ಙ್ಞಾನೋಕ್ತಿಗಳು 27 : 1 (OCVKN)
ನಾಳೆಯ ವಿಷಯವಾಗಿ ಕೊಚ್ಚಿಕೊಳ್ಳಬೇಡ; ಏಕೆಂದರೆ ಒಂದು ದಿನದೊಳಗೆ ಏನಾಗುವುದೋ ನಿನಗೆ ತಿಳಿಯದು.
ಙ್ಞಾನೋಕ್ತಿಗಳು 27 : 2 (OCVKN)
ನಿನ್ನ ಬಾಯಿ ಅಲ್ಲ, ಮತ್ತೊಬ್ಬನು ನಿನ್ನನ್ನು ಹೊಗಳಲಿ; ನಿನ್ನ ಸ್ವಂತ ತುಟಿಗಳಲ್ಲ, ಪರನೇ ನಿನ್ನನ್ನು ಹೊಗಳಲಿ.
ಙ್ಞಾನೋಕ್ತಿಗಳು 27 : 3 (OCVKN)
ಕಲ್ಲು ಭಾರ, ಮರಳು ಭಾರ; ಆದರೆ ಇವೆರಡಕ್ಕಿಂತ ಮೂಢನ ಕೋಪವು ಬಹು ಭಾರ.
ಙ್ಞಾನೋಕ್ತಿಗಳು 27 : 4 (OCVKN)
ಕ್ರೋಧವು ಕ್ರೂರ, ಕೋಪವು ಪ್ರವಾಹ; ಆದರೆ ಅಸೂಯೆದ ಮುಂದೆ ಯಾವನು ನಿಂತಾನು?
ಙ್ಞಾನೋಕ್ತಿಗಳು 27 : 5 (OCVKN)
ರಹಸ್ಯವಾದ ಪ್ರೀತಿಗಿಂತಲೂ ಬಹಿರಂಗವಾದ ಗದರಿಕೆಯೇ ಲೇಸು.
ಙ್ಞಾನೋಕ್ತಿಗಳು 27 : 6 (OCVKN)
ಸ್ನೇಹಿತನು ಮಾಡುವ ಗಾಯಗಳು ಭರವಸೆಗೆ ಯೋಗ್ಯವಾದದ್ದು; ಆದರೆ ಶತ್ರುವಿನ ಮುದ್ದುಗಳು ಹೇರಳವಾಗಿವೆ.
ಙ್ಞಾನೋಕ್ತಿಗಳು 27 : 7 (OCVKN)
ತೃಪ್ತಿ ಹೊಂದಿದವನು ಜೇನುತುಪ್ಪವನ್ನೂ ಅಸಹ್ಯಿಸಿಕೊಳ್ಳುತ್ತಾನೆ; ಆದರೆ ಹಸಿದವನಿಗೆ ಕಹಿಯಾದ ಪ್ರತಿಯೊಂದು ವಸ್ತುವು ಸಿಹಿಯಾಗಿದೆ.
ಙ್ಞಾನೋಕ್ತಿಗಳು 27 : 8 (OCVKN)
ತನ್ನ ಮನೆಯನ್ನು ಬಿಟ್ಟು ಅಲೆಯುವ ಮನುಷ್ಯನು ತನ್ನ ಗೂಡನ್ನು ಬಿಟ್ಟು ಅಲೆಯುವ ಪಕ್ಷಿಯಂತೆ ಇದ್ದಾನೆ.
ಙ್ಞಾನೋಕ್ತಿಗಳು 27 : 9 (OCVKN)
ತೈಲವೂ ಸುಗಂಧದ್ರವ್ಯವೂ ಹೃದಯವನ್ನು ಸಂತೋಷಪಡಿಸುವ ಹಾಗೆ, ಆದರಣೆಯ ಸಲಹೆಯೂ ಸ್ನೇಹಿತನಿಗೆ ಮಧುರವಾಗಿರುತ್ತದೆ.
