ಙ್ಞಾನೋಕ್ತಿಗಳು 24 : 1 (OCVKN)
ಇಪ್ಪತ್ತನೆಯ ಹೇಳಿಕೆ ಕೆಟ್ಟವರಿಗೆ ವಿರೋಧವಾಗಿ ನೀನು ಅಸೂಯೆ ಪಡದಿರು; ಇಲ್ಲವೆ ಅವರ ಸಂಗಡ ಇರುವುದಕ್ಕೆ ಅಪೇಕ್ಷಿಸಬೇಡ.
ಙ್ಞಾನೋಕ್ತಿಗಳು 24 : 2 (OCVKN)
ಏಕೆಂದರೆ ಅವರ ಹೃದಯವು ಹಿಂಸೆಯನ್ನು ಯೋಜಿಸುತ್ತದೆ; ಅವರ ತುಟಿಗಳು ಹಾನಿಯನ್ನು ಪ್ರಸ್ತಾಪಿಸುತ್ತವೆ.
ಙ್ಞಾನೋಕ್ತಿಗಳು 24 : 3 (OCVKN)
ಇಪ್ಪತ್ತೊಂದನೆಯ ಹೇಳಿಕೆ ಜ್ಞಾನದಿಂದ ಮನೆಯು ಕಟ್ಟಲಾಗುತ್ತದೆ. ತಿಳುವಳಿಕೆಯಿಂದ ಅದು ಸ್ಥಿರಗೊಳ್ಳುತ್ತದೆ.
ಙ್ಞಾನೋಕ್ತಿಗಳು 24 : 4 (OCVKN)
ತಿಳುವಳಿಕೆಯಿಂದ ಅದರ ಕೋಣೆಗಳು ಅಮೂಲ್ಯವಾದ ಎಲ್ಲಾ ಇಷ್ಟ ಸಂಪತ್ತಿನಿಂದ ತುಂಬುವುದು.
ಙ್ಞಾನೋಕ್ತಿಗಳು 24 : 5 (OCVKN)
ಇಪ್ಪತ್ತೇರಡನೆಯ ಹೇಳಿಕೆ ಬಲವುಳ್ಳವನಿಗಿಂತ ಜ್ಞಾನಿಯು ಶಕ್ತಿಶಾಲಿ; ತಿಳುವಳಿಕೆಯುಳ್ಳವನು ಬಲವನ್ನು ಹೆಚ್ಚಿಸಿಕೊಳ್ಳುತ್ತಾನೆ.
ಙ್ಞಾನೋಕ್ತಿಗಳು 24 : 6 (OCVKN)
ಖಂಡಿತವಾಗಿಯೂ ನಿಮಗೆ ಯುದ್ಧಮಾಡಲು ಮಾರ್ಗದರ್ಶನ ಬೇಕು, ಬಹುಮಂದಿ ಸಲಹೆಗಾರರು ಇರುವಲ್ಲಿ ಜಯವಿರುವುದು.
ಙ್ಞಾನೋಕ್ತಿಗಳು 24 : 7 (OCVKN)
ಇಪ್ಪತ್ಮೂರನೆಯ ಹೇಳಿಕೆ ಜ್ಞಾನವು ಬುದ್ಧಿಹೀನನಿಗೆ ನಿಲುಕದು; ಪುರದ್ವಾರದಲ್ಲಿ ಕೂಡಿಬಂದ ಸಭೆಯಲ್ಲಿ ಅವನು ತನ್ನ ಬಾಯಿಯನ್ನು ತೆರೆಯುವುದೇ ಇಲ್ಲ.
ಙ್ಞಾನೋಕ್ತಿಗಳು 24 : 8 (OCVKN)
ಇಪ್ಪತ್ತನಾಲ್ಕನೆಯ ಹೇಳಿಕೆ ಕೇಡನ್ನು ಕಲ್ಪಿಸುವವನು ಕುಚೋದ್ಯಗಾರನೆಂದು ಕರೆಯಲ್ಪಡುವನು.
