ಅರಣ್ಯಕಾಂಡ 36 : 1 (OCVKN)
ಚಲ್ಪಹಾದನ ಪುತ್ರಿಯರ ಸೊತ್ತಿನ ಹಕ್ಕು ಆಗ ಯೋಸೇಫನ ಪುತ್ರರ ಕುಟುಂಬದವರಾದ ಮನಸ್ಸೆಯ ಮಗನಾಗಿರುವ ಮಾಕೀರನ ಮಗನಾದ ಗಿಲ್ಯಾದನ ಮಕ್ಕಳ ಕುಟುಂಬಗಳ ಮುಖ್ಯಸ್ಥರು ಮೋಶೆ ಹಾಗೂ ಇಸ್ರಾಯೇಲರ ಕುಲನಾಯಕರ ಸಮೀಪಕ್ಕೆ ಬಂದು ಮಾತನಾಡಿ,
ಅರಣ್ಯಕಾಂಡ 36 : 2 (OCVKN)
“ಚೀಟುಹಾಕಿ ನಾಡನ್ನು ಇಸ್ರಾಯೇಲರಿಗೆ ಸೊತ್ತಾಗಿ ಕೊಡುವುದಕ್ಕೆ ಯೆಹೋವ ದೇವರು ನಮ್ಮ ಒಡೆಯನಾದ ನಿನಗೆ ಆಜ್ಞಾಪಿಸಿದರು. ನಮ್ಮ ಸಹೋದರನಾದ ಚಲ್ಪಹಾದನ ಸೊತ್ತನ್ನು ಅವನ ಪುತ್ರಿಯರಿಗೆ ಕೊಡಬೇಕೆಂದು ದೇವರಿಂದ ಅಪ್ಪಣೆಯಾಗಿತ್ತು.
ಅರಣ್ಯಕಾಂಡ 36 : 3 (OCVKN)
ಆದರೆ ಅವರು ಇಸ್ರಾಯೇಲರ ಬೇರೆ ಗೋತ್ರದವರಿಗೆ ಮದುವೆಯಾದರೆ, ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಸೊತ್ತಿನಿಂದ ಅವರನ್ನು ಮದುವೆಮಾಡಿಕೊಂಡ ಗೋತ್ರದವರಿಗೆ ಸೊತ್ತು ಹೋಗುತ್ತದೆ. ಇದರಿಂದ ನಮ್ಮ ಸೊತ್ತಿನ ಭಾಗ ಕಡಿಮೆಯಾಗಿ ಹೋಗುವುದು.
ಅರಣ್ಯಕಾಂಡ 36 : 4 (OCVKN)
ಇಸ್ರಾಯೇಲರಿಗೆ ಜೂಬಿಲಿ* ಜೂಬಿಲಿ ಎಂದರೆ ಐವತ್ತನೇ ವರ್ಷ ವರ್ಷ ಬಂದಾಗ ಅವರ ಸೊತ್ತು ಅವರು ಸೇರಿಕೊಳ್ಳುವ ಗೋತ್ರಕ್ಕೆ ಸೇರಿಕೊಳ್ಳುತ್ತದೆ. ಹೀಗೆ ಅವರ ಸೊತ್ತು ಅಂದರೆ, ನಮ್ಮ ಪಿತೃಗಳ ಗೋತ್ರದ ಸೊತ್ತಿನಿಂದ ತೆಗೆಯಲಾಗುವುದು.”
ಅರಣ್ಯಕಾಂಡ 36 : 5 (OCVKN)
ಆಗ ಮೋಶೆಯು ಯೆಹೋವ ದೇವರ ಆಜ್ಞೆಯಂತೆ ಇಸ್ರಾಯೇಲರಿಗೆ ಆಜ್ಞಾಪಿಸಿ, “ಯೋಸೇಫನ ಪುತ್ರರ ಗೋತ್ರದವರು ಸರಿಯಾಗಿ ಮಾತನಾಡುತ್ತಾರೆ.
