ಯಾಜಕಕಾಂಡ 13 : 1 (OCVKN)
ಸಾಂಕ್ರಾಮಿಕ ಚರ್ಮರೋಗಗಳ ಕುರಿತ ನಿಯಮಗಳು ಯೆಹೋವ ದೇವರು ಮೋಶೆ ಮತ್ತು ಆರೋನರೊಡನೆ ಮಾತನಾಡಿ ಹೇಳಿದ್ದೇನೆಂದರೆ,
ಯಾಜಕಕಾಂಡ 13 : 2 (OCVKN)
“ಒಬ್ಬ ಮನುಷ್ಯನು ತನ್ನ ಚರ್ಮದ ಮೇಲೆ ಬಾವಾಗಲಿ, ಕಜ್ಜಿಯಾಗಲಿ, ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಚರ್ಮದಲ್ಲಿ ಕುಷ್ಠದ* ಹೀಬ್ರೂ ಭಾಷೆಯಲ್ಲಿ ಕುಷ್ಠ ಎಂಬ ಪದವನ್ನು ಚರ್ಮದ ಮೇಲೆ ಪರಿಣಾಮ ಬೀರುವ ವಿವಿಧ ಕಾಯಿಲೆಗಳಿಗೆ ಈ ಪದವನ್ನು ಬಳಸಲಾಗುತ್ತಿತ್ತು ವ್ಯಾಧಿಯಂತಿದ್ದರೆ, ಅವನು ಯಾಜಕನಾದ ಆರೋನನ ಬಳಿಗಾದರೂ ಇಲ್ಲವೆ ಯಾಜಕರಾದ ಅವನ ಪುತ್ರರಲ್ಲಿ ಒಬ್ಬನ ಬಳಿಗಾದರೂ ಕರೆದುಕೊಂಡು ಬರಬೇಕು.
ಯಾಜಕಕಾಂಡ 13 : 3 (OCVKN)
ಯಾಜಕನು ಚರ್ಮದ ಮೇಲಿರುವ ವ್ಯಾಧಿಯನ್ನು ಪರೀಕ್ಷಿಸಬೇಕು. ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ, ಆ ವ್ಯಾಧಿಯು ಅವನ ಚರ್ಮಕ್ಕಿಂತಲೂ ಆಳವಾಗಿ ಕಂಡರೆ, ಅದು ಚರ್ಮರೋಗವಾಗಿರುವುದು. ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.
ಯಾಜಕಕಾಂಡ 13 : 4 (OCVKN)
ಅವನ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು, ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದು, ಅಲ್ಲಿನ ಕೂದಲು ಬೆಳ್ಳಗಾಗದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಪ್ರತ್ಯೇಕವಾಗಿ ಇರಿಸಬೇಕು.
ಯಾಜಕಕಾಂಡ 13 : 5 (OCVKN)
ಯಾಜಕನು ಏಳನೆಯ ದಿನದಲ್ಲಿ ಅವನನ್ನು ಪರೀಕ್ಷಿಸಿದಾಗ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ, ಆ ವ್ಯಾಧಿ ಚರ್ಮದಲ್ಲಿ ಹರಡಿರದಿದ್ದರೆ, ಯಾಜಕನು ಅವನನ್ನು ಇನ್ನೂ ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
ಯಾಜಕಕಾಂಡ 13 : 6 (OCVKN)
ಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ವ್ಯಾಧಿಯು ಸ್ವಲ್ಪ ಕಪ್ಪಾಗಿದ್ದು, ಚರ್ಮದಲ್ಲೆಲ್ಲಾ ಹರಡಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರುವನು.
ಯಾಜಕಕಾಂಡ 13 : 7 (OCVKN)
ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ, ಅವನು ತಿರುಗಿ ಯಾಜಕನಿಗೆ ತೋರಿಸಿಕೊಳ್ಳಬೇಕು.
