ಅರಣ್ಯಕಾಂಡ 26 : 1 (OCVKN)
ಎರಡನೆಯ ಜನಗಣತಿ ವ್ಯಾಧಿಯ ತರುವಾಯ ಯೆಹೋವ ದೇವರು ಮೋಶೆಗೂ, ಆರೋನನ ಮಗನೂ, ಯಾಜಕನೂ ಆಗಿರುವ ಎಲಿಯಾಜರನ ಸಂಗಡ ಮಾತನಾಡಿ,
ಅರಣ್ಯಕಾಂಡ 26 : 2 (OCVKN)
“ಇಸ್ರಾಯೇಲರ ಸಮಸ್ತ ಸಮೂಹದವರಲ್ಲಿ ಇಪ್ಪತ್ತು ವರ್ಷವೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರನ್ನು ಯುದ್ಧಕ್ಕೆ ಹೋಗುವುದಕ್ಕೆ ಶಕ್ತರಾದವರೆಲ್ಲರನ್ನು ಜನಗಣತಿ ಮಾಡಿ ಅವರ ಗೋತ್ರಗಳ ಪ್ರಕಾರ ತೆಗೆದುಕೊಳ್ಳಿರಿ,” ಎಂದರು.
ಅರಣ್ಯಕಾಂಡ 26 : 3 (OCVKN)
ಆಗ ಮೋಶೆಯೂ ಯಾಜಕನಾದ ಎಲಿಯಾಜರನೂ ಮೋವಾಬಿನ ಬಯಲುಗಳಲ್ಲಿ ಯೆರಿಕೋವಿಗೆದುರಾಗಿ ಯೊರ್ದನಿನ ಹತ್ತಿರ ಅವರ ಸಂಗಡ ಮಾತನಾಡಿ,
ಅರಣ್ಯಕಾಂಡ 26 : 4 (OCVKN)
“ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇಪ್ಪತ್ತು ವರ್ಷದವರನ್ನೂ ಅದಕ್ಕೆ ಅಧಿಕವಾದ ಪ್ರಾಯವುಳ್ಳವರನ್ನೂ ಎಣಿಸಬೇಕು.” ಈಜಿಪ್ಟ್ ದೇಶದಿಂದ ಹೊರಟು ಬಂದಿದ್ದ ಇಸ್ರಾಯೇಲರು ಇವರು:
ಅರಣ್ಯಕಾಂಡ 26 : 5 (OCVKN)
ಇಸ್ರಾಯೇಲನ ಚೊಚ್ಚಲ ಮಗ ರೂಬೇನನೂ, ರೂಬೇನನ ಮಕ್ಕಳೂ; ಹನೋಕನೂ, ಇವನಿಂದ ಹನೋಕ್ಯರ ಕುಟುಂಬ; ಪಲ್ಲೂವಿನಿಂದ ಪಲ್ಲೂವಿಯರ ಕುಟುಂಬ;
ಅರಣ್ಯಕಾಂಡ 26 : 6 (OCVKN)
ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ; ಕರ್ಮೀಯಿಂದ ಕರ್ಮೀಯರ ಕುಟುಂಬ.
ಅರಣ್ಯಕಾಂಡ 26 : 7 (OCVKN)
ಇವೇ ರೂಬೇನ್ಯರ ಕುಟುಂಬಗಳು. ಇವರಲ್ಲಿ ಎಣಿಕೆಯಾದವರ ಸಂಖ್ಯೆ 43,730 ಪುರುಷರು.
ಅರಣ್ಯಕಾಂಡ 26 : 8 (OCVKN)
ಪಲ್ಲೂವಿನ ಪುತ್ರ ಎಲೀಯಾಬನು.
