ಯೆರೆಮಿಯ 48 : 1 (OCVKN)
ಮೋವಾಬನ್ನು ಕುರಿತಾಗಿ ಸಂದೇಶ ಮೋವಾಬನ್ನು ಕುರಿತದ್ದು: ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೆಬೋ ಊರಿನವರಿಗೆ ಕಷ್ಟ! ಆ ಊರು ಸೂರೆಯಾಯಿತು; ಕಿರ್ಯಾತಯಿಮು ಶತ್ರುವಿನ ಕೈವಶವಾಗಿ ಅವಮಾನಕ್ಕೆ ಗುರಿಯಾಗಿದೆ; ಬಲವಾದ ಕೋಟೆಯು ಸಹ ಚದರಿ ನಾಚಿಕೆಗೆ ಈಡಾಗಿದೆ.
ಯೆರೆಮಿಯ 48 : 2 (OCVKN)
ಮೋವಾಬಿನ ಸ್ತೋತ್ರ ಇನ್ನು ಮೇಲೆ ಇರುವುದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ರಾಷ್ಟ್ರವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ; ಮದ್ಮೆನೇ, ನೀನು ಸಹ ಸುಮ್ಮನಾಗುವೆ; ಖಡ್ಗವು ನಿನ್ನನ್ನು ಹಿಂದಟ್ಟುವುದು.
ಯೆರೆಮಿಯ 48 : 3 (OCVKN)
ಹೊರೊನಯಿಮಿನಿಂದ ಕೂಗುವ ಸ್ವರವು, ಸೂರೆಯು, ದೊಡ್ಡ ನಾಶವು, ಹೊರಡುವುದು.
ಯೆರೆಮಿಯ 48 : 4 (OCVKN)
ಮೋವಾಬು ನಾಶವಾಯಿತು: ಅದರ ಚಿಕ್ಕವರು ಕೂಗನ್ನು ಕೇಳುವಂತೆ ಮಾಡಿದರು.
ಯೆರೆಮಿಯ 48 : 5 (OCVKN)
ಲೂಹೀತ್ ದಿಣ್ಣೆಯನ್ನು ಅಳುತ್ತಲೇ ಹತ್ತುವರು; ಹೊರೊನಯಿಮಿನ ಇಳಿಜಾರಿನಲ್ಲಿ ಶತ್ರುಗಳು ನಾಶದ ಶಬ್ದವನ್ನು ಕೇಳಿದ್ದಾರೆ.
ಯೆರೆಮಿಯ 48 : 6 (OCVKN)
ಓಡಿಹೋಗಿರಿ, ನಿಮ್ಮ ಪ್ರಾಣಗಳನ್ನು ತಪ್ಪಿಸಿಕೊಳ್ಳಿರಿ; ಮರುಭೂಮಿಯಲ್ಲಿರುವ ಒಣ ಗಿಡದ ಹಾಗಿರಿ.
ಯೆರೆಮಿಯ 48 : 7 (OCVKN)
ಏಕೆಂದರೆ ನಿನ್ನ ಕ್ರಿಯೆಗಳಲ್ಲಿಯೂ, ನಿನ್ನ ದ್ರವ್ಯಗಳಲ್ಲಿಯೂ ನಂಬಿಕೆ ಇಟ್ಟಿದ್ದರಿಂದ, ನೀನು ಸಹ ಸೆರೆಯಾಗುವಿ ಮತ್ತು ಕೆಮೋಷನು, ಅವನ ಯಾಜಕರು, ಅವನ ಪ್ರಧಾನರು ಸಹಿತವಾಗಿ ಸೆರೆಗೆ ಹೋಗುವರು.
