ಅರಣ್ಯಕಾಂಡ 14 : 1 (OCVKN)
ಜನರ ದಂಗೆ ಆಗ ಜನರೆಲ್ಲರೂ ತಮ್ಮ ಸ್ವರವೆತ್ತಿ ಆ ರಾತ್ರಿಯೆಲ್ಲಾ ಅತ್ತರು.
ಅರಣ್ಯಕಾಂಡ 14 : 2 (OCVKN)
ಇಸ್ರಾಯೇಲರೆಲ್ಲರು ಮೋಶೆಗೂ ಆರೋನನಿಗೂ ವಿರೋಧವಾಗಿ ಗೊಣಗುಟ್ಟಿದರು. ಅವರು, “ನಾವು ಈಜಿಪ್ಟ್ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಮರುಭೂಮಿಯಲ್ಲಾದರೂ ಸತ್ತಿದ್ದರೆ ಚೆನ್ನಾಗಿತ್ತು.
ಅರಣ್ಯಕಾಂಡ 14 : 3 (OCVKN)
ನಾವು ಖಡ್ಗದಿಂದ ಕೊಲೆಯಾಗುವ ಹಾಗೆಯೂ ನಮ್ಮ ಹೆಂಡತಿಯರು ಮಕ್ಕಳು ಸುಲಿಗೆಯಾಗುವ ಹಾಗೆಯೂ ಯೆಹೋವ ದೇವರು ನಮ್ಮನ್ನು ಈ ದೇಶಕ್ಕೆ ಏಕೆ ಬರಮಾಡಿದ್ದಾರೆ? ಈಜಿಪ್ಟ್ ದೇಶಕ್ಕೆ ನಾವು ತಿರುಗಿ ಹೋಗುವುದು ನಮಗೆ ಒಳ್ಳೆಯದಲ್ಲವೋ?
ಅರಣ್ಯಕಾಂಡ 14 : 4 (OCVKN)
ನಾವು ನಾಯಕನನ್ನು ನೇಮಿಸಿಕೊಂಡು ಈಜಿಪ್ಟ್ ದೇಶಕ್ಕೆ ಹಿಂದಿರುಗೋಣ ಬನ್ನಿರಿ,” ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು.
ಅರಣ್ಯಕಾಂಡ 14 : 5 (OCVKN)
ಆಗ ಮೋಶೆಯೂ ಆರೋನನೂ ಇಸ್ರಾಯೇಲರ ಸಮಸ್ತ ಜನರ ಕೂಟದ ಮುಂದೆ ಅಡ್ಡಬಿದ್ದರು.
ಅರಣ್ಯಕಾಂಡ 14 : 6 (OCVKN)
ಇದಲ್ಲದೆ ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿದ್ದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು,
ಅರಣ್ಯಕಾಂಡ 14 : 7 (OCVKN)
ಇಸ್ರಾಯೇಲರ ಸಮಸ್ತ ಜನಸಮೂಹಕ್ಕೆ, “ಸಂಚರಿಸಿ ನೋಡುವುದಕ್ಕೆ ನಾವು ದಾಟಿಹೋದ ದೇಶವು ಅತ್ಯುತ್ತಮವಾದ ದೇಶವೇ.
ಅರಣ್ಯಕಾಂಡ 14 : 8 (OCVKN)
ಯೆಹೋವ ದೇವರು ನಮ್ಮನ್ನು ಇಷ್ಟಪಟ್ಟರೆ ಹಾಲೂ ಜೇನೂ ಹರಿಯುವ ದೇಶವಾಗಿರುವ ಆ ದೇಶಕ್ಕೆ ನಮ್ಮನ್ನು ಬರಮಾಡಿ, ಅದನ್ನು ನಮಗೆ ಕೊಡುವರು.
