ಯೆಹೋಶುವ 19 : 1 (OCVKN)
ಸಿಮೆಯೋನನ ಪಾಲು ಎರಡನೆಯ ಚೀಟು ಬಿದ್ದ ಭಾಗವು ಸಿಮೆಯೋನನ ಗೋತ್ರದವರದಾಗಿತ್ತು. ಸಿಮೆಯೋನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು. ಅವರ ಸೊತ್ತು ಯೆಹೂದ ಗೋತ್ರದ ಸೊತ್ತಿನ ಮಧ್ಯದಲ್ಲಿತ್ತು.
ಯೆಹೋಶುವ 19 : 2 (OCVKN)
ಅವರಿಗೆ ಸೇರಿದ ಪಟ್ಟಣಗಳು ಯಾವುವೆಂದರೆ: ಬೇರ್ಷೆಬಾ ಅಥವಾ ಶೆಬಾ, ಮೋಲಾದಾ,
ಯೆಹೋಶುವ 19 : 3 (OCVKN)
ಹಚರ್ ಷೂವಾಲ್, ಬಾಲಾ, ಎಚೆಮ್,
ಯೆಹೋಶುವ 19 : 4 (OCVKN)
ಎಲ್ತೋಲದ್, ಬೆತೂಲ್, ಹೊರ್ಮಾ,
ಯೆಹೋಶುವ 19 : 5 (OCVKN)
ಚಿಕ್ಲಗ್, ಬೇತ್ ಮರ್ಕಾಬೋತ್, ಹಚರ್‌ಸೂಸಾ,
ಯೆಹೋಶುವ 19 : 6 (OCVKN)
ಬೇತ್ ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿದ್ದವು.
ಯೆಹೋಶುವ 19 : 7 (OCVKN)
ಇದಲ್ಲದೆ ಆಯಿನ್, ರಿಮ್ಮೋನ್, ಎತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳೂ ಆಗಿದ್ದವು.
ಯೆಹೋಶುವ 19 : 8 (OCVKN)
ಇದರೊಂದಿಗೆ ಬಾಲಾತ್ ಬೇರಿನವರೆಗೂ ಇರುವ ಎಲ್ಲಾ ಪಟ್ಟಣ ಮತ್ತು ಅದರ ಗ್ರಾಮಗಳೂ ಬಾಲತ್ ಬೇರ್ ಎಂಬುದು ದಕ್ಷಿಣದಲ್ಲಿರುವ ನೆಗೇವಿನ ರಾಮದಲ್ಲಿ ಇರುತ್ತದೆ. ಇದೇ ಸಿಮೆಯೋನನ ಗೋತ್ರದವರ ಕುಟುಂಬಗಳ ಪ್ರಕಾರ ದೊರೆತ ಸೊತ್ತು.
ಯೆಹೋಶುವ 19 : 9 (OCVKN)
ಸಿಮೆಯೋನನ ಗೋತ್ರದವರಿಗೆ ಬಾಧ್ಯತೆ ಯೆಹೂದ ಗೋತ್ರದವರ ಭಾಗದಿಂದ ಸಿಕ್ಕಿತು. ಏಕೆಂದರೆ ಯೆಹೂದ ಗೋತ್ರದ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ, ಸಿಮೆಯೋನನ ಗೋತ್ರದವರು ಯೆಹೂದ ಗೋತ್ರದವರ ಎಲ್ಲೆಯ ಒಳಗಿಂದಲೇ ತಮ್ಮ ಪಾಲನ್ನು ಹೊಂದಿದರು.
ಯೆಹೋಶುವ 19 : 10 (OCVKN)
ಜೆಬುಲೂನನ ಪಾಲು ಮೂರನೆಯ ಚೀಟು ಬಿದ್ದ ಭಾಗ ಜೆಬುಲೂನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಬಿದ್ದಿತು. ಅವರ ಬಾಧ್ಯತೆಯ ಮೇರೆ ಸಾರೀದ್ ವರೆಗೂ ಇತ್ತು.
