ಯೆಹೋಶುವ 21 : 1 (OCVKN)
ಲೇವಿಯರಿಗಾಗಿ ಪಟ್ಟಣಗಳು ಲೇವಿ ಗೋತ್ರದ ಹಿರಿಯರು, ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲರ ಗೋತ್ರಗಳ ಹಿರಿಯರ ಬಳಿಗೂ ಯಾಜಕನಾದ ಎಲಿಯಾಜರನ ಬಳಿಗೂ ಬಂದರು.
ಯೆಹೋಶುವ 21 : 2 (OCVKN)
ಅವರು ಕಾನಾನ್ ದೇಶದ ಶೀಲೋವಿನಲ್ಲಿ ಅವರನ್ನು ಸಂಧಿಸಿ, “ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ್ದಾರೆ,” ಎಂದರು.
ಯೆಹೋಶುವ 21 : 3 (OCVKN)
ಹಾಗೆಯೇ ಇಸ್ರಾಯೇಲರು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಯೆಹೋವ ದೇವರ ಆಜ್ಞೆಯ ಪ್ರಕಾರ ಪಟ್ಟಣಗಳನ್ನೂ ಗೋಮಾಳಗಳನ್ನೂ ಕೊಟ್ಟರು. ಅವುಗಳ ವಿವರ:
ಯೆಹೋಶುವ 21 : 4 (OCVKN)
ಕೊಹಾತ್ಯರ ಗೋತ್ರಗಳಿಗೆ ಚೀಟು ಬಂದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೆಹೂದದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ, ಬೆನ್ಯಾಮೀನನ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು.
ಯೆಹೋಶುವ 21 : 5 (OCVKN)
ಕೊಹಾತ್ಯರಿಗೆ ಎಫ್ರಾಯೀಮನ ಗೋತ್ರದಲ್ಲಿಯೂ, ದಾನನ ಗೋತ್ರದಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹತ್ತು ಪಟ್ಟಣಗಳು ಚೀಟಿಯಿಂದ ದೊರಕಿದವು.
ಯೆಹೋಶುವ 21 : 6 (OCVKN)
ಗೇರ್ಷೋನ್ಯರಿಗೆ ಇಸ್ಸಾಕಾರನ ಗೋತ್ರದಲ್ಲಿಯೂ, ಆಶೇರನ ಗೋತ್ರದಲ್ಲಿಯೂ, ನಫ್ತಾಲಿಯ ಗೋತ್ರದಲ್ಲಿಯೂ, ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು.
ಯೆಹೋಶುವ 21 : 7 (OCVKN)
ಇದಲ್ಲದೆ ಮೆರಾರೀಯರಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ, ಗಾದನ ಗೋತ್ರದಲ್ಲಿಯೂ, ಜೆಬುಲೂನನ ಗೋತ್ರದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು.
ಯೆಹೋಶುವ 21 : 8 (OCVKN)
ಈ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗೋಮಾಳಗಳನ್ನೂ ಇಸ್ರಾಯೇಲರು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ, ಲೇವಿಯರಿಗೆ ಚೀಟು ಹಾಕಿಕೊಟ್ಟರು.
ಯೆಹೋಶುವ 21 : 9 (OCVKN)
ಅವರು ಯೆಹೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರದಲ್ಲಿಯೂ ಕೆಲವು ಪಟ್ಟಣಗಳನ್ನು ಕೊಟ್ಟರು.
ಯೆಹೋಶುವ 21 : 10 (OCVKN)
ಲೇವಿಯರಿಗೆ ಮೊದಲನೆಯ ಚೀಟು ಬಿದ್ದ ಕಾರಣ, ಲೇವಿ ಗೋತ್ರಕ್ಕೆ ಸೇರಿದ ಕೊಹಾತ್ಯರಾದ ಆರೋನನ ಸಂತತಿಯರಿಗೆ ಯೆಹೂದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ ಕೂಡಲಾದ ಪಟ್ಟಣಗಳ ವಿವರ:
ಯೆಹೋಶುವ 21 : 11 (OCVKN)
ಯೆಹೂದದ ಬೆಟ್ಟಗಳಲ್ಲಿರುವ ಅನಾಕನ ಪಿತೃವಾದ ಕಿರ್ಯತ್ ಅರ್ಬನ ಹೆಸರಿದ್ದ ಪಟ್ಟಣವಾದ ಹೆಬ್ರೋನನ್ನೂ, ಅದರ ಸುತ್ತಲಿರುವ ಗೋಮಾಳಗಳನ್ನೂ ಅವರಿಗೆ ಕೊಟ್ಟರು.
ಯೆಹೋಶುವ 21 : 12 (OCVKN)
ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೂ ಬಾಧ್ಯತೆಯಾಗಿ ಕೊಟ್ಟರು.
