ಮತ್ತಾಯನು 22 : 1 (OCVKN)
ಮದುವೆ ಔತಣದ ಸಾಮ್ಯ ಯೇಸು ಪುನಃ ಸಾಮ್ಯಗಳ ಮೂಲಕ ಅವರ ಕೂಡ ಮಾತನಾಡುತ್ತಾ:
ಮತ್ತಾಯನು 22 : 2 (OCVKN)
“ಪರಲೋಕ ರಾಜ್ಯವು ಮಗನ ಮದುವೆ ಮಾಡಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
ಮತ್ತಾಯನು 22 : 3 (OCVKN)
ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಸೇವಕರನ್ನು ಕಳುಹಿಸಿದನು. ಆದರೆ ಅವರು ಬರಲು ಒಪ್ಪಲಿಲ್ಲ.
ಮತ್ತಾಯನು 22 : 4 (OCVKN)
ಮತ್ತಾಯನು 22 : 5 (OCVKN)
“ಅವನು ಪುನಃ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ, ‘ಇಗೋ ಔತಣವು ಸಿದ್ಧವಾಗಿದೆ. ಶ್ರೇಷ್ಠ ಔತಣ ಮಾಡಿಸಿದ್ದೇನೆ: ಎಲ್ಲವೂ ಸಿದ್ಧವಾಗಿವೆ. ಮದುವೆಗೆ ಬನ್ನಿರಿ ಎಂದು ಆಹ್ವಾನಿತರಿಗೆ ಹೇಳಿರಿ,’ ಎಂದನು. “ಆದರೆ ಅವರು ಅದನ್ನು ಅಲಕ್ಷ್ಯಮಾಡಿ, ಒಬ್ಬನು ತನ್ನ ಹೊಲಕ್ಕೂ ಇನ್ನೊಬ್ಬನು ತನ್ನ ವ್ಯಾಪಾರಕ್ಕೂ ಹೊರಟು ಹೋದರು.
ಮತ್ತಾಯನು 22 : 6 (OCVKN)
ಉಳಿದವರು ಅವನ ಸೇವಕರನ್ನು ಹಿಡಿದು ಅವಮಾನಪಡಿಸಿ, ಅವರನ್ನು ಕೊಂದುಹಾಕಿದರು.
ಮತ್ತಾಯನು 22 : 7 (OCVKN)
ಆದರೆ ಅರಸನು ಅದನ್ನು ಕೇಳಿ ಬಹುಕೋಪಗೊಂಡು ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.
ಮತ್ತಾಯನು 22 : 8 (OCVKN)
“ತರುವಾಯ ಅವನು ತನ್ನ ಸೇವಕರಿಗೆ, ‘ಮದುವೆಯ ಔತಣ ಸಿದ್ಧವಾಗಿದೆ, ಆದರೆ ಆಹ್ವಾನಿತರು ಸಿದ್ಧರಾಗಿರಲಿಲ್ಲ.
ಮತ್ತಾಯನು 22 : 9 (OCVKN)
ಆದ್ದರಿಂದ ನೀವು ಮುಖ್ಯ ಬೀದಿಗಳಿಗೆ ಹೊರಟುಹೋಗಿ ಅಲ್ಲಿ ಕಂಡವರನ್ನೆಲ್ಲಾ ಮದುವೆಗೆ ಆಹ್ವಾನಿಸಿರಿ,’ ಎಂದನು.
ಮತ್ತಾಯನು 22 : 10 (OCVKN)
ಆಗ ಆ ಸೇವಕರು ಮುಖ್ಯ ಬೀದಿಗಳಿಗೆ ಹೋಗಿ ತಾವು ಕಂಡ ಕೆಟ್ಟವರನ್ನೂ ಒಳ್ಳೆಯವರನ್ನೂ ಕರೆತಂದರು. ಹೀಗೆ ಮದುವೆ ಮಂಟಪವು ಅತಿಥಿಗಳಿಂದ ತುಂಬಿಹೋಯಿತು.
ಮತ್ತಾಯನು 22 : 11 (OCVKN)
“ಅನಂತರ ಅರಸನು ಅತಿಥಿಗಳನ್ನು ನೋಡುವುದಕ್ಕಾಗಿ ಒಳಗೆ ಬಂದಾಗ, ಅಲ್ಲಿ ಮದುವೆಯ ವಸ್ತ್ರವಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಕಂಡನು.