ಅರಣ್ಯಕಾಂಡ 36 : 6 (OCVKN)
ಯೆಹೋವ ದೇವರು ಚಲ್ಪಹಾದನ ಪುತ್ರಿಯರ ವಿಷಯದಲ್ಲಿ ಆಜ್ಞಾಪಿಸಿದ ಮಾತು ಏನೆಂದರೆ: ಅವರು ತಮ್ಮ ಮನಸ್ಸು ಬಂದವರೊಂದಿಗೆ ಮದುವೆಮಾಡಿಕೊಳ್ಳಲಿ, ಆದರೆ ತಮ್ಮ ತಂದೆಯ ಕುಟುಂಬದ ಗೋತ್ರದವರಿಗೆ ಮಾತ್ರ ಮದುವೆ ಮಾಡಿಕೊಳ್ಳಬಹುದು.
ಅರಣ್ಯಕಾಂಡ 36 : 7 (OCVKN)
ಇಸ್ರಾಯೇಲರ ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರದ ಕೈಗೆ ಹೋಗಬಾರದು. ಏಕೆಂದರೆ ಇಸ್ರಾಯೇಲರು, ಒಬ್ಬೊಬ್ಬನು ತನ್ನ ಪಿತೃಗಳ ಗೋತ್ರದ ಸೊತ್ತನ್ನು ತಾನೇ ಹೊಂದಿರಬೇಕು.
ಅರಣ್ಯಕಾಂಡ 36 : 8 (OCVKN)
ಇದಕ್ಕಾಗಿ ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಪಿತೃಗಳ ಸೊತ್ತನ್ನು ಸ್ವಾಧೀನ ಮಾಡಿಕೊಳ್ಳುವಂತೆ ಇಸ್ರಾಯೇಲರ ಗೋತ್ರಗಳೊಳಗೆ ಸೊತ್ತನ್ನು ಹೊಂದಿರುವ ಒಬ್ಬೊಬ್ಬ ಪುತ್ರಿಯು ತನ್ನ ಪಿತೃವಿನ ಕುಟುಂಬದ ಗೋತ್ರದಲ್ಲಿರುವವನೊಂದಿಗೇ ಮದುವೆ ಮಾಡಿಕೊಳ್ಳಬೇಕು.
ಅರಣ್ಯಕಾಂಡ 36 : 9 (OCVKN)
ಒಂದು ಸೊತ್ತು ಒಂದು ಗೋತ್ರದಿಂದ ಮತ್ತೊಂದು ಗೋತ್ರಕ್ಕೆ ಹಸ್ತಾಂತರಗೊಳ್ಳಬಾರದು ಆದರೆ ಇಸ್ರಾಯೇಲರ ಗೋತ್ರಗಳಲ್ಲಿ ಒಬ್ಬೊಬ್ಬನು ತನ್ನ ಸೊತ್ತಿಗೆ ತಾನೇ ಹೊಂದಿಕೊಳ್ಳಬೇಕು,” ಎಂದನು.
ಅರಣ್ಯಕಾಂಡ 36 : 10 (OCVKN)
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಚಲ್ಪಹಾದನ ಪುತ್ರಿಯರು ಮಾಡಿದರು.
ಅರಣ್ಯಕಾಂಡ 36 : 11 (OCVKN)
ಚಲ್ಪಹಾದನ ಪುತ್ರಿಯರಾದ ಮಹ್ಲಾ, ತಿರ್ಚಾ, ಹೊಗ್ಲಾ, ಮಿಲ್ಕಾ, ನೋವಾ, ತಮ್ಮ ಚಿಕ್ಕಪ್ಪಂದಿರ ಪುತ್ರರನ್ನು ಮದುವೆಯಾದರು.
ಅರಣ್ಯಕಾಂಡ 36 : 12 (OCVKN)
ಯೋಸೇಫನ ಮಗನಾದ ಮನಸ್ಸೆಯ ಪುತ್ರರ ಕುಟುಂಬದವರೊಡನೆ ಮದುವೆಯಾದರು. ಈ ಪ್ರಕಾರ ಅವರ ಸೊತ್ತು ತಮ್ಮ ಪಿತೃವಿನ ಗೋತ್ರದಲ್ಲಿಯೇ ಉಳಿಯಿತು.
ಅರಣ್ಯಕಾಂಡ 36 : 13 (OCVKN)
ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಮೂಲಕವಾಗಿ ಇಸ್ರಾಯೇಲರಿಗೆ ಆಜ್ಞಾಪಿಸಿದ ಆಜ್ಞೆಗಳೂ, ನ್ಯಾಯಗಳೂ ಇವೇ.
❮
❯
1
2
3
4
5
6
7
8
9
10
11
12
13