ಅರಣ್ಯಕಾಂಡ 26 : 9 (OCVKN)
ಎಲೀಯಾಬನ ಪುತ್ರರು ನೆಮೂಯೇಲ್, ದಾತಾನ್, ಅಬೀರಾಮ್. ಈ ದಾತಾನನೂ, ಅಬೀರಾಮನೂ ಜನರಲ್ಲಿ ಪ್ರಸಿದ್ಧರಾಗಿದ್ದು; ಕೋರಹನ ಗುಂಪಿನಲ್ಲಿದ್ದು; ಯೆಹೋವ ದೇವರಿಗೂ ಮೋಶೆ ಆರೋನರಿಗೂ ವಿರೋಧವಾಗಿ ಹೋರಾಡಿದರು.
ಅರಣ್ಯಕಾಂಡ 26 : 10 (OCVKN)
ಭೂಮಿಯು ತನ್ನ ಬಾಯಿಯನ್ನು ತೆರೆದು, ಅವರನ್ನು ಕೋರಹನೊಂದಿಗೆ ನುಂಗಿಬಿಟ್ಟಿತು. ಹಾಗೆಯೇ ಆ ಗುಂಪಿನವರಲ್ಲಿ ಬೆಂಕಿಯು ಇನ್ನೂರ ಐವತ್ತು ಮಂದಿಯನ್ನು ದಹಿಸಿಬಿಟ್ಟಿತು. ಹೀಗೆ ಇಸ್ರಾಯೇಲರಿಗೆ ಎಚ್ಚರಿಕೆ ಉಂಟಾಗುವಂತೆ ಮಾಡಿತು. ಅವರು ದೃಷ್ಟಾಂತವಾದರು.
ಅರಣ್ಯಕಾಂಡ 26 : 11 (OCVKN)
ಆದರೂ ಕೋರಹನ ಮಕ್ಕಳು ಸಾಯಲಿಲ್ಲ.
ಅರಣ್ಯಕಾಂಡ 26 : 12 (OCVKN)
ಕುಟುಂಬಗಳ ಪ್ರಕಾರ ಸಿಮೆಯೋನನ ಪುತ್ರರು. ನೆಮೂಯೇಲನಿಂದ ನೆಮೂಯೇಲ್ಯರ ಕುಟುಂಬ; ಯಾಮೀನನಿಂದ ಯಾಮೀನ್ಯರ ಕುಟುಂಬ; ಯಾಕೀನನಿಂದ ಯಾಕೀನ್ಯರ ಕುಟುಂಬ;
ಅರಣ್ಯಕಾಂಡ 26 : 13 (OCVKN)
ಜೆರಹನ ವಂಶಸ್ಥರಾದ ಜೆರಹಿಯರು, ಸೌಲನಿಂದ ಸೌಲ್ಯರ ಕುಟುಂಬ;
ಅರಣ್ಯಕಾಂಡ 26 : 14 (OCVKN)
ಸಿಮೆಯೋನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 22,200 ಪುರುಷರು.
ಅರಣ್ಯಕಾಂಡ 26 : 15 (OCVKN)
ಕುಟುಂಬಗಳ ಪ್ರಕಾರ ಗಾದನ ಮಕ್ಕಳು: ಚೆಫೋನನ ವಂಶಸ್ಥರಾದ ಚೆಫೋನ್ಯರು, ಹಗ್ಗೀಯಿಂದ ಹಗ್ಗೀಯರ ಕುಟುಂಬ ಶೂನೀಯಿಂದ ಶೂನೀಯರ ಕುಟುಂಬ;
ಅರಣ್ಯಕಾಂಡ 26 : 16 (OCVKN)
ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು,
ಅರಣ್ಯಕಾಂಡ 26 : 17 (OCVKN)
ಅರೋದನಿಂದ ಅರೋದ್ಯರ ಕುಟುಂಬ; ಅರೇಲೀಯಿಂದ ಅರೇಲೀಯರ ಕುಟುಂಬ.
ಅರಣ್ಯಕಾಂಡ 26 : 18 (OCVKN)
ಗಾದನ ಮಕ್ಕಳ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 40,500 ಪುರುಷರು.
ಅರಣ್ಯಕಾಂಡ 26 : 19 (OCVKN)
ಯೆಹೂದನ ಪುತ್ರರು: ಏರ್, ಓನಾನನೂ. ಆದರೆ ಏರನೂ ಓನಾನನೂ ಕಾನಾನ್ ದೇಶದಲ್ಲಿ ಸತ್ತರು.
