ಲೂಕನು 1 : 1 (OCVKN)
ಪೀಠಿಕೆ ಸನ್ಮಾನ್ಯ ಥೆಯೊಫಿಲರೇ, ನಮ್ಮ ಮಧ್ಯದಲ್ಲಿ ನಡೆದಿರುವ ಘಟನೆಗಳ ವರದಿಯನ್ನು ಬರೆದಿಡಲು ಅನೇಕರು ಪ್ರಯತ್ನಿಸಿದ್ದಾರೆ.
ಲೂಕನು 1 : 2 (OCVKN)
ಮೊದಲಿನಿಂದ ಕಣ್ಣಾರೆ ಕಂಡವರೂ ದೇವರ ವಾಕ್ಯದ ಸೇವಕರೂ ನಮಗೆ ಕೊಟ್ಟಿರುವ ರೀತಿಯಲ್ಲಿಯೇ ಬರೆದಿದ್ದಾರೆ.
ಲೂಕನು 1 : 3 (OCVKN)
ಆದ್ದರಿಂದ ನಾನು ಸಹ ಮೊದಲಿನಿಂದ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೋಧಿಸಿ, ಅವುಗಳನ್ನು ಕ್ರಮವಾಗಿ ನಿಮಗೆ ಬರೆಯುವುದು ಒಳ್ಳೆಯದೆಂದು ನನಗೆ ತೋಚಿತು.
ಲೂಕನು 1 : 4 (OCVKN)
ಹೀಗೆ ನಿಮಗೆ ಬೋಧಿಸಿರುವ ವಿಷಯಗಳು ಖಚಿತವೆಂದು ನಿಮಗೆ ತಿಳಿದುಬರುವುದು.
ಲೂಕನು 1 : 5 (OCVKN)
ಸ್ನಾನಿಕ ಯೋಹಾನನ ಜನನವನ್ನು ಮುಂತಿಳಿಸಿದ್ದು ಯೂದಾಯದ ಅರಸನಾಗಿದ್ದ ಹೆರೋದನ ದಿನಗಳಲ್ಲಿ, ಅಬೀಯನ ವರ್ಗಕ್ಕೆ* 24 ಯಾಜಕ ವರ್ಗದಲ್ಲಿ ಅಬೀಯನ ವರ್ಗವು ಒಂದಾಗಿತ್ತು. ಅಬೀಯನು ಎಂಟನೆಯ ವರ್ಗದ ಮುಖ್ಯಸ್ಥನಾಗಿದ್ದನು 1 ಪೂರ್ವ 24:7-18 ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಹೆಂಡತಿಯ ಹೆಸರು ಎಲಿಸಬೇತ್. ಇವಳು ಆರೋನನ ವಂಶದವಳು.
ಲೂಕನು 1 : 6 (OCVKN)
ಇವರಿಬ್ಬರೂ ಕರ್ತದೇವರ ಎಲ್ಲಾ ಆಜ್ಞೆಗಳನ್ನೂ ತೀರ್ಪುಗಳನ್ನೂ ತಪ್ಪಿಲ್ಲದೆ ಕೈಕೊಂಡು, ದೇವರ ಮುಂದೆ ನೀತಿವಂತರಾಗಿದ್ದರು.
ಲೂಕನು 1 : 7 (OCVKN)
ಆದರೆ ಎಲಿಸಬೇತಳು ಬಂಜೆಯಾದುದರಿಂದ ಅವರಿಗೆ ಮಕ್ಕಳಿರಲಿಲ್ಲ, ಇದಲ್ಲದೆ ಅವರಿಬ್ಬರೂ ಬಹಳ ವಯಸ್ಸಾದವರಾಗಿದ್ದರು.
ಲೂಕನು 1 : 8 (OCVKN)
ಹೀಗಿರಲಾಗಿ ಜಕರೀಯನು ತನ್ನ ವರ್ಗದ ಸರದಿಯ ಪ್ರಕಾರ ದೇವರ ಮುಂದೆ ಯಾಜಕ ಸೇವೆಯನ್ನು ಮಾಡುತ್ತಿದ್ದಾಗ,
ಲೂಕನು 1 : 9 (OCVKN)
ಯಾಜಕೋದ್ಯೋಗದ ಪದ್ಧತಿಯಂತೆ, ಅವನು ಕರ್ತದೇವರ ಆಲಯವನ್ನು ಪ್ರವೇಶಿಸಿ ಧೂಪವನ್ನು ಅರ್ಪಿಸುವದಕ್ಕೆ ಚೀಟು ಹಾಕಿದಾಗ, ಅದು ಅವನ ಪಾಲಿಗೆ ಬಿದ್ದಿತು.
