ಅರಣ್ಯಕಾಂಡ 7 : 1 (OCVKN)
ಗೋತ್ರ ನಾಯಕರ ಕಾಣಿಕೆ ಮೋಶೆಯು ದೇವದರ್ಶನ ಗುಡಾರವನ್ನು ನಿಲ್ಲಿಸಿ, ಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ಅದರ ಎಲ್ಲಾ ಸಲಕರಣೆಗಳನ್ನೂ, ಬಲಿಪೀಠವನ್ನೂ, ಅದರ ಎಲ್ಲಾ ಸಾಮಗ್ರಿಗಳನ್ನೂ ಅಭಿಷೇಕಿಸಿ ಪರಿಶುದ್ಧ ಮಾಡಿದನು. ಅನಂತರ,
ಅರಣ್ಯಕಾಂಡ 7 : 2 (OCVKN)
ಇಸ್ರಾಯೇಲರ ಪ್ರಧಾನರು ಎಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.
ಅರಣ್ಯಕಾಂಡ 7 : 3 (OCVKN)
ಅವರು ಯೆಹೋವ ದೇವರ ಎದುರಿನಲ್ಲಿ ತಂದ ಅರ್ಪಣೆ ಏನೆಂದರೆ ಆರು ಕಮಾನುಬಂಡಿಗಳು, ಹನ್ನೆರಡು ಎತ್ತುಗಳು, ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯಂತೆ, ಒಬ್ಬೊಬ್ಬನಿಗೆ ಒಂದೊಂದು ಎತ್ತುಗಳನ್ನು ಅವರು ದೇವದರ್ಶನ ಗುಡಾರದ ಮುಂದೆ ತಂದರು.
ಅರಣ್ಯಕಾಂಡ 7 : 4 (OCVKN)
ಯೆಹೋವ ದೇವರು ಮಾತನಾಡಿ ಮೋಶೆಗೆ ಹೇಳಿದ್ದೇನೆಂದರೆ,
ಅರಣ್ಯಕಾಂಡ 7 : 5 (OCVKN)
“ಅವುಗಳನ್ನು ಅವರಿಂದ ತೆಗೆದುಕೋ, ಅವು ದೇವದರ್ಶನ ಗುಡಾರದ ಸೇವೆಮಾಡುವುದಕ್ಕೋಸ್ಕರ ಇರಬೇಕು. ಅವುಗಳನ್ನು ಲೇವಿಯರಿಗೆ ಅವನವನ ಕೆಲಸಕ್ಕೆ ತಕ್ಕಂತೆ ಕೊಡಬೇಕು,” ಎಂದರು.
ಅರಣ್ಯಕಾಂಡ 7 : 6 (OCVKN)
ಆಗ ಮೋಶೆಯು ಆ ಬಂಡಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅವುಗಳನ್ನು ಲೇವಿಯರಿಗೆ ಕೊಟ್ಟನು.
ಅರಣ್ಯಕಾಂಡ 7 : 7 (OCVKN)
ಎರಡು ಬಂಡಿಗಳನ್ನೂ, ನಾಲ್ಕು ಎತ್ತುಗಳನ್ನೂ, ಗೇರ್ಷೋನನ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕ ಪ್ರಕಾರ ಕೊಟ್ಟನು.
ಅರಣ್ಯಕಾಂಡ 7 : 8 (OCVKN)
ಯಾಜಕನಾದ ಆರೋನನ ಮಗ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ, ಎಂಟು ಎತ್ತುಗಳನ್ನೂ ಮೆರಾರೀಯ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕಂತೆ ಕೊಟ್ಟನು.
ಅರಣ್ಯಕಾಂಡ 7 : 9 (OCVKN)
ಆದರೆ ಕೊಹಾತ್ಯರಿಗೆ ಯಾವುದನ್ನೂ ಕೊಡಲಿಲ್ಲ. ಏಕೆಂದರೆ ಅವರು ತಮ್ಮ ಹೆಗಲುಗಳ ಮೇಲೆ ಪರಿಶುದ್ಧಸ್ಥಳದ ವಸ್ತುಗಳನ್ನು ಹೊತ್ತುಕೊಂಡು ಹೋಗುವುದೇ ಅವರಿಗೆ ಸೇವೆಯಾಗಿತ್ತು.
