ಙ್ಞಾನೋಕ್ತಿಗಳು 15 : 1 (OCVKN)
ಮೃದುವಾದ ಉತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ. ಆದರೆ ಬಿರುಸಾದ ಮಾತುಗಳು ಕೋಪವನ್ನು ಎಬ್ಬಿಸುತ್ತದೆ.
ಙ್ಞಾನೋಕ್ತಿಗಳು 15 : 2 (OCVKN)
ಜ್ಞಾನಿಯ ನಾಲಿಗೆಯು ಒಳ್ಳೆಯ ಪರಿಜ್ಞಾನವನ್ನು ಹರಡುತ್ತದೆ. ಆದರೆ ಬುದ್ಧಿಹೀನರ ಬಾಯಿಯು ಮೂರ್ಖತನವನ್ನು ಹೊರಗೆಡವುತ್ತದೆ.
ಙ್ಞಾನೋಕ್ತಿಗಳು 15 : 3 (OCVKN)
ಯೆಹೋವ ದೇವರ ಕಣ್ಣುಗಳು ಪ್ರತಿಯೊಂದು ಸ್ಥಳದಲ್ಲಿ ಇವೆ. ಕೆಟ್ಟವರನ್ನೂ ಒಳ್ಳೆಯವರನ್ನೂ ನೋಡುತ್ತಾ ಇರುವರು.
ಙ್ಞಾನೋಕ್ತಿಗಳು 15 : 4 (OCVKN)
ಹಿತವಾದ ನಾಲಿಗೆಯು ಜೀವವೃಕ್ಷ. ಆದರೆ ವಕ್ರ ನಾಲಿಗೆಯು ಆತ್ಮಚೈತನ್ಯವನ್ನು ನಾಶಮಾಡುವುದು.
ಙ್ಞಾನೋಕ್ತಿಗಳು 15 : 5 (OCVKN)
ಮೂರ್ಖನು ತನ್ನ ತಂದೆಯ ಶಿಸ್ತನ್ನು ತಿರಸ್ಕರಿಸುತ್ತಾನೆ. ಆದರೆ ಜಾಣನು ಗದರಿಕೆಯನ್ನು ಲಕ್ಷಿಸುವನು.
ಙ್ಞಾನೋಕ್ತಿಗಳು 15 : 6 (OCVKN)
ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು. ಆದರೆ ದುಷ್ಟನ ಆದಾಯವು ವಿನಾಶ ತರುವುದು.
ಙ್ಞಾನೋಕ್ತಿಗಳು 15 : 7 (OCVKN)
ಜ್ಞಾನಿಗಳ ತುಟಿಗಳು ಪರಿಜ್ಞಾನವನ್ನು ಹರಡುತ್ತವೆ. ಆದರೆ ಬುದ್ಧಿಹೀನರ ಹೃದಯವು ಹಾಗೆ ಮಾಡುವುದೇ ಇಲ್ಲ.
ಙ್ಞಾನೋಕ್ತಿಗಳು 15 : 8 (OCVKN)
ದುಷ್ಟರ ಯಜ್ಞವು ಯೆಹೋವ ದೇವರಿಗೆ ಅಸಹ್ಯ. ಆದರೆ ಯಥಾರ್ಥವಂತರ ಪ್ರಾರ್ಥನೆಯು ಅವರಿಗೆ ಮೆಚ್ಚುಗೆ.
ಙ್ಞಾನೋಕ್ತಿಗಳು 15 : 9 (OCVKN)
ದುಷ್ಟರ ಮಾರ್ಗವು ಯೆಹೋವ ದೇವರಿಗೆ ಅಸಹ್ಯ. ಆದರೆ ನೀತಿಯನ್ನು ಹಿಂಬಾಲಿಸುವವನನ್ನು ಅವರು ಪ್ರೀತಿಸುತ್ತಾರೆ.
ಙ್ಞಾನೋಕ್ತಿಗಳು 15 : 10 (OCVKN)
ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ. ಗದರಿಕೆಯನ್ನು ಹಗೆಮಾಡುವವನು ಸಾಯುವನು.
ಙ್ಞಾನೋಕ್ತಿಗಳು 15 : 11 (OCVKN)
ಮರಣವೂ ಪಾತಾಳವೂ ಯೆಹೋವ ದೇವರಿಗೆ ಕಾಣುತ್ತಿರುವಾಗ, ಮನುಷ್ಯರ ಹೃದಯಗಳು ಅವರಿಗೆ ಮುಚ್ಚುಮರೆಯೇ?
ಙ್ಞಾನೋಕ್ತಿಗಳು 15 : 12 (OCVKN)
ಕುಚೋದ್ಯಗಾರನು ಬುದ್ಧಿವಾದವನ್ನು ದ್ವೇಷಿಸುತ್ತಾನೆ. ಅವನು ಜ್ಞಾನಿಗಳಿಂದ ದೂರವಿರುತ್ತಾನೆ.