ಲೂಕನು 1 : 10 (OCVKN)
ಧೂಪಾರ್ಪಣೆಯ ಸಮಯದಲ್ಲಿ ಸೇರಿದ ಜನರೆಲ್ಲರೂ ಹೊರಗೆ ಪ್ರಾರ್ಥಿಸುತ್ತಿದ್ದರು.
ಲೂಕನು 1 : 11 (OCVKN)
ಆಗ ಧೂಪವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ, ಕರ್ತದೇವರ ದೂತನು ಅವನಿಗೆ ಕಾಣಿಸಿಕೊಂಡನು.
ಲೂಕನು 1 : 12 (OCVKN)
ಜಕರೀಯನು ದೂತನನ್ನು ಕಂಡು, ಚಕಿತಗೊಂಡು ಭಯಭ್ರಾಂತನಾದನು.
ಲೂಕನು 1 : 13 (OCVKN)
ಆದರೆ ದೂತನು ಅವನಿಗೆ, “ಜಕರೀಯನೇ; ಭಯಪಡಬೇಡ, ದೇವರು ನಿನ್ನ ವಿಜ್ಞಾಪನೆಯನ್ನು ಕೇಳಿದ್ದಾರೆ. ನಿನ್ನ ಹೆಂಡತಿ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು, ನೀನು ಅವನಿಗೆ, ‘ಯೋಹಾನ’† ಯೋಹಾನ ಅಂದರೆ, ದೇವರ ದಯೆಯುಳ್ಳವನು ಎಂದು ಹೆಸರನ್ನಿಡಬೇಕು.
ಲೂಕನು 1 : 14 (OCVKN)
ಅನೇಕರು ಅವನ ಜನನಕ್ಕೆ ಸಂತೋಷಪಡುವರು, ನಿನಗೆ ಆನಂದವೂ ಉಲ್ಲಾಸವೂ ಆಗುವುದು,
ಲೂಕನು 1 : 15 (OCVKN)
ಅವನು ಕರ್ತದೇವರ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಕುಡಿಯುವುದಿಲ್ಲ, ಅವನು ತಾಯಿಯ ಗರ್ಭದಿಂದಲೇ ಪವಿತ್ರಾತ್ಮ ಭರಿತನಾಗಿರುವನು.
ಲೂಕನು 1 : 16 (OCVKN)
ಅವನು ಇಸ್ರಾಯೇಲರಲ್ಲಿ ಅನೇಕರನ್ನು ಅವರ ಕರ್ತದೇವರ ಕಡೆಗೆ ತಿರುಗಿಸುವನು.
ಲೂಕನು 1 : 17 (OCVKN)
ಅವನು ತಂದೆಯರ ಹೃದಯಗಳನ್ನು ಮಕ್ಕಳ ಕಡೆಗೂ ಅವಿಧೇಯರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ, ಕರ್ತ ದೇವರಿಗೋಸ್ಕರ ಜನರನ್ನು ಸಿದ್ಧಮಾಡುವುದಕ್ಕೆ ಎಲೀಯನ ಆತ್ಮದಿಂದಲೂ ಶಕ್ತಿಯಿಂದಲೂ ಕರ್ತದೇವರ ಮುಂದೆ ಹೋಗುವನು,” ಎಂದು ಹೇಳಿದನು.