ಯೆಹೋಶುವ 19 : 11 (OCVKN)
ಅಲ್ಲಿಂದ ಪಶ್ಚಿಮ ಕಡೆಗೆ ಹೋಗಿ, ಮರಾಳಕ್ಕೆ ಏರಿ, ದಬ್ಬೆಷೆತಿಗೆ ಹೋಗಿ, ಯೊಕ್ನೆಯಾಮಿಗೆ ಎದುರಾದ ಹಳ್ಳಕ್ಕೆ ಹೋಗುತ್ತದೆ.
ಯೆಹೋಶುವ 19 : 12 (OCVKN)
ಅದು ಸಾರೀದಿನಿಂದ ಸೂರ್ಯನು ಉದಯಿಸುವ ಪೂರ್ವದಿಕ್ಕಿನ ಕಿಸ್ಲೋತ್ ತಾಬೋರಿನ ಮೇರೆಗೆ ತಿರುಗಿ, ಅಲ್ಲಿಂದ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
ಯೆಹೋಶುವ 19 : 13 (OCVKN)
ಅಲ್ಲಿಂದ ಪೂರ್ವದಿಕ್ಕಿನಲ್ಲಿ ಮುಂದುವರೆದು ಗತ್‌ಹೇಫೆರನ್ನು ಮತ್ತು ಎತ್‌ಕಾಚೀನನ್ನು ದಾಟಿ, ರಿಮ್ಮೋನವರೆಗೂ ಹೋಗಿ ನೇಯಗೆ ತಿರುಗುತ್ತದೆ.
ಯೆಹೋಶುವ 19 : 14 (OCVKN)
ಅಲ್ಲಿಂದ ಆ ಮೇರೆ ಉತ್ತರ ದಿಕ್ಕಿನಲ್ಲಿರುವ ಹನ್ನಾತೋನಿಗೆ ಸುತ್ತಿಕೊಂಡು ಇಫ್ತಯೇಲನ ಹಳ್ಳದ ತಗ್ಗಿಗೆ ಮುಗಿಯುತ್ತದೆ.
ಯೆಹೋಶುವ 19 : 15 (OCVKN)
ಈ ಮೇರೆಯಲ್ಲಿರುವ ಕಟ್ಟಾತ್, ನಹಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಮೊದಲಾದ ಹನ್ನೆರಡು ಪಟ್ಟಣಗಳು, ಅವುಗಳ ಗ್ರಾಮಗಳು ಸಹ ಒಳಪಟ್ಟಿರುತ್ತದೆ
ಯೆಹೋಶುವ 19 : 16 (OCVKN)
ಜೆಬುಲೂನಿನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಆ ಪಟ್ಟಣಗಳೂ, ಅವುಗಳ ಗ್ರಾಮಗಳೂ ಅವರ ಬಾಧ್ಯತೆಯಾಗಿದ್ದವು.
ಯೆಹೋಶುವ 19 : 17 (OCVKN)
ಇಸ್ಸಾಕಾರನ ಪಾಲು ನಾಲ್ಕನೆಯ ಚೀಟು ಇಸ್ಸಾಕಾರನ ಸಂತತಿಯವರಿಗೆ ಬಿದ್ದಿತು.
ಯೆಹೋಶುವ 19 : 18 (OCVKN)
ಅವರ ಮೇರೆಯು: ಇಜ್ರೆಯೇಲ್ ಕೆಸುಲೋತ್, ಶೂನೇಮ್,
ಯೆಹೋಶುವ 19 : 19 (OCVKN)
ಹಫಾರಯಿಮ್, ಶಿಯೋನ್, ಅನಾಹರತ್,
ಯೆಹೋಶುವ 19 : 20 (OCVKN)
ರಬ್ಬೀತ್, ಕಿಷ್ಯೋನ್, ಎಬೆಜ್,
ಯೆಹೋಶುವ 19 : 21 (OCVKN)
ರೆಮೆತ್, ಏಂಗನ್ನೀಮ್, ಏನ್ ಹದ್ದಾ, ಬೇತ್ ಪಚ್ಚೇಚ್ ಎಂಬ ತೀರಗಳನ್ನು ಒಳಗೊಂಡಿತ್ತು.