ಅರಣ್ಯಕಾಂಡ 7 : 10 (OCVKN)
ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಪ್ರತಿಷ್ಠೆಗಾಗಿ ಅದರ ಮುಂದೆ ಬಂದು, ಪ್ರಧಾನರು ತಮ್ಮ ಕಾಣಿಕೆಗಳನ್ನು ಅರ್ಪಿಸಿದರು.
ಅರಣ್ಯಕಾಂಡ 7 : 11 (OCVKN)
ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿಪೀಠದ ಪ್ರತಿಷ್ಠೆಗಾಗಿ ತಮ್ಮ ಕಾಣಿಕೆಯನ್ನು ಅರ್ಪಿಸಬೇಕು.”
ಅರಣ್ಯಕಾಂಡ 7 : 12 (OCVKN)
ಮೊದಲನೆಯ ದಿವಸದಲ್ಲಿ ತನ್ನ ಕಾಣಿಕೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅಮ್ಮೀನಾದಾಬನ ಮಗ ನಹಶೋನನು.
ಅರಣ್ಯಕಾಂಡ 7 : 13 (OCVKN)
ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್* ಸುಮಾರು 1.5 ಕಿಲೋಗ್ರಾಂ; ಈ ಅಧ್ಯಾಯದಲ್ಲಿ ಬರುವ ಎಲ್ಲಾ ಕಡೆ ತೂಕದ ಚೊಕ್ಕ ಬೆಳ್ಳಿಯ ಒಂದು ತಟ್ಟೆ ಮತ್ತು 70 ಶೆಕೆಲ್ † ಸುಮಾರು 800 ಗ್ರಾಂ; ಈ ಅಧ್ಯಾಯದಲ್ಲಿ ಬರುವ ಎಲ್ಲಾ ಕಡೆ ತೂಕದ ಬೆಳ್ಳಿಯ ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಇವೆರಡು ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 14 (OCVKN)
ಧೂಪದಿಂದ ತುಂಬಿದ್ದ 10 ಶೆಕೆಲ್ ಸುಮಾರು 115 ಗ್ರಾಂ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 15 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
ಅರಣ್ಯಕಾಂಡ 7 : 16 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತ,
ಅರಣ್ಯಕಾಂಡ 7 : 17 (OCVKN)
ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳೂ ಸಮಾಧಾನದ ಬಲಿಗಾಗಿ ಸಮರ್ಪಿಸಬೇಕು. ಇದು ಅಮ್ಮೀನಾದಾಬನ ಮಗ ನಹಶೋನನ ಅರ್ಪಣೆಯು.
ಅರಣ್ಯಕಾಂಡ 7 : 18 (OCVKN)
ಎರಡನೆಯ ದಿವಸದಲ್ಲಿ ಇಸ್ಸಾಕಾರನ ಗೋತ್ರದ ಪ್ರಧಾನನಾಗಿರುವ ಚೂವಾರನ ಮಗ ನೆತನೆಯೇಲ್ ಅರ್ಪಿಸಿದನು.
ಅರಣ್ಯಕಾಂಡ 7 : 19 (OCVKN)
ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 20 (OCVKN)
ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 21 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
ಅರಣ್ಯಕಾಂಡ 7 : 22 (OCVKN)
ಪಾಪ ಪರಿಹಾರದ ಬಲಿಗಾಗಿ ಒಂದು ಹೋತ,
ಅರಣ್ಯಕಾಂಡ 7 : 23 (OCVKN)
ಸಮಾಧಾನದ ಬಲಿಗಳ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚೂವಾರನ ಮಗ ನೆತನೆಯೇಲ್ ಇವನ ಅರ್ಪಣೆಯು.