ಯಾಜಕಕಾಂಡ 13 : 8 (OCVKN)
ಯಾಜಕನು ಅದನ್ನು ಪರೀಕ್ಷಿಸಿದಾಗ, ಕಜ್ಜಿಯ ಚರ್ಮವೇ ಹರಡಿರುವುದಾದರೆ ಆಗ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಏಕೆಂದರೆ ಅದು ಚರ್ಮರೋಗವಾಗಿರುವುದು.
ಯಾಜಕಕಾಂಡ 13 : 9 (OCVKN)
“ಚರ್ಮರೋಗವು ಮನುಷ್ಯನಲ್ಲಿ ಇರುವುದಾದರೆ, ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು.
ಯಾಜಕಕಾಂಡ 13 : 10 (OCVKN)
ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು, ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿ ಮಾಂಸವು ಇದ್ದರೆ,
ಯಾಜಕಕಾಂಡ 13 : 11 (OCVKN)
ಅದು ಅವನ ಚರ್ಮದಲ್ಲಿ ದೀರ್ಘಕಾಲದ ಚರ್ಮರೋಗವಾಗಿರುವುದು. ಆಗ ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು ಮತ್ತು ಅವನನ್ನು ಪ್ರತ್ಯೇಕವಾಗಿ ಇರಿಸದೆ ಆಗಲೇ ಅಶುದ್ಧನೆಂದು ನಿರ್ಣಯಿಸಬೇಕು.
ಯಾಜಕಕಾಂಡ 13 : 12 (OCVKN)
“ಒಬ್ಬನಲ್ಲಿ ಸಾಂಕ್ರಾಮಿಕ ಚರ್ಮರೋಗ ಹತ್ತಿದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಪಾದದವರೆಗೂ ಹರಡಿವುದುನ್ನು ಯಾಜಕನು ಪರೀಕ್ಷಿಸಿದರೆ,
ಯಾಜಕಕಾಂಡ 13 : 13 (OCVKN)
ಆಗ ಯಾಜಕನು ಅದನ್ನು ಗಮನಿಸಬೇಕು. ತೊನ್ನು ಹತ್ತಿದರೆ, ಅವನ ಮೈಯೆಲ್ಲವನ್ನು ಹರಡಿಕೊಂಡಿದ್ದರೆ, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವುದರಿಂದ ಅವನು ಶುದ್ಧನಾಗಿರುವನು.
ಯಾಜಕಕಾಂಡ 13 : 14 (OCVKN)
ಆದರೆ ಹಸಿ ಮಾಂಸವು ಅವನಲ್ಲಿ ಕಾಣಿಸಿಕೊಂಡರೆ ಅವನು ಅಶುದ್ಧನಾಗಿರುವನು.
ಯಾಜಕಕಾಂಡ 13 : 15 (OCVKN)
ಯಾಜಕನು ಹಸಿ ಮಾಂಸವನ್ನು ಪರೀಕ್ಷಿಸಿ ಅವನು ಅಶುದ್ಧನೆಂದು ನುಡಿಯಬೇಕು. ಏಕೆಂದರೆ ಹಸಿ ಮಾಂಸವು ಅಶುದ್ಧವಾದದ್ದು, ಅದು ಅಶುದ್ಧಗೊಳಿಸುವ ಚರ್ಮರೋಗವೇ.
ಯಾಜಕಕಾಂಡ 13 : 16 (OCVKN)
ಹಸಿ ಮಾಂಸವು ಮತ್ತೆ ಬದಲಾಗಿ ಬೆಳ್ಳಗಾದರೆ, ಅವನು ಯಾಜಕನ ಬಳಿಗೆ ಬರಬೇಕು.
ಯಾಜಕಕಾಂಡ 13 : 17 (OCVKN)
ಆಗ ಯಾಜಕನು ಅವನನ್ನು ಪರೀಕ್ಷಿಸಿ, ಆ ವ್ಯಾಧಿಯು ಬೆಳ್ಳಗಾಗಿದ್ದರೆ, ಯಾಜಕನು, ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ನುಡಿಯಬೇಕು. ಅವನು ಶುದ್ಧನಾಗಿರುವನು.