ಙ್ಞಾನೋಕ್ತಿಗಳು 15 : 13 (OCVKN)
ಸಂತೋಷದ ಹೃದಯವು ಹರ್ಷವುಳ್ಳ ಮುಖಭಾವ ತೋರುವುದು. ಆದರೆ ನೊಂದ ಹೃದಯವು ಆತ್ಮಚೈತನ್ಯವನ್ನು ಕುಂದಿಸುತ್ತದೆ.
ಙ್ಞಾನೋಕ್ತಿಗಳು 15 : 14 (OCVKN)
ವಿವೇಕವುಳ್ಳವನ ಹೃದಯವು ಪರಿಜ್ಞಾನವನ್ನು ಹುಡುಕುತ್ತದೆ. ಆದರೆ ಬುದ್ಧಿಹೀನರ ಬಾಯಿಯು ಮೂರ್ಖತನವನ್ನೇ ತಿನ್ನುತ್ತದೆ.
ಙ್ಞಾನೋಕ್ತಿಗಳು 15 : 15 (OCVKN)
ಬಾಧಿತರ ದಿನಗಳೆಲ್ಲವೂ ದುಃಖಭರಿತ. ಆದರೆ ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ.
ಙ್ಞಾನೋಕ್ತಿಗಳು 15 : 16 (OCVKN)
ತೊಂದರೆಯಿಂದ ಕೂಡಿದ ದೊಡ್ಡ ಸಂಪತ್ತಿಗಿಂತ ಯೆಹೋವ ದೇವರ ಭಯದಿಂದ ಕೂಡಿದ ಅಲ್ಪವೇ ಮೇಲು.
ಙ್ಞಾನೋಕ್ತಿಗಳು 15 : 17 (OCVKN)
ದ್ವೇಷವಿರುವಲ್ಲಿ ಕೊಬ್ಬಿದ ಎತ್ತಿನ ಮಾಂಸಕ್ಕಿಂತಲೂ, ಪ್ರೀತಿ ಇರುವಲ್ಲಿ ಸಸ್ಯಾಹಾರ ಊಟವೇ ಉತ್ತಮ.
ಙ್ಞಾನೋಕ್ತಿಗಳು 15 : 18 (OCVKN)
ಕೋಪಿಷ್ಟನು ವಿವಾದವನ್ನು ಎಬ್ಬಿಸುವನು. ಆದರೆ ತಾಳ್ಮೆಯಿಂದ ಇರುವವನು ಜಗಳವನ್ನು ಶಾಂತಗೊಳಿಸುವನು.
ಙ್ಞಾನೋಕ್ತಿಗಳು 15 : 19 (OCVKN)
ಸೋಮಾರಿಯ ಮಾರ್ಗವು ಮುಳ್ಳಿನ ಬೇಲಿಯಂತೆ ಇದೆ. ಆದರೆ ಯಥಾರ್ಥವಂತನ ಮಾರ್ಗವು ರಾಜಮಾರ್ಗ.
ಙ್ಞಾನೋಕ್ತಿಗಳು 15 : 20 (OCVKN)
ಜ್ಞಾನಿಯಾದ ಮಗನು ತಂದೆಯನ್ನು ಉಲ್ಲಾಸಗೊಳಿಸುತ್ತಾನೆ. ಬುದ್ಧಿಹೀನನಾದರೋ ತನ್ನ ತಾಯಿಯನ್ನು ತಿರಸ್ಕರಿಸುತ್ತಾನೆ.
ಙ್ಞಾನೋಕ್ತಿಗಳು 15 : 21 (OCVKN)
ಬುದ್ಧಿಹೀನನು ಮೂರ್ಖತನದಲ್ಲಿ ಉಲ್ಲಾಸಿಸುವನು. ತಿಳುವಳಿಕೆಯನ್ನು ಹೊಂದಿರುವವನು ನೇರ ಮಾರ್ಗದಲ್ಲಿ ನಡೆಯುತ್ತಾನೆ.
ಙ್ಞಾನೋಕ್ತಿಗಳು 15 : 22 (OCVKN)
ಸಲಹೆಯ ಕೊರತೆಯಿಂದ ಯೋಜನೆಗಳು ವಿಫಲಗೊಳ್ಳುತ್ತವೆ. ಆದರೆ ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸಫಲಗೊಳ್ಳುವುವು.
ಙ್ಞಾನೋಕ್ತಿಗಳು 15 : 23 (OCVKN)
ಸೂಕ್ತವಾದ ಉತ್ತರವನ್ನು ನೀಡುವಲ್ಲಿ ಮನುಷ್ಯನು ಸಂತೋಷವನ್ನು ಕಂಡುಕೊಳ್ಳುತ್ತಾನೆ. ತಕ್ಕ ಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೆಯದು.
