ಅರಣ್ಯಕಾಂಡ 28 : 1 (OCVKN)
ನಿತ್ಯ ಬಲಿಗಳು ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
ಅರಣ್ಯಕಾಂಡ 28 : 2 (OCVKN)
“ನೀನು ಇಸ್ರಾಯೇಲರಿಗೆ ಆಜ್ಞಾಪಿಸಿ ಅವರಿಗೆ, ‘ನನಗೆ ಸುವಾಸನೆಗೋಸ್ಕರ ಅರ್ಪಿಸುವ ಅಂದರೆ, ದಹನಬಲಿಗಾಗಿ ಆಹಾರವನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವಂತೆ ನೀವು ನೋಡಿಕೊಳ್ಳಿರಿ.’
ಅರಣ್ಯಕಾಂಡ 28 : 3 (OCVKN)
ನೀನು ಅವರಿಗೆ ಹೇಳಬೇಕಾದದ್ದು: ‘ನೀವು ಯೆಹೋವ ದೇವರಿಗೆ ಅರ್ಪಿಸಬೇಕಾದ ಅರ್ಪಣೆ ಏನೆಂದರೆ, ನಿಯಮಿತವಾಗಿ ಪ್ರತಿದಿನ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನು ದಹನಬಲಿಯಾಗಿ ಅರ್ಪಿಸಬೇಕು.
ಅರಣ್ಯಕಾಂಡ 28 : 4 (OCVKN)
ಒಂದು ಕುರಿಮರಿಯನ್ನು ಮುಂಜಾನೆಯಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಸಮರ್ಪಿಸಬೇಕು.
ಅರಣ್ಯಕಾಂಡ 28 : 5 (OCVKN)
ಧಾನ್ಯ ಅರ್ಪಣೆಗಾಗಿ ಸುಮಾರು ಒಂದು ಲೀಟರ್[* ಹೀಬ್ರೂ ಭಾಷೆಯಲ್ಲಿ ಹಿನ್ನ ಕಾಲುಭಾಗ, ಅಂದರೆ ಸುಮಾರು 1 ಲೀಟರ್ ] ಕುಟ್ಟಿ ತೆಗೆದ ಓಲಿವ್ ಎಣ್ಣೆಯನ್ನು ಸುಮಾರು ಒಂದುವರೆ ಕಿಲೋಗ್ರಾಂ † ಹೀಬ್ರೂ ಭಾಷೆಯಲ್ಲಿ ಎಫಾದ ಹತ್ತನೇ ಒಂದು ಭಾಗ, ಅಂದರೆ ಸುಮಾರು 1.5 ಕಿಲೋಗ್ರಾಂ ಗೋಧಿಹಿಟ್ಟಿಗೆ ಬೆರೆಸಿ ಸಮರ್ಪಿಸಬೇಕು.
ಅರಣ್ಯಕಾಂಡ 28 : 6 (OCVKN)
ಇದು ಸೀನಾಯಿ ಪರ್ವತದಲ್ಲಿ ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ನೇಮಿಸಿದ ನಿತ್ಯ ದಹನಬಲಿಯು.
ಅರಣ್ಯಕಾಂಡ 28 : 7 (OCVKN)
ಒಂದು ಕುರಿಮರಿಯೊಂದಿಗೆ ಪರಿಶುದ್ಧ ಸ್ಥಳದಲ್ಲಿ ಒಂದು ಲೀಟರ್ ಹುದುಗಿದ ದ್ರಾಕ್ಷಾರಸದ ಪಾನದ ಅರ್ಪಣೆಯನ್ನು ಯೆಹೋವ ದೇವರಿಗೋಸ್ಕರ ಸುರಿಯಬೇಕು.
ಅರಣ್ಯಕಾಂಡ 28 : 8 (OCVKN)
ಎರಡನೆಯ ಕುರಿಮರಿಯನ್ನು ಸಂಜೆಯಲ್ಲಿ ಅರ್ಪಿಸಬೇಕು. ಅದರ ಧಾನ್ಯ ಸಮರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಬೆಳಿಗ್ಗೆ ಮಾಡಿದಂತೆಯೇ, ಯೆಹೋವ ದೇವರಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಮಾಡಿದ ಬಲಿಯನ್ನು ನೀನು ಅರ್ಪಿಸಬೇಕು.
