ಅರಣ್ಯಕಾಂಡ 2 : 1 (OCVKN)
ಇಸ್ರಾಯೇಲರ ಗೋತ್ರಗಳು ಪಾಳೆಯದಲ್ಲಿ ಗುಡಾರಗಳನ್ನು ಹಾಕಿಕೊಳ್ಳುವ ಕ್ರಮ ಯೆಹೋವ ದೇವರು ಮಾತನಾಡಿ ಮೋಶೆ ಮತ್ತು ಆರೋನನಿಗೆ ಹೇಳಿದ್ದೇನೆಂದರೆ:
ಅರಣ್ಯಕಾಂಡ 2 : 2 (OCVKN)
“ಇಸ್ರಾಯೇಲರು ಒಬ್ಬೊಬ್ಬರಾಗಿ ಕುಟುಂಬಗಳ ಗುರುತುಗಳ ಪ್ರಕಾರ ತಮ್ಮ ತಮ್ಮ ದಂಡಿನ ಧ್ವಜಗಳ ಬಳಿಯಲ್ಲಿ ಇಳಿದುಕೊಳ್ಳಬೇಕು. ಅವರು ದೇವದರ್ಶನ ಗುಡಾರದ ಎದುರಿನಲ್ಲಿ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.”
ಅರಣ್ಯಕಾಂಡ 2 : 3 (OCVKN)
ದೇವದರ್ಶನ ಗುಡಾರದ ಪೂರ್ವದಿಕ್ಕಿನಲ್ಲಿ, ಸೂರ್ಯೋದಯದ ಕಡೆಗೆ ಯೆಹೂದ ದಂಡಿನ ಧ್ವಜದ ಬಳಿಯಲ್ಲಿ ತಮ್ಮ ಸೈನ್ಯಗಳ ಪ್ರಕಾರ ಇಳಿದುಕೊಳ್ಳಬೇಕು. ಯೆಹೂದ ಮಕ್ಕಳಿಗೆ ಅಮ್ಮೀನಾದಾಬನ ಮಗ ನಹಶೋನನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 4 (OCVKN)
ಅವನ ಸೈನಿಕರ ಸಂಖ್ಯೆ 74,600 ಮಂದಿ.
ಅರಣ್ಯಕಾಂಡ 2 : 5 (OCVKN)
ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಇಸ್ಸಾಕಾರನ ಗೋತ್ರದವರು. ಇಸ್ಸಾಕಾರನ ಮಕ್ಕಳಿಗೆ ಚೂವಾರನ ಮಗ ನೆತನೆಯೇಲ್ ಎಂಬ ಸೈನ್ಯಾಧಿಪತಿ.
ಅರಣ್ಯಕಾಂಡ 2 : 6 (OCVKN)
ಅವನ ಸೈನಿಕರ ಸಂಖ್ಯೆ 54,400 ಮಂದಿ.
ಅರಣ್ಯಕಾಂಡ 2 : 7 (OCVKN)
ಅವನ ಬಳಿಯಲ್ಲಿ ಇಳಿದುಕೊಳ್ಳುವವರು ಜೆಬುಲೂನ್ಯನ ಗೋತ್ರದವರು. ಜೆಬುಲೂನ್ಯನ ಮಕ್ಕಳಿಗೆ ಹೇಲೋನನ ಮಗ ಎಲೀಯಾಬನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 8 (OCVKN)
ಅವನ ಸೈನಿಕರ ಸಂಖ್ಯೆ 57,400 ಮಂದಿ.
ಅರಣ್ಯಕಾಂಡ 2 : 9 (OCVKN)
ಯೆಹೂದನ ಪಾಳೆಯದಲ್ಲಿ ಎಣಿಸಲಾದ ಅವರ ಸೈನಿಕರ ಸಂಖ್ಯೆ 1,86,400 ಮಂದಿ. ಅವರು ಮೊದಲು ಹೊರಡತಕ್ಕವರು.