ಮತ್ತಾಯನು 22 : 12 (OCVKN)
ಅರಸನು ಆ ಮನುಷ್ಯನಿಗೆ, ‘ಸ್ನೇಹಿತನೇ, ಮದುವೆಯ ವಸ್ತ್ರವಿಲ್ಲದೆ ನೀನು ಒಳಗೆ ಹೇಗೆ ಬಂದೆ?’ ಎಂದು ಕೇಳಲು ಅವನು ಸುಮ್ಮನಿದ್ದನು.
ಮತ್ತಾಯನು 22 : 13 (OCVKN)
ಮತ್ತಾಯನು 22 : 14 (OCVKN)
“ಆಗ ಅರಸನು ಸೇವಕರಿಗೆ, ‘ಅವನ ಕೈಕಾಲುಗಳನ್ನು ಕಟ್ಟಿ ತೆಗೆದುಕೊಂಡು ಹೊರಗೆ ಕತ್ತಲೆಯಲ್ಲಿ ಹಾಕಿರಿ. ಅಲ್ಲಿ ಹಲ್ಲು ಕಡಿಯುತ್ತಾ ಗೋಳಾಡುತ್ತಿರಲಿ,’ ಎಂದು ಹೇಳಿದನು.
ಮತ್ತಾಯನು 22 : 15 (OCVKN)
“ಹೀಗೆಯೇ ಆಹ್ವಾನಿತರಾದವರು ಅನೇಕರು, ಆದರೆ ಆಯ್ಕೆಯಾದವರು ಕೆಲವರು ಮಾತ್ರ,” ಎಂದನು. ಚಕ್ರವರ್ತಿಗೆ ತೆರಿಗೆ ಕೊಡುವುದು ಆಗ ಫರಿಸಾಯರು ಹೊರಟುಹೋಗಿ ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಆಲೋಚನೆ ಮಾಡಿಕೊಂಡರು.
ಮತ್ತಾಯನು 22 : 16 (OCVKN)
ಅವರು ತಮ್ಮ ಶಿಷ್ಯರನ್ನು ಹೆರೋದ್ಯರೊಂದಿಗೆ* ಈ ಜನರು ಹೆರೋದನ ತಲೆಮಾರಿನವರು ಮತ್ತು ರೋಮನ್ನರ ಆಳ್ವಿಕೆ ಬಯಸುವವರಾಗಿದ್ದರು ಯೇಸುವಿನ ಬಳಿಗೆ ಕಳುಹಿಸಿ, “ಬೋಧಕರೇ, ನೀವು ಸತ್ಯವಂತರು, ದೇವರ ಮಾರ್ಗವನ್ನು ಸತ್ಯದಿಂದಲೇ ಬೋಧಿಸುವವರು, ನೀವು ಯಾರನ್ನೂ ಲಕ್ಷ್ಯ ಮಾಡುವವರಲ್ಲ, ನೀವು ಮುಖದಾಕ್ಷಿಣ್ಯ ಮಾಡುವವರೂ ಅಲ್ಲ ಎಂದು ನಮಗೆ ಗೊತ್ತಿದೆ.
ಮತ್ತಾಯನು 22 : 17 (OCVKN)
ಆದ್ದರಿಂದ ಕೈಸರನಿಗೆ ತೆರಿಗೆ ರೋಮನವರು ಅಲ್ಲದವರು ತೆರಿಗೆ ಕಟ್ಟಬೇಕಾಗಿತ್ತು. ಕೊಡುವುದು ಧರ್ಮಸಮ್ಮತವೋ ಅಲ್ಲವೋ? ನಿಮ್ಮ ಅಭಿಪ್ರಾಯವೇನು? ನಮಗೆ ಹೇಳು,” ಎಂದರು.
ಮತ್ತಾಯನು 22 : 18 (OCVKN)
ಯೇಸು ಅವರ ಕುಯುಕ್ತಿಯನ್ನು ತಿಳಿದುಕೊಂಡು, “ಕಪಟಿಗಳೇ, ನೀವು ನನ್ನನ್ನೇಕೆ ಪರೀಕ್ಷಿಸುತ್ತೀರಿ?