ಅರಣ್ಯಕಾಂಡ 7 : 24 (OCVKN)
ಮೂರನೆಯ ದಿವಸದಲ್ಲಿ ಜೆಬುಲೂನ್ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗ ಎಲೀಯಾಬನು ಅರ್ಪಿಸಿದ್ದು.
ಅರಣ್ಯಕಾಂಡ 7 : 25 (OCVKN)
ಅವನ ಅರ್ಪಣೆ ಏನೆಂದರೆ: ದೇವರ ಸೇವೆಗೆ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 26 (OCVKN)
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 27 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
ಅರಣ್ಯಕಾಂಡ 7 : 28 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 29 (OCVKN)
ಮತ್ತು ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಹೇಲೋನನ ಮಗ ಎಲೀಯಾಬನ ಸಮರ್ಪಣೆಯು.
ಅರಣ್ಯಕಾಂಡ 7 : 30 (OCVKN)
ನಾಲ್ಕನೆಯ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾನನಾಗಿರುವ ಶೆದೇಯೂರನ ಮಗ ಎಲೀಚೂರನು ಅರ್ಪಿಸಿದನು.
ಅರಣ್ಯಕಾಂಡ 7 : 31 (OCVKN)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 32 (OCVKN)
ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 33 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
ಅರಣ್ಯಕಾಂಡ 7 : 34 (OCVKN)
ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 35 (OCVKN)
ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಶೆದೇಯೂರನ ಮಗ ಎಲೀಚೂರನ ಅರ್ಪಣೆಯು.
ಅರಣ್ಯಕಾಂಡ 7 : 36 (OCVKN)
ಐದನೆಯ ದಿನದಲ್ಲಿ ಸಿಮೆಯೋನನ ಗೋತ್ರದ ಪ್ರಧಾನನಾಗಿರುವ ಚುರೀಷದ್ದೈಯನ ಮಗ ಶೆಲುಮೀಯೇಲನು ಅರ್ಪಿಸಿದನು.
ಅರಣ್ಯಕಾಂಡ 7 : 37 (OCVKN)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 38 (OCVKN)
ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 39 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
ಅರಣ್ಯಕಾಂಡ 7 : 40 (OCVKN)
ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 41 (OCVKN)
ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚುರೀಷದ್ದೈಯನ ಮಗ ಶೆಲುಮೀಯೇಲನ ಅರ್ಪಣೆಯು.
ಅರಣ್ಯಕಾಂಡ 7 : 42 (OCVKN)
ಆರನೆಯ ದಿನದಲ್ಲಿ ಗಾದನ ಗೋತ್ರದ ಪ್ರಧಾನನಾಗಿರುವ ದೆವುಯೇಲನ ಮಗ ಎಲ್ಯಾಸಾಫನು ಅರ್ಪಿಸಿದನು.
ಅರಣ್ಯಕಾಂಡ 7 : 43 (OCVKN)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 44 (OCVKN)
ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 45 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
ಅರಣ್ಯಕಾಂಡ 7 : 46 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 47 (OCVKN)
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ದೆವುಯೇಲನ ಮಗ ಎಲ್ಯಾಸಾಫನ ಅರ್ಪಣೆಯು.
ಅರಣ್ಯಕಾಂಡ 7 : 48 (OCVKN)
ಏಳನೆಯ ದಿನದಲ್ಲಿ ಎಫ್ರಾಯೀಮ್ ಗೋತ್ರದ ಪ್ರಧಾನನಾದ ಅಮ್ಮೀಹೂದನ ಮಗ ಎಲೀಷಾಮನು ಅರ್ಪಿಸಿದನು.
ಅರಣ್ಯಕಾಂಡ 7 : 49 (OCVKN)
ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 50 (OCVKN)
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 51 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
ಅರಣ್ಯಕಾಂಡ 7 : 52 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 53 (OCVKN)
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಅಮ್ಮೀಹೂದನ ಮಗ ಎಲೀಷಾಮನ ಅರ್ಪಣೆಯು.