ಲೂಕನು 1 : 19 (OCVKN)
ಜಕರೀಯನು ಆ ದೇವದೂತನಿಗೆ, “ಇದನ್ನು ನಾನು ಯಾವುದರಿಂದ ತಿಳಿದುಕೊಳ್ಳಲಿ? ನಾನು ಮುದುಕನು; ನನ್ನ ಹೆಂಡತಿಯೂ ಪ್ರಾಯ ಮೀರಿದವಳು,” ಎಂದನು. ಅದಕ್ಕೆ ಆ ದೂತನು ಉತ್ತರವಾಗಿ, “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು. ನಿನ್ನ ಸಂಗಡ ಮಾತನಾಡುವುದಕ್ಕೂ ಈ ಸಂತೋಷದ ವರ್ತಮಾನವನ್ನು ನಿನಗೆ ತಿಳಿಸುವುದಕ್ಕೂ ದೇವರು ನನ್ನನ್ನು ಕಳುಹಿಸಿದ್ದಾರೆ.
ಲೂಕನು 1 : 20 (OCVKN)
ಸಕಾಲದಲ್ಲಿ ನೆರವೇರುವ ನನ್ನ ಮಾತುಗಳನ್ನು ನೀನು ನಂಬದೆ ಹೋದಕಾರಣ, ಈ ಸಂಗತಿಗಳು ಈಡೇರುವ ದಿನದವರೆಗೆ ನೀನು ಮಾತನಾಡಲಾರದೆ ಮೂಕನಾಗಿರುವಿ,” ಎಂದನು.
ಲೂಕನು 1 : 21 (OCVKN)
ಆಗ, ಜಕರೀಯನಿಗಾಗಿ ಕಾದುಕೊಂಡಿದ್ದ ಜನರು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು.
ಲೂಕನು 1 : 22 (OCVKN)
ಜಕರೀಯನು ಹೊರಗೆ ಬಂದಾಗ, ಅವರೊಂದಿಗೆ ಏನೂ ಮಾತನಾಡಲಾಗಲಿಲ್ಲ. ಅವನು ಅವರಿಗೆ ಸನ್ನೆಮಾಡುತ್ತಾ ಮೂಕನಾಗಿಯೇ ಇದ್ದುದರಿಂದ, ಅವರು ದೇವಾಲಯದಲ್ಲಿ ಅವನಿಗೆ ಏನೋ ದರ್ಶನವಾಗಿರಬೇಕೆಂದು ಗ್ರಹಿಸಿದರು.
ಲೂಕನು 1 : 23 (OCVKN)
ತನ್ನ ಸೇವೆಯ ದಿನಗಳು ಮುಗಿದ ನಂತರ, ಜಕರೀಯನು ತನ್ನ ಮನೆಗೆ ಹೊರಟುಹೋದನು.
ಲೂಕನು 1 : 24 (OCVKN)
ಕೆಲವು ದಿನಗಳಾದ ಮೇಲೆ, ಅವನ ಹೆಂಡತಿ ಎಲಿಸಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು.
ಲೂಕನು 1 : 25 (OCVKN)
ಅವಳು, “ಜನರಲ್ಲಿ ನನಗಿದ್ದ ಅವಮಾನವನ್ನು ತೆಗೆದುಹಾಕುವುದಕ್ಕಾಗಿ ಕರ್ತದೇವರು ನನ್ನ ಮೇಲೆ ದಯೆತೋರಿಸಿ ಈ ದಿನಗಳಲ್ಲಿ ನನಗೆ ಹೀಗೆ ಮಾಡಿದ್ದಾರೆ,” ಎಂದು ಹೇಳಿದಳು.
ಲೂಕನು 1 : 26 (OCVKN)
ದೇವದೂತನು ಯೇಸುವಿನ ಜನನವನ್ನು ಮುಂತಿಳಿಸಿದ್ದು ಎಲಿಸಬೇತಳು ಗರ್ಭಿಣಿಯಾದ ಆರನೆಯ ತಿಂಗಳಲ್ಲಿ, ಗಲಿಲಾಯ ಪ್ರಾಂತದ ನಜರೇತೆಂಬ ಊರಿಗೆ, ದೇವರು ಗಬ್ರಿಯೇಲನೆಂಬ ದೇವದೂತನನ್ನು,
ಲೂಕನು 1 : 27 (OCVKN)
ದಾವೀದನ ವಂಶದ ಯೋಸೇಫನಿಗೆ, ನಿಶ್ಚಯವಾಗಿದ್ದ ಮರಿಯಳೆಂಬ ಒಬ್ಬ ಕನ್ನಿಕೆಯ ಬಳಿಗೆ ಕಳುಹಿಸಿದರು.
