ಪ್ರಲಾಪಗಳು 5 : 1 (OCVKN)
ಯೆಹೋವ ದೇವರೇ, ನಮಗೆ ಏನು ಸಂಭವಿಸಿದೆ ಎಂದು ಜ್ಞಾಪಕಮಾಡಿಕೊಳ್ಳಿರಿ. ಪರಿಗಣಿಸಿ, ನಮ್ಮ ನಿಂದೆಯನ್ನು ನೋಡಿರಿ.
ಪ್ರಲಾಪಗಳು 5 : 2 (OCVKN)
ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ, ನಮ್ಮ ಮನೆಗಳು ಪರರಿಗೂ ವಶವಾದವು.
ಪ್ರಲಾಪಗಳು 5 : 3 (OCVKN)
ನಾವು ಅನಾಥರು, ತಂದೆ ಇಲ್ಲದವರು, ನಮ್ಮ ತಾಯಂದಿರು ವಿಧವೆಯರು.
ಪ್ರಲಾಪಗಳು 5 : 4 (OCVKN)
ನಾವು ನಮ್ಮ ನೀರನ್ನು ಹಣಕೊಟ್ಟು ಕುಡಿಯಬೇಕಾಗಿದೆ. ನಮ್ಮ ಸೌದೆಯು ನಮಗೇ ಮಾರಲಾಗಿದೆ.
ಪ್ರಲಾಪಗಳು 5 : 5 (OCVKN)
ನಮ್ಮನ್ನು ಹಿಂಬಾಲಿಸುವವರು ನಮ್ಮ ನೆರಳಿನಲ್ಲೇ ಇದ್ದಾರೆ; ನಾವು ದಣಿದಿದ್ದೇವೆ ಮತ್ತು ವಿಶ್ರಾಂತಿಯನ್ನು ಕಾಣುವುದಿಲ್ಲ.
ಪ್ರಲಾಪಗಳು 5 : 6 (OCVKN)
ಸಾಕಷ್ಟು ರೊಟ್ಟಿಯನ್ನು ಪಡೆಯಲು ನಾವು ಈಜಿಪ್ಟ್ ಮತ್ತು ಅಸ್ಸೀರಿಯಕ್ಕೆ ಅಧೀನರಾಗಿದ್ದೇವೆ.
ಪ್ರಲಾಪಗಳು 5 : 7 (OCVKN)
ನಮ್ಮ ತಂದೆಗಳು ಪಾಪಮಾಡಿ ಇಲ್ಲವಾದರು. ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.
ಪ್ರಲಾಪಗಳು 5 : 8 (OCVKN)
ಆಳುಗಳು ನಮ್ಮ ಮೇಲೆ ಆಳಿದ್ದಾರೆ. ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವುದಿಲ್ಲ.
ಪ್ರಲಾಪಗಳು 5 : 9 (OCVKN)
ಅಡವಿಯ ಖಡ್ಗದ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.
ಪ್ರಲಾಪಗಳು 5 : 10 (OCVKN)
ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.
ಪ್ರಲಾಪಗಳು 5 : 11 (OCVKN)
ಅವರು ಚೀಯೋನಿನಲ್ಲಿ ಸ್ತ್ರೀಯರ ಮೇಲೆ ಮತ್ತು ಯೆಹೂದದ ನಗರಗಳಲ್ಲಿ ಕನ್ಯೆಯರ ದೌರ್ಜನ್ಯ ಮಾಡಲಾಗಿದೆ.
ಪ್ರಲಾಪಗಳು 5 : 12 (OCVKN)
ರಾಜಕುಮಾರರ ಕೈಗಳನ್ನು ಗಲ್ಲಿಗೆ ನೇತುಹಾಕಿದ್ದಾರೆ. ಹಿರಿಯರಿಗೆ ಗೌರವವಿಲ್ಲ.
