ಕೀರ್ತನೆಗಳು 109 : 1 (OCVKN)
ನಾನು ಸ್ತುತಿಸುವ ದೇವರೇ, ನೀವು ಮೌನವಾಗಿರಬೇಡಿರಿ.
ಕೀರ್ತನೆಗಳು 109 : 2 (OCVKN)
ದುಷ್ಟರೂ, ವಂಚಕರೂ ತಮ್ಮ ಬಾಯಿಯನ್ನು ನನಗೆ ವಿರೋಧವಾಗಿ ತೆರೆದಿದ್ದಾರೆ; ಸುಳ್ಳಿನ ನಾಲಿಗೆಯಿಂದ ನನಗೆ ವಿರೋಧವಾಗಿ ಮಾತಾಡಿದ್ದಾರೆ.
ಕೀರ್ತನೆಗಳು 109 : 3 (OCVKN)
ದ್ವೇಷ ಮಾತುಗಳಿಂದ ನನ್ನನ್ನು ಸುತ್ತಿಕೊಂಡಿದ್ದಾರೆ, ನನಗೆ ವಿರೋಧವಾಗಿ ಕಾರಣವಿಲ್ಲದೆ ಯುದ್ಧ ಮಾಡುತ್ತಿದ್ದಾರೆ.
ಕೀರ್ತನೆಗಳು 109 : 4 (OCVKN)
ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ; ಆದರೆ ನಾನು ಪ್ರಾರ್ಥನೆಯ ಮನುಷ್ಯನು.
ಕೀರ್ತನೆಗಳು 109 : 5 (OCVKN)
ನನಗೆ ಉಪಕಾರಕ್ಕೆ ಬದಲಾಗಿ ಕೇಡನ್ನು ಮಾಡುತ್ತಿದ್ದಾರೆ, ನನ್ನ ಸ್ನೇಹಕ್ಕೆ ಬದಲಾಗಿ ನನ್ನ ಮೇಲೆ ದೂರು ಹೇಳುತ್ತಾರೆ.
ಕೀರ್ತನೆಗಳು 109 : 6 (OCVKN)
ದುಷ್ಟನು ನನ್ನ ವೈರಿಯ ಮೇಲೆ ನೇಮಕವಾಗಲಿ; ಸೈತಾನನು ಅವನ ಬಲಗಡೆಯಲ್ಲಿ ನಿಂತುಕೊಳ್ಳಲಿ.
ಕೀರ್ತನೆಗಳು 109 : 7 (OCVKN)
ಅವನಿಗೆ ನ್ಯಾಯತೀರಿಸುವಾಗ ಅಪರಾಧಿಯೆಂದು ತೀರ್ಪು ಹೊಂದಲಿ; ಅವನ ಪ್ರಾರ್ಥನೆಯೇ ಅವನನ್ನು ಖಂಡಿಸಲಿ.
ಕೀರ್ತನೆಗಳು 109 : 8 (OCVKN)
ಅವನ ದಿವಸಗಳು ಸ್ವಲ್ಪವಾಗಿರಲಿ; ಅವನ ಹುದ್ದೆಯನ್ನು ಇನ್ನೊಬ್ಬನು ತೆಗೆದುಕೊಳ್ಳಲಿ.
ಕೀರ್ತನೆಗಳು 109 : 9 (OCVKN)
ಅವನ ಮಕ್ಕಳು ದಿಕ್ಕಿಲ್ಲದವರಾಗಲಿ, ಅವನ ಹೆಂಡತಿ ವಿಧವೆಯೂ ಆಗಲಿ.
ಕೀರ್ತನೆಗಳು 109 : 10 (OCVKN)
ಅವನ ಮಕ್ಕಳು ಅಲೆದು ಅಲೆದು ಭಿಕ್ಷೆಬೇಡಲಿ, ತಮ್ಮ ಹಾಳು ಮನೆಯಿಂದ ಹೊರಟು ಹೋಗಲಿ.
ಕೀರ್ತನೆಗಳು 109 : 11 (OCVKN)
ಸಾಲಗಾರರು ಅವನಿಗೆ ಇರುವುದನ್ನೆಲ್ಲಾ ದೋಚಿಕೊಳ್ಳಲಿ; ಪರರು ಅವನ ಕಷ್ಟಾರ್ಜಿತವನ್ನು ಸುಲಿದುಕೊಳ್ಳಲಿ.