ಅರಣ್ಯಕಾಂಡ 14 : 9 (OCVKN)
ಆದ್ದರಿಂದ ನೀವಾದರೋ ಯೆಹೋವ ದೇವರಿಗೆ ತಿರುಗಿ ಬೀಳಬೇಡಿರಿ. ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ನುಂಗಿಬಿಡುವೆವು. ಅವರ ಆಶ್ರಯವು ಅವರ ಬಳಿಯಿಂದ ಹೋಯಿತು. ಯೆಹೋವ ದೇವರು ನಮ್ಮ ಸಂಗಡ ಇದ್ದಾರೆ, ಅವರಿಗೆ ಭಯಪಡಬೇಡಿರಿ,” ಎಂದರು.
ಅರಣ್ಯಕಾಂಡ 14 : 10 (OCVKN)
ಆಗ ಸಭೆಯವರೆಲ್ಲರೂ ಅವರಿಗೆ ಕಲ್ಲೆಸೆಯಬೇಕೆಂದಿದ್ದರು. ಯೆಹೋವ ದೇವರ ಮಹಿಮೆಯು ದೇವದರ್ಶನ ಗುಡಾರದಲ್ಲಿ ಇಸ್ರಾಯೇಲರಿಗೆಲ್ಲಾ ಪ್ರತ್ಯಕ್ಷವಾಯಿತು.
ಅರಣ್ಯಕಾಂಡ 14 : 11 (OCVKN)
ಆಗ ಯೆಹೋವ ದೇವರು ಮೋಶೆಗೆ, “ಈ ಜನರು ಎಷ್ಟರವರೆಗೆ ನನಗೆ ಕೋಪವನ್ನೆಬ್ಬಿಸುವರು? ನಾನು ಅವರ ಮಧ್ಯದಲ್ಲಿ ಮಾಡಿದ ಸಕಲ ಸೂಚಕಕಾರ್ಯಗಳನ್ನು ಕಣ್ಣಾರೆ ನೋಡಿಯೂ ನನ್ನನ್ನು ಎಷ್ಟು ಮಾತ್ರಕ್ಕು ನಂಬದೆ ಇರುವರು?
ಅರಣ್ಯಕಾಂಡ 14 : 12 (OCVKN)
ನಾನು ಅವರನ್ನು ವ್ಯಾಧಿಯಿಂದ ಹೊಡೆದು ನಿರ್ಮೂಲ ಮಾಡುವೆನು. ನಿನ್ನನ್ನು ಅವರಿಗಿಂತ ದೊಡ್ಡದಾದ ಮತ್ತು ಬಲವುಳ್ಳ ಜನಾಂಗವನ್ನಾಗಿ ಮಾಡುವೆನು,” ಎಂದರು.
ಅರಣ್ಯಕಾಂಡ 14 : 13 (OCVKN)
ಆಗ ಮೋಶೆ ಯೆಹೋವ ದೇವರಿಗೆ, “ಹಾಗಾದರೆ ಈ ಸುದ್ದಿಯನ್ನು ಈಜಿಪ್ಟಿನವರು ಕೇಳುವರು. ನೀವು ಅವರಿಂದ ಈ ಜನರನ್ನು ನಿಮ್ಮ ಶಕ್ತಿಯಿಂದ ಬರಮಾಡಿದೆಯಲ್ಲಾ!
ಅರಣ್ಯಕಾಂಡ 14 : 14 (OCVKN)
ಅವರು ಈ ದೇಶದ ನಿವಾಸಿಗಳಿಗೆ ಅದನ್ನು ಹೇಳುವರು. ನೀವು ಈ ಜನರ ಸಂಗಡ ಇದ್ದೀಯೆಂದೂ, ಯೆಹೋವ ದೇವರಾದ ನೀವೇ ಮುಖಾಮುಖಿಯಾಗಿ ಕಾಣಿಸಿಕೊಳ್ಳುತ್ತೀರಿ ಎಂದೂ ನೀವು ಹಗಲು ಹೊತ್ತಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ನಡೆಯುತ್ತೀರಿ ಎಂದೂ ನೀವಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಎಂದೂ ಅವರು ಈಗಾಗಲೇ ಕೇಳಿದ್ದಾರೆ.
