ಯೆರೆಮಿಯ 18 : 1 (OCVKN)
ಕುಂಬಾರನ ಮನೆಯಲ್ಲಿ ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ,
ಯೆರೆಮಿಯ 18 : 2 (OCVKN)
“ನೀನು ಎದ್ದು ಕುಂಬಾರನ ಮನೆಗೆ ಇಳಿದು ಹೋಗು. ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೊಡುತ್ತೇನೆ,” ಎಂದರು.
ಯೆರೆಮಿಯ 18 : 3 (OCVKN)
ಆಗ ನಾನು ಕುಂಬಾರನ ಮನೆಗೆ ಇಳಿದು ಹೋದೆನು. ಇಗೋ, ಅವನು ಚಕ್ರದ ಮೇಲೆ ಕೆಲಸ ಮಾಡುತ್ತಿದ್ದನು.
ಯೆರೆಮಿಯ 18 : 4 (OCVKN)
ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟು ಹೋಯಿತು. ಆಗ ಕುಂಬಾರನಿಗೆ ಒಳ್ಳೆಯದೆಂದು ತೋರುವ ಪ್ರಕಾರ, ಅದನ್ನು ಮತ್ತೊಂದು ಪಾತ್ರೆಯನ್ನಾಗಿ ಮಾಡಿದನು.
ಯೆರೆಮಿಯ 18 : 5 (OCVKN)
ಅನಂತರ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ,
ಯೆರೆಮಿಯ 18 : 6 (OCVKN)
“ಈ ಇಸ್ರಾಯೇಲಿನ ಮನೆತನದವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡಲಾರೆನೇ, ಎಂದು ಯೆಹೋವ ದೇವರು ಅನ್ನುತ್ತಾರೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ, ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ.
ಯೆರೆಮಿಯ 18 : 7 (OCVKN)
ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವುದಕ್ಕೂ ಕೆಡವುದಕ್ಕೂ ನಾಶಮಾಡುವುದಕ್ಕೂ ಮಾತಾಡುತ್ತೇನೋ,
ಯೆರೆಮಿಯ 18 : 8 (OCVKN)
ನಾನು ಆ ಜನಾಂಗಕ್ಕೆ ವಿರೋಧವಾಗಿ ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ, ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು.
ಯೆರೆಮಿಯ 18 : 9 (OCVKN)
ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಮಾತನಾಡುತ್ತೇನೋ,
ಯೆರೆಮಿಯ 18 : 10 (OCVKN)
ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ, ನಾನು ಅದಕ್ಕೆ ಉಪಕಾರ ಮಾಡುತ್ತೇನೆಂದು ಹೇಳಿದ ಒಳ್ಳೆಯದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು.
ಯೆರೆಮಿಯ 18 : 11 (OCVKN)
“ಹೀಗಿರುವುದರಿಂದ ಈಗ ಯೆಹೂದದ ಮನುಷ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ನೀನು ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮಗೆ ವಿರೋಧವಾಗಿ ಕೆಟ್ಟದ್ದನ್ನು ಕಲ್ಪಿಸುತ್ತಾ ಇದ್ದೇನೆ. ನಿಮಗೆ ವಿರೋಧವಾಗಿ ಉಪಾಯವನ್ನು ಆಲೋಚಿಸುತ್ತಾ ಇದ್ದೇನೆ. ನಿಮ್ಮ ನಿಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂದಿರುಗಿರಿ. ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ ಒಳ್ಳೆಯದಾಗಿ ಮಾಡಿರಿ.
ಯೆರೆಮಿಯ 18 : 12 (OCVKN)
ಆದರೆ ಅವರೋ ಏನೂ ಪ್ರಯೋಜನ ಇಲ್ಲ. ಏಕೆಂದರೆ ಸ್ವಂತ ಆಲೋಚನೆಗಳ ಪ್ರಕಾರ ನಡೆದುಕೊಳ್ಳುವೆವು. ನಾವೆಲ್ಲರೂ ನಮ್ಮ ದುಷ್ಟ ಹೃದಯದ ಮೊಂಡುತನವನ್ನು ಅನುಸರಿಸುತ್ತೇವೆ,’ ಎಂದರು.”
ಯೆರೆಮಿಯ 18 : 13 (OCVKN)
ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ: “ಇತರ ಜನಾಂಗಗಳಲ್ಲಿ ವಿಚಾರಿಸಿರಿ. ಇಂಥವುಗಳನ್ನು ಯಾರು ಕೇಳಿದ್ದಾರೆ? ಇಸ್ರಾಯೇಲೆಂಬ ಕನ್ಯೆಯು ಮಹಾ ಭಯಂಕರವಾದದ್ದನ್ನು ಮಾಡಿದ್ದಾಳೆ.
ಯೆರೆಮಿಯ 18 : 14 (OCVKN)
ಹೊಲದ ಬಂಡೆಯಿಂದ ಬರುವ ಲೆಬನೋನಿನ ಹಿಮವು ತಪ್ಪುವುದೇ? ದೂರದಿಂದ ಇಳಿದು ಹರಿಯುವ ತಂಪಾದ ಪ್ರವಾಹದ ನೀರು ಬತ್ತುವುದೇ?