ಅರಣ್ಯಕಾಂಡ 28 : 9 (OCVKN)
ಸಬ್ಬತ್ ದಿನದ ಸಮರ್ಪಣೆಗಳು “ ‘ಆದರೆ ಸಬ್ಬತ್ ದಿನದಲ್ಲಿ ಧಾನ್ಯ ಸಮರ್ಪಣೆಗಾಗಿ ದೋಷರಹಿತ ಒಂದು ವರ್ಷದ ಎರಡು ಕುರಿಮರಿಗಳನ್ನೂ, ಓಲಿವ್ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ‡ ಸುಮಾರು 3.2 ಕಿಲೋಗ್ರಾಂ ಗೋಧಿಹಿಟ್ಟನ್ನೂ, ಅದಕ್ಕೆ ತಕ್ಕ ಪಾನದ ಸಮರ್ಪಣೆಯನ್ನು ಮಾಡಬೇಕು.
ಅರಣ್ಯಕಾಂಡ 28 : 10 (OCVKN)
ನಿತ್ಯ ದಹನಬಲಿಯ ಹೊರತು, ಪ್ರತಿ ಸಬ್ಬತ್ ದಿನಕ್ಕೆ ತಕ್ಕ ದಹನಬಲಿಯೂ ಅದರ ಪಾನದ ಅರ್ಪಣೆಯೂ ಇದೇ.
ಅರಣ್ಯಕಾಂಡ 28 : 11 (OCVKN)
ತಿಂಗಳಿನ ಸಮರ್ಪಣೆಗಳು “ ‘ತಿಂಗಳುಗಳ ಆರಂಭದಲ್ಲಿ ನೀವು ಯೆಹೋವ ದೇವರಿಗೆ ದಹನಬಲಿಗಾಗಿ ದೋಷರಹಿತ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
ಅರಣ್ಯಕಾಂಡ 28 : 12 (OCVKN)
ಒಂದೊಂದು ಹೋರಿಗೆ ಧಾನ್ಯ ಅರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಮೂರು ಭಾಗ§ ಸುಮಾರು ಐದು ಕಿಲೋಗ್ರಾಂ ಹಿಟ್ಟನ್ನೂ, ಟಗರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಎರಡು ಭಾಗ * ಸುಮಾರು 1.3 ಲೀಟರ್ ಹಿಟ್ಟನ್ನೂ,
ಅರಣ್ಯಕಾಂಡ 28 : 13 (OCVKN)
ಕುರಿಮರಿಗೆ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಎಫಾದ ಹತ್ತನೇ ಒಂದು ಭಾಗ ಹಿಟ್ಟನ್ನೂ, ಯೆಹೋವ ದೇವರಿಗೆ ಸುವಾಸನೆಯ ದಹನಬಲಿಗಾಗಿ ಬೆಂಕಿಯಿಂದ ಮಾಡಿದ ಬಲಿಯೂ ಇದೇ.
ಅರಣ್ಯಕಾಂಡ 28 : 14 (OCVKN)
ಇವುಗಳಿಗೆ ತಕ್ಕ ಪಾನದ ಅರ್ಪಣೆಗಳು ಎಂದರೆ, ಹೋರಿಗೆ ಸುಮಾರು ಎರಡು ಲೀಟರ್† ಹೀಬ್ರೂ ಭಾಷೆಯಲ್ಲಿ ಅರ್ಧ ಹಿನ್, ಅಂದರೆ ಸುಮಾರು 2 ಲೀಟರ್ ದ್ರಾಕ್ಷಾರಸವು, ಟಗರಿಗೆ ಸುಮಾರು ಒಂದುವರೆ ಲೀಟರ್ [‡ ಹೀಬ್ರೂ ಭಾಷೆಯಲ್ಲಿ ಹಿನ್ನ ಮೂರನೇ ಒಂದು ಭಾಗ, ಅಂದರೆ ಸುಮಾರು 1.3 ಲೀಟರ್ ] ದ್ರಾಕ್ಷಾರಸವು, ಕುರಿಮರಿಗೆ ಸುಮಾರು ಒಂದು ಲೀಟರ್ [§ ಹೀಬ್ರೂ ಭಾಷೆಯಲ್ಲಿ ಹಿನ್ನ ಕಾಲುಭಾಗ, ಅಂದರೆ ಸುಮಾರು ಒಂದು ಲೀಟರ್ ] ದ್ರಾಕ್ಷಾರಸವು ಇರಬೇಕು. ಇದು ವರ್ಷದ ಪ್ರತಿ ತಿಂಗಳಿನ ಆರಂಭದಲ್ಲಿ * ತಿಂಗಳಿನ ಆರಂಭ ಎಂದರೆ ಅಮಾವಾಸ್ಯೆಯಲ್ಲಿ ಹೀಗೆ ದಹನಬಲಿಯನ್ನು ಅರ್ಪಿಸಬೇಕು.
