ಅರಣ್ಯಕಾಂಡ 29 : 1 (OCVKN)
ತುತೂರಿಗಳ ಹಬ್ಬ “ ‘ಏಳನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ನೀವು ಮಾಡಬಾರದು. ಅದು ನಿಮಗೆ ತುತೂರಿಗಳನ್ನು ಊದುವ ದಿವಸವಾಗಿರುವುದು.
ಅರಣ್ಯಕಾಂಡ 29 : 2 (OCVKN)
ನೀವು ಯೆಹೋವ ದೇವರಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ದಹನಬಲಿಯಾಗಿ ಅರ್ಪಿಸಬೇಕು.
ಅರಣ್ಯಕಾಂಡ 29 : 3 (OCVKN)
ಅವುಗಳಿಗೆ ಧಾನ್ಯ ಸಮರ್ಪಣೆಯಾಗಿ ಎಣ್ಣೆಯಿಂದ ಕಲಸಿದ ಹಿಟ್ಟನ್ನು ಹೋರಿಗೆ ಎಫಾದ ಹತ್ತನೇ ಮೂರು ಭಾಗ* ಸುಮಾರು ಐದು ಕಿಲೋಗ್ರಾಂ , ಟಗರಿಗೆ ಹತ್ತನೇ ಎರಡು ಭಾಗ † ಸುಮಾರು 3.2 ಕಿಲೋಗ್ರಾಂ ,
ಅರಣ್ಯಕಾಂಡ 29 : 4 (OCVKN)
ಆ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ‡ ಸುಮಾರು 1.6 ಕಿಲೋಗ್ರಾಂ ,
ಅರಣ್ಯಕಾಂಡ 29 : 5 (OCVKN)
ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
ಅರಣ್ಯಕಾಂಡ 29 : 6 (OCVKN)
ಇದಲ್ಲದೆ ಪ್ರತಿ ತಿಂಗಳಿನ ಮತ್ತು ನಿತ್ಯವಾದ ದಹನಬಲಿಗಳಿಗೆ ಹೆಚ್ಚುವರಿಯಾಗಿ ಅವುಗಳ ಧಾನ್ಯ ಅರ್ಪಣೆಯನ್ನು ಮತ್ತು ಪಾನ ಅರ್ಪಣೆಗಳನ್ನು ನಿರ್ದಿಷ್ಟಪಡಿಸಿದಂತೆ ಸಮರ್ಪಣೆಯಾಗಬೇಕು, ಅವು ಯೆಹೋವ ದೇವರಿಗೆ ಸುವಾಸನೆಗಾಗಿ ಅರ್ಪಿಸುವ ದಹನಬಲಿಯಾಗಿರುವುವು.
ಅರಣ್ಯಕಾಂಡ 29 : 7 (OCVKN)
ಪ್ರಾಯಶ್ಚಿತ್ತದ ದಿನ “ ‘ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯನ್ನು ಕೂಡಿಸಬೇಕು. ನೀವು ಎಲ್ಲವನ್ನು ವರ್ಜಿಸಿ, ಯಾವ ಕೆಲಸವನ್ನೂ ಮಾಡಬಾರದು.
ಅರಣ್ಯಕಾಂಡ 29 : 8 (OCVKN)
ಆದರೆ ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
ಅರಣ್ಯಕಾಂಡ 29 : 9 (OCVKN)
ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು, ಹೋರಿಗೆ ಎಫಾದ ಹತ್ತನೇ ಮೂರು ಭಾಗ§ ಸುಮಾರು ಐದು ಕಿಲೋಗ್ರಾಂ , ಟಗರಿಗೆ ಎಫಾದ ಹತ್ತನೇ ಎರಡು ಭಾಗ * ಸುಮಾರು 3.2 ಕಿಲೋಗ್ರಾಂ ,
ಅರಣ್ಯಕಾಂಡ 29 : 10 (OCVKN)
ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ† ಸುಮಾರು 1.6 ಕಿಲೋಗ್ರಾಂ ,
ಅರಣ್ಯಕಾಂಡ 29 : 11 (OCVKN)
ಪಾಪ ಪರಿಹಾರಕ ಬಲಿಗಾಗಿ ಒಂದು ಹೋತನ್ನು ಅರ್ಪಿಸುವದರ ಜೊತೆಗೆ ಪ್ರಾಯಶ್ಚಿತ್ತದ ಪಾಪ ಪರಿಹಾರಕ ಬಲಿಯನ್ನೂ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 12 (OCVKN)
ಗುಡಾರಗಳ ಹಬ್ಬ “ ‘ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ಮಾಡಬಾರದು. ಯೆಹೋವ ದೇವರಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು.