ಙ್ಞಾನೋಕ್ತಿಗಳು 24 : 9 (OCVKN)
ಬುದ್ಧಿಹೀನನ ಆಲೋಚನೆಯು ಪಾಪಮಯ; ಪರಿಹಾಸ್ಯಗಾರನು ಮನುಷ್ಯರಿಗೆ ಅಸಹ್ಯ.
ಙ್ಞಾನೋಕ್ತಿಗಳು 24 : 10 (OCVKN)
ಇಪ್ಪತ್ತೈದನೆಯ ಹೇಳಿಕೆ ಇಕ್ಕಟ್ಟಿನ ಸಮಯದಲ್ಲಿ ನೀನು ಬಳಲಿ ಹೋದರೆ, ನಿನ್ನ ಬಲವು ಕೊಂಚವಾಗಿದೆ.
ಙ್ಞಾನೋಕ್ತಿಗಳು 24 : 11 (OCVKN)
ಅನ್ಯಾಯವಾಗಿ ಮರಣಕ್ಕೆ ಸಾಗಿಸುವನನ್ನು ಬಿಡಿಸುವುದಕ್ಕೆ ಯತ್ನಿಸು; ಕೊಲೆಗೆ ನೇಮಿತವಾದವರನ್ನು ನೀನು ರಕ್ಷಿಸು.
ಙ್ಞಾನೋಕ್ತಿಗಳು 24 : 12 (OCVKN)
ನೀನು, “ಅದು ನನಗೆ ಏನೂ ಗೊತ್ತಿಲ್ಲ” ಎಂದು ಹೇಳಿದರೆ, ಹೃದಯವನ್ನು ಪರಿಶೋಧಿಸುವ ದೇವರು ಅದನ್ನು ತಿಳಿಯುವದಿಲ್ಲವೋ? ನಿನ್ನ ಜೀವವನ್ನು ಕಾಯುವಾತನು ಅದನ್ನು ತಿಳಿಯುವುದಿಲ್ಲವೋ? ಪ್ರತಿಯೊಬ್ಬನ ಕಾರ್ಯಗಳಿಗನುಸಾರವಾಗಿ ಆತನು ಪ್ರತಿಫಲವನ್ನು ಕೊಡದೆ ಇರುವನೇ?
ಙ್ಞಾನೋಕ್ತಿಗಳು 24 : 13 (OCVKN)
ಇಪ್ಪತ್ತಾರನೆಯ ಹೇಳಿಕೆ ಮಗನೇ, ಜೇನನ್ನು ತಿನ್ನು, ಅದು ಚೆನ್ನಾಗಿದೆ; ಜೇನು ಗೂಡಿನ ಜೇನುತುಪ್ಪವು ನಿನ್ನ ಬಾಯಿಗೆ ಸಿಹಿಯಾಗಿದೆ.
ಙ್ಞಾನೋಕ್ತಿಗಳು 24 : 14 (OCVKN)
ಅಂತೆಯೇ ಜ್ಞಾನವು ನಿನಗೆ ಜೇನುತುಪ್ಪದಂತೆ ತಿಳಿದುಕೋ. ಅದು ಸಿಕ್ಕಿದಾಗ ನಿನಗೆ ಉಜ್ವಲ ಭವಿಷ್ಯವಿದೆ. ನಿನ್ನ ನಿರೀಕ್ಷೆಯು ನಿರರ್ಥಕವಾಗುವುದಿಲ್ಲ.
ಙ್ಞಾನೋಕ್ತಿಗಳು 24 : 15 (OCVKN)
ಇಪ್ಪತ್ತೇಳನೆಯ ಹೇಳಿಕೆ ದುಷ್ಟನೇ, ನೀತಿವಂತನ ನಿವಾಸಕ್ಕೆ ಹೊಂಚು ಹಾಕಬೇಡ; ಅವನ ವಿಶ್ರಾಂತಿಯ ಸ್ಥಳವನ್ನು ಸೂರೆಮಾಡಬೇಡ.
ಙ್ಞಾನೋಕ್ತಿಗಳು 24 : 16 (OCVKN)
ಏಕೆಂದರೆ ನೀತಿವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ; ಆದರೆ ದುಷ್ಟನು ಕೇಡು ಬಂದಾಗ ಬೀಳುವನು.