ಅರಣ್ಯಕಾಂಡ 28 : 15 (OCVKN)
ಇದಲ್ಲದೆ ನಿತ್ಯ ದಹನಬಲಿಯ ಹೊರತು, ಯೆಹೋವ ದೇವರಿಗೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನೂ ಅದಕ್ಕೆ ತಕ್ಕ ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.
ಅರಣ್ಯಕಾಂಡ 28 : 16 (OCVKN)
ಪಸ್ಕಹಬ್ಬವು “ ‘ಆದರೆ ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನವು ಯೆಹೋವ ದೇವರ ಪಸ್ಕಹಬ್ಬವಾಗಿರಬೇಕು.
ಅರಣ್ಯಕಾಂಡ 28 : 17 (OCVKN)
ಆ ತಿಂಗಳ ಹದಿನೈದನೆಯ ದಿನವು ಹಬ್ಬವಾಗಿದೆ. ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು.
ಅರಣ್ಯಕಾಂಡ 28 : 18 (OCVKN)
ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು. ಯಾವ ತರವಾದ ಉದ್ಯೋಗವನ್ನು ನೀವು ಆ ದಿನದಲ್ಲಿ ಮಾಡಬೇಡಿರಿ.
ಅರಣ್ಯಕಾಂಡ 28 : 19 (OCVKN)
ಆದರೆ ನೀವು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ದಹನಬಲಿಯನ್ನು ಅರ್ಪಿಸಬೇಕು. ಯಾವುದೆಂದರೆ: ಎರಡು ಎಳೆಯ ಹೋರಿಗಳು, ಒಂದು ಟಗರು, ಒಂದು ವರ್ಷದ ಏಳು ಕುರಿಮರಿಗಳು. ಇವು ದೋಷವಿಲ್ಲದೆ ಪೂರ್ಣಾಂಗವಾಗಿಯೇ ಇರಬೇಕು.
ಅರಣ್ಯಕಾಂಡ 28 : 20 (OCVKN)
ಅವುಗಳ ಧಾನ್ಯ ಸಮರ್ಪಣೆಯನ್ನೂ, ಎಣ್ಣೆ ಕಲಸಿದ ಐದು ಕಿಲೋಗ್ರಾಂ† ಸುಮಾರು ಎಫಾದ ಹತ್ತನೇ ಮೂರು ಭಾಗ ಹಿಟ್ಟನ್ನು ಒಂದೊಂದು ಹೋರಿಗೆ, ಹತ್ತನೇ ಎರಡು ಭಾಗ ಟಗರಿಗೂ ಅರ್ಪಿಸಬೇಕು.
ಅರಣ್ಯಕಾಂಡ 28 : 21 (OCVKN)
ಮತ್ತು ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಸುಮಾರು ಒಂದುವರೆ ಕಿಲೋಗ್ರಾಂ‡ ಸುಮಾರು ಹತ್ತನೇ ಒಂದು ಭಾಗ ಅರ್ಪಿಸಬೇಕು.
ಅರಣ್ಯಕಾಂಡ 28 : 22 (OCVKN)
ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಅರ್ಪಿಸಬೇಕು.
ಅರಣ್ಯಕಾಂಡ 28 : 23 (OCVKN)
ನಿತ್ಯ ದಹನಬಲಿಯಾಗಿರುವ ಮುಂಜಾನೆಯ ದಹನಬಲಿಯ ಹೊರತಾಗಿ ಇವುಗಳನ್ನು ನೀವು ಅರ್ಪಿಸಬೇಕು.