ಅರಣ್ಯಕಾಂಡ 7 : 54 (OCVKN)
ಎಂಟನೆಯ ದಿನದಲ್ಲಿ ಮನಸ್ಸೆ ಗೋತ್ರದ ಪ್ರಧಾನನಾದ ಪೆದಾಚೂರನ ಮಗ ಗಮಲಿಯೇಲನು ಅರ್ಪಿಸಿದನು.
ಅರಣ್ಯಕಾಂಡ 7 : 55 (OCVKN)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 56 (OCVKN)
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 57 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
ಅರಣ್ಯಕಾಂಡ 7 : 58 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 59 (OCVKN)
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಪೆದಾಚೂರನ ಮಗ ಗಮಲಿಯೇಲನ ಅರ್ಪಣೆಯು.
ಅರಣ್ಯಕಾಂಡ 7 : 60 (OCVKN)
ಒಂಬತ್ತನೆಯ ದಿನದಲ್ಲಿ ಬೆನ್ಯಾಮೀನನ ಗೋತ್ರದ ಪ್ರಧಾನನಾದ ಗಿದ್ಯೋನಿಯ ಮಗ ಅಬೀದಾನನು ಅರ್ಪಿಸಿದನು.
ಅರಣ್ಯಕಾಂಡ 7 : 61 (OCVKN)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 62 (OCVKN)
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 63 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
ಅರಣ್ಯಕಾಂಡ 7 : 64 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 65 (OCVKN)
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಗಿದ್ಯೋನಿಯ ಮಗ ಅಬೀದಾನನ ಅರ್ಪಣೆಯು.
ಅರಣ್ಯಕಾಂಡ 7 : 66 (OCVKN)
ಹತ್ತನೆಯ ದಿನದಲ್ಲಿ ದಾನನ ಗೋತ್ರದ ಪ್ರಧಾನವಾದ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಅರ್ಪಿಸಿದನು.
ಅರಣ್ಯಕಾಂಡ 7 : 67 (OCVKN)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 68 (OCVKN)
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 69 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
ಅರಣ್ಯಕಾಂಡ 7 : 70 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 71 (OCVKN)
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಅಮ್ಮೀಷದ್ದೈಯನ ಮಗ ಅಹೀಗೆಜೆರನ ಅರ್ಪಣೆಯು.
ಅರಣ್ಯಕಾಂಡ 7 : 72 (OCVKN)
ಹನ್ನೊಂದನೆಯ ದಿನದಲ್ಲಿ ಆಶೇರನ ಗೋತ್ರದ ಪ್ರಧಾನನಾದ ಒಕ್ರಾನನ ಮಗ ಪಗೀಯೇಲನು ಅರ್ಪಿಸಿದನು.
ಅರಣ್ಯಕಾಂಡ 7 : 73 (OCVKN)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
ಅರಣ್ಯಕಾಂಡ 7 : 74 (OCVKN)
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 75 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
ಅರಣ್ಯಕಾಂಡ 7 : 76 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತ,
ಅರಣ್ಯಕಾಂಡ 7 : 77 (OCVKN)
ಸಮಾಧಾನದ ಬಲಿಗಾಗಿ ಒಂದು ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಒಕ್ರಾನನ ಮಗ ಪಗೀಯೇಲನ ಅರ್ಪಣೆಯು.
ಅರಣ್ಯಕಾಂಡ 7 : 78 (OCVKN)
ಹನ್ನೆರಡನೆಯ ದಿನದಲ್ಲಿ ನಫ್ತಾಲಿಯ ಗೋತ್ರದ ಪ್ರಧಾನನಾದ ಏನಾನನ ಮಗ ಅಹೀರನು ಅರ್ಪಿಸಿದನು.