ಅರಣ್ಯಕಾಂಡ 2 : 10 (OCVKN)
ದಕ್ಷಿಣ ದಿಕ್ಕಿನಲ್ಲಿ: ರೂಬೇನ್ ಕುಲದ ದಂಡಿಗೆ ಸೇರಿದವರು ಅವರವರ ಸೈನ್ಯಗಳ ಪ್ರಕಾರ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ರೂಬೇನನ ಮಕ್ಕಳಿಗೆ ಶೆದೇಯೂರನ ಮಗ ಎಲೀಚೂರನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 11 (OCVKN)
ಅವನ ಸೈನಿಕರ ಸಂಖ್ಯೆ 46,500 ಮಂದಿ.
ಅರಣ್ಯಕಾಂಡ 2 : 12 (OCVKN)
ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಸಿಮೆಯೋನನ ಗೋತ್ರದವರು. ಸಿಮೆಯೋನನ ಮಕ್ಕಳಿಗೆ ಚುರೀಷದ್ದೈಯನ ಮಗನಾದ ಶೆಲುಮೀಯೇಲನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 13 (OCVKN)
ಅವನ ಸೈನಿಕರ ಸಂಖ್ಯೆ 59,300 ಮಂದಿ.
ಅರಣ್ಯಕಾಂಡ 2 : 14 (OCVKN)
ತರುವಾಯ ಗಾದ್ ಗೋತ್ರದವರು. ಗಾದನ ಮಕ್ಕಳಿಗೆ ದೆವುಯೇಲನ ಮಗ ಎಲ್ಯಾಸಾಫನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 15 (OCVKN)
ಅವನ ಸೈನಿಕರ ಸಂಖ್ಯೆ 45,650 ಮಂದಿ.
ಅರಣ್ಯಕಾಂಡ 2 : 16 (OCVKN)
ರೂಬೇನನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,51,450 ಮಂದಿ. ಇವರು ಎರಡನೆಯ ದಂಡಾಗಿ ಹೊರಡಬೇಕು.
ಅರಣ್ಯಕಾಂಡ 2 : 17 (OCVKN)
ತರುವಾಯ ದೇವದರ್ಶನ ಗುಡಾರವೂ ಲೇವಿಯರ ಪಾಳೆಯವೂ ಪಾಳೆಯಗಳ ಮಧ್ಯದಲ್ಲಿ ಹೊರಡಬೇಕು. ಅವರು ಇಳಿದುಕೊಳ್ಳುವ ಪ್ರಕಾರವೇ, ತಮ್ಮ ತಮ್ಮ ಕಡೆಯಲ್ಲಿಯೂ ತಮ್ಮ ತಮ್ಮ ಧ್ವಜಗಳ ಪ್ರಕಾರವಾಗಿಯೂ ಹೊರಡಬೇಕು.
ಅರಣ್ಯಕಾಂಡ 2 : 18 (OCVKN)
ಎಫ್ರಾಯೀಮಿನವರ ಪಾಳೆಯದ ಧ್ವಜವು ಅವರ ಸೈನ್ಯಗಳ ಪ್ರಕಾರ ಪಶ್ಚಿಮದಲ್ಲಿರುವುದು: ಎಫ್ರಾಯೀಮನ ಮಕ್ಕಳಿಗೆ ಅಮ್ಮೀಹೂದನ ಮಗ ಎಲೀಷಾಮಾನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 19 (OCVKN)
ಅವನ ಸೈನಿಕರ ಸಂಖ್ಯೆ 40,500 ಮಂದಿ.
ಅರಣ್ಯಕಾಂಡ 2 : 20 (OCVKN)
ಅವರ ಬಳಿಯಲ್ಲಿ ಮನಸ್ಸೆ ಗೋತ್ರದವರು. ಮನಸ್ಸೆ ಮಕ್ಕಳಿಗೆ ಪೆದಾಚೂರನ ಮಗ ಗಮಲಿಯೇಲನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 21 (OCVKN)
ಅವನ ಸೈನಿಕರ ಸಂಖ್ಯೆ 32,200 ಮಂದಿ.
ಅರಣ್ಯಕಾಂಡ 2 : 22 (OCVKN)
ತರುವಾಯ ಬೆನ್ಯಾಮೀನ್ ಗೋತ್ರದವರು. ಬೆನ್ಯಾಮೀನನ ಮಕ್ಕಳಿಗೆ ಗಿದ್ಯೋನಿಯ ಮಗ ಅಬೀದಾನನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 23 (OCVKN)
ಅವನ ಸೈನಿಕರ ಸಂಖ್ಯೆ 35,400 ಮಂದಿ.