ಯೆರೆಮಿಯ 18 : 15 (OCVKN)
ನನ್ನ ಜನರಾದರೋ ನನ್ನನ್ನು ಮರೆತುಬಿಟ್ಟಿದ್ದಾರೆ. ವ್ಯರ್ಥವಾದ ವಿಗ್ರಹಗಳಿಗೆ ಧೂಪವನ್ನರ್ಪಿಸಿದ್ದಾರೆ. ಅವು ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ ಅವರನ್ನು ಎಡವುವಂತೆ ಮಾಡಿ, ಮಾರ್ಗವಲ್ಲದ ಕಾಲು ದಾರಿಗಳಲ್ಲಿ ಅವರನ್ನು ನಡೆಯುವಂತೆ ಮಾಡಿವೆ.
ಯೆರೆಮಿಯ 18 : 16 (OCVKN)
ಹೀಗೆ ತಮ್ಮ ದೇಶವನ್ನು ಹಾಳಾಗಿಯೂ, ನಿತ್ಯವಾದ ಹಾಸ್ಯಾಸ್ಪದವಾಗಿಯೂ ಮಾಡಿದ್ದಾರೆ. ಅದನ್ನು ಹಾದುಹೋಗುವವರೆಲ್ಲರೂ ವಿಸ್ಮಿತರಾಗಿ ತಲೆ ಅಲ್ಲಾಡಿಸುವರು.
ಯೆರೆಮಿಯ 18 : 17 (OCVKN)
ಮೂಡಣ ಗಾಳಿಯಿಂದ ಆದ ಹಾಗೆ, ಅವರನ್ನು ಶತ್ರುವಿನ ಮುಂದೆ ಚದರಿಸುವೆನು. ಅವರ ಆಪತ್ತಿನ ದಿವಸದಲ್ಲಿ ಅವರಿಗೆ ಮುಖವನ್ನಲ್ಲ ಬೆನ್ನನ್ನು ತೋರಿಸುವೆನು.”
ಯೆರೆಮಿಯ 18 : 18 (OCVKN)
ಯೆರೆಮಿಯ 18 : 19 (OCVKN)
ಆಗ ಜನರು, “ಬನ್ನಿರಿ, ಯೆರೆಮೀಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ. ಯಾಜಕನಿಂದ ನಿಯಮ ಬೋಧನೆಯೂ, ಜ್ಞಾನಿಯಿಂದ ಆಲೋಚನೆಯೂ, ಪ್ರವಾದಿಯಿಂದ ವಾಕ್ಯವೂ ನಿಂತುಹೋಗುವುದಿಲ್ಲ. ಬನ್ನಿರಿ, ನಾಲಿಗೆಯಿಂದ ಅವನನ್ನು ಆಕ್ರಮಿಸೋಣ. ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ,” ಎಂದು ಹೇಳಿದರು. ಓ ಯೆಹೋವ ದೇವರೇ, ನನಗೆ ಕಿವಿಗೊಡು. ನನ್ನ ಸಂಗಡ ವ್ಯಾಜ್ಯವಾಡುವವರ ಮಾತನ್ನು ಕೇಳು.
ಯೆರೆಮಿಯ 18 : 20 (OCVKN)
ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ? ಏಕೆಂದರೆ, ಅವರು ನನ್ನ ಪ್ರಾಣಕ್ಕೆ ಕುಳಿಯನ್ನು ಅಗೆದಿದ್ದಾರೆ. ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವುದಕ್ಕೂ, ನಿನ್ನ ಉಗ್ರವನ್ನು ಅವರಿಂದ ತಿರುಗಿಸುವುದಕ್ಕೂ ನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ.
ಯೆರೆಮಿಯ 18 : 21 (OCVKN)
ಆದ್ದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು. ಖಡ್ಗದ ಬಲದಿಂದ ಅವರ ರಕ್ತವನ್ನು ಸುರಿದುಬಿಡು. ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ. ಅವರ ಗಂಡಸರು ಹತರಾಗಲಿ. ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗಕ್ಕೆ ತುತ್ತಾಗಲಿ.
ಯೆರೆಮಿಯ 18 : 22 (OCVKN)
ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ, ಕೂಗು ಅವರ ಮನೆಗಳೊಳಗಿಂದ ಕೇಳ ಬರಲಿ. ಏಕೆಂದರೆ, ನನ್ನನ್ನು ಹಿಡಿಯುವುದಕ್ಕೆ ಕುಳಿ ಅಗೆದಿದ್ದಾರೆ. ನನ್ನ ಕಾಲುಗಳಿಗೆ ಉರುಲುಗಳನ್ನು ಒಡ್ಡಿದ್ದಾರೆ.
ಯೆರೆಮಿಯ 18 : 23 (OCVKN)
ಆದರೂ ಯೆಹೋವ ದೇವರೇ, ಅವರು ನನ್ನನ್ನು ಸಾಯಿಸುವುದಕ್ಕೆ ನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀವು ಬಲ್ಲಿರಿ. ಅವರ ಅಕ್ರಮವನ್ನು ಮನ್ನಿಸಬೇಡಿ. ಅವರ ಪಾಪಗಳನ್ನು ನಿನ್ನ ಸನ್ನಿಧಿಯೊಳಗಿಂದ ಅಳಿಸಿಬಿಡಬೇಡಿರಿ. ಅವರು ನಿಮ್ಮ ಮುಂದೆ ಎಡವಿಬೀಳಲಿ. ನಿಮ್ಮ ಕೋಪದ ಕಾಲದಲ್ಲಿ ಅವರಿಗೆ ತಕ್ಕದ್ದನ್ನು ಮಾಡಿರಿ.

1 2 3 4 5 6 7 8 9 10 11 12 13 14 15 16 17 18 19 20 21 22 23