ಅರಣ್ಯಕಾಂಡ 28 : 24 (OCVKN)
ಈ ಪ್ರಕಾರ ನೀವು ಏಳು ದಿವಸಗಳ ಮಟ್ಟಿಗೆ ಪ್ರತಿದಿನವೂ ಯೆಹೋವ ದೇವರಿಗೆ ಸುವಾಸನೆಗಾಗಿ ದಹನಬಲಿಯ ಆಹಾರವನ್ನು ಅರ್ಪಿಸಬೇಕು. ಅದನ್ನೂ ಅದಕ್ಕೆ ತಕ್ಕ ಪಾನಾರ್ಪಣೆಯನ್ನೂ ನಿತ್ಯವಾದ ದಹನಬಲಿಯ ಹೊರತಾಗಿ ಅರ್ಪಿಸಬೇಕು.
ಅರಣ್ಯಕಾಂಡ 28 : 25 (OCVKN)
ಏಳನೆಯ ದಿವಸದಲ್ಲಿ ಪರಿಶುದ್ಧವಾದ ಸಭೆ ಕೂಡಬೇಕು. ಆ ದಿನದಲ್ಲಿ ನೀವು ದೈನಂದಿನ ಉದ್ಯೋಗವನ್ನೂ ಮಾಡಬೇಡಿರಿ.
ಅರಣ್ಯಕಾಂಡ 28 : 26 (OCVKN)
ವಾರಗಳ ಹಬ್ಬ “ ‘ಪ್ರಥಮ ಫಲಗಳ ದಿವಸದಲ್ಲಿಯೂ ನೀವು ಯೆಹೋವ ದೇವರಿಗೆ ನಿಮ್ಮ ವಾರಗಳಲ್ಲಿ ಹೊಸ ಧಾನ್ಯ ಸಮರ್ಪಣೆಯನ್ನು ಅರ್ಪಿಸುವಾಗ, ಆ ದಿನದಲ್ಲಿ ನೀವು ಉದ್ಯೋಗವನ್ನೂ ಮಾಡದೆ ಪವಿತ್ರ ಸಭೆ ಕೂಡಬೇಕು.
ಅರಣ್ಯಕಾಂಡ 28 : 27 (OCVKN)
ನೀವು ಯೆಹೋವ ದೇವರಿಗೆ ಸುವಾಸನೆಯುಳ್ಳ ದಹನಬಲಿಯಾಗಿ ಎರಡು ಎಳೆಯ ಹೋರಿಗಳನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
ಅರಣ್ಯಕಾಂಡ 28 : 28 (OCVKN)
ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಸುಮಾರು ಐದು ಕಿಲೋಗ್ರಾಂ§ ಸುಮಾರು ಎಫಾದ ಹತ್ತನೇ ಮೂರು ಭಾಗ ಹಿಟ್ಟನ್ನು ಪ್ರತಿಯೊಂದು ಹೋರಿಗೆ, ಸುಮಾರು ಮೂರುವರೆ ಕಿಲೋಗ್ರಾಂ * ಸುಮಾರು ಹತ್ತನೇ ಎರಡು ಭಾಗ ಟಗರಿಗೂ
ಅರಣ್ಯಕಾಂಡ 28 : 29 (OCVKN)
ಏಳು ಕುರಿಮರಿಗಳಲ್ಲಿ ಸುಮಾರು ಒಂದುವರೆ ಕಿಲೋಗ್ರಾಂ† ಸುಮಾರು ಹತ್ತನೇ ಒಂದು ಭಾಗ ,
ಅರಣ್ಯಕಾಂಡ 28 : 30 (OCVKN)
ನಿಮಗೋಸ್ಕರ ಪ್ರಾಯಶ್ಚಿತ್ತಕ್ಕೆ ಒಂದು ಹೋತವನ್ನು ಸಮರ್ಪಿಸಬೇಕು.
ಅರಣ್ಯಕಾಂಡ 28 : 31 (OCVKN)
ನಿತ್ಯವಾದ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಹೊರತಾಗಿ ಇವುಗಳ ಜೊತೆಗೆ ನೀವು ದೋಷವಿಲ್ಲದ ಪ್ರಾಣಿಗಳನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31