ಯಾಜಕಕಾಂಡ 13 : 18 (OCVKN)
“ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ
ಯಾಜಕಕಾಂಡ 13 : 19 (OCVKN)
ಆ ಹುಣ್ಣಿನ ಜಾಗದಲ್ಲಿ ಬಿಳಿಯ ಊತವಾಗಲಿ ಇಲ್ಲವೆ ಬಿಳುಪಾದ ಮಚ್ಚೆಯಾಗಲಿ, ಕೆಂಪು ಮಿಶ್ರಿತ ಕಲೆ ಉಂಟಾದರೆ ಅದನ್ನು ಯಾಜಕನಿಗೆ ತೋರಿಸಬೇಕು.
ಯಾಜಕಕಾಂಡ 13 : 20 (OCVKN)
ಯಾಜಕನು ಅದನ್ನು ಪರೀಕ್ಷಿಸಿದಾಗ, ಅದು ಚರ್ಮದಿಂದ ಕೆಳಗೆ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ, ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು. ಅದು ಹುಣ್ಣಿನಿಂದ ಒಡೆದುಹೋದ ಚರ್ಮರೋಗವಾಗಿರುವುದು.
ಯಾಜಕಕಾಂಡ 13 : 21 (OCVKN)
ಆದರೆ ಯಾಜಕನು ಅದನ್ನು ಪರೀಕ್ಷಿಸಲು, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದಿದ್ದರೆ ಮತ್ತು ಸ್ವಲ್ಪ ಮಬ್ಬಾಗಿದ್ದರೆ, ಆಗ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
ಯಾಜಕಕಾಂಡ 13 : 22 (OCVKN)
ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಅವನು ಅಶುದ್ಧನೆಂದು ನುಡಿಯಬೇಕು. ಅದು ಚರ್ಮರೋಗವಾಗಿದೆ.
ಯಾಜಕಕಾಂಡ 13 : 23 (OCVKN)
ಆದರೆ ಆ ಹೊಳಪಾದ ಕಲೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು, ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
ಯಾಜಕಕಾಂಡ 13 : 24 (OCVKN)
“ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಸಹ ಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಕಲೆಯಾಗಿದ್ದರೆ,
ಯಾಜಕಕಾಂಡ 13 : 25 (OCVKN)
ಯಾಜಕನು ಅದನ್ನು ಪರೀಕ್ಷಿಸಬೇಕು. ಆ ಹೊಳಪಾದ ಕಲೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆಯಿಂದ ಒಡೆದ ಚರ್ಮರೋಗವಾಗಿರುವುದು. ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಚರ್ಮವ್ಯಾಧಿಯಾಗಿದೆ.
ಯಾಜಕಕಾಂಡ 13 : 26 (OCVKN)
ಆದರೆ ಯಾಜಕನು ಅದನ್ನು ಪರೀಕ್ಷಿಸಿದಾಗ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೋಟಾಗಿದ್ದರೆ, ಯಾಜಕನು ಆಗ ಅವನನ್ನು ಏಳು ದಿನಗಳ ಕಾಲ ಮುಚ್ಚಿಡಬೇಕು.
ಯಾಜಕಕಾಂಡ 13 : 27 (OCVKN)
ಯಾಜಕನು ಅವನನ್ನು ಏಳನೆಯ ದಿನದಲ್ಲಿ ಪರೀಕ್ಷಿಸಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ಚರ್ಮರೋಗ.
ಯಾಜಕಕಾಂಡ 13 : 28 (OCVKN)
ಆ ಹೊಳಪಾದ ಕಲೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮಬ್ಬಾಗಿದ್ದರೆ, ಬೆಂಕಿ ಸುಟ್ಟ ಬೊಬ್ಬೆಯ ಊತವೆಂದು ಮತ್ತು ಅವನು ಶುದ್ಧನೆಂದು ಯಾಜಕನು ನುಡಿಯಬೇಕು. ಏಕೆಂದರೆ ಅದು ಬೆಂಕಿಯ ಬೊಬ್ಬೆಯಾಗಿರುವುದು.