ಯೆರೆಮಿಯ 48 : 8 (OCVKN)
ಒಂದೊಂದು ಪಟ್ಟಣದ ಮೇಲೆ ವಿನಾಶಕನು ಬರುವನು; ಯೆಹೋವ ದೇವರು ಹೇಳಿದ ಹಾಗೆಯೇ, ಒಂದು ಪಟ್ಟಣವಾದರೂ ತಪ್ಪಿಸಿಕೊಳ್ಳಲಾರದು. ತಗ್ಗೂ ಸಹ ನಾಶವಾಗುವುದು; ಮತ್ತು ಬಯಲು ಹಾಳಾಗುವುದು.
ಯೆರೆಮಿಯ 48 : 9 (OCVKN)
ಹಾರಿಹೋಗುವ ಹಾಗೆ ಮೋವಾಬಿಗೆ ರೆಕ್ಕೆಗಳನ್ನು ಕೊಡಿರಿ; ಏಕೆಂದರೆ ಅದರ ಪಟ್ಟಣಗಳು ಹಾಳಾಗುವುವು; ಅವುಗಳಲ್ಲಿ ನಿವಾಸಿಗಳಿರುವುದಿಲ್ಲ.
ಯೆರೆಮಿಯ 48 : 10 (OCVKN)
“ಯೆಹೋವ ದೇವರು ನೇಮಿಸಿದ ಕೆಲಸದಲ್ಲಿ ಆಲಸ್ಯಗಾರನು ಶಾಪಗ್ರಸ್ತನಾಗಲಿ; ರಕ್ತದಿಂದ ತನ್ನ ಖಡ್ಗವನ್ನು ಹಿಂದೆಗೆಯುವವನಿಗೆ ಶಾಪವಾಗಲಿ.
ಯೆರೆಮಿಯ 48 : 11 (OCVKN)
“ಮೋವಾಬು ತನ್ನ ಚಿಕ್ಕಂದಿನಿಂದ ಸುಖವಾಗಿತ್ತು; ಅದು ತನ್ನ ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತೆ ಸುಮ್ಮನೆ ಇತ್ತು; ಒಂದು ಪಾತ್ರೆಯೊಳಗಿಂದ ಮತ್ತೊಂದು ಪಾತ್ರೆಗೆ ಹೊಯ್ಯಲಾಗುವುದಿಲ್ಲ; ಸೆರೆಗೆ ಹೋಗಲಿಲ್ಲ; ಆದ್ದರಿಂದ ಅದರ ರುಚಿ ಅದರಲ್ಲಿ ಉಂಟು; ಅದರ ವಾಸನೆ ಬೇರೆ ಆಗಲಿಲ್ಲ.
ಯೆರೆಮಿಯ 48 : 12 (OCVKN)
ಆದ್ದರಿಂದ ಇಗೋ, ದಿನಗಳು ಬರುವವು” ಎಂದು ಯೆಹೋವ ದೇವರು ಅನ್ನುತ್ತಾರೆ; ಆಗ ನಾನು ಅದರ ಬಳಿಗೆ ಅಲೆದಾಡುವವರನ್ನು ಕಳುಹಿಸುವೆನು; ಅವರು ಅದು ಅಲೆದಾಡುವಂತೆ ಮಾಡುವರು; ಅದರ ಪಾತ್ರೆಗಳನ್ನು ಬರಿದುಮಾಡಿ, ತಮ್ಮ ಬುದ್ದಲಿಗಳನ್ನು ಒಡೆಯುವರು.
ಯೆರೆಮಿಯ 48 : 13 (OCVKN)
ಆಗ ಇಸ್ರಾಯೇಲಿನ ಮನೆಯವರು ತಾವು ನಂಬಿಕೊಂಡಿದ್ದ ಬೇತೇಲಿನ ವಿಷಯ ಹೇಗೆ ನಾಚಿಕೆಪಟ್ಟರೋ, ಹಾಗೆಯೇ ಮೋವಾಬು ಕೆಮೋಷನ ವಿಷಯ ನಾಚಿಕೆಪಡುವುದು.