ಕೀರ್ತನೆಗಳು 109 : 12 (OCVKN)
ಅವನಿಗೆ ದಯೆ ತೋರಿಸುವವನು ಯಾವನೂ ಇಲ್ಲದೆ ಇರಲಿ; ದಿಕ್ಕಿಲ್ಲದ ಅವನ ಮಕ್ಕಳನ್ನು ಯಾವನೂ ಕನಿಕರಿಸದಿರಲಿ.
ಕೀರ್ತನೆಗಳು 109 : 13 (OCVKN)
ಅವನ ಸಂತಾನವು ಮುಗಿದು ಹೋಗಲಿ; ಎರಡನೆಯ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.
ಕೀರ್ತನೆಗಳು 109 : 14 (OCVKN)
ಅವನ ಪಿತೃಗಳ ಅಕ್ರಮವು ಯೆಹೋವ ದೇವರ ಮುಂದೆ ಜ್ಞಾಪಕವಾಗಲಿ; ಅವನ ತಾಯಿಯ ಪಾಪವು ಅಳಿದು ಹೋಗದಿರಲಿ.
ಕೀರ್ತನೆಗಳು 109 : 15 (OCVKN)
ಅವು ಯಾವಾಗಲೂ ಯೆಹೋವ ದೇವರ ಮುಂದೆ ಇರಲಿ; ದೇವರು ಅವರ ನೆನಪನ್ನು ಭೂಮಿಯೊಳಗಿಂದ ತೆಗೆದುಬಿಡಲಿ.
ಕೀರ್ತನೆಗಳು 109 : 16 (OCVKN)
ಏಕೆಂದರೆ ಅವನು ಯಾರಿಗೂ ದಯೆ ತೋರಿಸಲಿಲ್ಲ. ಬಡವನನ್ನೂ, ದೀನನನ್ನೂ, ಮನಗುಂದಿದವನನ್ನೂ ಹಿಂಸಿಸಿ ಸಾಯಿಸಬೇಕೆಂದು ಯತ್ನಿಸಿದನು.
ಕೀರ್ತನೆಗಳು 109 : 17 (OCVKN)
ಅವನು ಶಾಪಕೊಡಲು ಇಷ್ಟಪಟ್ಟನು; ಅದೇ ಅವನಿಗೆ ಬರಲಿ; ಅವನು ಆಶೀರ್ವಾದವನ್ನು ಮೆಚ್ಚಲಿಲ್ಲ; ಅದು ಅವನಿಗೆ ದೂರವಾಗಿರಲಿ.
ಕೀರ್ತನೆಗಳು 109 : 18 (OCVKN)
ಅವನು ತನ್ನ ವಸ್ತ್ರದಂತೆ ಶಾಪವನ್ನು ಹೊದ್ದುಕೊಂಡನು; ಅದು ನೀರಿನಂತೆ ಅವನ ಅಂತರಂಗದಲ್ಲಿಯೂ, ಎಣ್ಣೆಯಂತೆ ಅವನ ಎಲುಬುಗಳಲ್ಲಿಯೂ ಸೇರಿತು.
ಕೀರ್ತನೆಗಳು 109 : 19 (OCVKN)
ಶಾಪವು ಅವನಿಗೆ ತೊಟ್ಟುಕೊಂಡ ಅಂಗಿಯ ಹಾಗೆಯೂ, ಯಾವಾಗಲೂ ಸೊಂಟಕ್ಕೆ ಕಟ್ಟುವ ನಡುಕಟ್ಟಿನ ಹಾಗೆಯೂ ಇರಲಿ.
ಕೀರ್ತನೆಗಳು 109 : 20 (OCVKN)
ಇದು ನನಗೆ ವಿರೋಧವಾಗಿ ಕೇಡು ಮಾತಾಡುವ ನನ್ನ ಎದುರಾಳಿಗಳಿಗೆ ಯೆಹೋವ ದೇವರಿಂದ ಪ್ರತಿಫಲವಾಗಿರಲಿ.
ಕೀರ್ತನೆಗಳು 109 : 21 (OCVKN)
ಆದರೆ ಸಾರ್ವಭೌಮ ಯೆಹೋವ ದೇವರೇ, ನಿಮ್ಮ ಹೆಸರಿಗೋಸ್ಕರ ನನಗೆ ಸಹಾಯಮಾಡಿರಿ. ನಿಮ್ಮ ಪ್ರೀತಿಯ ಒಳ್ಳೆಯತನದಿಂದ ನನ್ನನ್ನು ಬಿಡಿಸಿರಿ.