ಯೆಹೋಶುವ 21 : 13 (OCVKN)
ಹೀಗೆಯೇ ಯಾಜಕನಾದ ಆರೋನನ ವಂಶದವರಿಗೆ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಕೊಟ್ಟರು. ಲಿಬ್ನಾವನ್ನೂ
ಯೆಹೋಶುವ 21 : 14 (OCVKN)
ಯತ್ತೀರನ್ನೂ ಎಷ್ಟೆಮೋವನ್ನೂ
ಯೆಹೋಶುವ 21 : 15 (OCVKN)
ಹೋಲೋನನ್ನೂ ದೆಬೀರನ್ನೂ
ಯೆಹೋಶುವ 21 : 16 (OCVKN)
ಆಯಿನ್, ಯುಟ್ಟಾ, ಬೇತ್ ಷೆಮೆಷ್ ಎಂಬ ಆ ಎರಡು ಗೋತ್ರಗಳಿಂದ ಈ ಒಂಬತ್ತು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಟ್ಟರು.
ಯೆಹೋಶುವ 21 : 17 (OCVKN)
ಇದಲ್ಲದೆ ಬೆನ್ಯಾಮೀನನ ಗೋತ್ರದಲ್ಲಿ ಗಿಬ್ಯೋನನ್ನೂ ಗೆಬಾನನ್ನೂ
ಯೆಹೋಶುವ 21 : 18 (OCVKN)
ಅನಾತೋತನ್ನೂ ಅಲ್ಮೋನನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಟ್ಟರು.
ಯೆಹೋಶುವ 21 : 19 (OCVKN)
ಯಾಜಕನಾದ ಆರೋನನ ವಂಶದವರಿಗೆ ಒಟ್ಟು ಹದಿಮೂರು ಪಟ್ಟಣಗಳೂ, ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 20 (OCVKN)
ಇದಲ್ಲದೆ ಲೇವಿಯರಾದ ಕೊಹಾತ್ಯನ ಗೋತ್ರದ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯೀಮನ ಗೋತ್ರದಲ್ಲಿ ಚೀಟಿಯಿಂದ ದೊರಕಿದ ಪಟ್ಟಣಗಳ ವಿವರ:
ಯೆಹೋಶುವ 21 : 21 (OCVKN)
ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯೀಮನ ಬೆಟ್ಟಗಳಲ್ಲಿರುವ, ಶೆಕೆಮನ್ನೂ ಗೆಜೆರನ್ನೂ
ಯೆಹೋಶುವ 21 : 22 (OCVKN)
ಕಿಬ್‌ಚೈಮ್ ಮತ್ತು ಬೇತ್ ಹೋರೋನ್ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 23 (OCVKN)
ಇದಲ್ಲದೆ ದಾನ್ಯನ ಗೋತ್ರದಲ್ಲಿ, ಎಲ್ತೆಕೇಯನ್ನೂ ಗಿಬ್ಬೆತೋನನ್ನೂ
ಯೆಹೋಶುವ 21 : 24 (OCVKN)
ಅಯ್ಯಾಲೋನನ್ನೂ ಗತ್ ರಿಮ್ಮೋನನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 25 (OCVKN)
ಮನಸ್ಸೆಯ ಅರ್ಧಗೋತ್ರದಲ್ಲಿ, ತಾನಕನ್ನೂ ಗತ್ ರಿಮ್ಮೋನನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 26 (OCVKN)
ಹೀಗೆ ಉಳಿದಂಥ ಕೊಹಾತ್ಯನ ಗೋತ್ರಗಳಲ್ಲಿ ಹತ್ತು ಪಟ್ಟಣಗಳೂ ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 27 (OCVKN)
ಲೇವಿ ಗೋತ್ರದ ಗೇರ್ಷೋನ್ಯರಿಗೆ ಮನಸ್ಸೆಯ ಅರ್ಧಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿನಲ್ಲಿರುವ ಗೋಲಾನನ್ನೂ ಬೆಯೆಷ್ಟೆರಾವನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 28 (OCVKN)
ಇದಲ್ಲದೆ ಇಸ್ಸಾಕಾರನ ಗೋತ್ರದ ಸೊತ್ತಿನಿಂದ ಕಿಷ್ಯೋನನ್ನೂ ದಾಬೆರತನ್ನೂ
ಯೆಹೋಶುವ 21 : 29 (OCVKN)
ಯರ್ಮೂತ್ ಮತ್ತು ಏಂಗನ್ನೀಮನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 30 (OCVKN)
ಆಶೇರನ ಗೋತ್ರದ ಸೊತ್ತಿನಿಂದ ಮಿಷಾಲನ್ನೂ, ಅಬ್ದೋನನ್ನೂ
ಯೆಹೋಶುವ 21 : 31 (OCVKN)