ಯೆರೆಮಿಯ 48 : 14 (OCVKN)
“ ‘ನಾವು ಪರಾಕ್ರಮಶಾಲಿಗಳೂ, ಯುದ್ಧಕ್ಕೆ ಬಲಿಷ್ಠರೂ,’ ಎಂದು ನೀವು ಹೇಳುವುದು ಹೇಗೆ?
ಯೆರೆಮಿಯ 48 : 15 (OCVKN)
ಮೋವಾಬು ಸೂರೆಯಾಯಿತು. ಅದರ ಪಟ್ಟಣಗಳು ಏರಿ ಹೋದವು, ಅದರ ಶ್ರೇಷ್ಠ ಯೌವನಸ್ಥರು ಹತರಾಗುವುದಕ್ಕೆ ಹೋಗಿದ್ದಾರೆ,” ಎಂದು ಸರ್ವಶಕ್ತ ಯೆಹೋವ ಎಂಬ ಹೆಸರುಳ್ಳ ರಾಜಾಧಿರಾಜರ ನುಡಿ.
ಯೆರೆಮಿಯ 48 : 16 (OCVKN)
“ಮೋವಾಬಿಗೆ ಆಪತ್ತು ಬರುವುದಕ್ಕೆ ಸಮೀಪವಾಯಿತು. ಅದರ ಕೇಡು ಬಹು ತ್ವರೆಪಡುತ್ತದೆ.
ಯೆರೆಮಿಯ 48 : 17 (OCVKN)
ಅದರ ಸುತ್ತಲಿರುವವರೆಲ್ಲರೇ, ಅದಕ್ಕೆ ಗೋಳಾಡಿರಿ; ಅದರ ಹೆಸರನ್ನು ಬಲ್ಲವರೆಲ್ಲರೇ, ‘ಬಲವಾದ ಕೋಲೂ, ಮಹಿಮೆಯ ಬೆತ್ತವೂ ಹೇಗೆ ಮುರಿದುಹೋಯಿತು?’ ಎಂದು ಹೇಳಿರಿ.
ಯೆರೆಮಿಯ 48 : 18 (OCVKN)
“ದೀಬೋನಿನ ನಿವಾಸಿಯಾದ ಮಗಳೇ, ನಿನ್ನ ವೈಭವದಿಂದ ಇಳಿದು ಬಾ; ಒಣಭೂಮಿಯ ಬಾಯಾರಿದವಳಂತೆ ಕೂತುಕೋ, ಏಕೆಂದರೆ ಮೋವಾಬನ್ನು ವಿನಾಶ ಮಾಡುವವನು ನಿನ್ನ ಮೇಲೆ ಬರುವನು; ನಿನ್ನ ಬಲವಾದ ಕೋಟೆಗಳನ್ನು ಕೆಡಿಸಿಬಿಡುವನು.
ಯೆರೆಮಿಯ 48 : 19 (OCVKN)
ಅರೋಯೇರಿನ ನಿವಾಸಿಯೇ, ದಾರಿಯ ಬಳಿಯಲ್ಲಿ ನಿಂತು ದೃಷ್ಟಿಸು; ಓಡಿ ಹೋಗುವವನನ್ನೂ, ತಪ್ಪಿಸಿಕೊಳ್ಳುವವನನ್ನೂ ಏನಾಯಿತೆಂದು ಕೇಳು.
ಯೆರೆಮಿಯ 48 : 20 (OCVKN)
ಮೋವಾಬು ಚದರಿಹೋಯಿತೆಂದು ನಾಚಿಕೆಗೆ ಈಡಾಗಿದೆ. ಗೋಳಾಡಿರಿ, ಕೂಗಿರಿ; ಮೋವಾಬು ಹಾಳಾಯಿತೆಂದು ಅರ್ನೋನಿನಲ್ಲಿ ತಿಳಿಸಿರಿ.
