ಯಾಜಕಕಾಂಡ 24 : 1 (OCVKN)
ಯೆಹೋವ ದೇವರ ಸನ್ನಿಧಿಯಲ್ಲಿ ದೀಪಸ್ತಂಭಗಳು ಮತ್ತು ರೊಟ್ಟಿಗಳು ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
ಯಾಜಕಕಾಂಡ 24 : 2 (OCVKN)
“ಬೆಳಕಿಗೋಸ್ಕರ ದೀಪಗಳು ಯಾವಾಗಲೂ ಉರಿಯುತ್ತಿರುವಂತೆ ಅವರು ಕುಟ್ಟಿದ ಶುದ್ಧವಾದ ಓಲಿವ್ ಎಣ್ಣೆಯನ್ನು ನನ್ನ ಬಳಿಗೆ ತರುವಂತೆ ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕು.
ಯಾಜಕಕಾಂಡ 24 : 3 (OCVKN)
ದೇವದರ್ಶನದ ಗುಡಾರದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಹೊರಗೆ, ಆರೋನನು ಸಂಜೆಯಿಂದ ಉದಯದವರೆಗೆ ಯೆಹೋವ ದೇವರ ಮುಂದೆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವು ನಿಮಗೆ ಮತ್ತು ನಿಮ್ಮ ಸಂತತಿಯವರಿಗೆ ಶಾಶ್ವತವಾದ ನಿಯಮವಾಗಿರುವುದು.
ಯಾಜಕಕಾಂಡ 24 : 4 (OCVKN)
ದೀಪಗಳು ಚೊಕ್ಕ ಬಂಗಾರದ ದೀಪಸ್ತಂಭದ ಮೇಲೆ ಯೆಹೋವ ದೇವರ ಸನ್ನಿಧಿಯಲ್ಲಿ ಯಾವಾಗಲೂ ಇರುವಂತೆ ಅವನು ಕ್ರಮಪಡಿಸಬೇಕು.
ಯಾಜಕಕಾಂಡ 24 : 5 (OCVKN)
“ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು. ಪ್ರತಿಯೊಂದು ರೊಟ್ಟಿ ಎರಡೆರಡು ಓಮರನಷ್ಟು* ಎಫಾದ ಹತ್ತರಲ್ಲಿ ಎರಡನೆಯ ಭಾಗ, ಅಂದರೆ 3.2 ಕಿಲೋಗ್ರಾಂ ಇರಬೇಕು.
ಯಾಜಕಕಾಂಡ 24 : 6 (OCVKN)
ಅವುಗಳನ್ನು ಚೊಕ್ಕ ಬಂಗಾರದ ಮೇಜಿನ ಮೇಲೆ ಯೆಹೋವ ದೇವರ ಸನ್ನಿಧಿಯಲ್ಲಿ ಒಂದು ಸಾಲಿನಲ್ಲಿ ಆರರಂತೆ, ಎರಡು ಸಾಲುಗಳನ್ನಾಗಿ ಇಡಬೇಕು.
ಯಾಜಕಕಾಂಡ 24 : 7 (OCVKN)
ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾಗಿ ಇರುವಂತೆಯೂ, ಬೆಂಕಿಯ ಮೂಲಕ ಯೆಹೋವ ದೇವರಿಗೆ ಸಮರ್ಪಣೆಯಾಗುವಂತೆಯೂ, ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು.
ಯಾಜಕಕಾಂಡ 24 : 8 (OCVKN)
ಪ್ರತಿಯೊಂದು ಸಬ್ಬತ್ ದಿನದಲ್ಲಿಯೂ ಯೆಹೋವ ದೇವರ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮಪಡಿಸಬೇಕು. ಇದು ಇಸ್ರಾಯೇಲರ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು.
ಯಾಜಕಕಾಂಡ 24 : 9 (OCVKN)
ಅದು ಆರೋನನ ಮತ್ತು ಅವನ ಪುತ್ರರದಾಗಿರಬೇಕು. ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಏಕೆಂದರೆ ಅದು ನಿತ್ಯವಾದ ನಿಯಮವಾಗಿ ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವವುಗಳಲ್ಲಿ ಅವನಿಗೆ ಮಹಾಪರಿಶುದ್ಧವಾಗಿರುವುದು.”
ಯಾಜಕಕಾಂಡ 24 : 10 (OCVKN)
ದೇವದೂಷಕನಿಗೆ ಮರಣಶಿಕ್ಷೆ ಇಸ್ರಾಯೇಲಿನವಳಾದ ಒಬ್ಬ ಸ್ತ್ರೀಗೂ, ಈಜಿಪ್ಟಿನವನಾದ ಪುರುಷನಿಗೂ ಹುಟ್ಟಿದ ಮಗನು ಇಸ್ರಾಯೇಲರ ಪಾಳ್ಯಕ್ಕೆ ಬಂದನು. ಇಸ್ರಾಯೇಲಿನವಳಾದ ಸ್ತ್ರೀಯ ಈ ಮಗನು ಇಸ್ರಾಯೇಲಿನ ಒಬ್ಬ ಮನುಷ್ಯನೊಂದಿಗೆ ಪಾಳೆಯದಲ್ಲಿ ಜಗಳವಾಡಿದರು.