ಯಾಜಕಕಾಂಡ 13 : 29 (OCVKN)
“ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ವ್ಯಾಧಿಯು ತಲೆಯ ಮೇಲಾಗಲಿ, ಗಡ್ಡದ ಮೇಲಾಗಲಿ ಕಲೆ ಇದ್ದರೆ,
ಯಾಜಕಕಾಂಡ 13 : 30 (OCVKN)
ಆಗ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಬೇಕು. ಅದು ನೋಡುವುದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ, ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು. ಅದು ತಲೆಯ ಮೇಲಾಗಲಿ ಇಲ್ಲವೆ ಗಡ್ಡದ ಮೇಲಾಗಲಿ ಇರುವ ಚರ್ಮರೋಗವಾಗಿದೆ.
ಯಾಜಕಕಾಂಡ 13 : 31 (OCVKN)
ಯಾಜಕನು ಆ ಇಸಬಿನ ವ್ಯಾಧಿಯನ್ನು ನೋಡಿದಾಗ, ಅದು ಉಳಿದ ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪುಕೂದಲು ಇರದಿದ್ದರೆ, ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಬೇಕು.
ಯಾಜಕಕಾಂಡ 13 : 32 (OCVKN)
ಏಳನೆಯ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ಪರೀಕ್ಷಿಸಿದಾಗ, ಆ ಇಸಬು ಹರಡದೆ ಮತ್ತು ಅದರಲ್ಲಿ ಹಳದಿ ಕೂದಲು ಇರದೆ, ಆ ಇಸಬು ಮಿಕ್ಕ ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ,
ಯಾಜಕಕಾಂಡ 13 : 33 (OCVKN)
ಅವನು ಕ್ಷೌರ ಮಾಡಿಸಿಕೊಳ್ಳಲಿ. ಆದರೆ ಅವನು ಇಸಬನ್ನು ಕ್ಷೌರ ಮಾಡಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
ಯಾಜಕಕಾಂಡ 13 : 34 (OCVKN)
ಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಆ ಇಸಬು ಚರ್ಮದಲ್ಲಿ ಹರಡಿರದಿದ್ದರೆ ಇಲ್ಲವೆ ನೋಡಲು ಅದು ಮಿಕ್ಕ ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ, ಯಾಜಕನು ಆಗ ಅವನನ್ನು ಶುದ್ಧನೆಂದು ನುಡಿಯಬೇಕು, ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗಿರಬೇಕು.
ಯಾಜಕಕಾಂಡ 13 : 35 (OCVKN)
ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿರದಿದ್ದರೆ,
ಯಾಜಕಕಾಂಡ 13 : 36 (OCVKN)
ಯಾಜಕನು ಆಗ ಅವನನ್ನು ಪರೀಕ್ಷಿಸಬೇಕು, ಆ ಇಸಬು ಚರ್ಮದಲ್ಲಿ ಹರಡಿದ್ದರೆ, ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ. ಅವನು ಅಶುದ್ಧನು.
ಯಾಜಕಕಾಂಡ 13 : 37 (OCVKN)
ಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಮತ್ತು ಅದರಲ್ಲಿ ಕಪ್ಪುಕೂದಲು ಬೆಳೆದರೆ, ಇಸಬು ವಾಸಿಯಾಗಿ ಅವನು ಶುದ್ಧನಾಗುವನು, ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು.
ಯಾಜಕಕಾಂಡ 13 : 38 (OCVKN)
“ಒಬ್ಬ ಪುರುಷನಿಗಾಗಲಿ ಇಲ್ಲವೆ ಸ್ತ್ರೀಗಾಗಲಿ ದೇಹದ ಚರ್ಮದಲ್ಲಿ ಬಿಳಿಯ ಹೊಳಪಾದ ಮಚ್ಚೆಗಳು ಅಲ್ಲಲ್ಲಿ ಇದ್ದರೆ,
ಯಾಜಕಕಾಂಡ 13 : 39 (OCVKN)
ಅವುಗಳನ್ನು ಯಾಜಕನು ಪರೀಕ್ಷಿಸಬೇಕು, ಅವರ ದೇಹದ ಚರ್ಮದಲ್ಲಿ ಹೊಳಪಾದ ಕಲೆಗಳು ಮಬ್ಬಾಗಿ ಬಿಳುಪಾಗಿದ್ದರೆ, ಅದು ಚರ್ಮದ ಮೇಲೆ ಬಿಸಿಲಿನಿಂದಾದ ಕೆಂಪು ಮಚ್ಚೆಯಾಗಿರುವುದು. ಅವನು ಶುದ್ಧನಾಗಿರುವನು.