ಅರಣ್ಯಕಾಂಡ 2 : 24 (OCVKN)
ಎಫ್ರಾಯೀಮನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,08,100 ಮಂದಿ. ಇವರು ಮೂರನೆಯವರಾಗಿ ಹೊರಡತಕ್ಕವರು.
ಅರಣ್ಯಕಾಂಡ 2 : 25 (OCVKN)
ದಾನನ ದಂಡಿನ ಧ್ವಜವು ಅವರವರ ಸೈನ್ಯಗಳ ಪ್ರಕಾರವಾಗಿ ಉತ್ತರದಲ್ಲಿರುವರು: ದಾನನ ಮಕ್ಕಳಿಗೆ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 26 (OCVKN)
ಅವನ ಸೈನಿಕರ ಸಂಖ್ಯೆ 62,700 ಮಂದಿ.
ಅರಣ್ಯಕಾಂಡ 2 : 27 (OCVKN)
ಅವರ ಬಳಿಯಲ್ಲಿ ಇಳಿದುಕೊಳ್ಳುವವರು ಆಶೇರ್ ಗೋತ್ರದವರು. ಆಶೇರನ ಮಕ್ಕಳಿಗೆ ಒಕ್ರಾನನ ಮಗ ಪಗೀಯೇಲನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 28 (OCVKN)
ಅವನ ಸೈನಿಕರ ಸಂಖ್ಯೆ 41,500 ಮಂದಿ.
ಅರಣ್ಯಕಾಂಡ 2 : 29 (OCVKN)
ತರುವಾಯ ನಫ್ತಾಲಿ ಗೋತ್ರದವರು. ನಫ್ತಾಲಿ ಮಕ್ಕಳಿಗೆ ಏನಾನನ ಮಗ ಅಹೀರನು ಸೈನ್ಯಾಧಿಪತಿ.
ಅರಣ್ಯಕಾಂಡ 2 : 30 (OCVKN)
ಅವನ ಸೈನಿಕರ ಸಂಖ್ಯೆ 53,400 ಮಂದಿ.
ಅರಣ್ಯಕಾಂಡ 2 : 31 (OCVKN)
ದಾನನ ಪಾಳೆಯದಲ್ಲಿ ಎಣಿಸಲಾದ ಸೈನಿಕರ ಸಂಖ್ಯೆ 1,57,600 ಮಂದಿ. ಅವರು ತಮ್ಮ ಧ್ವಜಗಳ ಪ್ರಕಾರ ಕಡೆಯ ದಂಡಾಗಿ ಹೊರಡತಕ್ಕದ್ದು.
ಅರಣ್ಯಕಾಂಡ 2 : 32 (OCVKN)
ಇಸ್ರಾಯೇಲರಲ್ಲಿ ತಮ್ಮ ಕುಟುಂಬಗಳ ಪ್ರಕಾರವಾಗಿ ಎಣಿಕೆಯಾದವರು ಇವರೇ. ಪಾಳೆಯದೊಳಗೆ ಅವರವರ ಸೈನ್ಯಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ 6,03,550 ಮಂದಿ.
ಅರಣ್ಯಕಾಂಡ 2 : 33 (OCVKN)
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಲೇವಿಯರು ಇಸ್ರಾಯೇಲರೊಳಗೆ ಎಣಿಕೆಯಾಗಲಿಲ್ಲ.
ಅರಣ್ಯಕಾಂಡ 2 : 34 (OCVKN)
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಎಲ್ಲವನ್ನೂ ಮಾಡಿದರು. ಹಾಗೆಯೇ ತಮ್ಮ ಧ್ವಜಗಳ ಪ್ರಕಾರವೂ ತಮ್ಮ ತಮ್ಮ ವಂಶಗಳ ಪ್ರಕಾರವೂ ತಮ್ಮ ಕುಟುಂಬಗಳ ಪ್ರಕಾರವೂ ಪಾಳೆಯವನ್ನು ಹಾಕಿಕೊಳ್ಳುತ್ತಾ ಮುಂದುವರಿಯುತ್ತಿದ್ದರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34