ಅರಣ್ಯಕಾಂಡ 14 : 15 (OCVKN)
ಈಗ ನೀವು ಈ ಜನರನ್ನೆಲ್ಲಾ ಕೊಂದುಹಾಕಿದರೆ, ನಿಮ್ಮ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳು ನಿಮ್ಮ ವಿಷಯದಲ್ಲಿ,
ಅರಣ್ಯಕಾಂಡ 14 : 16 (OCVKN)
ಯೆಹೋವ ದೇವರು ಈ ಜನರನ್ನು ಅವರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶಕ್ಕೆ ತರಲಾರದ ಕಾರಣ ಅವರನ್ನು ಮರುಭೂಮಿಯಲ್ಲಿ ಕೊಂದುಹಾಕಿದರು,” ಎಂದು ಹೇಳುವರು.
ಅರಣ್ಯಕಾಂಡ 14 : 17 (OCVKN)
“ಈಗ ನೀವು ಹೇಳಿದ ಪ್ರಕಾರ ಯೆಹೋವ ದೇವರ ಶಕ್ತಿಯು ದೊಡ್ಡದಾಗಿರಲಿ ಎಂದು ನಾನು ಬೇಡುತ್ತೇನೆ.
ಅರಣ್ಯಕಾಂಡ 14 : 18 (OCVKN)
ಯೆಹೋವ ದೇವರು ದೀರ್ಘಶಾಂತನು, ಮಹಾ ಪ್ರೀತಿಯುಳ್ಳವನು, ತಿರುಗಿಬೀಳುವುದನ್ನು ಮತ್ತು ಪಾಪವನ್ನು ಕ್ಷಮಿಸುವಾತನು, ಆದರೂ ಅಪರಾಧಿಯನ್ನು ಶಿಕ್ಷಿಸದೆ ಬಿಡದವನೂ ತಂದೆಗಳ ದೋಷವನ್ನು ಮಕ್ಕಳ ಮೇಲೆಯೂ ಮೊಮ್ಮಕ್ಕಳ ಮೇಲೆಯೂ ಮೂರನೆಯ ಮತ್ತು ನಾಲ್ಕನೆಯ ತಲೆಗಳವರೆಗೂ ಶಿಕ್ಷಿಸುವಾತನೂ ಎಂದು ನೀವು ಹೇಳಿದ್ದೀರಲ್ಲಾ?
ಅರಣ್ಯಕಾಂಡ 14 : 19 (OCVKN)
ನಿಮ್ಮ ಪ್ರೀತಿಯು ದೊಡ್ಡದಾಗಿರುವ ಪ್ರಕಾರವೂ ನೀವು ಈಜಿಪ್ಟಿನಿಂದ ಇಲ್ಲಿಯವರೆಗೆ ಈ ಜನರ ಪಾಪಗಳನ್ನು ಮನ್ನಿಸಿದ ಪ್ರಕಾರ ಈಗಲೂ ಈ ಜನರ ಪಾಪವನ್ನು ಮನ್ನಿಸಿರಿ,” ಎಂದು ಬೇಡಿಕೊಂಡನು.
ಅರಣ್ಯಕಾಂಡ 14 : 20 (OCVKN)
ಆಗ ಯೆಹೋವ ದೇವರು, “ನಿನ್ನ ಮಾತಿನ ಪ್ರಕಾರ ಮನ್ನಿಸಿದ್ದೇನೆ.
ಅರಣ್ಯಕಾಂಡ 14 : 21 (OCVKN)
ಆದರೆ ನನ್ನ ಜೀವದಾಣೆ, ಭೂಮಿಯೆಲ್ಲಾ ಯೆಹೋವ ದೇವರ ಮಹಿಮೆಯಿಂದ ತುಂಬಿರುವುದು.