ಅರಣ್ಯಕಾಂಡ 26 : 20 (OCVKN)
ಕುಟುಂಬಗಳ ಪ್ರಕಾರ ಯೆಹೂದನ ಪುತ್ರರು. ಶೇಲಹನಿಂದ ಶೇಲಾನ್ಯರ ಕುಟುಂಬ; ಪೆರೆಚನಿಂದ ಪೆರೆಚ್ಯರ ಕುಟುಂಬ; ಜೆರಹನಿಂದ ಜೆರಹಿಯರ ಕುಟುಂಬ;
ಅರಣ್ಯಕಾಂಡ 26 : 21 (OCVKN)
ಪೆರೆಚನ ಪುತ್ರರು, ಹೆಚ್ರೋನನಿಂದ ಹೆಚ್ರೋನ್ಯರ ಕುಟುಂಬ. ಹಾಮೂಲನಿಂದ ಹಾಮೂಲ್ಯರು ಕುಟುಂಬ
ಅರಣ್ಯಕಾಂಡ 26 : 22 (OCVKN)
ಯೆಹೂದನ ಕುಟುಂಬಗಳಲ್ಲಿ ಲೆಕ್ಕಿತರಾದವರ ಸಂಖ್ಯೆ 76,500 ಪುರುಷರು.
ಅರಣ್ಯಕಾಂಡ 26 : 23 (OCVKN)
ಕುಟುಂಬಗಳ ಪ್ರಕಾರ ಇಸ್ಸಾಕಾರನ ಪುತ್ರರು. ತೋಲನ ವಂಶಸ್ಥರಾದ ತೋಲಾಯರು, ಪುವ್ವನಿಂದ ಪೂನ್ಯರ ಕುಟುಂಬ;
ಅರಣ್ಯಕಾಂಡ 26 : 24 (OCVKN)
ಯಾಶೂಬನಿಂದ ಯಾಶೂಬ್ಯರ ಕುಟುಂಬ; ಶಿಮ್ರೋನನಿಂದ ಶಿಮ್ರೋನ್ಯರ ಕುಟುಂಬ.
ಅರಣ್ಯಕಾಂಡ 26 : 25 (OCVKN)
ಇಸ್ಸಾಕಾರನ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 64,300 ಪುರುಷರು.
ಅರಣ್ಯಕಾಂಡ 26 : 26 (OCVKN)
ಜೆಬುಲೂನನ ಪುತ್ರರು: ಕುಟುಂಬಗಳ ಪ್ರಕಾರ ಸೆರೆದನಿಂದ ಸೆರೆದ್ಯರ ಕುಟುಂಬ; ಏಲೋನನ ವಂಶಸ್ಥರಾದ ಏಲೋನ್ಯರು, ಯಹಲೇಲನಿಂದ ಯಹಲೇಲ್ಯರ ಕುಟುಂಬ.
ಅರಣ್ಯಕಾಂಡ 26 : 27 (OCVKN)
ಜೆಬುಲೂನ್ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 60,500 ಪುರುಷರು.
ಅರಣ್ಯಕಾಂಡ 26 : 28 (OCVKN)
ಕುಟುಂಬಗಳ ಪ್ರಕಾರ ಯೋಸೇಫನ ಪುತ್ರರು: ಮನಸ್ಸೆ, ಎಫ್ರಾಯೀಮ್.
ಅರಣ್ಯಕಾಂಡ 26 : 29 (OCVKN)
ಮನಸ್ಸೆಯ ಪುತ್ರರು: ಮಾಕೀರನಿಂದ ಮಾಕೀರ್ಯರ ಕುಟುಂಬ; ಮಾಕೀರನು ಗಿಲ್ಯಾದನನ್ನು ಪಡೆದನು. ಗಿಲ್ಯಾದನಿಂದ ಗಿಲ್ಯಾದ್ಯರ ಕುಟುಂಬ.