ಕೀರ್ತನೆಗಳು 109 : 22 (OCVKN)
ಏಕೆಂದರೆ ನಾನು ಬಡವನೂ ಅಗತ್ಯತೆಯಲ್ಲಿ ಇರುವವನೂ ಆಗಿದ್ದೇನೆ; ನನ್ನ ಹೃದಯವು ನನ್ನ ಅಂತರಂಗದಲ್ಲಿ ಗಾಯಗೊಂಡಿದೆ.
ಕೀರ್ತನೆಗಳು 109 : 23 (OCVKN)
ನಾನು ಇಳಿಯುವ ನೆರಳಿನ ಹಾಗೆ ಆಗಿದ್ದೇನೆ; ಮಿಡತೆಯ ಹಾಗೆ ಹಾರಾಡುತ್ತಿದ್ದೇನೆ.
ಕೀರ್ತನೆಗಳು 109 : 24 (OCVKN)
ನನ್ನ ಮೊಣಕಾಲುಗಳು ಉಪವಾಸದಿಂದ ಬಲಹೀನವಾಗಿವೆ; ನನ್ನ ದೇಹಕ್ಕೆ ಸಾರವಿಲ್ಲದೆ ಹೋಯಿತು.
ಕೀರ್ತನೆಗಳು 109 : 25 (OCVKN)
ನಾನು ನನ್ನ ದೂರುಗಾರರಿಗೆ ನಿಂದೆಯಾಗಿದ್ದೇನೆ; ಅವರು ನನ್ನನ್ನು ಕಂಡು ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾರೆ.
ಕೀರ್ತನೆಗಳು 109 : 26 (OCVKN)
ನನ್ನ ದೇವರಾದ ಯೆಹೋವ ದೇವರೇ, ನನಗೆ ಸಹಾಯಮಾಡಿರಿ; ನಿಮ್ಮ ಒಡಂಬಡಿಕೆಯ ಪ್ರೀತಿಯ ಪ್ರಕಾರ ನನ್ನನ್ನು ರಕ್ಷಿಸಿರಿ.
ಕೀರ್ತನೆಗಳು 109 : 27 (OCVKN)
ಇದು ನಿಮ್ಮ ಕೈ ಕೆಲಸ ಎಂದು ಅವರಿಗೆ ಗೊತ್ತಾಗಲಿ, ಇದು ನಿನ್ನಿಂದಲೇ ಆಯಿತೆಂದು ಅವರು ತಿಳಿದುಕೊಳ್ಳಲಿ.
ಕೀರ್ತನೆಗಳು 109 : 28 (OCVKN)
ಅವರು ಶಪಿಸಲಿ, ಆದರೆ ನೀವು ಆಶೀರ್ವದಿಸಿರಿ. ನನಗೆ ಹಾನಿಮಾಡುವವರು ನಾಚಿಕೆಪಡಲಿ; ಆದರೆ ನಿಮ್ಮ ಸೇವಕನಾದ ನಾನು ಸಂತೋಷಿಸಲಿ.
ಕೀರ್ತನೆಗಳು 109 : 29 (OCVKN)
ನನ್ನ ಎದುರಾಳಿಗಳು ಅವಮಾನವನ್ನು ಹೊದ್ದುಕೊಳ್ಳಲಿ, ತಮ್ಮ ನಾಚಿಕೆಯನ್ನು ಹೊದಿಕೆಯಂತೆ ತೊಟ್ಟುಕೊಳ್ಳಲಿ.
ಕೀರ್ತನೆಗಳು 109 : 30 (OCVKN)
ನಾನು ಯೆಹೋವ ದೇವರನ್ನು ನನ್ನ ಬಾಯಿಯಿಂದ ಬಹಳವಾಗಿ ಕೊಂಡಾಡುವೆನು; ಅನೇಕರ ಮಧ್ಯದಲ್ಲಿ ದೇವರನ್ನು ಸ್ತುತಿಸುವೆನು.
ಕೀರ್ತನೆಗಳು 109 : 31 (OCVKN)
ದೇವರು ಬಡವನ ಬಲಗಡೆಯಲ್ಲಿ ನಿಂತು, ಅವನ ಪ್ರಾಣವನ್ನು ಖಂಡಿಸುವವರಿಂದ ಅವನನ್ನು ರಕ್ಷಿಸುವರು.
❮
❯