ಯೆಹೋಶುವ 19 : 22 (OCVKN)
ಆ ಎಲ್ಲೆಯು ತಾಬೋರ್, ಶಹಚೀಮಾ, ಬೇತ್ ಷೆಮೆಷ್ ಎಂಬ ಊರುಗಳಿಗೆ ಸೇರಿ ಯೊರ್ದನ್ ನದಿ ತೀರದಲ್ಲಿ ಮುಗಿಯುತ್ತದೆ. ಅಲ್ಲಿ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.
ಯೆಹೋಶುವ 19 : 23 (OCVKN)
ಇಸ್ಸಾಕಾರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ, ಅವುಗಳ ಗ್ರಾಮಗಳೂ ಅವರಿಗೆ ದೊರೆತ ಪಾಲು.
ಯೆಹೋಶುವ 19 : 24 (OCVKN)
ಆಶೇರನ ಪಾಲು ಚೀಟು ಬಿದ್ದ ಐದನೆಯ ಭಾಗವು ಆಶೇರನ ಗೋತ್ರಕ್ಕೆ ಅವರ ಕುಟುಂಬದ ಪ್ರಕಾರ ದೊರೆಯಿತು.
ಯೆಹೋಶುವ 19 : 25 (OCVKN)
ಅವರ ಮೇರೆ: ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
ಯೆಹೋಶುವ 19 : 26 (OCVKN)
ಅಲಮ್ಮೆಲೆಕ್, ಅಮಾದ್, ಮಿಷಾಲ್ ಎಂಬ ಪಟ್ಟಣಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲ್, ಶೀಹೋರ್ ಲಿಬ್ನತ್ ಕಡೆ ಹೋಗಿ,
ಯೆಹೋಶುವ 19 : 27 (OCVKN)
ಅಲ್ಲಿಂದ ಪೂರ್ವದ ಕಡೆಯಾಗಿ ಬೇತ್‌ದಾಗೋನಿಗೆ ತಿರುಗುತ್ತದೆ. ಅನಂತರ ಜೆಬುಲೂನಿಗೂ ಬೇತ್ ಏಮೆಕಿಗೆ ಉತ್ತರ ದಿಕ್ಕಿನಲ್ಲಿ ಇರುವ ಇಫ್ತಯೇಲ್ ತಗ್ಗಿಗೂ ನೆಗೀಯೇಲ್ ಕಡೆ ಹಾದು, ಎಡಭಾಗದಲ್ಲಿರುವ ಕಾಬೂಲ್ ಕಡೆ ಮುಂದುವರೆಯುತ್ತದೆ.
ಯೆಹೋಶುವ 19 : 28 (OCVKN)
ಅಲ್ಲಿಂದ ಅಬ್ದೋನ್* ಅಬ್ದೋನ್ ಕೆಲವು ಮೂಲ ಪ್ರತಿಗಳಲ್ಲಿ ಎಬ್ರೋನ್ , ರೆಹೋಬ್, ಹಮ್ಮೋನ್, ಕಾನಾ ಹಾಗೂ ಸೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.
ಯೆಹೋಶುವ 19 : 29 (OCVKN)
ಅಲ್ಲಿಂದ ರಾಮಾ, ಟೈರ್ ಎಂಬ ಕೋಟೆಪಟ್ಟಣದವರೆಗೂ ಹೋಗುತ್ತದೆ. ಅಲ್ಲಿಂದ ಹೋಸಾ ಕಡೆ ಹೊರಟು ಮೆಡಿಟೆರಿಯನ್ ಸಮುದ್ರದ ಬಳಿ ಅಕ್ಜೀಬ್ ಮೇರೆಯ ಅಂಚಿಗೆ ಮುಗಿಯುತ್ತದೆ.
ಯೆಹೋಶುವ 19 : 30 (OCVKN)
ಅದಕ್ಕೆ ಉಮ್ಮಾ, ಅಫೇಕ್ ಮತ್ತು ರೆಹೋಬ್ ಒಟ್ಟು ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.