ಙ್ಞಾನೋಕ್ತಿಗಳು 15 : 24 (OCVKN)
ಜೀವದ ಮಾರ್ಗವು ಜಾಣನನ್ನು ಮೇಲಕ್ಕೆತ್ತುವುದು. ಅದು ಅವನನ್ನು ಪಾತಾಳಕ್ಕೆ ಇಳಿಯುವದರಿಂದ ತಪ್ಪಿಸುವುದು.
ಙ್ಞಾನೋಕ್ತಿಗಳು 15 : 25 (OCVKN)
ಯೆಹೋವ ದೇವರು ಗರ್ವಿಷ್ಠರ ಮನೆಯನ್ನು ಕೆಡವಿಬಿಡುವರು, ಆದರೆ ವಿಧವೆಯರ ಮೇರೆಯನ್ನು ಅವರು ನೆಲೆಗೊಳಿಸುವರು.
ಙ್ಞಾನೋಕ್ತಿಗಳು 15 : 26 (OCVKN)
ದುಷ್ಟರ ಆಲೋಚನೆಯು ಯೆಹೋವ ದೇವರಿಗೆ ಅಸಹ್ಯವಾಗಿದೆ, ಆದರೆ ಸೌಜನ್ಯಶೀಲ ಮಾತುಗಳು ಅವರ ದೃಷ್ಟಿಯಲ್ಲಿ ಶುದ್ಧವಾಗಿವೆ.
ಙ್ಞಾನೋಕ್ತಿಗಳು 15 : 27 (OCVKN)
ದುರಾಶೆಯುಳ್ಳವನು ತನ್ನ ಕುಟುಂಬವನ್ನು ಬಾಧಿಸುತ್ತಾನೆ. ಲಂಚವನ್ನು ಹಗೆಮಾಡುವವನು ಬದುಕುವನು.
ಙ್ಞಾನೋಕ್ತಿಗಳು 15 : 28 (OCVKN)
ನೀತಿವಂತರ ಹೃದಯವು ಹೇಗೆ ಉತ್ತರಿಸಬೇಕೆಂದು ಯೋಚಿಸುತ್ತದೆ. ಆದರೆ ದುಷ್ಟರ ಬಾಯಿಯು ಕೆಟ್ಟವುಗಳನ್ನು ಹೊರಗೆಡವುತ್ತದೆ.
ಙ್ಞಾನೋಕ್ತಿಗಳು 15 : 29 (OCVKN)
ಯೆಹೋವ ದೇವರು ದುಷ್ಟರಿಗೆ ದೂರ; ಆದರೆ ನೀತಿವಂತರ ಪ್ರಾರ್ಥನೆಯನ್ನು ಅವರು ಕೇಳುತ್ತಾರೆ.
ಙ್ಞಾನೋಕ್ತಿಗಳು 15 : 30 (OCVKN)
ಹರ್ಷಚಿತ್ತದ ನೋಟವು ಹೃದಯಕ್ಕೆ ಸಂತೋಷವನ್ನು ತರುತ್ತದೆ. ಒಳ್ಳೆಯ ವಾರ್ತೆಯು ಎಲುಬುಗಳನ್ನು ಪುಷ್ಟಿಗೊಳಿಸುತ್ತದೆ.
ಙ್ಞಾನೋಕ್ತಿಗಳು 15 : 31 (OCVKN)
ಜೀವದ ಗದರಿಕೆಗೆ ಕಿವಿಗೊಡುವವನು, ಜ್ಞಾನಿಗಳ ನಡುವೆ ವಾಸಿಸುವವನಾಗಿದ್ದಾನೆ.
ಙ್ಞಾನೋಕ್ತಿಗಳು 15 : 32 (OCVKN)
ಶಿಸ್ತನ್ನು ನಿರಾಕರಿಸುವವನು, ತನಗೆ ತಾನೆ ಹಾನಿ ತಂದುಕೊಳ್ಳುತ್ತಾನೆ, ಆದರೆ ಗದರಿಕೆಗೆ ಕಿವಿಗೊಡುವವನು ವಿವೇಕವನ್ನು ಪಡೆಯುತ್ತಾನೆ.
ಙ್ಞಾನೋಕ್ತಿಗಳು 15 : 33 (OCVKN)
ಯೆಹೋವ ದೇವರ ಭಯವೇ ಜ್ಞಾನವನ್ನು ಕಲಿಸುತ್ತದೆ. ನಮ್ರತೆ ಗೌರವಕ್ಕೆ ಮೊದಲು ಬರುತ್ತದೆ.
❮
❯