ಅರಣ್ಯಕಾಂಡ 26 : 30 (OCVKN)
ಗಿಲ್ಯಾದನ ಪುತ್ರರು ಇವರೇ. ಈಯೆಜೆರನಿಂದ ಈಯೆಜೆರ್ಯರ ಕುಟುಂಬ; ಹೇಲೆಕನಿಂದ ಹೇಲೆಕ್ಯರ ಕುಟುಂಬ;
ಅರಣ್ಯಕಾಂಡ 26 : 31 (OCVKN)
ಅಸ್ರೀಯೇಲನಿಂದ ಅಸ್ರೀಯೇಲ್ಯರ ಕುಟುಂಬ, ಶೆಕೆಮನಿಂದ ಶೆಕೆಮ್ಯರ ಕುಟುಂಬ;
ಅರಣ್ಯಕಾಂಡ 26 : 32 (OCVKN)
ಶೆಮೀದಾಯನಿಂದ ಶೆಮೀದಾಯರ ಕುಟುಂಬ; ಹೇಫೆರನಿಂದ ಹೇಫೆರ್ಯರ ಕುಟುಂಬ.
ಅರಣ್ಯಕಾಂಡ 26 : 33 (OCVKN)
ಹೇಫೆರನ ಮಗ ಚಲ್ಪಹಾದನಿಗೆ ಪುತ್ರರಿರಲಿಲ್ಲ. ಪುತ್ರಿಯರು ಇದ್ದರು. ಚಲ್ಪಹಾದನ ಪುತ್ರಿಯರ ಹೆಸರುಗಳು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ, ತಿರ್ಚಾ.
ಅರಣ್ಯಕಾಂಡ 26 : 34 (OCVKN)
ಮನಸ್ಸೆಯ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 52,700 ಪುರುಷರು.
ಅರಣ್ಯಕಾಂಡ 26 : 35 (OCVKN)
ಕುಟುಂಬಗಳ ಪ್ರಕಾರ ಎಫ್ರಾಯೀಮನ ಪುತ್ರರು: ಶೂತೆಲಹನಿಂದ ಶೂತೆಲಹ್ಯರ ಕುಟುಂಬ; ಬೆಕೆರನಿಂದ ಬೆಕೆರ್ಯರ ಕುಟುಂಬ; ತಹನನಿಂದ ತಹನಿಯರ ಕುಟುಂಬ.
ಅರಣ್ಯಕಾಂಡ 26 : 36 (OCVKN)
ಶೂತೆಲಹನ ಪುತ್ರರು: ಏರಾನನಿಂದ ಏರಾನ್ಯರ ಕುಟುಂಬ.
ಅರಣ್ಯಕಾಂಡ 26 : 37 (OCVKN)
ಎಫ್ರಾಯೀಮನ ಪುತ್ರರ ಎಫ್ರಾಯೀಮನ ಪುತ್ರರುಗಳು ಇವೇ. ಅವರಲ್ಲಿ ಲೆಕ್ಕಿತರಾದವರ ಸಂಖ್ಯೆ 32, 500 ಕುಟುಂಬಗಳ ಪ್ರಕಾರ ಯೋಸೇಫನ ಮಕ್ಕಳು ಇವರೇ.
ಅರಣ್ಯಕಾಂಡ 26 : 38 (OCVKN)
ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು: ಬೆಳಗನಿಂದ ಬೆಲಗ್ಯರ ಕುಟುಂಬ; ಅಷ್ಬೇಲನಿಂದ ಅಷ್ಬೇಲ್ಯರ ಕುಟುಂಬ; ಅಹೀರಾಮನಿಂದ ಅಹೀರಾಮ್ಯರ ಕುಟುಂಬ;
ಅರಣ್ಯಕಾಂಡ 26 : 39 (OCVKN)
ಶೂಫಾಮನಿಂದ ಶೂಫಾಮ್ಯರ ಕುಟುಂಬ; ಹೂಫಾಮನಿಂದ ಹೂಫಾಮ್ಯರ ಕುಟುಂಬ.