ಯೆರೆಮಿಯ 48 : 21 (OCVKN)
ಇದಲ್ಲದೆ ಬಯಲುಸೀಮೆಯ ಮೇಲೆ ನ್ಯಾಯ ತೀರ್ವಿಕೆ ಬಂತು; ಹೋಲೋನ್, ಯಹಚ, ಮೇಫಾತ್,
ಯೆರೆಮಿಯ 48 : 22 (OCVKN)
ದೀಬೋನ್, ನೆಬೋ, ಬೇತ್ ದಿಬ್ಲಾತಯಿಮ್,
ಯೆರೆಮಿಯ 48 : 23 (OCVKN)
ಕಿರ್ಯಾತಯಿಮ್, ಬೇತ್ ಗಾಮುಲ್, ಬೇತ್ ಮೆಯೋನ್,
ಯೆರೆಮಿಯ 48 : 24 (OCVKN)
ಬೊಚ್ರ, ಕೆರೀಯೋತ್, ಹೀಗೆ ಸಮೀಪದಲ್ಲಾಗಲಿ, ದೂರದಲ್ಲಾಗಲಿ ಇರುವ, ಮೋವಾಬಿನ ಸಮಸ್ತ ಪಟ್ಟಣಗಳ ಮೇಲೆಯೂ ಬಂತು.
ಯೆರೆಮಿಯ 48 : 25 (OCVKN)
ಮೋವಾಬಿನ ಕೊಂಬು ಕಡಿದು ಹಾಕಲಾಗಿದೆ; ಅದರ ತೋಳು ಮುರಿಯಲಾಗಿದೆ,” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆರೆಮಿಯ 48 : 26 (OCVKN)
“ಅದನ್ನು ನೀವು ಅಮಲೇರಿಸಿರಿ; ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡಿದೆ; ಮೋವಾಬು ಸಹ ತಾನೇ ವಾಂತಿ ಮಾಡಿದ್ದರಲ್ಲಿ ಹೊರಳಾಡುವುದು; ಅದೇ ಹಾಸ್ಯಕ್ಕಾಗಿರುವುದು.
ಯೆರೆಮಿಯ 48 : 27 (OCVKN)
ಏಕೆಂದರೆ ನಿನ್ನೊಳಗೆ ಇಸ್ರಾಯೇಲೂ ಹಾಸ್ಯಕ್ಕಾಗಿರಲಿಲ್ಲವೋ? ಅದು ಕಳ್ಳರೊಳಗೆ ಸಿಕ್ಕಿತೇನೋ, ಏಕೆಂದರೆ ನೀನು ಅದರ ವಿಷಯ ಯಾವಾಗ ಮಾತನಾಡಿದಂದಿನಿಂದ ತಲೆ ಅಲ್ಲಾಡಿಸಿದ್ದೀಯಲ್ಲಾ.
ಯೆರೆಮಿಯ 48 : 28 (OCVKN)
ಮೋವಾಬಿನಲ್ಲಿ ವಾಸವಾಗಿರುವವರೇ, ಪಟ್ಟಣಗಳನ್ನು ಬಿಟ್ಟು ಬಂಡೆಯಲ್ಲಿ ವಾಸವಾಗಿರಿ; ಸಂದುಗಳ ಬಾಯಿಗಳ ಪಕ್ಕಗಳಲ್ಲಿ ಗೂಡು ಕಟ್ಟುವ ಪಾರಿವಾಳದ ಹಾಗಿರಿ.
ಯೆರೆಮಿಯ 48 : 29 (OCVKN)
“ಮೋವಾಬಿನ ಹೆಮ್ಮೆಯನ್ನು ಕುರಿತು, ಅದರ ಮಹಾ ಗರ್ವವನ್ನು ಕುರಿತು, ಅದರ ಡಂಭವನ್ನೂ, ಅಹಂಕಾರವನ್ನೂ, ಬಡಾಯಿಯನ್ನೂ, ಸೊಕ್ಕಿನ ಹೃದಯವನ್ನೂ ಕುರಿತು ಕೇಳಿದ್ದೇವೆ.
