ಯೆರೆಮಿಯ 39 : 1 (OCVKN)
1 ಯೆಹೂದದ ಅರಸನಾದ ಚಿದ್ಕೀಯನ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯದೊಂದಿಗೆ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದನ್ನು ಮುತ್ತಿಗೆ ಹಾಕಿದರು.
ಯೆರೆಮಿಯ 39 : 2 (OCVKN)
ಚಿದ್ಕೀಯನ ಹನ್ನೊಂದನೆಯ ವರ್ಷದ ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣವು ಒಡೆಯಲಾಯಿತು.
ಯೆರೆಮಿಯ 39 : 3 (OCVKN)
ನೇರ್ಗಲ್ ಸರೆಚರ್, ಸಮ್ಗರ್‌ನೆಬೊ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಚೋಯಿಸರ ಮುಖ್ಯಸ್ಥ ನೇರ್ಗಲ್ ಸರೆಚರ್, ಹೀಗೆ ಬಾಬಿಲೋನಿಯದ ಅರಸನ ಎಲ್ಲಾ ಪದಾಧಿಕಾರಿಗಳು ಪುರಪ್ರವೇಶ ಮಾಡಿ, ಮಧ್ಯಮ ದ್ವಾರದೊಳಗೆ ಕುಳಿತುಕೊಂಡರು.
ಯೆರೆಮಿಯ 39 : 4 (OCVKN)
ಇವರನ್ನು ನೋಡಿ ಯೆಹೂದದ ಅರಸನಾದ ಚಿದ್ಕೀಯನು ಮತ್ತು ಸಮಸ್ತ ಸೈನಿಕರು ಅದೇ ರಾತ್ರಿಯಲ್ಲಿ ಹೊರಟು, ಅರಸನ ಉದ್ಯಾನ ಮಾರ್ಗವಾಗಿ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನಿಂದ ನಗರವನ್ನು ಬಿಟ್ಟು, ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು.
ಯೆರೆಮಿಯ 39 : 5 (OCVKN)
ಆಗ ಕಸ್ದೀಯರ ದಂಡು ಅವರನ್ನು ಹಿಂದಟ್ಟಿ, ಯೆರಿಕೋವಿನ ಬಯಲು ಸ್ಥಳದಲ್ಲಿ ಚಿದ್ಕೀಯನನ್ನು ಹಿಡಿದರು. ಅನಂತರ ಹಮಾತ್ ನಾಡಿನ ರಿಬ್ಲದಲ್ಲಿರುವ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ಅವನನ್ನು ತೆಗೆದುಕೊಂಡು ಬಂದು, ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು.
ಯೆರೆಮಿಯ 39 : 6 (OCVKN)
ಆ ಬಾಬಿಲೋನಿಯದ ಅರಸನು ಅಲ್ಲೇ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಯೆಹೂದದ ಎಲ್ಲಾ ಶ್ರೇಷ್ಠರನ್ನೂ ರಿಬ್ಲದಲ್ಲಿ ಕೊಲ್ಲಿಸಿದನು.
ಯೆರೆಮಿಯ 39 : 7 (OCVKN)
ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಕಂಚಿನ ಬೇಡಿಹಾಕಿಸಿ, ಬಾಬಿಲೋನಿಗೆ ಸಾಗಿಸಿದನು.
ಯೆರೆಮಿಯ 39 : 8 (OCVKN)
ಅರಮನೆಯನ್ನೂ, ಜನರ ಮನೆಗಳನ್ನೂ, ಬಾಬಿಲೋನಿಯರು ಬೆಂಕಿಯಿಂದ ಸುಟ್ಟರು. ಯೆರೂಸಲೇಮಿನ ಗೋಡೆಗಳನ್ನು ಕೆಡವಿಬಿಟ್ಟರು.
ಯೆರೆಮಿಯ 39 : 9 (OCVKN)
ಆಗ ಪಟ್ಟಣದೊಳಗೆ ಉಳಿದವರನ್ನೂ, ಮೊದಲೇ ತನ್ನನ್ನು ಮೊರೆ ಹೋದವರನ್ನೂ, ಇತರ ಸಮಸ್ತ ಜನರನ್ನೂ ಕಾವಲಿನವರ ಅಧಿಪತಿಯಾದ ನೆಬೂಜರದಾನನು ಬಾಬಿಲೋನಿಗೆ ಸೆರೆಹಿಡಿದು ಕರೆದುಕೊಂಡು ಹೋದನು.
ಯೆರೆಮಿಯ 39 : 10 (OCVKN)
ಆದರೆ ಜನರೊಳಗೆ ಏನಿಲ್ಲದವರಾದ ಬಡವರಲ್ಲಿ ಕೆಲವರನ್ನು ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆಹೂದ ದೇಶದಲ್ಲಿ ಬಿಟ್ಟು, ಅವರಿಗೆ ಆಗಲೇ ದ್ರಾಕ್ಷಿತೋಟಗಳನ್ನೂ, ಹೊಲಗಳನ್ನೂ ಕೊಟ್ಟನು.