ಙ್ಞಾನೋಕ್ತಿಗಳು 27 : 10 (OCVKN)
ನಿನ್ನ ಸ್ನೇಹಿತನನ್ನೂ ನಿನ್ನ ತಂದೆಯ ಸ್ನೇಹಿತನನ್ನೂ ತ್ಯಜಿಸಬೇಡ; ಅಲ್ಲದೆ ನಿನ್ನ ಇಕ್ಕಟ್ಟಿನ ದಿನದಲ್ಲಿ ನಿನ್ನ ಸಹೋದರನ ಮನೆಗೆ ಹೋಗಬೇಡ; ಏಕೆಂದರೆ ದೂರವಾಗಿರುವ ಸಹೋದರನಿಗಿಂತ ಹತ್ತಿರವಾಗಿರುವ ನೆರೆಯವನೇ ಲೇಸು.
ಙ್ಞಾನೋಕ್ತಿಗಳು 27 : 11 (OCVKN)
ನನ್ನನ್ನು ನಿಂದಿಸುವವರಿಗೆ ನಾನು ಉತ್ತರಿಸುವಂತೆಯೂ, ನನ್ನ ಹೃದಯವನ್ನು ಸಂತೋಷಪಡಿಸುವಂತೆಯೂ, ನನ್ನ ಮಗುವೇ, ಜ್ಞಾನಿಯಾಗಿರು.
ಙ್ಞಾನೋಕ್ತಿಗಳು 27 : 12 (OCVKN)
ಜಾಣನು ಕೇಡನ್ನು ಮುಂದಾಗಿ ಕಂಡು ಅಡಗಿಕೊಳ್ಳುತ್ತಾನೆ; ಆದರೆ ಮುಗ್ಧನು ಮುಂದೆ ಹೋಗಿ ಹಾನಿಗೆ ಈಡಾಗುತ್ತಾನೆ.
ಙ್ಞಾನೋಕ್ತಿಗಳು 27 : 13 (OCVKN)
ಅಪರಿಚಿತನಿಗೆ ಭದ್ರತೆಯನ್ನು ನೀಡುವವನ ವಸ್ತ್ರವನ್ನು ತೆಗೆದುಕೋ; ವಿದೇಶಿಯರಿಗೆ ಇದನ್ನು ಮಾಡಿದರೆ ಅದನ್ನು ಒತ್ತೆ ಇಟ್ಟುಕೋ.
ಙ್ಞಾನೋಕ್ತಿಗಳು 27 : 14 (OCVKN)
ಮುಂಜಾನೆ ಎದ್ದು ತನ್ನ ಸ್ನೇಹಿತನನ್ನು ದೊಡ್ಡ ಕೂಗಿನಿಂದ ಆಶೀರ್ವದಿಸುವವನಿಗೆ, ಅದು ಶಾಪವೆಂದು ಪರಿಗಣಿಸಲಾಗುವುದು.
ಙ್ಞಾನೋಕ್ತಿಗಳು 27 : 15 (OCVKN)
ಜಗಳ ಮಾಡುವ ಹೆಂಡತಿಯು ಮಳೆಗಾಲದಲ್ಲಿ ಸೋರುವ ಛಾವಣಿಯಂತಿದೆ.
ಙ್ಞಾನೋಕ್ತಿಗಳು 27 : 16 (OCVKN)
ಅವಳನ್ನು ಅಡಗಿಸುವುದು, ಗಾಳಿಯನ್ನು ಅಡಗಿಸಿದಂತೆ; ಕೈಯಿಂದ ಎಣ್ಣೆಯನ್ನು ಹಿಡಿದಂತೆ.
ಙ್ಞಾನೋಕ್ತಿಗಳು 27 : 17 (OCVKN)
ಕಬ್ಬಿಣವು ಕಬ್ಬಿಣವನ್ನು ಹರಿತ ಮಾಡುವಂತೆ ಒಬ್ಬನು ಮತ್ತೊಬ್ಬನನ್ನು ಹರಿತ ಮಾಡುವನು.
ಙ್ಞಾನೋಕ್ತಿಗಳು 27 : 18 (OCVKN)
ಅಂಜೂರದ ಮರವನ್ನು ಕಾಯುವವನು ಅದರ ಫಲವನ್ನು ತಿನ್ನುವನು; ಹಾಗೆಯೇ ಯಜಮಾನನಿಗಾಗಿ ಕಾಯುವವನು ಸನ್ಮಾನ ಹೊಂದುವನು.