ಅರಣ್ಯಕಾಂಡ 29 : 13 (OCVKN)
ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಯಾಗಿ ಬಲಿಯನ್ನು ಅರ್ಪಿಸಬೇಕು. ಏನೆಂದರೆ, ದೋಷವಿಲ್ಲದ ಹದಿಮೂರು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
ಅರಣ್ಯಕಾಂಡ 29 : 14 (OCVKN)
ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಮೂರು ಭಾಗ‡ ಸುಮಾರು ಐದು ಕಿಲೋಗ್ರಾಂ , ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಎರಡು ಭಾಗ § ಸುಮಾರು 3.2 ಕಿಲೋಗ್ರಾಂ ,
ಅರಣ್ಯಕಾಂಡ 29 : 15 (OCVKN)
ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಒಂದು ಭಾಗ* ಸುಮಾರು 1.6 ಕಿಲೋಗ್ರಾಂ ,
ಅರಣ್ಯಕಾಂಡ 29 : 16 (OCVKN)
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆ ಮತ್ತು ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 17 (OCVKN)
“ ‘ಎರಡನೆಯ ದಿವಸದಲ್ಲಿ ಕಳಂಕವಿಲ್ಲದ ಹನ್ನೆರಡು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
ಅರಣ್ಯಕಾಂಡ 29 : 18 (OCVKN)
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
ಅರಣ್ಯಕಾಂಡ 29 : 19 (OCVKN)
ದೋಷಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 20 (OCVKN)
“ ‘ಮೂರನೆಯ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
ಅರಣ್ಯಕಾಂಡ 29 : 21 (OCVKN)
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
ಅರಣ್ಯಕಾಂಡ 29 : 22 (OCVKN)
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 23 (OCVKN)
“ ‘ನಾಲ್ಕನೆಯ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
ಅರಣ್ಯಕಾಂಡ 29 : 24 (OCVKN)
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ
ಅರಣ್ಯಕಾಂಡ 29 : 25 (OCVKN)
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 26 (OCVKN)
“ ‘ಐದನೆಯ ದಿವಸದಲ್ಲಿ ದೋಷವಿಲ್ಲದ ಒಂಬತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
ಅರಣ್ಯಕಾಂಡ 29 : 27 (OCVKN)
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯಪಾನ ಬಲಿಗಳನ್ನೂ,
ಅರಣ್ಯಕಾಂಡ 29 : 28 (OCVKN)
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 29 (OCVKN)
“ ‘ಆರನೆಯ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
ಅರಣ್ಯಕಾಂಡ 29 : 30 (OCVKN)
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
ಅರಣ್ಯಕಾಂಡ 29 : 31 (OCVKN)
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 32 (OCVKN)
“ ‘ಏಳನೆಯ ದಿವಸದಲ್ಲಿ ದೋಷವಿಲ್ಲದ ಏಳು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ
ಅರಣ್ಯಕಾಂಡ 29 : 33 (OCVKN)
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
ಅರಣ್ಯಕಾಂಡ 29 : 34 (OCVKN)
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 35 (OCVKN)
“ ‘ಎಂಟನೆಯ ದಿನದಲ್ಲಿ ನೀವು ಹಬ್ಬದ ಸಭೆಯಾಗಿ ಕೂಡಿಬರಬೇಕು. ದೈನಂದಿನ ಕೆಲಸವನ್ನು ನೀವು ಮಾಡಬಾರದು.
ಅರಣ್ಯಕಾಂಡ 29 : 36 (OCVKN)
ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ
ಅರಣ್ಯಕಾಂಡ 29 : 37 (OCVKN)
ಹೋರಿಗೆ, ಟಗರಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
ಅರಣ್ಯಕಾಂಡ 29 : 38 (OCVKN)
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 29 : 39 (OCVKN)
ಅರಣ್ಯಕಾಂಡ 29 : 40 (OCVKN)
“ ‘ಇದಲ್ಲದೆ ನಿಮ್ಮ ಹರಕೆಯನ್ನೂ ನಿಮ್ಮ ಉಚಿತವಾದ ಬಲಿಗಳನ್ನೂ ನಿಮ್ಮ ದಹನಬಲಿಗಳನ್ನೂ ನಿಮ್ಮ ಧಾನ್ಯಪಾನ ಅರ್ಪಣೆಗಳನ್ನೂ ನಿಮ್ಮ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಯೆಹೋವ ದೇವರಿಗೆ ಮಾಡತಕ್ಕೆ ಸಮರ್ಪಣೆಗಳು ಇವೇ.’ ” ಯೆಹೋವ ದೇವರು ತನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮೋಶೆಯು ಇಸ್ರಾಯೇಲರಿಗೆ ಹೇಳಿದನು.
❮
❯