ಯಾಜಕಕಾಂಡ 13 : 40 (OCVKN)
“ಒಬ್ಬ ಗಂಡಸಿನ ತಲೆಯ ಕೂದಲು ಉದುರಿ ಹೋದರೆ, ಅವನು ಬೋಳು ತಲೆಯವನು. ಆದರೂ ಅವನು ಶುದ್ಧನಾಗಿರುವನು.
ಯಾಜಕಕಾಂಡ 13 : 41 (OCVKN)
ಮುಂದಲೆಯ ಭಾಗದಲ್ಲಿ ಕೂದಲು ಉದುರಿ ಹೋಗಿದ್ದರೆ, ಅವನು ಪಟ್ಟೆ ತಲೆಯವನು, ಆದರೂ ಅವನು ಶುದ್ಧನಾಗಿರುವನು.
ಯಾಜಕಕಾಂಡ 13 : 42 (OCVKN)
ಆದರೆ ಆ ಬೋಳು ತಲೆಯಲ್ಲಿ ಇಲ್ಲವೆ ಪಟ್ಟೆ ತಲೆಯಲ್ಲಿ ಕೆಂಪಗಿರುವ ಬಿಳುಪಾದ ಮಚ್ಚೆಯಿದ್ದರೆ, ಅದು ಅವನ ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆ ತಲೆಯಲ್ಲಾಗಲಿ ಹುಟ್ಟುತ್ತಿರುವ ಚರ್ಮರೋಗವೇ.
ಯಾಜಕಕಾಂಡ 13 : 43 (OCVKN)
ಆಗ ಯಾಜಕನು ಅವನನ್ನು ಪರೀಕ್ಷಿಸಬೇಕು. ಅವನ ಬೋಳು ತಲೆಯಲ್ಲಾಗಲಿ, ಇಲ್ಲವೆ ಅವನ ಪಟ್ಟೆ ತಲೆಯಲ್ಲಾಗಲಿ ಏಳುತ್ತಿರುವ ಆ ಕಲೆಯು ಬಿಳುಪಾಗಿ ಕೆಂಪಾಗಿದ್ದರೆ ಮತ್ತು ಮಾಂಸದ ತೊಗಲಿನಲ್ಲಿ ಇರುವ ಚರ್ಮರೋಗದ ಹಾಗಿದ್ದರೆ, ಅವನು ರೋಗಿ ಎಂದೂ ಅಶುದ್ಧನೆಂದೂ
ಯಾಜಕಕಾಂಡ 13 : 44 (OCVKN)
ಅವನ ವ್ಯಾಧಿಯು ಅವನ ತಲೆಯಲ್ಲಿ ಕಾಣಿಸಿದ್ದರಿಂದ ಅವನು ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು.
ಯಾಜಕಕಾಂಡ 13 : 45 (OCVKN)
“ಚರ್ಮರೋಗ ಇರುವ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡವನಾಗಿ, ತಲೆಗೂದಲನ್ನು ಕೆದರಿಕೊಂಡು, ಮುಖದ ಕೆಳಭಾಗವನ್ನು ಮುಚ್ಚಿಕೊಂಡು, ‘ನಾನು ಅಶುದ್ಧನು, ಅಶುದ್ಧನು,’ ಎಂದು ಕೂಗಬೇಕು.
ಯಾಜಕಕಾಂಡ 13 : 46 (OCVKN)
ಆ ವ್ಯಾಧಿ ಅವನಲ್ಲಿ ಇರುವಷ್ಟು ದಿನಗಳೂ ಅವನು ಅಶುದ್ಧನಾಗಿರುವನು. ಅವನು ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.