ಙ್ಞಾನೋಕ್ತಿಗಳು 24 : 17 (OCVKN)
ಇಪ್ಪತ್ತೆಂಟನೆಯ ಹೇಳಿಕೆ ನಿನ್ನ ಶತ್ರು ಬಿದ್ದರೆ ಆನಂದಿಸಬೇಡ; ಅವನು ಎಡವಿದರೆ ನಿನ್ನ ಹೃದಯವು ಹರ್ಷಿಸದಿರಲಿ.
ಙ್ಞಾನೋಕ್ತಿಗಳು 24 : 18 (OCVKN)
ಯೆಹೋವ ದೇವರು ಅದನ್ನು ಕಂಡು, ಅದು ಅವರಿಗೆ ಇಷ್ಟವಿಲ್ಲದ್ದರಿಂದ, ಅವರು ಅವನ ಕಡೆಯಿಂದ ತನ್ನ ಕೋಪವನ್ನು ತಿರುಗಿಸಿಬಿಟ್ಟಾರು.
ಙ್ಞಾನೋಕ್ತಿಗಳು 24 : 19 (OCVKN)
ಇಪ್ಪತ್ತೊಂಬತ್ತನೆಯ ಹೇಳಿಕೆ ಕೆಟ್ಟವರನ್ನು ಕಂಡು ಉರಿಗೊಳ್ಳಬೇಡ; ಇಲ್ಲವೆ ದುಷ್ಟರನ್ನು ಕಂಡು ಅಸೂಯೆಪಡಬೇಡ.
ಙ್ಞಾನೋಕ್ತಿಗಳು 24 : 20 (OCVKN)
ಏಕೆಂದರೆ ಕೆಡುಕನಿಗೆ ಭವಿಷ್ಯದ ನಿರೀಕ್ಷೆ ಇರುವುದಿಲ್ಲ; ದುಷ್ಟರ ದೀಪವು ಆರಿಹೋಗುವುದು.
ಙ್ಞಾನೋಕ್ತಿಗಳು 24 : 21 (OCVKN)
ಮೂವತ್ತನೆಯ ಹೇಳಿಕೆ ಮಗನೇ, ಯೆಹೋವ ದೇವರಿಗೂ, ಅರಸನಿಗೂ ಭಯಪಡು; ತಿರುಗಿಬೀಳುವವರ ಸಹವಾಸ ಮಾಡಬೇಡ,
ಙ್ಞಾನೋಕ್ತಿಗಳು 24 : 22 (OCVKN)
ಏಕೆಂದರೆ ಅವರಿಬ್ಬರು ವಿಧಿಸುವ ವಿಪತ್ತು ಫಕ್ಕನೆ ಸಂಭವಿಸುವದು; ಅವರು ಯಾವ ವಿಪತ್ತುಗಳನ್ನು ತರಬಹುದು ಎಂದು ಯಾರಿಗೆ ತಿಳಿದಿದೆ?
ಙ್ಞಾನೋಕ್ತಿಗಳು 24 : 23 (OCVKN)
ಜ್ಞಾನಿಯ ಮತ್ತಷ್ಟು ಹೇಳಿಕೆಗಳು ಇವು ಜ್ಞಾನಿಗಳ ಹೇಳಿಕೆಗಳಾಗಿವೆ: ನ್ಯಾಯ ವಿಚಾರಣೆಯಲ್ಲಿ ಪಕ್ಷಪಾತವು ಸರಿಯಲ್ಲ.
ಙ್ಞಾನೋಕ್ತಿಗಳು 24 : 24 (OCVKN)
ಯಾವನು ದುಷ್ಟನಿಗೆ, “ನೀನು ನೀತಿವಂತನು” ಎಂದು ಹೇಳುತ್ತಾನೋ ಅವನನ್ನು ಜನರು ಶಪಿಸುವರು; ಜನಾಂಗಗಳು ಅವನನ್ನು ದೂಷಿಸುವರು.
