ಮಾರ್ಕನು 11 : 1 (OCVKN)
ವಿಜಯದ ಪ್ರವೇಶ ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಕಡೆಗೆ ಇರುವ ಬೇತ್ಫಗೆ ಮತ್ತು ಬೇಥಾನ್ಯಕ್ಕೂ ಬಂದಾಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ,
ಮಾರ್ಕನು 11 : 2 (OCVKN)
“ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ. ನೀವು ಅದರೊಳಗೆ ಪ್ರವೇಶಿಸಿದ ಕೂಡಲೇ ಕಟ್ಟಿರುವ ಮತ್ತು ಯಾರೂ ಅದರ ಮೇಲೆ ಸವಾರಿ ಮಾಡದಿರುವ ಒಂದು ಕತ್ತೆಮರಿಯನ್ನು ಅಲ್ಲಿ ಕಾಣುವಿರಿ. ಅದನ್ನು ಬಿಚ್ಚಿ ಇಲ್ಲಿಗೆ ತೆಗೆದುಕೊಂಡು ಬನ್ನಿರಿ.
ಮಾರ್ಕನು 11 : 3 (OCVKN)
ಯಾವನಾದರೂ ನಿಮಗೆ, ‘ಏಕೆ ಹೀಗೆ ಮಾಡುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತದೇವರಿಗೆ ಅವಶ್ಯವಾಗಿದೆ, ಆತನು ಕೂಡಲೇ ಇದನ್ನು ಹಿಂದಕ್ಕೆ ಕಳುಹಿಸುವನು,’ ” ಎಂದು ಹೇಳಿರಿ ಎಂದರು.
ಮಾರ್ಕನು 11 : 4 (OCVKN)
ಆಗ ಅವರು ಹೊರಟುಹೋಗಿ ಬೀದಿಯಲ್ಲಿದ್ದ ಒಂದು ಮನೆಯ ಬಾಗಿಲಿನ ಹತ್ತಿರ ಕಟ್ಟಿದ್ದ ಕತ್ತೆಮರಿಯನ್ನು ಕಂಡರು. ಅವರು ಅದನ್ನು ಬಿಚ್ಚುತ್ತಿರುವಾಗ,
ಮಾರ್ಕನು 11 : 5 (OCVKN)
ಅಲ್ಲಿ ನಿಂತಿದ್ದ ಕೆಲವರು ಅವರಿಗೆ, “ಆ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಕೇಳಿದರು.
ಮಾರ್ಕನು 11 : 6 (OCVKN)
ಅದಕ್ಕೆ ಅವರು ಯೇಸು ತಮಗೆ ಹೇಳಿದ ಪ್ರಕಾರ ಉತ್ತರ ಕೊಡಲು, ಅವರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟರು.
ಮಾರ್ಕನು 11 : 7 (OCVKN)
ಶಿಷ್ಯರು ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ಅದರ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದಾಗ ಯೇಸು ಅದರ ಮೇಲೆ ಕುಳಿತುಕೊಂಡರು.
ಮಾರ್ಕನು 11 : 8 (OCVKN)
ಅನೇಕರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ತೋಟಗಳಿಂದ ರೆಂಬೆಗಳನ್ನು ಕಡಿದು ದಾರಿಯಲ್ಲಿ ಹರಡಿದರು.
ಮಾರ್ಕನು 11 : 9 (OCVKN)
ಮುಂದೆಯೂ ಹಿಂದೆಯೂ ಹೋಗುತ್ತಿದ್ದವರು ಕೂಗುತ್ತಾ, “ಹೊಸನ್ನ!”* ಕೀರ್ತನೆ 118:25,26 “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!”
ಮಾರ್ಕನು 11 : 10 (OCVKN)
“ಬರಲಿರುವ ನಮ್ಮ ತಂದೆಯಾದ ದಾವೀದನ ರಾಜ್ಯವು ಆಶೀರ್ವಾದ ಹೊಂದಲಿ!” “ಉನ್ನತದಲ್ಲಿ ಹೊಸನ್ನ!” ಎಂದು ಹೇಳಿದರು.
ಮಾರ್ಕನು 11 : 11 (OCVKN)
ಮಾರ್ಕನು 11 : 12 (OCVKN)
ಯೇಸು ಯೆರೂಸಲೇಮಿಗೆ ಹೋಗಿ ದೇವಾಲಯವನ್ನು ಪ್ರವೇಶಿಸಿದಾಗ ಸುತ್ತಲಿದ್ದ ಎಲ್ಲವುಗಳನ್ನು ನೋಡಿದರು. ಆಗ ಸಂಜೆಯಾಗಿದ್ದುದರಿಂದ ಯೇಸು ಹನ್ನೆರಡು ಮಂದಿಯೊಂದಿಗೆ ಬೇಥಾನ್ಯಕ್ಕೆ ಹೋದರು. ದೇವಾಲಯವನ್ನು ಶುದ್ಧೀಕರಿಸಿದ್ದು ಮರುದಿನ ಅವರು ಬೇಥಾನ್ಯದಿಂದ ಬರುತ್ತಿರುವಾಗ ಯೇಸುವಿಗೆ ಹಸಿವಾಯಿತು.