ಅರಣ್ಯಕಾಂಡ 26 : 40 (OCVKN)
ಬೆಳಗನ ಪುತ್ರರು ಆರ್ದನೂ ನಾಮಾನನೂ. ಅರ್ದನಿಂದ ಅರ್ದ್ಯರ ಕುಟುಂಬ; ನಾಮಾನನಿಂದ ನಾಮಾನ್ಯರ ಕುಟುಂಬ.
ಅರಣ್ಯಕಾಂಡ 26 : 41 (OCVKN)
ಕುಟುಂಬಗಳ ಪ್ರಕಾರ ಬೆನ್ಯಾಮೀನನ ಪುತ್ರರು ಇವರೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 45, 600
ಅರಣ್ಯಕಾಂಡ 26 : 42 (OCVKN)
ಕುಟುಂಬಗಳ ಪ್ರಕಾರ ದಾನನ ಪುತ್ರರು: ಶೂಹಾಮನಿಂದ ಶೂಹಾಮ್ಯರ ಕುಟುಂಬ; ಕುಟುಂಬಗಳ ಪ್ರಕಾರ ದಾನನ ಕುಟುಂಬಗಳು ಇವೇ.
ಅರಣ್ಯಕಾಂಡ 26 : 43 (OCVKN)
ಶೂಹಾಮ್ಯರ ಸಮಸ್ತ ಕುಟುಂಬಗಳಲ್ಲಿ ಲೆಕ್ಕಿತರಾದವರ ಸಂಖ್ಯೆ 64, 400
ಅರಣ್ಯಕಾಂಡ 26 : 44 (OCVKN)
ಕುಟುಂಬಗಳ ಪ್ರಕಾರ ಆಶೇರನ ಮಕ್ಕಳು: ಇಮ್ನಾಹನನಿಂದ ಇಮ್ನಾಹರ ಕುಟುಂಬ; ಇಷ್ವೀಯಿಂದ ಇಷ್ವೀಯರ ಕುಟುಂಬ; ಬೆರೀಯನಿಂದ ಬೆರೀಯರ ಕುಟುಂಬ.
ಅರಣ್ಯಕಾಂಡ 26 : 45 (OCVKN)
ಬೆರೀಯನ ಕುಮಾರರು: ಹೆಬೆರನಿಂದ ಹೆಬೆರ್ಯರ ಕುಟುಂಬ; ಮಲ್ಕೀಯೇಲನಿಂದ ಮಲ್ಕೀಯೇಲ್ಯರ ಕುಟುಂಬ.
ಅರಣ್ಯಕಾಂಡ 26 : 46 (OCVKN)
ಆಶೇರನ ಮಗಳ ಹೆಸರು ಸೆರಹ.
ಅರಣ್ಯಕಾಂಡ 26 : 47 (OCVKN)
ಲೆಕ್ಕಾನುಸಾರವಾದ ಆಶೇರನ ಪುತ್ರರ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 53, 400
ಅರಣ್ಯಕಾಂಡ 26 : 48 (OCVKN)
ಕುಟುಂಬಗಳ ಪ್ರಕಾರ ನಫ್ತಾಲಿಯ ಪುತ್ರರು: ಯಹಚೇಲನಿಂದ ಯಹಚೇಲ್ಯರ ಕುಟುಂಬ; ಗೂನೀಯ ವಂಶಸ್ಥರಾದ ಗೂನೀಯರು,
ಅರಣ್ಯಕಾಂಡ 26 : 49 (OCVKN)
ಯೇಚೆರನಿಂದ ಯೇಚೆರ್ಯರ ಕುಟುಂಬ; ಶಿಲ್ಲೇಮನಿಂದ ಶಿಲ್ಲೇಮ್ಯರ ಕುಟುಂಬ.