ಯೆರೆಮಿಯ 48 : 30 (OCVKN)
ನಾನು ಅದರ ಕೋಪೋದ್ರೇಕವನ್ನು ಬಲ್ಲೆನೆಂದು, ಅದು ವ್ಯರ್ಥ”, ಎಂದು ಯೆಹೋವ ದೇವರು ಅನ್ನುತ್ತಾರೆ; “ಆದರೆ ಅದು ಹಾಗೆ ಆಗುವುದಿಲ್ಲ; ಅವನ ಸುಳ್ಳುಗಳು ಸರಿಬೀಳುವುದಿಲ್ಲ.
ಯೆರೆಮಿಯ 48 : 31 (OCVKN)
ಆದ್ದರಿಂದ ನಾನು ಮೋವಾಬಿನ ನಿಮಿತ್ತ ಗೋಳಿಡುವೆನು; ಸಮಸ್ತ ಮೋವಾಬಿನ ನಿಮಿತ್ತ ಕೂಗುವೆನು; ಕೀರ್ ಹೆರೆಸಿನ ಮನುಷ್ಯರ ನಿಮಿತ್ತ ನನ್ನ ಹೃದಯವು ದುಃಖಿಸುವುದು.
ಯೆರೆಮಿಯ 48 : 32 (OCVKN)
ಸಿಬ್ಮದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ಅಳುವುದಕ್ಕಿಂತಲು ನಿನ್ನ ನಿಮಿತ್ತವಾಗಿ ಅಳುವೆನು; ನಿನ್ನ ಬಳ್ಳಿಗಳು ಸಮುದ್ರವನ್ನು ದಾಟಿದವು. ಯಜ್ಜೇರಿನ ಸಮುದ್ರಕ್ಕೆ ಮುಟ್ಟಿದವು; ನಿನ್ನ ಹಣ್ಣುಗಳ ಮೇಲೆಯೂ, ನಿನ್ನ ದ್ರಾಕ್ಷಿ ಸುಗ್ಗಿಯ ಮೇಲೆಯೂ ವಿನಾಶ ಮಾಡುವವನು ಬಿದ್ದಿದ್ದಾನೆ.
ಯೆರೆಮಿಯ 48 : 33 (OCVKN)
ಫಲವುಳ್ಳ ಹೊಲದಿಂದಲೂ, ಮೋವಾಬಿನ ದೇಶದಿಂದಲೂ ಸಂತೋಷವೂ, ಉಲ್ಲಾಸವೂ ತೆಗೆಯಲಾಗಿವೆ; ಏಕೆಂದರೆ ದ್ರಾಕ್ಷಿ ಆಲೆಗಳೊಳಗಿಂದ ದ್ರಾಕ್ಷಾರಸವನ್ನು ನಿಲ್ಲಿಸಿದ್ದೇನೆ; ಅವರ ಆರ್ಭಟದ ಸಂಗಡ ಅವರು ಯಾರೂ ತುಳಿಯುವುದಿಲ್ಲ; ಆರ್ಭಟವೇ ಆರ್ಭಟವಾಗುವುದಿಲ್ಲ.
ಯೆರೆಮಿಯ 48 : 34 (OCVKN)
“ಹೆಷ್ಬೋನಿನ ಕೂಗಿನ ನಿಮಿತ್ತ ಎಲೆಯಾಲೆಯವರೆಗೂ, ಯಹಚಿನವರೆಗೂ, ಚೋಗರ್ ಮೊದಲ್ಗೊಂಡು ಹೊರೊನಯಿಮಿನ ಮತ್ತು ಎಗ್ಲತ್ ಶೆಲಿಶೀಯದವರೆಗೆ ಮೂರು ವರ್ಷದ ಕಡಸಿನಂತೆ ತಮ್ಮ ಶಬ್ದವನ್ನೆತ್ತಿದ್ದರು; ಏಕೆಂದರೆ ನಿಮ್ರೀಮ್ನ ನೀರು ಸಹ ಹಾಳಾದವು.
