತಿಸಿರಿ.
ಕೀರ್ತನೆಗಳು 113 : 2 (OCVKN)
ಇಂದಿನಿಂದ ಯುಗಯುಗಕ್ಕೂ ಯೆಹೋವ ದೇವರ ಹೆಸರಿಗೆ ಸ್ತುತಿಯುಂಟಾಗಲಿ.
ಕೀರ್ತನೆಗಳು 113 : 3 (OCVKN)
ಸೂರ್ಯೋದಯದಿಂದ ಅದರ ಅಸ್ತಮಾನದವರೆಗೂ ಯೆಹೋವ ದೇವರ ಹೆಸರು ಸ್ತುತಿಹೊಂದತಕ್ಕದ್ದು.
ಕೀರ್ತನೆಗಳು 113 : 4 (OCVKN)
ಯೆಹೋವ ದೇವರು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವರು; ಅವರ ಮಹಿಮೆಯು ಆಕಾಶಗಳ ಮೇಲೆ ಮೆರೆಯುತ್ತದೆ.
ಕೀರ್ತನೆಗಳು 113 : 5 (OCVKN)
ನಮ್ಮ ದೇವರಾದ ಯೆಹೋವ ದೇವರ ಹಾಗೆ ಯಾರು ಇದ್ದಾರೆ? ಉನ್ನತಲೋಕದಲ್ಲಿ ಅವರು ವಾಸಿಸುತ್ತಾರೆ.
ಕೀರ್ತನೆಗಳು 113 : 6 (OCVKN)
ಆಕಾಶವನ್ನೂ, ಭೂಮಿಯನ್ನೂ ತಗ್ಗಿಸಿಕೊಂಡು ನೋಡುತ್ತಾರೆ.
ಕೀರ್ತನೆಗಳು 113 : 7 (OCVKN)
ಧೂಳಿನೊಳಗಿಂದ ದರಿದ್ರರನ್ನು ಎಬ್ಬಿಸುತ್ತಾರೆ, ತಿಪ್ಪೆಯೊಳಗಿಂದ ಬಡವರನ್ನು ಎತ್ತುತ್ತಾರೆ.
ಕೀರ್ತನೆಗಳು 113 : 8 (OCVKN)
ದೇವರು ಅವರನ್ನು ಅಧಿಪತಿಗಳ ಸಂಗಡ ಇರುವಂತೆ ಮಾಡುತ್ತಾರೆ. ತಮ್ಮ ಜನರ ಅಧಿಪತಿಗಳ ಸಂಗಡ ಕೂರಿಸುತ್ತಾರೆ.
ಕೀರ್ತನೆಗಳು 113 : 9 (OCVKN)
ಬಂಜೆಯಾದವಳನ್ನು ಮಕ್ಕಳ ಸೌಭಾಗ್ಯದಲ್ಲಿ ಸಂತೋಷಿಸಿ, ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾರೆ. ಯೆಹೋವ ದೇವರನ್ನು ಸ್ತುತಿಸಿರಿ.

1 2 3 4 5 6 7 8 9