ಯಾಜಕಕಾಂಡ 13 : 47 (OCVKN)
ಬೂಜು ಹಿಡಿದ ವಸ್ತುಗಳು “ಬೂಜು ಚರ್ಮರೋಗದ ಗುರುತು ಅವನ ಉಡುಪಿನಲ್ಲೂ ಇದ್ದು, ಅದು ಉಣ್ಣೆಯ ಉಡುಪಾಗಲಿ ಇಲ್ಲವೆ ನಾರಿನ ಉಡುಪಾಗಲಿ,
ಯಾಜಕಕಾಂಡ 13 : 48 (OCVKN)
ನಾರಿನ ಇಲ್ಲವೆ ಉಣ್ಣೆಯ ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ಚರ್ಮದಲ್ಲಾಗಲಿ, ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ ಇದಲ್ಲದೆ ಹಸುರಾಗಿ ಇಲ್ಲವೆ,
ಯಾಜಕಕಾಂಡ 13 : 49 (OCVKN)
ಆ ಬಟ್ಟೆ ತೊಗಲು ಹಾಸು ಇಲ್ಲವೆ ಚರ್ಮದಿಂದ ಮಾಡಿದ ಯಾವ ವಸ್ತುವಿನಲ್ಲಾಗಲಿ, ಹಸುರಾಗಿ ಇಲ್ಲವೆ ಕೆಂಪಾಗಿ ಇದ್ದರೆ ಅದು ಬೂಜಾಗಿದೆ. ಅದನ್ನು ಯಾಜಕನಿಗೆ ತೋರಿಸಬೇಕು.
ಯಾಜಕಕಾಂಡ 13 : 50 (OCVKN)
ಯಾಜಕನು ಅದನ್ನು ಪರೀಕ್ಷಿಸಿ, ಆ ವಸ್ತುವನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು.
ಯಾಜಕಕಾಂಡ 13 : 51 (OCVKN)
ಅವನು ಏಳನೆಯ ದಿನದಲ್ಲಿ ಅದನ್ನು ಪರೀಕ್ಷಿಸಬೇಕು. ಆ ಬೂಜು ಅವನ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹೆಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಹರಡಿದ್ದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದು ಅಶುದ್ಧವು.
ಯಾಜಕಕಾಂಡ 13 : 52 (OCVKN)
ಆದ್ದರಿಂದ ಅವನು ಆ ಉಡುಪುಗಳನ್ನು ಅಂದರೆ ಅದು ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಎಲ್ಲಿ ಬೂಜಿದೆಯೋ ಅದನ್ನು ಸುಡಬೇಕು. ಏಕೆಂದರೆ ಅದು ನಾಶಕರವಾದ ಬೂಜುರೋಗವಾಗಿದೆ. ಅದನ್ನು ಬೆಂಕಿಯಿಂದ ಸುಡಬೇಕು.
ಯಾಜಕಕಾಂಡ 13 : 53 (OCVKN)
“ಯಾಜಕನು ಪರೀಕ್ಷಿಸಿದಾಗ ಬೂಜು ಉಡುಪಿನಲ್ಲಾಗಲಿ, ಹಾಸಿನಲ್ಲಾಗಲಿ, ಹೊಕ್ಕಿನಲ್ಲಾಗಲಿ, ತೊಗಲಿನ ವಸ್ತುಗಳಲ್ಲಾಗಲಿ ಹರಡದಿದ್ದರೆ,
ಯಾಜಕಕಾಂಡ 13 : 54 (OCVKN)
ಆಗ ಯಾಜಕನು ಆ ಬೂಜುಳ್ಳ ವಸ್ತುವನ್ನು ತೊಳೆಯುವಂತೆ ಆಜ್ಞಾಪಿಸಿ, ಅದನ್ನು ಅವನು ಏಳು ದಿನಗಳ ಕಾಲ ಹೆಚ್ಚಾಗಿ ಪ್ರತ್ಯೇಕವಾಗಿ ಇರಿಸಬೇಕು.