ಙ್ಞಾನೋಕ್ತಿಗಳು 27 : 19 (OCVKN)
ನೀರಿನಲ್ಲಿ ಮುಖವು ಪ್ರತಿಬಿಂಬಿಸುವಂತೆ ಮನುಷ್ಯನ ಜೀವನವು ಅವನ ಹೃದಯವನ್ನು ಪ್ರತಿಬಿಂಬಿಸುತ್ತದೆ.* ಆದ್ದರಿಂದ ಇತರರು ನಿಮ್ಮ ಹೃದಯವನ್ನು ನಿಮಗೆ ಹಿಂದಿರುಗಿಸುತ್ತಾರೆ
ಙ್ಞಾನೋಕ್ತಿಗಳು 27 : 20 (OCVKN)
ಪಾತಾಳಕ್ಕೂ ವಿನಾಶಕ್ಕೂ ತೃಪ್ತಿ ಇಲ್ಲವೇ ಇಲ್ಲ; ಹಾಗೆಯೇ, ಮನುಷ್ಯನ ಕಣ್ಣುಗಳು ಎಂದಿಗೂ ತೃಪ್ತಿಹೊಂದುವುದಿಲ್ಲ.
ಙ್ಞಾನೋಕ್ತಿಗಳು 27 : 21 (OCVKN)
ಬೆಳ್ಳಿ, ಬಂಗಾರಗಳ ಪುಟಕ್ಕೆ ಕುಲುಮೆ ಹೇಗೆಯೋ, ಹಾಗೆಯೇ ಹೊಗಳಿಕೆಯು ಮನುಷ್ಯನನ್ನು ಪರೀಕ್ಷಿಸುತ್ತದೆ.
ಙ್ಞಾನೋಕ್ತಿಗಳು 27 : 22 (OCVKN)
ಬುದ್ಧಿಹೀನನನ್ನು ಒರಳಿನಲ್ಲಿ ಗೋಧಿಯೊಂದಿಗೆ ಹಾಕಿ, ಒಣಕೆಯಿಂದ ಕುಟ್ಟಿದರೂ, ಅವನಿಂದ ಮೂರ್ಖನತವು ತೊಲಗುವುದಿಲ್ಲ.
ಙ್ಞಾನೋಕ್ತಿಗಳು 27 : 23 (OCVKN)
ನಿನ್ನ ಹಿಂಡುಗಳ ಸ್ಥಿತಿಯನ್ನು ತಿಳಿದುಕೊಳ್ಳುವಂತೆ ಶ್ರದ್ಧೆವಹಿಸು; ನಿನ್ನ ಮಂದೆಗಳನ್ನು ಚೆನ್ನಾಗಿ ನೋಡಿಕೋ.
ಙ್ಞಾನೋಕ್ತಿಗಳು 27 : 24 (OCVKN)
ಐಶ್ವರ್ಯವು ಶಾಶ್ವತವಲ್ಲ; ಕಿರೀಟವು ತಲತಲಾಂತರಕ್ಕೂ ಇರುವುದಿಲ್ಲ.
ಙ್ಞಾನೋಕ್ತಿಗಳು 27 : 25 (OCVKN)
ಒಣಹುಲ್ಲನ್ನು ಕೊಯ್ದು ನಂತರ ಹೊಸ ಬೆಳೆ ಕಾಣಿಸಿಕೊಂಡಾಗ ಮತ್ತು ಬೆಟ್ಟಗಳಿಂದ ಹುಲ್ಲು ಸಂಗ್ರಹಿಸಿದಾಗ,
ಙ್ಞಾನೋಕ್ತಿಗಳು 27 : 26 (OCVKN)
ಆಗ ಕುರಿಮರಿಗಳು ನಿಮಗೆ ಬಟ್ಟೆಗಳನ್ನು ಒದಗಿಸುತ್ತವೆ, ಆಡುಗಳ ಬೆಲೆಗೆ ನೀವು ಹೊಲವನ್ನು ಖರೀದಿಸಬಹುದು,
ಙ್ಞಾನೋಕ್ತಿಗಳು 27 : 27 (OCVKN)
ನಿನ್ನ ಊಟಕ್ಕಾಗಿಯೂ, ನಿನ್ನ ಮನೆಯವರ ಆಹಾರಕ್ಕಾಗಿಯೂ ನಿನ್ನ ದಾಸಿಯರ ಜೀವನಕ್ಕಾಗಿಯೂ ಬೇಕಾದಷ್ಟು ಆಡುಗಳ ಹಾಲು ಸಾಕಾಗುತ್ತದೆ.
❮
❯