ಯೆರೆಮಿಯ 48 : 35 (OCVKN)
ಇದಲ್ಲದೆ ಎತ್ತರ ಸ್ಥಳಗಳಲ್ಲಿ ಅರ್ಪಿಸುವವನನ್ನೂ, ತನ್ನ ದೇವರುಗಳಿಗೆ ಧೂಪಸುಡುವವನನ್ನೂ ಮೋವಾಬಿನಲ್ಲಿ ನಿಲ್ಲಿಸಿಬಿಡುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆರೆಮಿಯ 48 : 36 (OCVKN)
“ಆದ್ದರಿಂದ ನನ್ನ ಹೃದಯವು ಮೋವಾಬಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವುದು. ನನ್ನ ಹೃದಯವು ಕೀರ್ ಹೆರೆಸಿನ ಮನುಷ್ಯರಿಗೋಸ್ಕರ ಕೊಳಲುಗಳ ಹಾಗೆ ಮೊರೆಯಿಡುವುದು. ಏಕೆಂದರೆ ಅವನು ಮಾಡಿಕೊಂಡ ದ್ರವ್ಯ ನಾಶವಾಯಿತು.
ಯೆರೆಮಿಯ 48 : 37 (OCVKN)
ಏಕೆಂದರೆ ಎಲ್ಲಾ ತಲೆಗಳು ಬೋಳಾಗುವುವು; ಎಲ್ಲಾ ಗಡ್ಡಗಳು ಕ್ಷೌರವಾಗುವುವು; ಎಲ್ಲಾ ಕೈಗಳ ಮೇಲೆ ಗಾಯಗಳು, ಸೊಂಟಗಳ ಮೇಲೆ ಗೋಣಿತಟ್ಟು ಇರುವುವು.
ಯೆರೆಮಿಯ 48 : 38 (OCVKN)
ಮೋವಾಬಿನ ಎಲ್ಲಾ ಮಾಳಿಗೆಗಳ ಮೇಲೆಯೂ, ಅದರ ಎಲ್ಲಾ ಬೀದಿಗಳಲ್ಲಿಯೂ ಗೋಳಾಟ ತುಂಬಿ ಇರುವುದು. ಏಕೆಂದರೆ ಯಾರಿಗೂ ಬೇಡದ ಮಡಕೆಯ ಹಾಗೆ ಮೋವಾಬನ್ನು ನಾನು ಒಡೆದುಬಿಟ್ಟಿದ್ದೇನೆ” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆರೆಮಿಯ 48 : 39 (OCVKN)
“ಆಹಾ, ಭಂಗವಾಯಿತು! ಕಿರುಚಿಕೊಳ್ಳುತ್ತಾರಲ್ಲಾ! ಓಹೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ! ಅದರ ನೆರೆಹೊರೆಯವರು ಅಣಕಿಸುವುದಕ್ಕೂ, ಬೆಚ್ಚಿಬೀಳುವುದಕ್ಕೂ ಆಸ್ಪದವಾಗಿದೆ.”
ಯೆರೆಮಿಯ 48 : 40 (OCVKN)
ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಅವನು ಹದ್ದಿನ ಹಾಗೆ ಹಾರಿ, ಮೋವಾಬಿನ ಮೇಲೆ ತನ್ನ ರೆಕ್ಕೆಗಳನ್ನು ಚಾಚುವನು.
ಯೆರೆಮಿಯ 48 : 41 (OCVKN)
ಕೆರೀಯೋತ್ ಅವನಿಗೆ ವಶವಾಗುವುದು; ಬಲವಾದ ಕೋಟೆಗಳು ಅವನ ಕೈವಶವಾಗುವುವು; ಆ ದಿವಸದಲ್ಲಿ ಮೋವಾಬಿನ ಪರಾಕ್ರಮಶಾಲಿಗಳ ಹೆರುವ ಹೆಣ್ಣಿನ ಎದೆಯದಂತೆ ಅದರುವುದು.