ಯಾಜಕಕಾಂಡ 13 : 55 (OCVKN)
ಅದನ್ನು ತೊಳೆದಾದ ಮೇಲೆ ಯಾಜಕನು ಆ ಬೂಜನ್ನು ಪರೀಕ್ಷಿಸಬೇಕು. ಆ ಬೂಜು ಬಣ್ಣವನ್ನು ಬದಲಾಯಿಸದಿದ್ದರೆ ಮತ್ತು ಹರಡದಿದ್ದರೆ ಅದು ಅಶುದ್ಧವಾಗಿರುವುದು. ಅದನ್ನು ನೀನು ಬೆಂಕಿಯಿಂದ ಸುಡಬೇಕು. ಅದು ಒಳಗಿನಿಂದಾಗಲಿ ಇಲ್ಲವೆ ಹೊರಗಿನಿಂದಾಗಲಿ ವ್ಯಾಪಿಸಿದೆ.
ಯಾಜಕಕಾಂಡ 13 : 56 (OCVKN)
ಯಾಜಕನು ಅದನ್ನು ಪರೀಕ್ಷಿಸಿದರೆ, ಆ ಬೂಜು ಹಿಡಿದ ವಸ್ತುವನ್ನು ತೊಳೆದ ನಂತರ ಮಬ್ಬಾಗಿದ್ದರೆ ಅವನು ಅದನ್ನು ಬಟ್ಟೆಯಿಂದಾಗಲಿ, ಚರ್ಮದಿಂದಾಗಲಿ, ಹಾಸಿನಿಂದಾಗಲಿ, ಹೊಕ್ಕಿನಿಂದಾಗಲಿ ಹರಿದುಹಾಕಬೇಕು.
ಯಾಜಕಕಾಂಡ 13 : 57 (OCVKN)
ಆದರೆ ಉಣ್ಣೆ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನಲ್ಲಾಗಲಿ ಕಂಡು ಬಂದರೆ ಅದು ಹರಡುವ ಬೂಜು ಮತ್ತು ಬೂಜಿರುವ ವಸ್ತುವನ್ನು ನೀನು ಬೆಂಕಿಯಿಂದ ಸುಡಬೇಕು.
ಯಾಜಕಕಾಂಡ 13 : 58 (OCVKN)
ನೀನು ತೊಳೆದ ಮೇಲೆ ಆ ಬೂಜು ಯಾವ ವಸ್ತುವಿನಿಂದ ಹೊರಟು ಹೋಯಿತೋ, ಆ ಬಟ್ಟೆಯನ್ನೂ, ಹಾಸನ್ನೂ, ಹೊಕ್ಕನ್ನೂ ಇಲ್ಲವೆ ಚರ್ಮದ ಯಾವುದೇ ಸಾಮಗ್ರಿಗಳನ್ನೂ ಎರಡನೆಯ ಸಾರಿ ತೊಳೆಯಬೇಕು. ಆಗ ಅದು ಶುದ್ಧವಾಗಿರುವುದು.”
ಯಾಜಕಕಾಂಡ 13 : 59 (OCVKN)
ಉಣ್ಣೆ ಬಟ್ಟೆಯಲ್ಲಾಗಲಿ ನಾರಿನ ಬಟ್ಟೆಯಲ್ಲಾಗಲಿ, ನೇಯ್ಗೆಯಲ್ಲಾಗಲಿ, ಹಣಿಗೆಯಲ್ಲಾಗಲಿ, ತೊಗಲಿನ ವಸ್ತುವಿನ್ನಾಗಲಿ ಬೂಜು ಹಿಡಿದಿದ್ದರೆ ಪಾಲಿಸತಕ್ಕ ನಿಯಮಗಳಿವು. ಅದನ್ನು ಶುದ್ಧವೆಂದು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇಲ್ಲವೆ ಅಶುದ್ಧವೆಂದು ನುಡಿಯುವುದಕ್ಕೆ ವಿಧಿಯು ಇದೇ.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59