ಅರಣ್ಯಕಾಂಡ 26 : 50 (OCVKN)
ಕುಟುಂಬಗಳ ಪ್ರಕಾರ ನಫ್ತಾಲಿಯ ಕುಟುಂಬಗಳು ಇವೇ. ಇವರಲ್ಲಿ ಲೆಕ್ಕಿತರಾದವರು 45, 400
ಅರಣ್ಯಕಾಂಡ 26 : 51 (OCVKN)
ಇಸ್ರಾಯೇಲರಲ್ಲಿ ಲೆಕ್ಕಿತರಾದವರ ಸಂಖ್ಯೆ 6,01, 730
ಅರಣ್ಯಕಾಂಡ 26 : 52 (OCVKN)
ಯೆಹೋವ ದೇವರು ಮೋಶೆಗೆ,
ಅರಣ್ಯಕಾಂಡ 26 : 53 (OCVKN)
“ಇವರಿಗೆ ನಾಡನ್ನು ಹೆಸರುಗಳ ಲೆಕ್ಕದ ಪ್ರಕಾರ ಸೊತ್ತಾಗಿ ಹಂಚಿಕೊಡು.
ಅರಣ್ಯಕಾಂಡ 26 : 54 (OCVKN)
ಹೆಚ್ಚು ಮಂದಿಯುಳ್ಳ ಗೋತ್ರಕ್ಕೆ ಹೆಚ್ಚಾಗಿಯೂ ಕಡಿಮೆ ಮಂದಿಯುಳ್ಳ ಗೋತ್ರಕ್ಕೆ ಕಡಿಮೆಯಾಗಿಯೂ ಕೊಡು. ಹೀಗೆ ಒಬ್ಬೊಬ್ಬನಿಗೆ ತನ್ನ ಲೆಕ್ಕದ ಪ್ರಕಾರ ಅವನವನ ಸೊತ್ತನ್ನು ಹಂಚಿಕೊಡು.
ಅರಣ್ಯಕಾಂಡ 26 : 55 (OCVKN)
ಇದಲ್ಲದೆ ಚೀಟು ಹಾಕುವುದರಿಂದ ದೇಶವನ್ನು ಪಾಲುಮಾಡಬೇಕು. ತಮ್ಮ ಗೋತ್ರಗಳ ಕುಟುಂಬಗಳ ಹೆಸರುಗಳ ಪ್ರಕಾರ ಅವರು ತಮ್ಮ ಪಾಲನ್ನು ಪಡೆಯಬೇಕು.
ಅರಣ್ಯಕಾಂಡ 26 : 56 (OCVKN)
ಹೆಚ್ಚಾದ ಜನಕ್ಕೂ ಕಡಿಮೆಯಾದ ಜನಕ್ಕೂ ಅವರ ಸ್ವಾಸ್ತ್ಯವು ಚೀಟಿಯ ಪ್ರಕಾರ ಪಾಲಾಗಬೇಕು.”
ಅರಣ್ಯಕಾಂಡ 26 : 57 (OCVKN)
ಲೇವಿಯರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರು ಇವರೇ. ಗೇರ್ಷೋನನ ವಂಶದವರಾದ ಗೇರ್ಷೋನ್ಯರು, ಕೊಹಾತನಿಂದ ಕೊಹಾತ್ಯರ ಕುಟುಂಬ; ಮೆರಾರೀಯಿಂದ ಮೆರಾರೀಯರ ಕುಟುಂಬ.
ಅರಣ್ಯಕಾಂಡ 26 : 58 (OCVKN)
ಲೇವಿಯರ ಕುಟುಂಬಗಳು ಇವೇ. ಲಿಬ್ನೀಯರ ಕುಟುಂಬ; ಹೆಬ್ರೋನಿಯರ ಕುಟುಂಬ; ಮಹ್ಲೀಯರ ಕುಟುಂಬ; ಮೂಷೀಯರ ಕುಟುಂಬ; ಕೋರಹೀಯರ ಕುಟುಂಬ. ಕೊಹಾತನು ಅಮ್ರಾಮನನ್ನು ಪಡೆದನು.