ಯೆರೆಮಿಯ 39 : 11 (OCVKN)
ಇದಲ್ಲದೆ ಯೆರೆಮೀಯನ ವಿಷಯವಾಗಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನಿಗೆ ಆಜ್ಞಾಪಿಸಿದ್ದೇನೆಂದರೆ:
ಯೆರೆಮಿಯ 39 : 12 (OCVKN)
“ಅವನನ್ನು ಚೆನ್ನಾಗಿ ನೋಡಿಕೋ, ಅವನಿಗೆ ಕೆಟ್ಟದ್ದೇನೂ ಮಾಡಬೇಡ; ಆದರೆ ಅವನು ನಿನಗೆ ಹೇಗೆ ಹೇಳುವನೋ, ಹಾಗೆಯೇ ಅವನಿಗೆ ಮಾಡು,” ಎಂದನು.
ಯೆರೆಮಿಯ 39 : 13 (OCVKN)
ಹೀಗೆ ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನನ್ನೂ, ಕಂಚುಕಿಯರ ಮುಖ್ಯಸ್ಥನಾದ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥನಾದ ನೇರ್ಗಲ್ ಸರೆಚರ್ ಅಂತು ಬಾಬೆಲಿನ ಅರಸನ ಸಮಸ್ತ ಮುಖ್ಯಾಧಿಕಾರಿಗಳನ್ನೂ ಕಳುಹಿಸಿದನು.
ಯೆರೆಮಿಯ 39 : 14 (OCVKN)
ಅವರು ಕಳುಹಿಸಿ ಯೆರೆಮೀಯನನ್ನು ಸೆರೆಮನೆಯ ಅಂಗಳದಿಂದ ತೆಗೆಸಿ, ಶಾಫಾನನ ಮೊಮ್ಮಗನೂ ಅಹೀಕಾಮನ ಮಗನಾದ ಗೆದಲ್ಯನಿಗೆ ಒಪ್ಪಿಸಿ, ಮನೆಗೆ ಕರೆದುಕೊಂಡು ಹೋಗಬೇಕೆಂದು ಅಪ್ಪಣೆಕೊಟ್ಟರು. ಹಾಗೆ ಅವನು ಜನರ ಮಧ್ಯದಲ್ಲಿ ವಾಸವಾಗಿದ್ದನು.
ಯೆರೆಮಿಯ 39 : 15 (OCVKN)
ಯೆರೆಮೀಯನು ಸೆರೆಮನೆಯ ಅಂಗಳದಲ್ಲಿರುವಾಗ ಯೆಹೋವ ದೇವರ ವಾಕ್ಯವು ಅವನಿಗೆ ಹೇಳಿದ್ದೇನೆಂದರೆ:
ಯೆರೆಮಿಯ 39 : 16 (OCVKN)
“ನೀನು ಹೋಗಿ ಕೂಷ್ಯನಾದ ಎಬೆದ್ಮೆಲೆಕನ ಸಂಗಡ ಮಾತನಾಡಿ, ಹೇಳತಕ್ಕದ್ದೇನೆಂದರೆ: ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಒಳ್ಳೆಯದಕ್ಕಾಗಿ ಅಲ್ಲ, ಕೆಟ್ಟದ್ದಕ್ಕಾಗಿ ನನ್ನ ಮಾತುಗಳನ್ನು ಈ ಪಟ್ಟಣದ ಮೇಲೆ ಬರಮಾಡುತ್ತೇನೆ. ಅವು ಆ ದಿವಸಗಳಲ್ಲಿ ನಿನ್ನ ಮುಂದೆಯೇ ನೆರವೇರುವುವು.
ಯೆರೆಮಿಯ 39 : 17 (OCVKN)
ಆದರೆ ಆ ದಿವಸದಲ್ಲಿ ನಾನು ನಿನ್ನನ್ನು ಬಿಡುಗಡೆ ಮಾಡುವೆನೆಂದು ಯೆಹೋವ ದೇವರು ಹೇಳುತ್ತಾರೆ. ನೀನು ಹೆದರಿಕೊಳ್ಳುವ ಮನುಷ್ಯರ ಕೈಯಲ್ಲಿ ಒಪ್ಪಿಸಲಾಗುವುದಿಲ್ಲ.
ಯೆರೆಮಿಯ 39 : 18 (OCVKN)
ಏಕೆಂದರೆ ನಾನು ನಿಶ್ಚಯವಾಗಿ ನಿನ್ನನ್ನು ಬಿಡಿಸುವೆನು. ನೀನು ಖಡ್ಗದಿಂದ ಬೀಳುವುದಿಲ್ಲ. ಆದರೆ ನೀನು ನನ್ನಲ್ಲಿ ನಂಬಿಕೆ ಇಟ್ಟದ್ದರಿಂದ, ನಿನ್ನ ಪ್ರಾಣವು ನಿನಗೆ ಕೊಳ್ಳೆಯಾಗಿರುವುದೆಂದು ಯೆಹೋವ ದೇವರು ಹೇಳುತ್ತಾರೆ,’ ” ಎಂಬುದು.

1 2 3 4 5 6 7 8 9 10 11 12 13 14 15 16 17 18