ಮತ್ತಾಯನು 22 : 19 (OCVKN)
ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ,” ಎಂದರು. ಆಗ ಅವರು ಒಂದು ನಾಣ್ಯವನ್ನು ತಂದು ಕೊಟ್ಟರು.
ಮತ್ತಾಯನು 22 : 20 (OCVKN)
ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಇದರ ಮೇಲಿರುವ ಲಿಪಿ ಯಾರದು?” ಎಂದು ಕೇಳಿದರು.
ಮತ್ತಾಯನು 22 : 21 (OCVKN)
ಮತ್ತಾಯನು 22 : 22 (OCVKN)
ಅದಕ್ಕೆ ಅವರು, “ಕೈಸರನದು,” ಎಂದರು. ಆಗ ಯೇಸು, “ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಕೊಡಿರಿ,” ಎಂದರು.
ಮತ್ತಾಯನು 22 : 23 (OCVKN)
ಅವರು ಇದನ್ನು ಕೇಳಿ ಆಶ್ಚರ್ಯಪಟ್ಟು, ಯೇಸುವನ್ನು ಬಿಟ್ಟು ಹೊರಟು ಹೋದರು. ಪುನರುತ್ಥಾನದಲ್ಲಿ ಮದುವೆ ಬಗ್ಗೆ ಪ್ರಶ್ನೆ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಯೇಸುವಿನ ಬಳಿಗೆ ಬಂದು,
ಮತ್ತಾಯನು 22 : 24 (OCVKN)
“ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ವಿಧವೆಯನ್ನು ಮದುವೆಯಾಗಿ ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.
ಮತ್ತಾಯನು 22 : 25 (OCVKN)
ಹೀಗಿರಲಾಗಿ ನಮ್ಮಲ್ಲಿ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಮಾಡಿಕೊಂಡು ಸತ್ತನು. ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು.
ಮತ್ತಾಯನು 22 : 26 (OCVKN)
ಅದರಂತೆಯೇ ಎರಡನೆಯವನು ಮತ್ತು ಮೂರನೆಯವನು ಹೀಗೆ ಏಳನೆಯವನವರೆಗೂ ಸಂಭವಿಸಿತು.
ಮತ್ತಾಯನು 22 : 27 (OCVKN)
ಕಡೆಯದಾಗಿ, ಆ ಸ್ತ್ರೀಯೂ ಸತ್ತಳು.
ಮತ್ತಾಯನು 22 : 28 (OCVKN)
ಆದ್ದರಿಂದ, ಪುನರುತ್ಥಾನದ ಜೀವನದಲ್ಲಿ, ಆ ಏಳುಮಂದಿಯಲ್ಲಿ ಆಕೆ ಯಾರಿಗೆ ಹೆಂಡತಿಯಾಗಿರುವಳು? ಏಕೆಂದರೆ ಅವರೆಲ್ಲರೂ ಆಕೆಯನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದು ಕೇಳಿದರು.
ಮತ್ತಾಯನು 22 : 29 (OCVKN)
ಅದಕ್ಕೆ ಯೇಸು ಉತ್ತರವಾಗಿ, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದೀರಿ.
ಮತ್ತಾಯನು 22 : 30 (OCVKN)
ಏಕೆಂದರೆ ಪುನರುತ್ಥಾನದ ಜೀವನದಲ್ಲಿ ಅವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.
ಮತ್ತಾಯನು 22 : 31 (OCVKN)
ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ,
ಮತ್ತಾಯನು 22 : 32 (OCVKN)
‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಆಗಿದ್ದೇನೆ,’ ವಿಮೋ 3:6 ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ,” ಎಂದು ಹೇಳಿದರು.
ಮತ್ತಾಯನು 22 : 33 (OCVKN)
ಮತ್ತಾಯನು 22 : 34 (OCVKN)
ಜನಸಮೂಹದವರು ಇದನ್ನು ಕೇಳಿದಾಗ, ಯೇಸುವಿನ ಬೋಧನೆಗೆ ವಿಸ್ಮಯಗೊಂಡರು. ಮಹಾ ಆಜ್ಞೆ ಯೇಸು ಸದ್ದುಕಾಯರ ಬಾಯನ್ನು ಮುಚ್ಚಿದನೆಂದು ಫರಿಸಾಯರು ಕೇಳಿದಾಗ ಅವರು ಯೇಸುವಿನ ಬಳಿಗೆ ಬಂದರು.