ಪ್ರಲಾಪಗಳು 5 : 13 (OCVKN)
ಅವರು ಯೌವನಸ್ಥರನ್ನು ಅರೆಯುವುದಕ್ಕೆ ತೆಗೆದುಕೊಂಡರು ಮತ್ತು ಹುಡುಗರು ಕಟ್ಟಿಗೆಯ ಕೆಳಗೆ ಬಿದ್ದರು.
ಪ್ರಲಾಪಗಳು 5 : 14 (OCVKN)
ಪಟ್ಟಣದ ದ್ವಾರದಿಂದ ಹಿರಿಯರು ಹೋಗಿದ್ದಾರೆ. ಯುವಜನರು ತಮ್ಮ ಸಂಗೀತವನ್ನು ನಿಲ್ಲಿಸಿದ್ದಾರೆ.
ಪ್ರಲಾಪಗಳು 5 : 15 (OCVKN)
ನಮ್ಮ ಹೃದಯಾನಂದವು ತೀರಿತು. ನಮ್ಮ ನರ್ತನವು ಶೋಕವಾಗಿ ಮಾರ್ಪಟ್ಟಿತು.
ಪ್ರಲಾಪಗಳು 5 : 16 (OCVKN)
ಕಿರೀಟವು ನಮ್ಮ ತಲೆಯ ಮೇಲಿನಿಂದ ಬಿದ್ದುಹೋಯಿತು. ಅಯ್ಯೋ, ನಾವು ಪಾಪಮಾಡಿದ್ದೇವೆ.
ಪ್ರಲಾಪಗಳು 5 : 17 (OCVKN)
ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ. ಏಕೆಂದರೆ ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.
ಪ್ರಲಾಪಗಳು 5 : 18 (OCVKN)
ಏಕೆಂದರೆ ಚೀಯೋನ್ ಪರ್ವತವು ಹಾಳಾಗಿರುವುದರಿಂದಲೇ ನರಿಗಳು ಅವುಗಳ ಮೇಲೆ ತಿರುಗಾಡುವುವು.
ಪ್ರಲಾಪಗಳು 5 : 19 (OCVKN)
ಯೆಹೋವ ದೇವರೇ, ನೀವು ಎಂದೆಂದಿಗೂ ಇರುತ್ತೀರಿ. ನಿಮ್ಮ ಸಿಂಹಾಸನವು ತಲತಲಾಂತರಗಳವರೆಗೂ ಇರುವುದು.
ಪ್ರಲಾಪಗಳು 5 : 20 (OCVKN)
ನೀವು ನಮ್ಮನ್ನು ಯಾವಾಗಲೂ ಮರೆಯುವುದೇಕೆ? ಇಷ್ಟುಕಾಲ ನಮ್ಮನ್ನು ಮರೆತಿರುವುದೇಕೆ?
ಪ್ರಲಾಪಗಳು 5 : 21 (OCVKN)
ಯೆಹೋವ ದೇವರೇ, ನಾವು ನಿಮ್ಮ ಕಡೆ ಹಿಂದಿರುಗುವಂತೆ, ನಮ್ಮನ್ನು ನಿಮ್ಮ ಕಡೆಗೆ ಪುನಃ ಸ್ಥಾಪಿಸಿಕೊಳ್ಳಿ. ನಮ್ಮ ದಿನಗಳನ್ನು ಹಿಂದಿನಂತೆಯೇ ನವೀಕರಿಸಿರಿ.
ಪ್ರಲಾಪಗಳು 5 : 22 (OCVKN)
ಯೆಹೋವ ದೇವರೇ, ನೀವು ನಮ್ಮ ಮೇಲೆ ಮಿತಿಮೀರಿ ಸಿಟ್ಟುಗೊಂಡಿರುವಿರೋ? ನಮ್ಮನ್ನು ಸಂಪೂರ್ಣವಾಗಿ ಕೈಬಿಟ್ಟಿರುವಿರೋ?

1 2 3 4 5 6 7 8 9 10 11 12 13 14 15 16 17 18 19 20 21 22