ಅರಣ್ಯಕಾಂಡ 14 : 22 (OCVKN)
ಏಕೆಂದರೆ ನನ್ನ ಮಹಿಮೆಯನ್ನೂ, ಈಜಿಪ್ಟ್ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ ನಾನು ಮಾಡಿದ ಸೂಚಕಕಾರ್ಯಗಳನ್ನೂ ನೋಡಿದ ಈ ಸಕಲ ಜನರು, ನನ್ನನ್ನು ಈಗ ಹತ್ತು ಸಾರಿ ಪರೀಕ್ಷಿಸಿ, ನನ್ನ ಮಾತನ್ನು ಕೇಳದೆ ಹೋದದ್ದರಿಂದ,
ಅರಣ್ಯಕಾಂಡ 14 : 23 (OCVKN)
ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ನಿಶ್ಚಯವಾಗಿ ಅವರು ನೋಡುವುದಿಲ್ಲ, ನನ್ನನ್ನು ಅಲಕ್ಷ್ಯ ಮಾಡಿದವರೆಲ್ಲರೂ ಅದನ್ನು ನೋಡುವುದಿಲ್ಲ.
ಅರಣ್ಯಕಾಂಡ 14 : 24 (OCVKN)
ಆದರೆ ನನ್ನ ಸೇವಕನಾದ ಕಾಲೇಬನಲ್ಲಿ ಬೇರೆ ಆತ್ಮವಿದ್ದುದರಿಂದಲೂ, ಅವನು ಹೃದಯಪೂರ್ವಕವಾಗಿ ನನ್ನನ್ನು ಹಿಂಬಾಲಿಸಿದ್ದುದರಿಂದಲೂ ಅವನು ಸಂಚರಿಸಿ ಬಂದ ಆ ದೇಶಕ್ಕೆ ಅವನನ್ನು ಸೇರಿಸುವೆನು. ಅವನ ಸಂತಾನವು ಅದನ್ನು ಸ್ವಾಧೀನಪಡಿಸಿಕೊಳ್ಳುವುದು.
ಅರಣ್ಯಕಾಂಡ 14 : 25 (OCVKN)
ಅಮಾಲೇಕ್ಯರೂ, ಕಾನಾನ್ಯರೂ ತಗ್ಗಿನಲ್ಲಿ ವಾಸ ಮಾಡುತ್ತಿರುವುದರಿಂದ ನಾಳೆ ನೀವು ತಿರುಗಿಕೊಂಡು, ಕೆಂಪುಸಮುದ್ರದ ಮಾರ್ಗವಾಗಿ ಮರುಭೂಮಿಗೆ ಹೊರಡಿರಿ,” ಎಂದರು.
ಅರಣ್ಯಕಾಂಡ 14 : 26 (OCVKN)
ಯೆಹೋವ ದೇವರು ಮೋಶೆ ಆರೋನನ ಸಂಗಡ ಮಾತನಾಡಿ,
ಅರಣ್ಯಕಾಂಡ 14 : 27 (OCVKN)
“ಈ ದುಷ್ಟಜನರು ನನಗೆ ವಿರೋಧವಾಗಿ ಗೊಣಗುಟ್ಟುವುದನ್ನು ನಾನು ಎಷ್ಟು ಕಾಲ ಸಹಿಸಲಿ? ಇಸ್ರಾಯೇಲರು ನನಗೆ ವಿರೋಧವಾಗಿ ಗೊಣಗುಟ್ಟಿದ್ದನ್ನು ನಾನು ಕೇಳಿದ್ದೇನೆ.
ಅರಣ್ಯಕಾಂಡ 14 : 28 (OCVKN)
ಆದ್ದರಿಂದ ನೀನು ಅವರಿಗೆ, ‘ನನ್ನ ಜೀವದಾಣೆ, ನೀವು ನನ್ನ ಕಿವಿಗಳು ಕೇಳುವಂತೆ ಮಾತನಾಡಿದ ಪ್ರಕಾರವೇ ನಿಮಗೆ ಮಾಡುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ.
ಅರಣ್ಯಕಾಂಡ 14 : 29 (OCVKN)
ಈ ಮರುಭೂಮಿಯಲ್ಲಿ ನನಗೆ ವಿರೋಧವಾಗಿ ಗೊಣಗುಟ್ಟಿದವರೆಲ್ಲರೂ ನಿಮ್ಮ ಪೂರ್ಣ ಸಂಖ್ಯೆಯ ಪ್ರಕಾರ ಎಣಿಸಿದ ಇಪ್ಪತ್ತು ವರುಷವೂ, ಅದಕ್ಕೆ ಮೇಲ್ಪಟ್ಟ ಪ್ರಾಯವುಳ್ಳವರೂ ಸತ್ತು ಹೋಗುವಿರಿ.