ಹೆಲ್ಕತನ್ನೂ ರೆಹೋಬನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 32 (OCVKN)
ನಫ್ತಾಲಿಯ ಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಗಲಿಲಾಯದಲ್ಲಿರುವ ಕೆದೆಷನ್ನೂ ಹಮ್ಮೋತ್ ದೋರನ್ನೂ ಕರ್ತಾನನ್ನೂ ಹೀಗೆ ಮೂರು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 33 (OCVKN)
ಗೇರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಹದಿಮೂರು ಪಟ್ಟಣಗಳೂ ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 34 (OCVKN)
ಉಳಿದ ಲೇವಿಯರಾದ ಮೆರಾರೀಯ ಕುಟುಂಬಗಳಿಗೆ ಜೆಬುಲೂನನ ಗೋತ್ರದ ಸೊತ್ತಿನಿಂದ ಯೊಕ್ನೆಯಾಮ್, ಕರ್ತಾ,
ಯೆಹೋಶುವ 21 : 35 (OCVKN)
ದಿಮ್ನಾ, ನಹಲಾಲ್, ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 36 (OCVKN)
ಇದಲ್ಲದೆ ರೂಬೇನನ ಗೋತ್ರದಲ್ಲಿ ಬೆಚೆರನ್ನೂ ಯಹಚವನ್ನೂ
ಯೆಹೋಶುವ 21 : 37 (OCVKN)
ಕೆದೇಮೋತನ್ನೂ ಮೇಫಾತನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 38 (OCVKN)
ಗಾದ್ಯರ ಗೋತ್ರದಲ್ಲಿ, ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನ ರಾಮೋತನ್ನೂ, ಮಹನಯಿಮನ್ನೂ,
ಯೆಹೋಶುವ 21 : 39 (OCVKN)
ಹೆಷ್ಬೋನನ್ನೂ ಯಜ್ಜೇರನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು.
ಯೆಹೋಶುವ 21 : 40 (OCVKN)
ಹೀಗೆಯೇ ಲೇವಿ ಗೋತ್ರದ ಉಳಿದಂಥ ಮೆರಾರೀಯರ ಕುಟುಂಬಗಳ ಪ್ರಕಾರ ಚೀಟಿಯಿಂದ ದೊರೆತ ಪಟ್ಟಣಗಳು ಹನ್ನೆರಡು.
ಯೆಹೋಶುವ 21 : 41 (OCVKN)
ಇಸ್ರಾಯೇಲರ ನಡುವೆ ಲೇವಿಯರಿಗೆ ಒಟ್ಟು ನಾಲ್ವತ್ತೆಂಟು ಪಟ್ಟಣಗಳು ಅವುಗಳ ಗೋಮಾಳ ಸಹಿತವಾಗಿ ದೊರಕಿದವು.
ಯೆಹೋಶುವ 21 : 42 (OCVKN)
ಈ ಪಟ್ಟಣಗಳ ಸುತ್ತಲೂ ಪ್ರತಿ ಒಂದಕ್ಕೂ ಗೋಮಾಳಗಳಿದ್ದವು. ಎಲ್ಲ ಪಟ್ಟಣಗಳಿಗೂ ಹೀಗೆಯೇ ಇದ್ದವು.
ಯೆಹೋಶುವ 21 : 43 (OCVKN)
ಈ ರೀತಿಯಾಗಿ ಯೆಹೋವ ದೇವರು ಅವರ ಪಿತೃಗಳಿಗೆ ಕೊಡುವೆನೆಂದು ಆಣೆಯಿಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟರು. ಇಸ್ರಾಯೇಲರು ಅದನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸವಾಗಿದ್ದರು.
ಯೆಹೋಶುವ 21 : 44 (OCVKN)
ಯೆಹೋವ ದೇವರು ಅವರ ತಂದೆಗಳಿಗೆ ಆಣೆಯಿಟ್ಟ ಪ್ರಕಾರವೇ ಅವರ ಸುತ್ತಲೂ ಅವರಿಗೆ ವಿಶ್ರಾಂತಿಕೊಟ್ಟರು. ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ. ಅವರ ಶತ್ರುಗಳನ್ನೆಲ್ಲಾ ಯೆಹೋವ ದೇವರು ಅವರ ಕೈಗಳಿಗೆ ಒಪ್ಪಿಸಿದರು.
ಯೆಹೋಶುವ 21 : 45 (OCVKN)
ಯೆಹೋವ ದೇವರು ಇಸ್ರಾಯೇಲರಿಗೆ ಹೇಳಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ. ಎಲ್ಲಾ ನೆರವೇರಿದವು.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45