ಮಾರ್ಕನು 11 : 13 (OCVKN)
ಯೇಸು ಎಲೆಗಳಿದ್ದ ಒಂದು ಅಂಜೂರದ ಮರವನ್ನು ದೂರದಿಂದ ಕಂಡು ಒಂದು ವೇಳೆ ಅದರಲ್ಲಿ ಹಣ್ಣು ಏನಾದರೂ ಸಿಕ್ಕೀತೆಂದುಕೊಂಡರು. ಆದರೆ ಯೇಸು ಅದರ ಹತ್ತಿರ ಬಂದಾಗ ಎಲೆಗಳನ್ನು ಹೊರತು ಮತ್ತೇನೂ ಕಾಣಲಿಲ್ಲ. ಅದು ಅಂಜೂರ ಫಲದ ಕಾಲವಾಗಿರಲಿಲ್ಲ.
ಮಾರ್ಕನು 11 : 14 (OCVKN)
ಯೇಸು ಅದಕ್ಕೆ, “ಇನ್ನೆಂದಿಗೂ ಯಾರೂ ನಿನ್ನಿಂದ ಹಣ್ಣನ್ನು ತಿನ್ನದಿರಲಿ,” ಎಂದರು. ಅದನ್ನು ಅವರ ಶಿಷ್ಯರು ಕೇಳಿಸಿಕೊಂಡರು.
ಮಾರ್ಕನು 11 : 15 (OCVKN)
ತರುವಾಯ ಅವರು ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದ ಅಂಗಳದೊಳಗೆ ಹೋಗಿ ಅಲ್ಲಿ ಮಾರುತ್ತಿದ್ದವರನ್ನೂ ಕೊಂಡುಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಲಾರಂಭಿಸಿ, ಹಣ ವಿನಿಮಯ ಮಾಡುತ್ತಿದ್ದವರ ಮೇಜುಗಳನ್ನೂ ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು.
ಮಾರ್ಕನು 11 : 16 (OCVKN)
ಯಾರೂ ದೇವಾಲಯದ ಮಾರ್ಗವಾಗಿ ಯಾವುದನ್ನೂ ತೆಗೆದುಕೊಂಡು ಹೋಗದಂತೆ ತಡೆದರು.
ಮಾರ್ಕನು 11 : 17 (OCVKN)
ಯೇಸು ಅವರಿಗೆ ಬೋಧಿಸುತ್ತಾ, “ನನ್ನ ಮನೆಯು ಎಲ್ಲಾ ಜನಾಂಗಗಳಿಗೂ ‘ಪ್ರಾರ್ಥನೆಯ ಮನೆ’ ಯೆಶಾಯ 56:7 ಎಂದು ಕರೆಯಿಸಿಕೊಳ್ಳುವುದೆಂದು ಬರೆದಿದೆಯಲ್ಲವೇ? ಆದರೆ ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ,” ‡ ಯೆರೆ 7:11 ಎಂದು ಹೇಳಿದರು.
ಮಾರ್ಕನು 11 : 18 (OCVKN)
ಮಾರ್ಕನು 11 : 19 (OCVKN)
ಮುಖ್ಯಯಾಜಕರೂ ನಿಯಮ ಬೋಧಕರೂ ಅದನ್ನು ಕೇಳಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಆಲೋಚಿಸಿದರು. ಆದರೆ ಜನರೆಲ್ಲರೂ ಯೇಸುವಿನ ಬೋಧನೆಗೆ ಅತ್ಯಾಶ್ಚರ್ಯಪಟ್ಟದ್ದರಿಂದ ಅವರು ಯೇಸುವಿಗೆ ಭಯಪಟ್ಟರು.
ಮಾರ್ಕನು 11 : 20 (OCVKN)
ಸಂಜೆಯಾದಾಗ ಯೇಸು ಮತ್ತು ಅವರ ಶಿಷ್ಯರು ಪಟ್ಟಣದ ಹೊರಗೆ ಹೋದರು. ಬೆಳಿಗ್ಗೆ ಅವರು ಅದೇ ದಾರಿಯಲ್ಲಿ ಹೋಗುತ್ತಿದ್ದಾಗ ಆ ಅಂಜೂರ ಮರವು ಬೇರುಸಹಿತವಾಗಿ ಒಣಗಿರುವುದನ್ನು ಕಂಡರು.
ಮಾರ್ಕನು 11 : 21 (OCVKN)
ಆಗ ಪೇತ್ರನು ಜ್ಞಾಪಕಮಾಡಿಕೊಂಡು ಯೇಸುವಿಗೆ, “ಗುರುವೇ, ಇಗೋ! ನೀನು ಶಪಿಸಿದ ಅಂಜೂರದ ಮರವು ಒಣಗಿಹೋಗಿದೆ!” ಎಂದು ಹೇಳಿದನು.