ಯೆಹೋಶುವ 19 : 31 (OCVKN)
ಇದೇ ಆಶೇರನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆತ ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿರುತ್ತವೆ.
ಯೆಹೋಶುವ 19 : 32 (OCVKN)
ನಫ್ತಾಲಿಗೆ ದೊರೆತ ಭಾಗ ಆರನೆಯ ಚೀಟು ಬಿದ್ದ ಭಾಗವು ನಫ್ತಾಲಿಯ ಗೋತ್ರದ್ದಾಗಿತ್ತು. ನಫ್ತಾಲಿಯ ಗೋತ್ರದ ಅವರ ಕುಟುಂಬಗಳ ಪ್ರಕಾರ ಪಾಲು ದೊರೆಯಿತು.
ಯೆಹೋಶುವ 19 : 33 (OCVKN)
ಅವರ ಮೇರೆಯು ಹೆಲೇಫ್ ಮತ್ತು ಚಾನನ್ನೀಮ್ ಎಂಬ ಕಡೆಯಲ್ಲಿ ಇರುವ ಅಲ್ಲೋನ್ ಮರದಿಂದ, ಆದಾಮಿ ನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಹಾದು ಲಕ್ಕೂಮ್ ತನಕ ಹೋಗಿ ಯೊರ್ದನ್ ನದಿಯ ತೀರದಲ್ಲಿ ಮುಗಿಯುತ್ತದೆ.
ಯೆಹೋಶುವ 19 : 34 (OCVKN)
ಆ ಮೇರೆಯು ಪಶ್ಚಿಮಕ್ಕೆ ಅಜ್ನೋತ್ ತಾಬೋರ್ ಕಡೆಗೆ ತಿರುಗಿ, ಅಲ್ಲಿಂದ ಹುಕ್ಕೋಕ್ ಹೊರಟು, ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನ್ನೂ ಮತ್ತು ಯೆಹೂದಿಯರ ಮೇರೆಗೂ ಪೂರ್ವದಿಕ್ಕಿನಲ್ಲಿ ಯೊರ್ದನ್ ನದಿಯನ್ನು ಮುಟ್ಟಿ ಬರುವುದು.
ಯೆಹೋಶುವ 19 : 35 (OCVKN)
ಇದರಲ್ಲಿರುವ ಕೋಟೆಗಳುಳ್ಳ ಪಟ್ಟಣಗಳು ಯಾವುವೆಂದರೆ: ಜಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್,
ಯೆಹೋಶುವ 19 : 37 (OCVKN)
ಕೆದೆಷ್, ಎದ್ರೈ, ಎನ್ ಹಾಚೋರ್,
ಯೆಹೋಶುವ 19 : 38 (OCVKN)
ಇರೋನ್, ಮಿಗ್ದಲ್ ಎಲ್, ಹೊರೇಮ್, ಬೇತ್ ಅನಾತ್ ಹಾಗೂ ಬೇತ್ ಷೆಮೆಷ್. ಮೊದಲಾದ ಹತ್ತೊಂಬತ್ತು ಕೋಟೆಪಟ್ಟಣಗಳೂ, ಅವುಗಳ ಗ್ರಾಮಗಳು.
ಯೆಹೋಶುವ 19 : 39 (OCVKN)
ಇದೇ ನಫ್ತಾಲಿಯ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಸೊತ್ತಾಗಿ ಸಿಕ್ಕಿದ ಪಟ್ಟಣಗಳೂ ಅವುಗಳ ಗ್ರಾಮಗಳು.
ಯೆಹೋಶುವ 19 : 40 (OCVKN)
ದಾನ್ ಗೋತ್ರಕ್ಕೆ ದೊರೆತ ಭಾಗ ಇದಲ್ಲದೆ ಏಳನೆಯ ಚೀಟು ಬಿದ್ದ ಭಾಗವು ದಾನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು.
