ಯೆಹೋಶುವ 12 : 1 (OCVKN)
ಅಪಜಯಗೊಂಡ ಅರಸರ ಪಟ್ಟಿ ಇಸ್ರಾಯೇಲರು ಯೊರ್ದನ್ ನದಿಯ ಆಚೆ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ಅರ್ನೋನ್ ಕಣಿವೆಯಿಂದ ಹೆರ್ಮೋನ್ ಬೆಟ್ಟದವರೆಗೂ ಅರಾಬಾ ಎಲ್ಲಾ ಪೂರ್ವ ಭಾಗಗಳನ್ನು ಒಳಗೊಂಡಂತೆ ಭೂಪ್ರದೇಶವನ್ನು ಸ್ವಾಧೀನ ಮಾಡಿಸಿಕೊಂಡ ದೇಶಗಳ ಅರಸರು ಯಾರಾರೆಂದರೆ:
ಯೆಹೋಶುವ 12 : 2 (OCVKN)
ಅವರಲ್ಲಿ ಮೊದಲನೆಯವನು ಹೆಷ್ಬೋನಿನಲ್ಲಿದ್ದ ಅಮೋರಿಯರ ಅರಸ ಸೀಹೋನ್ ಎಂಬವನು. ಅವನು ಅರ್ನೋನ್ ಕಣಿವೆಯ ಮಧ್ಯಭಾಗದ ದಾರಿಯ ಬಳಿಯಲ್ಲಿ ಇರುವ ಅರೋಯೇರ್ ನಗರದಿಂದ, ಅರ್ಧ ಗಿಲ್ಯಾದಿನಿಂದಲೂ ಅಮ್ಮೋನಿಯರ ಮೇರೆಯಾದ ಯಬ್ಬೋಕ್ ನದಿಯವರೆಗೆ ಆಳುತ್ತಿದ್ದನು.
ಯೆಹೋಶುವ 12 : 3 (OCVKN)
ಯೊರ್ದನ್ ನದಿಯ ಪೂರ್ವದಲ್ಲಿ ಕಿನ್ನೆರೆತ್* ಕಿನ್ನೆರೆತ್ ಹೀಬ್ರೂ ಭಾಷೆಯಲ್ಲಿ ಗಲಿಲಾಯ ಸಮುದ್ರದಿಂದ ಲವಣ ಸಮುದ್ರವೆನಿಸಿಕೊಳ್ಳುವ ಅರಾಬಾ ಸಮುದ್ರದ ಹತ್ತಿರವಿರುವ ಬೇತ್ ಯೆಷೀಮೋತನವರೆಗೂ ದಕ್ಷಿಣದಲ್ಲಿರುವ ಪಿಸ್ಗಾ ಬೆಟ್ಟದ ಬುಡದವರೆಗೂ ಇರುವ ತಗ್ಗಾದ ಪ್ರದೇಶವು ಸಹ ಅವನ ರಾಜ್ಯವಾಗಿತ್ತು.
ಯೆಹೋಶುವ 12 : 4 (OCVKN)
ಅಷ್ಟಾರೋತ್ ಮತ್ತು ಎದ್ರೈ ಎಂಬ ಊರುಗಳಲ್ಲಿ ವಾಸಮಾಡಿದ್ದ ರೆಫಾಯರ ವಂಶಸ್ಥನೂ ಬಾಷಾನಿನ ಅರಸನೂ ಆದ ಓಗನು ಎರಡನೆಯವನು.
ಯೆಹೋಶುವ 12 : 5 (OCVKN)
ಅವನು ಹೆರ್ಮೋನ್ ಬೆಟ್ಟವನ್ನೂ ಸಲ್ಕಾ ನಗರವನ್ನೂ ಗೆಷೂರಿಯರ ಮತ್ತು ಮಾಕಾತೀಯರ ಮೇರೆಯವರೆಗೂ ಇದ್ದ ಇಡೀ ಬಾಷಾನ್ ನಾಡನ್ನು ಆಳುತ್ತಿದ್ದನು. ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯವರೆಗಿದ್ದ ಗಿಲ್ಯಾದಿನ ಅರ್ಧ ಪ್ರಾಂತ್ಯದವರೆಗೂ ಅವನು ಆಳಿಕೊಂಡಿದ್ದನು.
ಯೆಹೋಶುವ 12 : 6 (OCVKN)
ಯೆಹೋವ ದೇವರ ಸೇವಕನಾದ ಮೋಶೆಯೂ ಇಸ್ರಾಯೇಲರೂ ಅವರನ್ನು ಸೋಲಿಸಿ, ಅವರ ರಾಜ್ಯವನ್ನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆ ಕುಲದ ಅರ್ಧ ಗೋತ್ರದವರಿಗೂ ಸೊತ್ತಾಗಿ ಕೊಟ್ಟನು.