ಅರಣ್ಯಕಾಂಡ 7 : 79 (OCVKN)
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು,
ಅರಣ್ಯಕಾಂಡ 7 : 80 (OCVKN)
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
ಅರಣ್ಯಕಾಂಡ 7 : 81 (OCVKN)
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
ಅರಣ್ಯಕಾಂಡ 7 : 82 (OCVKN)
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
ಅರಣ್ಯಕಾಂಡ 7 : 83 (OCVKN)
ಸಮಾಧಾನದ ಸಮರ್ಪಣೆಯ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಏನಾನನ ಮಗ ಅಹೀರನ ಅರ್ಪಣೆಯು.
ಅರಣ್ಯಕಾಂಡ 7 : 84 (OCVKN)
ಇದು ಬಲಿಪೀಠದ ಪ್ರತಿಷ್ಠೆಗಾಗಿ ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು: ಬೆಳ್ಳಿಯ 12 ತಟ್ಟೆಗಳೂ, ಬೆಳ್ಳಿಯ 12 ಬಟ್ಟಲುಗಳೂ, ಬಂಗಾರದ 12 ಚಮಚಗಳೂ,
ಅರಣ್ಯಕಾಂಡ 7 : 85 (OCVKN)
ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು 130 ಶೆಕೆಲ್, ಒಂದೊಂದು ಬಟ್ಟಲಿನ ತೂಕವು 70 ಶೆಕೆಲ್. ಬೆಳ್ಳಿಯ ಎಲ್ಲಾ ಸಾಮಗ್ರಿಗಳ ತೂಕ ಪರಿಶುದ್ಧಸ್ಥಳದ ನೇಮದ ಪ್ರಕಾರ 2,400 ಶೆಕೆಲ್§ ಸುಮಾರು 28 ಕಿಲೋಗ್ರಾಂ .
ಅರಣ್ಯಕಾಂಡ 7 : 86 (OCVKN)
ಧೂಪ ತುಂಬಿದ್ದ 12 ಬಂಗಾರದ ಚಮಚಗಳು, ಪರಿಶುದ್ಧಸ್ಥಳದ ಪ್ರಕಾರ ಒಂದೊಂದಕ್ಕೆ 10 ಚಮಚಗಳ ಬಂಗಾರವೆಲ್ಲಾ 120 ಶೆಕೆಲ್* ಸುಮಾರು 1.4 ಕಿಲೋಗ್ರಾಂ ,
ಅರಣ್ಯಕಾಂಡ 7 : 87 (OCVKN)
ದಹನಬಲಿಗಾಗಿ ಇರುವ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ ಕುರಿಮರಿಗಳು 12, ಅವುಗಳೊಂದಿಗೆ ಧಾನ್ಯ ಸಮರ್ಪಣೆ. ದೋಷಪರಿಹಾರಕ ಬಲಿಗಾಗಿ 12 ಹೋತಗಳು,
ಅರಣ್ಯಕಾಂಡ 7 : 88 (OCVKN)
ಸಮಾಧಾನದ ಬಲಿಗಾಗಿರುವ ಒಟ್ಟು ಪಶುಗಳು: 24 ಹೋರಿಗಳು, 60 ಟಗರುಗಳು, 60 ಹೋತಗಳು, ಒಂದು ವರ್ಷದ ಗಂಡು ಕುರಿಮರಿಗಳು 60 ಅದನ್ನು ಅಭಿಷೇಕಿಸಿದ ತರುವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆ ಇದಾಗಿತ್ತು.
ಅರಣ್ಯಕಾಂಡ 7 : 89 (OCVKN)
ಮೋಶೆಯು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಾಗ, ಅವನು ಒಡಂಬಡಿಕೆಯ ಮಂಜೂಷದ ಮೇಲೆ ಇರುವ ಕರುಣಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವ ಧ್ವನಿಯನ್ನು ಮೋಶೆಯು ಕೇಳಿದನು. ಹೀಗೆ ದೇವರು ಅವನ ಸಂಗಡ ಮಾತನಾಡಿದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89