ಅರಣ್ಯಕಾಂಡ 14 : 30 (OCVKN)
ಯೆಫುನ್ನೆಯ ಮಗ ಕಾಲೇಬನೂ, ನೂನನ ಮಗ ಯೆಹೋಶುವನ ಹೊರತು ನಾನು ನಿಮ್ಮನ್ನು ವಾಸಮಾಡುವುದಕ್ಕೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶಕ್ಕೆ ನಿಸ್ಸಂದೇಹವಾಗಿ ನೀವೆಲ್ಲರೂ ಬಾರದೆ ಇರುವಿರಿ.
ಅರಣ್ಯಕಾಂಡ 14 : 31 (OCVKN)
ಆದರೆ ಸೆರೆಯಾಗುವರೆಂದು ನೀವು ಹೇಳಿದ ನಿಮ್ಮ ಮಕ್ಕಳನ್ನು ಅಲ್ಲಿಗೆ ತರುವೆನು, ನೀವು ಅಲಕ್ಷ್ಯಮಾಡಿದ ದೇಶವನ್ನು ಅವರು ಅನುಭವಿಸುವರು.
ಅರಣ್ಯಕಾಂಡ 14 : 32 (OCVKN)
ನಿಮ್ಮ ವಿಷಯವಾಗಿಯಾದರೋ ನಿಮ್ಮ ಹೆಣಗಳು ಈ ಮರುಭೂಮಿಯಲ್ಲಿ ಬೀಳುವುವು.
ಅರಣ್ಯಕಾಂಡ 14 : 33 (OCVKN)
ಇದಲ್ಲದೆ ನಿಮ್ಮ ಮಕ್ಕಳು ನಲವತ್ತು ವರುಷ ಮರುಭೂಮಿಯಲ್ಲಿ ಅಲೆದಾಡಿ, ನಿಮ್ಮ ಹೆಣಗಳು ಮರುಭೂಮಿಯಲ್ಲಿ ಹಾಳಾಗಿ ಹೋಗುವ ತನಕ ನಿಮ್ಮ ಅಪನಂಬಿಗಸ್ತಿಕೆಯನ್ನು ಅನುಭವಿಸುವಿರಿ.
ಅರಣ್ಯಕಾಂಡ 14 : 34 (OCVKN)
ನೀವು ಆ ದೇಶವನ್ನು ಪರೀಕ್ಷಿಸಿದ ನಲವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಲವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು, ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ.
ಅರಣ್ಯಕಾಂಡ 14 : 35 (OCVKN)
ಯೆಹೋವ ದೇವರಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಸೇರಿರುವ ಈ ದುಷ್ಟ ಸಭೆಗೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಮರುಭೂಮಿಯಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು,” ಎಂದರು.
ಅರಣ್ಯಕಾಂಡ 14 : 36 (OCVKN)
ದೇಶವನ್ನು ಪರೀಕ್ಷಿಸುವುದಕ್ಕೆ ಮೋಶೆಯ ಅಪ್ಪಣೆಯ ಮೇರೆಗೆ ಹಿಂದಿರುಗಿ, ಆ ದೇಶದ ವಿಷಯವಾಗಿ ಕೆಟ್ಟ ಸುದ್ದಿಯನ್ನು ಎಬ್ಬಿಸಿ, ಸಮಸ್ತ ಸಭೆಯನ್ನು ಮೋಶೆಗೆ ವಿರೋಧವಾಗಿ ಗೊಣಗುಟ್ಟುವಂತೆ ಮಾಡಿದರು.
ಅರಣ್ಯಕಾಂಡ 14 : 37 (OCVKN)
ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವ ದೇವರ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.