ಙ್ಞಾನೋಕ್ತಿಗಳು 24 : 25 (OCVKN)
ಆದರೆ ತಪ್ಪುಮಾಡಿದವರನ್ನು ತಿದ್ದುವವರಿಗೆ ಶುಭವಾಗುವುದು; ಅವರ ಮೇಲೆ ಒಳ್ಳೆಯ ಆಶೀರ್ವಾದವು ಬರುವುದು.
ಙ್ಞಾನೋಕ್ತಿಗಳು 24 : 26 (OCVKN)
ಪ್ರಾಮಾಣಿಕವಾದ ಉತ್ತರವು ತುಟಿಗೆ ಮುದ್ದಿಟ್ಟಂತೆ.
ಙ್ಞಾನೋಕ್ತಿಗಳು 24 : 27 (OCVKN)
ನಿನ್ನ ಹೊರಗಿನ ಕೆಲಸವನ್ನು ಕ್ರಮವಾಗಿ ಇರಿಸು. ನಿನ್ನ ಹೊಲಗಳನ್ನು ಸಿದ್ಧಪಡಿಸು; ತರುವಾಯ ನಿನ್ನ ಮನೆಯನ್ನು ಕಟ್ಟಿಕೋ.
ಙ್ಞಾನೋಕ್ತಿಗಳು 24 : 28 (OCVKN)
ಕಾರಣವಿಲ್ಲದೆ ನೆರೆಯವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಬೇಡ; ನಿನ್ನ ಮಾತುಗಳಿಂದ ಅವನಿಗೆ ಮೋಸ ಮಾಡಬೇಡ.
ಙ್ಞಾನೋಕ್ತಿಗಳು 24 : 29 (OCVKN)
ನನಗೆ, “ಅವನು ಮಾಡಿದಂತೆ ನಾನೂ ಅವನಿಗೆ ಮಾಡುವೆನು; ಅವನು ಮಾಡಿದ್ದಕ್ಕೆ ಸರಿಯಾಗಿ ಮುಯ್ಯಿತೀರಿಸುವೆನು,” ಎಂದು ಹೇಳಬೇಡ.
ಙ್ಞಾನೋಕ್ತಿಗಳು 24 : 30 (OCVKN)
ನಾನು ಸೋಮಾರಿಯ ಹೊಲದ ಪಕ್ಕದಲ್ಲಿ ಬುದ್ಧಿಹೀನನ ದ್ರಾಕ್ಷಿತೋಟದ ಕಡೆಯಲ್ಲಿ ಹಾದು ಹೋದೆನು.
ಙ್ಞಾನೋಕ್ತಿಗಳು 24 : 31 (OCVKN)
ಆಗ ಇಗೋ, ಹೊಲವೆಲ್ಲವೂ ಮುಳ್ಳು ಗಿಡಗಳಿಂದ ಬೆಳೆದು ಕಳೆಗಳು ಅವುಗಳನ್ನು ಮುಚ್ಚಿ ಅದರ ಕಲ್ಲಿನ ಗೋಡೆಯು ಬಿದ್ದುಹೋಗಿತ್ತು.
ಙ್ಞಾನೋಕ್ತಿಗಳು 24 : 32 (OCVKN)
ಆಗ ನಾನು ಅದನ್ನು ನೋಡಿ ಚಿಂತಿಸತೊಡಗಿದೆ; ನಾನು ಕಂಡದ್ದರಿಂದ ಪಾಠ ಕಲಿತೆನು.
ಙ್ಞಾನೋಕ್ತಿಗಳು 24 : 33 (OCVKN)
ಇನ್ನು ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನು ಸ್ವಲ್ಪ ವಿಶ್ರಾಂತಿಗಾಗಿ ಕೈ ಮುದುರಿಕೊಳ್ಳುವೆ ಎನ್ನುವೆಯಾ?
ಙ್ಞಾನೋಕ್ತಿಗಳು 24 : 34 (OCVKN)
ಹೀಗೆ ನಿನಗೆ ಬಡತನವು ಕಳ್ಳನಂತೆಯೂ ಕೊರತೆಯು ಶಸ್ತ್ರಧಾರಿಯಂತೆಯೂ ನಿನ್ನ ಮೇಲೆ ಬರುವುವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34