ಯೆಹೋಶುವ 19 : 41 (OCVKN)
ಅವರಿಗೆ ದೊರೆತ ಸೊತ್ತಿನ ವಿವರ: ಚೊರ್ಗಾ, ಎಷ್ಟಾವೋಲ್, ಈರ್ ಷೆಮೆಷ್,
ಯೆಹೋಶುವ 19 : 42 (OCVKN)
ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
ಯೆಹೋಶುವ 19 : 44 (OCVKN)
ಎಲ್ತೆಕೇ, ಗಿಬ್ಬೆತೋನ್, ಬಾಲಾತ್,
ಯೆಹೋಶುವ 19 : 45 (OCVKN)
ಯೆಹುದ್, ಬೆನೇ ಬೆರಕ್, ಗತ್ ರಿಮ್ಮೋನ್,
ಯೆಹೋಶುವ 19 : 46 (OCVKN)
ಮೇಯರ್ಕೋನ್, ರಕ್ಕೋನ್ ಎಂಬ ಪಟ್ಟಣಗಳು. ಯೊಪ್ಪ ಊರಿಗೆ ಎದುರಾದ ಮೇರೆಯು ಸಹ ದೊರಕಿತು.
ಯೆಹೋಶುವ 19 : 47 (OCVKN)
ಇದಲ್ಲದೆ ದಾನನ ಗೋತ್ರದ ಮೇರೆಯು ಅವರಿಗೆ ಸಾಲದ್ದರಿಂದ ಅವರು ಹೊರಟುಹೋಗಿ ಲೆಷೆಮಿನ ಮೇಲೆ ಖಡ್ಗದಿಂದ ಯುದ್ಧಮಾಡಿ, ಅದನ್ನು ಸೋಲಿಸಿ, ಸ್ವಾಧೀನಮಾಡಿಕೊಂಡರು. ಅವರು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.
ಯೆಹೋಶುವ 19 : 48 (OCVKN)
ಈ ಪಟ್ಟಣಗಳೂ, ಅವುಗಳ ಗ್ರಾಮಗಳೂ, ದಾನ್ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರೆತ ಬಾಧ್ಯತೆಯು ಇದೇ.
ಯೆಹೋಶುವ 19 : 49 (OCVKN)
ಯೆಹೋಶುವನಿಗೆ ಕೊಟ್ಟ ಭಾಗ ಅವರು ದೇಶವನ್ನು ಅದರ ಮೇರೆಗಳ ಪ್ರಕಾರ ಬಾಧ್ಯತೆಯಾಗಿ ಹಂಚಿಕೊಂಡ ಮೇಲೆ ಇಸ್ರಾಯೇಲರು ನೂನನ ಮಗನಾದ ಯೆಹೋಶುವನಿಗೆ ತಮ್ಮ ಮಧ್ಯದಲ್ಲಿ ಪಾಲನ್ನು ಕೊಟ್ಟರು.
ಯೆಹೋಶುವ 19 : 50 (OCVKN)
ಅವನು ಕೇಳಿದ ಎಫ್ರಾಯೀಮ್ ಬೆಟ್ಟದಲ್ಲಿರುವ ತಿಮ್ನತ್ ಸೆರಹ ಎಂಬ ಪಟ್ಟಣವನ್ನು ಯೆಹೋವ ದೇವರ ಆಜ್ಞೆಯ ಪ್ರಕಾರ ಕೊಟ್ಟರು. ಅವನು ಪಟ್ಟಣವನ್ನು ಕಟ್ಟಿಕೊಂಡು ಅಲ್ಲಿಯೇ ನೆಲೆಸಿದನು.
ಯೆಹೋಶುವ 19 : 51 (OCVKN)
ಯಾಜಕನಾದ ಎಲಿಯಾಜರನೂ ನೂನನ ಮಗ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ದೇವದರ್ಶನ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಸಮ್ಮುಖದಲ್ಲಿ ಚೀಟುಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಹಂಚಿಕೊಳ್ಳುವ ಕೆಲಸವನ್ನು ಪೂರೈಸಿದರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51