ಯೆಹೋಶುವ 12 : 7 (OCVKN)
ಯೆಹೋಶುವನು ಇಸ್ರಾಯೇಲರ ಸಮೇತ ಯೊರ್ದನ್ ನದಿಯ ಪಶ್ಚಿಮದಲ್ಲಿ ಲೆಬನೋನ್ ಕಣಿವೆಯಲ್ಲಿದ್ದ ಬಾಲ್ಗಾದಿನಿಂದ ಸೇಯೀರಿನ ದಾರಿಯಲ್ಲಿದ್ದ ಹಾಲಾಕ್ ಪರ್ವತದವರೆಗೂ ವಿಸ್ತರಿಸಿಕೊಂಡಿದ್ದ ಮಲೆನಾಡಿನ ಪ್ರದೇಶದ ಅರಸರನ್ನೂ,
ಯೆಹೋಶುವ 12 : 8 (OCVKN)
ಇಳಿಜಾರಿನ ಪ್ರದೇಶ, ಬೆಟ್ಟದ ಪ್ರದೇಶ, ತಪ್ಪಲು ಪ್ರದೇಶ, ಮರುಭೂಮಿ ಹಾಗೂ ದಕ್ಷಿಣ ಪ್ರಾಂತ್ಯ ಇವುಗಳನ್ನು ಆಳುತ್ತಿದ್ದ ಹಿತ್ತಿಯ, ಅಮೋರಿಯ, ಕಾನಾನ್, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಅರಸರನ್ನೂ ಸೋಲಿಸಿ, ಅವರ ನಾಡುಗಳನ್ನು ಇಸ್ರಾಯೇಲ್ ಕುಲಗಳಿಗೆ ಶಾಶ್ವತ ಸೊತ್ತಾಗಿ ಕೊಟ್ಟನು. ಆ ಅರಸರ ಪಟ್ಟಿ ಹೀಗಿದೆ:
ಯೆಹೋಶುವ 12 : 9 (OCVKN)
ಯೆರಿಕೋವಿನ ಅರಸನು ಬೇತೇಲ್ ಬಳಿಯಲ್ಲಿರುವ ಆಯಿ ಪಟ್ಟಣದ ಅರಸನು.
ಯೆಹೋಶುವ 12 : 10 (OCVKN)
ಯೆರೂಸಲೇಮಿನ ಅರಸನು. ಹೆಬ್ರೋನಿನ ಅರಸನು.
ಯೆಹೋಶುವ 12 : 11 (OCVKN)
ಯರ್ಮೂತಿನ ಅರಸನು. ಲಾಕೀಷಿನ ಅರಸನು.
ಯೆಹೋಶುವ 12 : 12 (OCVKN)
ಎಗ್ಲೋನಿನ ಅರಸನು. ಗೆಜೆರಿನ ಅರಸನು.
ಯೆಹೋಶುವ 12 : 13 (OCVKN)
ದೆಬೀರಿನ ಅರಸನು. ಗೆದೆರಿನ ಅರಸನು.
ಯೆಹೋಶುವ 12 : 14 (OCVKN)
ಹೊರ್ಮಾದ ಅರಸನು. ಅರಾದಿನ ಅರಸನು.
ಯೆಹೋಶುವ 12 : 15 (OCVKN)
ಲಿಬ್ನದ ಅರಸನು. ಅದುಲ್ಲಾಮಿನ ಅರಸನು.
ಯೆಹೋಶುವ 12 : 16 (OCVKN)
ಮಕ್ಕೇದದ ಅರಸನು. ಬೇತೇಲಿನ ಅರಸನು.
ಯೆಹೋಶುವ 12 : 17 (OCVKN)
ತಪ್ಪೂಹದ ಅರಸನು. ಹೇಫೆರಿನ ಅರಸನು.
ಯೆಹೋಶುವ 12 : 18 (OCVKN)
ಅಫೇಕದ ಅರಸನು. ಲಷ್ಷಾರೋನಿನ ಅರಸನು.
ಯೆಹೋಶುವ 12 : 19 (OCVKN)
ಮಾದೋನಿನ ಅರಸನು. ಹಾಚೋರಿನ ಅರಸನು.
ಯೆಹೋಶುವ 12 : 20 (OCVKN)
ಶಿಮ್ರೋನ್ ಮೆರೋನಿನ ಅರಸನು. ಅಕ್ಷಾಫಿನ ಅರಸನು.
ಯೆಹೋಶುವ 12 : 21 (OCVKN)
ತಾನಕದ ಅರಸನು. ಮೆಗಿದ್ದೋವಿನ ಅರಸನು.
ಯೆಹೋಶುವ 12 : 22 (OCVKN)
ಕೆದೆಷಿನ ಅರಸನು. ಕರ್ಮೆಲ್ ಬೆಟ್ಟದ ಯೊಕ್ನೆಯಾಮದ ಅರಸನು.
ಯೆಹೋಶುವ 12 : 23 (OCVKN)
ನೆಪೊತ್ ದೋರ್ ಪ್ರಾಂತದ ದೋರಿನ ಅರಸನು. ಗಿಲ್ಗಾಲದಲ್ಲಿಯ ಗೊಯ್ಮದ ಅರಸನು.
ಯೆಹೋಶುವ 12 : 24 (OCVKN)
ತಿರ್ಚದ ಅರಸನು. ಹೀಗೆ ಒಟ್ಟು ಮೂವತ್ತೊಂದು ಮಂದಿ ಅರಸರು ಅಪಜಯಗೊಂಡರು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24