ಮತ್ತಾಯನು 22 : 35 (OCVKN)
ಅವರಲ್ಲಿ ಮೋಶೆಯ ನಿಯಮ ಬೋಧಕನಾಗಿದ್ದ ಒಬ್ಬನು, ಯೇಸುವನ್ನು ಪರೀಕ್ಷಿಸುವುದಕ್ಕಾಗಿ,
ಮತ್ತಾಯನು 22 : 36 (OCVKN)
“ಬೋಧಕರೇ, ನಿಯಮದಲ್ಲಿ ಅತ್ಯಂತ ಮಹಾ ಆಜ್ಞೆ ಯಾವುದು?” ಎಂದು ಪ್ರಶ್ನಿಸಿದನು.
ಮತ್ತಾಯನು 22 : 37 (OCVKN)
ಯೇಸು ಅವನಿಗೆ, “ ‘ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’§ ಧರ್ಮೋ 6:5
ಮತ್ತಾಯನು 22 : 38 (OCVKN)
ಇದೇ ಅತ್ಯಂತ ಮಹಾ ಆಜ್ಞೆಯೂ ಮೊದಲನೆಯ ಆಜ್ಞೆಯೂ ಆಗಿದೆ.
ಮತ್ತಾಯನು 22 : 39 (OCVKN)
ಇದರಂತೆಯೇ ಇರುವ ಎರಡನೆಯ ಆಜ್ಞೆಯು: ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’* ಯಾಜಕ 19:18 ಎಂಬುದೇ.
ಮತ್ತಾಯನು 22 : 40 (OCVKN)
ಇಡೀ ನಿಯಮವೂ ಪ್ರವಾದಿಗಳ ಗ್ರಂಥಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಗೊಂಡಿವೆ,” ಎಂದರು.
ಮತ್ತಾಯನು 22 : 41 (OCVKN)
ಕ್ರಿಸ್ತನು ಯಾರ ಪುತ್ರನು ಫರಿಸಾಯರು ಕೂಡಿಬಂದಿದ್ದಾಗ ಯೇಸು ಅವರಿಗೆ,
ಮತ್ತಾಯನು 22 : 42 (OCVKN)
“ಕ್ರಿಸ್ತನ ವಿಷಯವಾಗಿ ನಿಮ್ಮ ಅಭಿಪ್ರಾಯವೇನು? ಆತನು ಯಾರ ಪುತ್ರನು?” ಎಂದು ಕೇಳಿದ್ದಕ್ಕೆ ಅವರು ಯೇಸುವಿಗೆ,
ಮತ್ತಾಯನು 22 : 43 (OCVKN)
“ದಾವೀದನ ಪುತ್ರನು,” ಎಂದರು.
ಮತ್ತಾಯನು 22 : 44 (OCVKN)
“ಹಾಗಾದರೆ ದಾವೀದನು ಆತ್ಮದಲ್ಲಿ ಆತನಿಗೆ, ‘ಕರ್ತನು’ ಎಂದು ಕರೆದು, “ ‘ಕರ್ತದೇವರು ನನ್ನ ಕರ್ತದೇವರಿಗೆ ಅಂದರೆ ತಂದೆಯಾದ ದೇವರು ಕ್ರಿಸ್ತ ಯೇಸುವಿಗೆ : “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದದಡಿಯಲ್ಲಿ ಹಾಕುವವರೆಗೆ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು,” ’ ಕೀರ್ತನೆ 110:1 ಎಂದು ಹೇಳಿದನಲ್ಲವೇ?
ಮತ್ತಾಯನು 22 : 45 (OCVKN)
ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರೇ’ ಎಂದು ಕರೆಯುವುದಾದರೆ, ಆತನು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದನು.
ಮತ್ತಾಯನು 22 : 46 (OCVKN)
ಅದಕ್ಕೆ ಯಾರೂ ಒಂದು ಮಾತನ್ನು ಸಹ ಯೇಸುವಿಗೆ ಉತ್ತರ ಕೊಡಲಾರದೆ ಹೋದರು. ಇದಲ್ಲದೆ ಆ ದಿನದಿಂದ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರಿಗೂ ಧೈರ್ಯ ಬರಲಿಲ್ಲ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46