ಲೂಕನು 1 : 28 (OCVKN)
ಆ ದೇವದೂತನು ಆಕೆಗೆ, “ಅತ್ಯಂತ ದಯೆ ಹೊಂದಿದವಳೇ! ನಿನಗೆ ಶುಭವಾಗಲಿ, ಪ್ರಭುವು ನಿನ್ನೊಂದಿಗಿದ್ದಾರೆ,” ಎಂದು ಹೇಳಿದನು.
ಲೂಕನು 1 : 29 (OCVKN)
ಮರಿಯಳು ದೇವದೂತನ ಮಾತಿಗೆ ಬಹಳವಾಗಿ ಕಳವಳಗೊಂಡು, “ಇದು ಎಂಥಾ ಶುಭಾಶಯ?” ಎಂದು ತನ್ನ ಮನದಲ್ಲಿ ಯೋಚಿಸತೊಡಗಿದಳು.
ಲೂಕನು 1 : 30 (OCVKN)
ಆ ದೇವದೂತನು ಆಕೆಗೆ, “ಮರಿಯಳೇ, ಹೆದರಬೇಡ. ನೀನು ದೇವರ ದಯೆಯನ್ನು ಹೊಂದಿರುವಿ.
ಲೂಕನು 1 : 31 (OCVKN)
ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವೆ, ಅವರಿಗೆ ‘ಯೇಸು’‡ ಯೇಸು ಅಂದರೆ, ಪ್ರಭುವು ರಕ್ಷಿಸುವನು ಎಂದು ಹೆಸರಿಡಬೇಕು.
ಲೂಕನು 1 : 32 (OCVKN)
ಅವರು ದೊಡ್ಡವರಾಗಿ ಮಹೋನ್ನತರ ಪುತ್ರ ಎಂದು ಎನಿಸಿಕೊಳ್ಳುವರು. ಕರ್ತದೇವರು ಅವರ ತಂದೆ ದಾವೀದನ ಸಿಂಹಾಸನವನ್ನು ಅವರಿಗೆ ಕೊಡುವರು.
ಲೂಕನು 1 : 33 (OCVKN)
ಅವರು ಯಾಕೋಬನ ವಂಶವನ್ನು ಸದಾಕಾಲ ಆಳುವರು; ಅವರ ರಾಜ್ಯಕ್ಕೆ ಅಂತ್ಯವೇ ಇರುವುದಿಲ್ಲ,” ಎಂದು ಹೇಳಿದನು.
ಲೂಕನು 1 : 35 (OCVKN)
ಮರಿಯಳು ಆ ದೇವದೂತನಿಗೆ, “ಇದು ಹೇಗಾಗುವುದು, ನಾನು ಕನ್ಯೆ?” ಎಂದಳು. ಆ ದೇವದೂತನು ಉತ್ತರವಾಗಿ ಮರಿಯಳಿಗೆ, “ಪವಿತ್ರಾತ್ಮ ನಿನ್ನ ಮೇಲೆ ಬರಲು, ಮಹೋನ್ನತ ದೇವರ ಶಕ್ತಿಯು ನಿನ್ನನ್ನು ಆವರಿಸುವುದು. ಆದ್ದರಿಂದ ನಿನ್ನಿಂದ ಹುಟ್ಟುವ ಆ ಪವಿತ್ರ ಶಿಶುವು ದೇವರ ಪುತ್ರ ಎನಿಸಿಕೊಳ್ಳುವುದು.
ಲೂಕನು 1 : 36 (OCVKN)
ನಿನ್ನ ಬಂಧು ಎಲಿಸಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಒಬ್ಬ ಮಗನನ್ನು ಹೆರಲಿದ್ದಾಳೆ. ಬಂಜೆಯಾಗಿದ್ದ ಆಕೆಗೆ ಇದು ಆರನೆಯ ತಿಂಗಳು.
ಲೂಕನು 1 : 37 (OCVKN)
ದೇವರಿಂದ ಬರುವ ಯಾವ ತಕ್ಕ ಮಾತು ಎಂದಿಗೂ ಅಸಾಧ್ಯವಾಗಿರುವುದಿಲ್ಲ,” ಎಂದು ಹೇಳಿದನು.