ಅರಣ್ಯಕಾಂಡ 14 : 38 (OCVKN)
ಆದರೆ ದೇಶವನ್ನು ಪರೀಕ್ಷಿಸುವುದಕ್ಕೆ ಹೋದ ಮನುಷ್ಯರೊಳಗೆ ಇಬ್ಬರಾದ ನೂನನ ಮಗ ಯೆಹೋಶುವನೂ, ಯೆಫುನ್ನೆಯ ಮಗ ಕಾಲೇಬನೂ ಉಳಿದರು.
ಅರಣ್ಯಕಾಂಡ 14 : 39 (OCVKN)
ಮೋಶೆಯು ಇಸ್ರಾಯೇಲರಿಗೆ ಈ ಮಾತುಗಳನ್ನು ಹೇಳಿದಾಗ, ಜನರು ಬಹಳವಾಗಿ ದುಃಖಪಟ್ಟರು.
ಅರಣ್ಯಕಾಂಡ 14 : 40 (OCVKN)
ಮರುದಿವಸ ಬೆಳಿಗ್ಗೆ ಅವರು ಎದ್ದು, ಬೆಟ್ಟದ ತುದಿಯ ಮೇಲಕ್ಕೆ ಏರಿ, “ಇಗೋ, ಯೆಹೋವ ದೇವರು ವಾಗ್ದಾನ ಮಾಡಿದ ಸ್ಥಳಕ್ಕೆ ಏರಿ ಹೋಗುವುದಕ್ಕೆ ಇದ್ದೇವೆ. ನಾವು ಪಾಪಮಾಡಿದ್ದೇವೆ,” ಎಂದರು.
ಅರಣ್ಯಕಾಂಡ 14 : 41 (OCVKN)
ಆಗ ಮೋಶೆಯು, “ನೀವು ಏಕೆ ಹೀಗೆ ಯೆಹೋವ ದೇವರ ಆಜ್ಞೆಯನ್ನು ಮೀರುತ್ತೀರಿ? ಅದು ಸಫಲವಾಗುವುದಿಲ್ಲ.
ಅರಣ್ಯಕಾಂಡ 14 : 42 (OCVKN)
ಯೆಹೋವ ದೇವರು ನಿಮ್ಮ ಸಂಗಡ ಇಲ್ಲ ಅದಕ್ಕಾಗಿ ನಿಮ್ಮ ಶತ್ರುಗಳು ನಿಮ್ಮನ್ನು ಪರಾಜಯಗೊಳಿಸದಂತೆ ಏರಿ ಹೋಗಬೇಡಿರಿ.
ಅರಣ್ಯಕಾಂಡ 14 : 43 (OCVKN)
ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿರುವುದರಿಂದ ನೀವು ಅವರ ಖಡ್ಗಕ್ಕೆ ತುತ್ತಾಗುವಿರಿ. ನೀವು ಯೆಹೋವ ದೇವರ ಕಡೆಯಿಂದ ತಿರುಗಿದ ಕಾರಣ, ಆತನು ನಿಮ್ಮ ಸಂಗಡ ಇರುವುದಿಲ್ಲ,” ಎಂದನು.
ಅರಣ್ಯಕಾಂಡ 14 : 44 (OCVKN)
ಆದರೆ ಅವರು ಹಟಮಾಡಿ, ಬೆಟ್ಟದ ತುದಿಯ ಮೇಲೆ ಏರಿಹೋದರು. ಆದರೆ ಯೆಹೋವ ದೇವರ ಒಡಂಬಡಿಕೆಯ ಮಂಜೂಷವೂ ಮೋಶೆಯೂ ಪಾಳೆಯದಿಂದ ಹೊರಡಲಿಲ್ಲ.
ಅರಣ್ಯಕಾಂಡ 14 : 45 (OCVKN)
ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ, ಕಾನಾನ್ಯರೂ ಇಳಿದು, ಅವರನ್ನು ಹೊಡೆದು, ಹೊರ್ಮಾದವರೆಗೆ* ಹೊರ್ಮಾ ಎಂದರೆ ವಿನಾಶ ಅಟ್ಟಿಬಿಟ್ಟರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45