ಯಾಜಕಕಾಂಡ 24 : 11 (OCVKN)
ಇಸ್ರಾಯೇಲ್ ಸ್ತ್ರೀಯ ಮಗನು ಯೆಹೋವ ದೇವರ ನಾಮವನ್ನು ದೂಷಿಸಿ, ಶಪಿಸಿದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು. ಅವನ ತಾಯಿಯ ಹೆಸರು ಶೆಲೋಮಿತ್. ಇವಳು ದಾನ್ ಕುಲದ ದಿಬ್ರೀಯನ ಮಗಳು.
ಯಾಜಕಕಾಂಡ 24 : 12 (OCVKN)
ಯೆಹೋವ ದೇವರ ಮನಸ್ಸನ್ನು ತಿಳಿಯುವಂತೆ ಅವನನ್ನು ಕಾವಲಲ್ಲಿ ಬಿಟ್ಟರು.
ಯಾಜಕಕಾಂಡ 24 : 13 (OCVKN)
ಆಗ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
ಯಾಜಕಕಾಂಡ 24 : 14 (OCVKN)
“ಶಪಿಸಿದವನನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿರಿ, ಅವನಿಂದ ಕೇಳಿದವರೆಲ್ಲರೂ ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಡಲಿ, ಸಭೆಯವರೆಲ್ಲರೂ ಅವನಿಗೆ ಕಲ್ಲೆಸೆಯಲಿ.
ಯಾಜಕಕಾಂಡ 24 : 15 (OCVKN)
ನೀನು ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳಬೇಕು, ‘ತನ್ನ ದೇವರನ್ನು ಶಪಿಸುವವನು, ತನ್ನ ಪಾಪವನ್ನು ಹೊತ್ತುಕೊಳ್ಳಬೇಕು.
ಯಾಜಕಕಾಂಡ 24 : 16 (OCVKN)
ಯೆಹೋವ ದೇವರ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು. ಸಭೆಯವರೆಲ್ಲರೂ ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ಸ್ವದೇಶೀಯನಾಗಿರಲಿ, ಪರಕೀಯನಾಗಿರಲಿ ಯೆಹೋವ ದೇವರ ಹೆಸರನ್ನು ದೂಷಣೆ ಮಾಡಿದಾಗ, ಅವನನ್ನು ಮರಣ ಶಿಕ್ಷೆಗೆ ಒಳಪಡಿಸಬೇಕು.
ಯಾಜಕಕಾಂಡ 24 : 17 (OCVKN)
“ ‘ಯಾರಾದರೂ ಮನುಷ್ಯನನ್ನು ಕೊಂದರೆ, ನಿಶ್ಚಯವಾಗಿ ಮರಣಕ್ಕೆ ಒಳಪಡಬೇಕು.
ಯಾಜಕಕಾಂಡ 24 : 18 (OCVKN)
ಪಶುವನ್ನು ಕೊಲ್ಲುವವರು, ಅದಕ್ಕೆ ಪ್ರತಿಯಾಗಿ ಒಂದು ಪಶುವನ್ನು ಕೊಡಬೇಕು.
ಯಾಜಕಕಾಂಡ 24 : 19 (OCVKN)
ಯಾರಾದರೂ ತಮ್ಮ ನೆರೆಯವನಿಗೆ ಊನವಾಗುವಂತೆ ಮಾಡಿದರೆ, ಅವರು ಮಾಡಿದಂತೆಯೇ ಅವರಿಗೆ ಮಾಡಬೇಕು.
ಯಾಜಕಕಾಂಡ 24 : 20 (OCVKN)
ಮುರಿತಕ್ಕೆ ಮುರಿತ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಅವರು ಒಬ್ಬರಿಗೆ ಊನ ಮಾಡಿದ ಹಾಗೆಯೇ ಅವರಿಗೂ ಮಾಡಬೇಕು.
ಯಾಜಕಕಾಂಡ 24 : 21 (OCVKN)
ಪಶುವನ್ನು ಕೊಲ್ಲುವವರು ಅದಕ್ಕೆ ಬದಲುಕೊಡಬೇಕು. ಮನುಷ್ಯರನ್ನು ಕೊಲ್ಲುವವರನ್ನು ಮರಣಕ್ಕೆ ಒಳಪಡಿಸಬೇಕು.
ಯಾಜಕಕಾಂಡ 24 : 22 (OCVKN)
ನಿಮಗೆ ಒಂದೇ ವಿಧವಾದ ನಿಯಮವಿರಬೇಕು. ಸ್ವದೇಶಸ್ಥನಿಗೆ ಇರುವಂತೆಯೇ ಪರಕೀಯನಿಗೂ ಇರಬೇಕು. ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.’ ”
ಯಾಜಕಕಾಂಡ 24 : 23 (OCVKN)
ಶಪಿಸಿದವನನ್ನು ಪಾಳೆಯದ ಹೊರಗೆ ತಂದು, ಅವನನ್ನು ಕಲ್ಲುಗಳಿಂದ ಹೊಡೆಯುವಂತೆ ಮೋಶೆಯು ಇಸ್ರಾಯೇಲರೊಂದಿಗೆ ಮಾತನಾಡಿದನು. ಆಗ ಇಸ್ರಾಯೇಲರು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಮಾಡಿದರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23