ಲೂಕನು 1 : 39 (OCVKN)
ಮರಿಯಳು, “ಇಗೋ ನಾನು ಕರ್ತದೇವರ ದಾಸಿ, ನಿನ್ನ ತಕ್ಕ ಮಾತಿನಂತೆ ನನಗಾಗಲಿ,” ಎಂದಳು. ಆಗ ದೇವದೂತನು ಆಕೆಯ ಬಳಿಯಿಂದ ಹೊರಟುಹೋದನು. ಮರಿಯಳು ಎಲಿಸಬೇತಳನ್ನು ಸಂಧಿಸಿದ್ದು ಆ ಕಾಲದಲ್ಲಿ ಮರಿಯಳು ಬೆಟ್ಟದ ಸೀಮೆಯ ಯೆಹೂದದಲ್ಲಿರುವ ಒಂದು ಊರಿಗೆ ಅವಸರವಾಗಿ ಹೊರಡಲು ಸಿದ್ಧಳಾದಳು.
ಲೂಕನು 1 : 40 (OCVKN)
ಅಲ್ಲಿ ಜಕರೀಯನ ಮನೆಯನ್ನು ಪ್ರವೇಶಿಸಿ, ಎಲಿಸಬೇತಳನ್ನು ವಂದಿಸಿದಳು.
ಲೂಕನು 1 : 41 (OCVKN)
ಮರಿಯಳ ವಂದನೆಯನ್ನು ಕೇಳಿದಾಗ, ಎಲಿಸಬೇತಳ ಗರ್ಭದಲ್ಲಿದ್ದ ಕೂಸು ನಲಿದಾಡಿತು ಮತ್ತು ಎಲಿಸಬೇತಳು ಪವಿತ್ರಾತ್ಮ ಭರಿತಳಾಗಿ
ಲೂಕನು 1 : 42 (OCVKN)
ಮಹಾಧ್ವನಿಯಿಂದ: “ಸ್ತ್ರೀಯರಲ್ಲಿ ನೀನು ಧನ್ಯಳೇ, ನಿನ್ನಲ್ಲಿ ಹುಟ್ಟುವ ಶಿಶುವೂ ಆಶೀರ್ವಾದ ಹೊಂದಿದ್ದು!
ಲೂಕನು 1 : 43 (OCVKN)
ನನ್ನ ಕರ್ತದೇವರ ತಾಯಿಯು, ನನ್ನ ಬಳಿಗೆ ಬರುವಷ್ಟು ನಾನು ದಯೆ ಹೊಂದಿದ್ದು ಏಕೆ?
ಲೂಕನು 1 : 44 (OCVKN)
ಇಗೋ, ನಿನ್ನ ವಂದನೆಯ ಧ್ವನಿಯು ನನ್ನ ಕಿವಿಗಳಲ್ಲಿ ಬಿದ್ದ ಕೂಡಲೇ, ಶಿಶುವು ನನ್ನ ಗರ್ಭದಲ್ಲಿ ಉಲ್ಲಾಸದಿಂದ ನಲಿದಾಡಿತು.
ಲೂಕನು 1 : 45 (OCVKN)
ಕರ್ತದೇವರು ತಮಗೆ ಹೇಳಿದವುಗಳು ನೆರವೇರುವುವು ಎಂದು ನಂಬಿದವಳು ಧನ್ಯಳು,” ಎಂದು ಹೇಳಿದಳು.
ಲೂಕನು 1 : 46 (OCVKN)
ಮರಿಯಳ ಹಾಡು ಆಗ ಮರಿಯಳು ಹೀಗೆ ಹೇಳಿದ್ದು: “ನನ್ನ ಪ್ರಾಣವು ಕರ್ತದೇವರನ್ನು ಸ್ತುತಿಸುತ್ತದೆ,
ಲೂಕನು 1 : 47 (OCVKN)
ನನ್ನ ಆತ್ಮವು ನನ್ನ ರಕ್ಷಕ ದೇವರಲ್ಲಿ ಉಲ್ಲಾಸಗೊಂಡಿದೆ.