ಅರಣ್ಯಕಾಂಡ 26 : 59 (OCVKN)
ಅಮ್ರಾಮನ ಹೆಂಡತಿಯ ಹೆಸರು ಯೋಕೆಬೆದಳು. ಆಕೆಯು ಈಜಿಪ್ಟಿನಲ್ಲಿ ಲೇವಿಯಿಂದ ಹುಟ್ಟಿದ ಮಗಳು. ಆಕೆಯು ಅಮ್ರಾಮನಿಗೆ ಆರೋನನನ್ನೂ ಮೋಶೆಯನ್ನೂ ಅವರ ಸಹೋದರಿಯಾದ ಮಿರ್ಯಾಮಳನ್ನೂ ಹೆತ್ತಳು.
ಅರಣ್ಯಕಾಂಡ 26 : 60 (OCVKN)
ಆರೋನನಿಗೆ ನಾದಾಬನೂ ಅಬೀಹೂ ಎಲಿಯಾಜರನೂ ಈತಾಮಾರನೂ ಹುಟ್ಟಿದರು.
ಅರಣ್ಯಕಾಂಡ 26 : 61 (OCVKN)
ಆದರೆ ನಾದಾಬನೂ ಅಬೀಹೂ ಯೆಹೋವ ದೇವರ ಮುಂದೆ ಆಜ್ಞಾಪಿಸದೇ ಇದ್ದ ಬೇರೆ ಅಗ್ನಿಯನ್ನು ಅರ್ಪಿಸಿದ್ದರಿಂದ ಸತ್ತರು.
ಅರಣ್ಯಕಾಂಡ 26 : 62 (OCVKN)
ಇವರಲ್ಲಿ ಲೆಕ್ಕಿತರಾದವರು ಒಂದು ತಿಂಗಳೂ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳ ಗಂಡಸರ ಸಂಖ್ಯೆ 23,000 ಆಗಿತ್ತು. ಇವರಿಗೆ ಇಸ್ರಾಯೇಲರಲ್ಲಿ ಸೊತ್ತು ದೊರೆಯದ ಕಾರಣ ಅವರು ಇಸ್ರಾಯೇಲರೊಳಗೆ ಲೆಕ್ಕಿತರಾಗಲಿಲ್ಲ.
ಅರಣ್ಯಕಾಂಡ 26 : 63 (OCVKN)
ಇವರನ್ನು ಮೋಶೆಯೂ ಯಾಜಕನಾದ ಎಲಿಯಾಜರನೂ ಇಸ್ರಾಯೇಲರಲ್ಲಿ ಯೆರಿಕೋ ಪಟ್ಟಣಕ್ಕೆದುರಾಗಿ ಯೊರ್ದನ್ ನದಿಯ ಮೇಲಿರುವ ಮೋವಾಬಿನ ಬೈಲುಗಳಲ್ಲಿ ಎಣಿಸಿದರು.
ಅರಣ್ಯಕಾಂಡ 26 : 64 (OCVKN)
ಆದರೆ ಮೋಶೆಯೂ ಯಾಜಕನಾದ ಆರೋನನೂ ಸೀನಾಯಿ ಮರುಭೂಮಿಯಲ್ಲಿ ಇಸ್ರಾಯೇಲರನ್ನು ಎಣಿಸಿದಾಗ, ಎಣಿಕೆಯಾದವರಲ್ಲಿ ಒಬ್ಬನಾದರೂ ಇವರ ಲೆಕ್ಕದಲ್ಲಿ ಸೇರಲಿಲ್ಲ.
ಅರಣ್ಯಕಾಂಡ 26 : 65 (OCVKN)
ಏಕೆಂದರೆ ಅವರು ಮರುಭೂಮಿಯಲ್ಲಿ ನಿಶ್ಚಯವಾಗಿ ಸಾಯಲಿ ಎಂದು ಯೆಹೋವ ದೇವರು ಅವರಿಗೆ ಹೇಳಿದ್ದರು. ಈ ಪ್ರಕಾರ ಯೆಫುನ್ನೆಯ ಮಗ ಕಾಲೇಬನೂ ನೂನನ ಮಗ ಯೆಹೋಶುವನೂ ಇವರನ್ನು ಬಿಟ್ಟು ಒಬ್ಬನೂ ಉಳಿಯಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65