ಮಾರ್ಕನು 11 : 22 (OCVKN)
ಯೇಸು ಉತ್ತರವಾಗಿ ಅವರಿಗೆ ಹೇಳಿದ್ದೇನೆಂದರೆ, “ದೇವರ ನಂಬಿಕೆ ನಿಮಗಿರಲಿ.§ ಅಥವಾ ದೇವರಲ್ಲಿ ನಂಬಿಕೆ ನಿಮಗಿರಲಿ.
ಮಾರ್ಕನು 11 : 23 (OCVKN)
ಏಕೆಂದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು,’ ಎಂದು ಹೇಳಿ ತಮ್ಮ ಹೃದಯದಲ್ಲಿ ಸಂಶಯಪಡದೆ ತಾವು ಹೇಳಿದಂತೆಯೇ ಆಗುವುದೆಂದು ನಂಬಿದರೆ ಅವರು ಹೇಳಿದಂತೆಯೇ ಅವರಿಗೆ ಆಗುವುದು.
ಮಾರ್ಕನು 11 : 24 (OCVKN)
ಆದಕಾರಣ, ನೀವು ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಎಲ್ಲವೂ ನಿಮಗೆ ಸಿಕ್ಕಿವೆಯೆಂದು ನಂಬಿರಿ. ಅವು ನಿಮಗೆ ಲಭಿಸುವವು.
ಮಾರ್ಕನು 11 : 25 (OCVKN)
ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರಿಗಾದರೂ ವಿರೋಧವಾದದ್ದು ನಿಮ್ಮಲ್ಲಿದ್ದರೆ ಕ್ಷಮಿಸಿರಿ. ಆಗ ಪರಲೋಕದಲ್ಲಿರುವ ನಿಮ್ಮ ತಂದೆಯೂ ಸಹ ನಿಮ್ಮ ಅಪರಾಧಗಳನ್ನು ಕ್ಷಮಿಸುವರು.
ಮಾರ್ಕನು 11 : 26 (OCVKN)
ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯೂ ನಿಮ್ಮ ಪಾಪಗಳನ್ನು ಕ್ಷಮಿಸುವುದಿಲ್ಲ ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.* ಕೆಲವು ಹಸ್ತಪ್ರತಿಗಳಲ್ಲಿ ಈ ವಾಕ್ಯ ಸೇರ್ಪಡೆಯಾಗಿರುವುದಿಲ್ಲ.
ಮಾರ್ಕನು 11 : 27 (OCVKN)
ಯೇಸುವಿನ ಅಧಿಕಾರವನ್ನು ಪ್ರಶ್ನಿಸಿದ್ದು ಯೇಸು ಮತ್ತು ಶಿಷ್ಯರು ಪುನಃ ಯೆರೂಸಲೇಮಿಗೆ ಬಂದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿರುವಾಗ, ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವಿನ ಬಳಿಗೆ ಬಂದು
ಮಾರ್ಕನು 11 : 28 (OCVKN)
ಯೇಸುವಿಗೆ, “ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಇವುಗಳನ್ನು ಮಾಡುವುದಕ್ಕೆ ನಿನಗೆ ಅಧಿಕಾರ ಕೊಟ್ಟವರು ಯಾರು?” ಎಂದು ಕೇಳಿದರು.
ಮಾರ್ಕನು 11 : 29 (OCVKN)
ಅದಕ್ಕೆ ಯೇಸು ಅವರಿಗೆ, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನಗೆ ಉತ್ತರ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ.
ಮಾರ್ಕನು 11 : 30 (OCVKN)
ಯೋಹಾನನಿಗೆ ದೀಕ್ಷಾಸ್ನಾನವನ್ನು ಕೊಡುವ ಅಧಿಕಾರ ಪರಲೋಕದಿಂದ ಬಂದದ್ದೋ ಇಲ್ಲವೇ ಮನುಷ್ಯರಿಂದಲೋ? ನನಗೆ ಉತ್ತರಕೊಡಿರಿ,” ಎಂದರು.
ಮಾರ್ಕನು 11 : 31 (OCVKN)
ಆಗ ಅವರು, “ಪರಲೋಕದಿಂದ ಎಂದು ನಾವು ಹೇಳಿದರೆ, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.
ಮಾರ್ಕನು 11 : 32 (OCVKN)
ಆದರೆ ನಾವು, ‘ಮನುಷ್ಯರಿಂದ ಬಂತು’ ಎಂದು ಹೇಳುವುದಾದರೆ, ನಮಗೆ ಜನರ ಭಯವಿದೆ. ಏಕೆಂದರೆ ಯೋಹಾನನು ನಿಜವಾಗಿಯೂ ಪ್ರವಾದಿ ಎಂದು ಎಲ್ಲರೂ ಎಣಿಸಿಕೊಂಡಿರುವರು,” ಎಂದು ತಮ್ಮಲ್ಲಿ ಚರ್ಚಿಸಿಕೊಂಡರು.
ಮಾರ್ಕನು 11 : 33 (OCVKN)
ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ,” ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದು ಅವರಿಗೆ ಉತ್ತರಕೊಟ್ಟರು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33