ಲೂಕನು 1 : 48 (OCVKN)
ದೇವರು ತಮ್ಮ ದಾಸಿಯ ದೀನಸ್ಥಿತಿಯನ್ನು ಲಕ್ಷಿಸಿದ್ದಾರೆ. ಇಂದಿನಿಂದ ತಲತಲಾಂತರದವರೆಲ್ಲರೂ ನನ್ನನ್ನು ಧನ್ಯಳೆಂದು ಕರೆಯುವರು,
ಲೂಕನು 1 : 49 (OCVKN)
ಪರಾಕ್ರಮಿಯಾದ ದೇವರು ನನಗೆ ಮಹಾಕಾರ್ಯಗಳನ್ನು ಮಾಡಿದ್ದಾರೆ, ಅವರ ಹೆಸರು ಪವಿತ್ರವಾದದ್ದು.
ಲೂಕನು 1 : 50 (OCVKN)
ದೇವರಲ್ಲಿ ಭಯಭಕ್ತಿಯುಳ್ಳವರ ಮೇಲೆ, ಅವರ ಕರುಣೆಯು ತಲತಲಾಂತರಗಳಿಗೂ ಇರುವುದು.
ಲೂಕನು 1 : 51 (OCVKN)
ದೇವರು ತಮ್ಮ ಭುಜಪರಾಕ್ರಮವನ್ನು ಮಾಡಿ; ಹೃದಯದ ಯೋಚನೆಯಲ್ಲಿ ಗರ್ವಿಷ್ಠರಾದವರನ್ನು ಚದರಿಸಿಬಿಟ್ಟಿದ್ದಾರೆ.
ಲೂಕನು 1 : 52 (OCVKN)
ಅಧಿಪತಿಗಳನ್ನು ಅವರ ಸಿಂಹಾಸನಗಳಿಂದ ಕೆಳಗೆ ದಬ್ಬಿ, ದೀನರನ್ನು ಮೇಲಕ್ಕೆ ಎತ್ತಿದ್ದಾರೆ.
ಲೂಕನು 1 : 53 (OCVKN)
ಹಸಿದವರನ್ನು ಒಳ್ಳೆಯವುಗಳಿಂದ ತುಂಬಿಸಿ, ಐಶ್ವರ್ಯವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾರೆ.
ಲೂಕನು 1 : 54 (OCVKN)
(54-55)ನಮ್ಮ ಪಿತೃಗಳಾದ ಅಬ್ರಹಾಮನಿಗೂ ಅವನ ಸಂತತಿಗೂ ತಾವು ವಾಗ್ದಾನಮಾಡಿದ ತಮ್ಮ ನಿತ್ಯ ಕರುಣೆಯನ್ನು ಜ್ಞಾಪಕಮಾಡಿಕೊಂಡು, ತಮ್ಮ ಸೇವಕನಾದ ಇಸ್ರಾಯೇಲನಿಗೆ, ದೇವರು ಸಹಾಯ ಮಾಡಿದ್ದಾರೆ.”
ಲೂಕನು 1 : 57 (OCVKN)
ಮರಿಯಳು ಸುಮಾರು ಮೂರು ತಿಂಗಳು ಎಲಿಸಬೇತಳ ಜೊತೆಯಲ್ಲಿದ್ದು, ಅನಂತರ ತನ್ನ ಮನೆಗೆ ಹಿಂತಿರುಗಿ ಹೋದಳು. ಸ್ನಾನಿಕ ಯೋಹಾನನ ಜನನ ಎಲಿಸಬೇತಳಿಗೆ ಹೆರಿಗೆಯ ಕಾಲ ಬಂದಾಗ, ಆಕೆಯು ಒಬ್ಬ ಮಗನನ್ನು ಹೆತ್ತಳು.
ಲೂಕನು 1 : 58 (OCVKN)
ಕರ್ತದೇವರು ತಮ್ಮ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಯವರೂ ಬಂಧುಗಳೂ ಕೇಳಿ, ಆಕೆಯ ಕೂಡ ಸಂತೋಷಪಟ್ಟರು.
ಲೂಕನು 1 : 59 (OCVKN)
ಅವರು ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡಿಸುವುದಕ್ಕಾಗಿ ಬಂದು, ಅವನ ತಂದೆಯ ಹೆಸರಿನಂತೆ ಮಗನನ್ನು ಜಕರೀಯನೆಂದು ನಾಮಕರಣ ಮಾಡಲಿದ್ದರು.