ಯೆರೆಮಿಯ 48 : 42 (OCVKN)
ಏಕೆಂದರೆ ಮೋವಾಬು ಅದು ಯೆಹೋವ ದೇವರಿಗೆ ವಿರೋಧವಾಗಿ ತನ್ನನ್ನು ಹೆಚ್ಚಿಸಿಕೊಂಡದ್ದರಿಂದ, ಜನಾಂಗವಲ್ಲದ ಹಾಗೆ ನಾಶವಾಗುವುದು.
ಯೆರೆಮಿಯ 48 : 43 (OCVKN)
ಮೋವಾಬಿನ ನಿವಾಸಿಯೇ, ಹೆದರಿಕೆಯೂ, ಕುಳಿಯೂ, ಬೋನೂ ನಿನ್ನ ಮೇಲೆ ಇರುವುವು,” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆರೆಮಿಯ 48 : 44 (OCVKN)
“ಹೆದರಿಕೆಗೆ ಓಡಿಹೋಗುವವನು ಗುಂಡಿಯಲ್ಲಿ ಬೀಳುವನು. ಗುಂಡಿಯೊಳಗಿಂದ ಏರಿಬರುವವನು, ಬೋನಿನಲ್ಲಿ ಸಿಕ್ಕಿಬೀಳುವನು. ಏಕೆಂದರೆ ನಾನು ಅದರ ಮೇಲೆ ಅಂದರೆ, ಮೋವಾಬಿನ ಮೇಲೆಯೇ ಅವರ ದಂಡನೆಯ ವರ್ಷವನ್ನು ತರುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
ಯೆರೆಮಿಯ 48 : 45 (OCVKN)
“ಓಡಿ ಹೋದವರು ಹೆಷ್ಬೋನಿನ ನೆರಳಿನಲ್ಲಿ ಅದರ ಶಕ್ತಿಯ ನಿಮಿತ್ತ ನಿಂತುಕೊಂಡರು; ಆದರೆ ಹೆಷ್ಬೋನಿನೊಳಗಿಂದ ಬೆಂಕಿಯೂ, ಸೀಹೋನನ ಮಧ್ಯದಿಂದ ಜ್ವಾಲೆಯೂ ಹೊರಟು ಮೋವಾಬಿನ ಮೂಲೆಯನ್ನೂ, ಗದ್ದಲದ ಮಕ್ಕಳ ನಡುನೆತ್ತಿಯನ್ನೂ ದಹಿಸಿಬಿಡುವುದು.
ಯೆರೆಮಿಯ 48 : 46 (OCVKN)
ಮೋವಾಬೇ, ನೀನೇ ಅಯ್ಯೋ! ಕೆಮೋಷಿನ ಜನರು ನಾಶವಾದರು; ಏಕೆಂದರೆ ನಿನ್ನ ಗಂಡು ಹೆಣ್ಣುಮಕ್ಕಳು, ಗಡೀಪಾರಾಗಿ ಸೆರೆಯಾದರು.
ಯೆರೆಮಿಯ 48 : 47 (OCVKN)
“ಆದರೂ ನಾನು ಕಡೇ ದಿವಸಗಳಲ್ಲಿ ಮೋವಾಬಿನ ಸಮೃದ್ಧಿಯನ್ನು ತಿರುಗಿ ತರುತ್ತೇನೆ,” ಎಂದು ಯೆಹೋವ ದೇವರು ಹೇಳುತ್ತಾರೆ. ಈವರೆಗೆ ಮೋವಾಬಿನ ನ್ಯಾಯ ತೀರ್ವಿಕೆಯು ಇರುವುದು.
❮
❯
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47