ಕೀರ್ತನೆಗಳು 100 : 1 (OCVKN)
ಸಮಸ್ತ ಭೂಮಿಯೇ, ಯೆಹೋವ ದೇವರಿಗೆ ಜಯಧ್ವನಿ ಮಾಡಿರಿ.
ಕೀರ್ತನೆಗಳು 100 : 2 (OCVKN)
ಸಂತೋಷದಿಂದ ಯೆಹೋವ ದೇವರನ್ನು ಆರಾಧಿಸಿರಿ; ಆನಂದದಿಂದ ಹಾಡುತ್ತಾ ಅವರ ಮುಂದೆ ಬನ್ನಿರಿ.
ಕೀರ್ತನೆಗಳು 100 : 3 (OCVKN)
ಯೆಹೋವ ದೇವರೇ ದೇವರೆಂದು ತಿಳುಕೊಳ್ಳಿರಿ; ಅವರೇ ನಮ್ಮನ್ನು ಉಂಟುಮಾಡಿದ್ದಾರೆ; ನಾವು ಅವರ ಜನರೂ, ಅವರು ಮೇಯಿಸುವ ಕುರಿ ಮಂದೆಯೂ ಆಗಿದ್ದೇವೆ.
ಕೀರ್ತನೆಗಳು 100 : 4 (OCVKN)
ಕೃತಜ್ಞತೆಯಿಂದ ಅವರ ಬಾಗಿಲುಗಳಿಗೂ, ಕೃತಜ್ಞತಾ ಸ್ತೋತ್ರದಿಂದ ಅವರ ಅಂಗಳಗಳಿಗೂ ಬನ್ನಿರಿ; ಅವರನ್ನು ಕೊಂಡಾಡಿರಿ, ಅವರ ಹೆಸರನ್ನು ಸ್ತುತಿಸಿರಿ.
ಕೀರ್ತನೆಗಳು 100 : 5 (OCVKN)
ಯೆಹೋವ ದೇವರು ಒಳ್ಳೆಯವರು, ಅವರ ಕರುಣೆಯು ಯುಗಯುಗಕ್ಕೂ ಇರುವುದು. ಅವರ ಸತ್ಯತೆಯು ತಲತಲಾಂತರಕ್ಕೂ ಮುಂದುವರಿಯುವುದು.

1 2 3 4 5