ಲೂಕನು 1 : 60 (OCVKN)
ಆದರೆ ಅದಕ್ಕೆ ಶಿಶುವಿನ ತಾಯಿಯು ಉತ್ತರವಾಗಿ, “ಹಾಗಲ್ಲ! ಅವನಿಗೆ ‘ಯೋಹಾನ’ ಎಂದು ಹೆಸರಿಡಬೇಕು,” ಎಂದಳು.
ಲೂಕನು 1 : 62 (OCVKN)
ಬಂದಿದ್ದವರು ಆಕೆಗೆ, “ನಿನ್ನ ಬಂಧುಬಳಗದವರಲ್ಲಿ ಆ ಹೆಸರಿನವರು ಒಬ್ಬರೂ ಇಲ್ಲವಲ್ಲಾ,” ಎಂದರು. ಶಿಶುವನ್ನು ಯಾವ ಹೆಸರಿನಿಂದ ಕರೆಯಬೇಕೆಂದು, ಅವನ ತಂದೆಗೆ ಅವರು ಸನ್ನೆಮಾಡಿದರು.
ಲೂಕನು 1 : 63 (OCVKN)
ಆಗ ಜಕರೀಯನು ಒಂದು ಬರೆಯುವ ಹಲಗೆಯನ್ನು ಕೇಳಿ, “ಶಿಶುವಿನ ಹೆಸರು ಯೋಹಾನ,” ಎಂದು ಬರೆದನು. ಆಗ ಅವರೆಲ್ಲರೂ ಆಶ್ಚರ್ಯಪಟ್ಟರು.
ಲೂಕನು 1 : 64 (OCVKN)
ಕೂಡಲೇ ಜಕರೀಯನಿಗೆ ಮಾತು ಬಂತು, ಅವನ ನಾಲಿಗೆಯು ಸಡಿಲವಾಯಿತು, ಅವನು ಮಾತನಾಡಿ, ದೇವರನ್ನು ಕೊಂಡಾಡಿದನು.
ಲೂಕನು 1 : 65 (OCVKN)
ಈ ಘಟನೆಯಿಂದ ಸುತ್ತಲೂ ವಾಸಮಾಡುತ್ತಿದ್ದವರೆಲ್ಲರಿಗೆ ಭಯವುಂಟಾಯಿತು, ಯೂದಾಯದ ಬೆಟ್ಟದ ಪ್ರಾಂತದಲ್ಲೆಲ್ಲಾ ಈ ಸಂಗತಿಗಳನ್ನು ಮಾತನಾಡಿಕೊಳ್ಳುತ್ತಿದ್ದರು.
ಲೂಕನು 1 : 66 (OCVKN)
ಕೇಳಿದವರೆಲ್ಲರೂ ವಿಸ್ಮಯಗೊಂಡು, “ಈ ಮಗುವು ಎಂಥವನಾಗುವನೋ?” ಎಂದು ತಮ್ಮ ಮನಸ್ಸಿನಲ್ಲಿ ಪ್ರಶ್ನಿಸಿಕೊಂಡರು. ಕರ್ತದೇವರ ಹಸ್ತವು ಈ ಮಗುವಿನ ಮೇಲೆ ಇತ್ತು.
ಲೂಕನು 1 : 68 (OCVKN)
ಆಗ ಮಗುವಿನ ತಂದೆ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು: “ಇಸ್ರಾಯೇಲಿನ ಕರ್ತದೇವರಿಗೆ ಸ್ತೋತ್ರವಾಗಲಿ, ದೇವರು ತಮ್ಮ ಜನರನ್ನು ಸಂಧಿಸಿ ಅವರನ್ನು ವಿಮೋಚಿಸಿದ್ದಾರೆ.
ಲೂಕನು 1 : 69 (OCVKN)
(69-70)ಪುರಾತನದಿಂದ ಅವರು ತಮ್ಮ ಪವಿತ್ರ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ, ದೇವರು ತಮ್ಮ ಸೇವಕ ದಾವೀದನ ಮನೆತನದಿಂದ, ನಮಗಾಗಿ ಬಲವಾದ ರಕ್ಷಣೆಯ§ ಮೂಲಭಾಷೆಯಲ್ಲಿ ರಕ್ಷಣೆಯ ಕೊಂಬು. ಕೊಂಬು ಇದು ಬಲವಾದ ರಾಜನ ಪ್ರತೀಕವಾಗಿದೆ ಕರ್ತದೇವರನ್ನು ಎಬ್ಬಿಸಿದ್ದಾರೆ.
ಲೂಕನು 1 : 71 (OCVKN)
ಇದನ್ನು, ನಾವು ನಮ್ಮ ಶತ್ರುಗಳಿಂದಲೂ ನಮ್ಮನ್ನು ದ್ವೇಷಮಾಡುವವರ ಕೈಯಿಂದಲೂ ರಕ್ಷಣೆ ಹೊಂದುವಂತೆಯೂ
ಲೂಕನು 1 : 72 (OCVKN)
(72-73)ನಮ್ಮ ಪಿತೃಗಳಿಗೆ ಕರುಣೆ ತೋರಿಸುವಂತೆಯೂ ನಮ್ಮ ಪಿತೃವಾದ ಅಬ್ರಹಾಮನಿಗೆ ಆಣೆಯಿಟ್ಟು ಪ್ರಮಾಣ ಮಾಡಿದಂತೆಯೂ ತಮ್ಮ ಪವಿತ್ರ ಒಡಂಬಡಿಕೆಯನ್ನು ನೆನಪಿಗೆ ತಂದುಕೊಂಡವನಾಗಿಯೂ
ಲೂಕನು 1 : 74 (OCVKN)
ನಾವು ನಮ್ಮ ಶತ್ರುಗಳ ಕೈಯಿಂದ ಬಿಡುಗಡೆಹೊಂದಿ ನಿರ್ಭಯವುಳ್ಳವರಾಗಿಯೂ
ಲೂಕನು 1 : 75 (OCVKN)
ನಮ್ಮ ಜೀವಮಾನದ ಎಲ್ಲಾ ದಿನಗಳಲ್ಲಿ ದೇವರ ಮುಂದೆ ಪವಿತ್ರತೆಯಿಂದಲೂ ನೀತಿಯಿಂದಲೂ ಅವರನ್ನೇ ಸೇವಿಸುವವರಾಗುವಂತೆಯೂ ಈ ಪ್ರಕಾರ ಮಾಡಿದ್ದಾರೆ.
ಲೂಕನು 1 : 76 (OCVKN)
“ನನ್ನ ಮಗುವೇ, ನೀನಾದರೋ ಮಹೋನ್ನತರ ಪ್ರವಾದಿ ಎಂದು ಎನಿಸಿಕೊಳ್ಳುವೆ. ಯಾಕೆಂದರೆ, ನೀನು ಕರ್ತದೇವರ ಮಾರ್ಗಗಳನ್ನು ಸಿದ್ಧಮಾಡುವುದಕ್ಕೆ, ಅವರ ಮುಂದೆ ಹೋಗುವೆ.
ಲೂಕನು 1 : 77 (OCVKN)
ನೀನು ಜನರ ಪಾಪಕ್ಷಮಾಪಣೆಯ ಮೂಲಕ ರಕ್ಷಣೆ ಹೊಂದುವ ತಿಳುವಳಿಕೆಯನ್ನು ಕೊಡುವೆ,
ಲೂಕನು 1 : 78 (OCVKN)
ನಮ್ಮ ದೇವರ ಮಮತೆಯ ಕರುಣೆಯಿಂದಲೇ, ಸ್ವರ್ಗದಿಂದ ನಮಗೆ ಅರುಣೋದಯವು ಉಂಟಾಗಿ
ಲೂಕನು 1 : 79 (OCVKN)
ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ವಾಸಿಸುವವರಿಗೆ ಪ್ರಕಾಶಿಸಿ, ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡೆಸುವಂತೆ ಮಾಡುವೆ.”
ಲೂಕನು 1 : 80 (OCVKN)
ಆ ಶಿಶುವಾದ ಯೋಹಾನನು ಬೆಳೆದು, ಆತ್ಮದಲ್ಲಿ ಬಲಗೊಂಡು; ತನ್ನನ್ನು ಇಸ್ರಾಯೇಲರಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80