ಯಾಕೋಬನು 1 : 1 (OCVKN)
ದೇವರಿಗೂ ಕರ್ತ ಆಗಿರುವ ಯೇಸು ಕ್ರಿಸ್ತರಿಗೂ ದಾಸನಾಗಿರುವ ಯಾಕೋಬನು, ವಿವಿಧ ದೇಶಗಳಲ್ಲಿ ಚದರಿರುವ ಇಸ್ರಾಯೇಲರ ಹನ್ನೆರಡು ಗೋತ್ರದವರಿಗೆ ಬರೆಯುವುದು: ನಿಮಗೆ ಶುಭವಾಗಲಿ.
ಯಾಕೋಬನು 1 : 2 (OCVKN)
ಕಷ್ಟಗಳು ಮತ್ತು ಶೋಧನೆಗಳು ನನ್ನ ಪ್ರಿಯರೇ, ನಿಮ್ಮ ನಂಬಿಕೆಯು ವಿವಿಧ ಕಷ್ಟಗಳಿಗೆ ಗುರಿಯಾಗುವಾಗ ಅವುಗಳನ್ನು ಸಂತೋಷದಿಂದ ಎಣಿಸಿಕೊಳ್ಳಿರಿ.
ಯಾಕೋಬನು 1 : 3 (OCVKN)
ನಿಮ್ಮ ನಂಬಿಕೆಯ ಪರೀಕ್ಷೆಯು ದೃಢ ನಿಷ್ಠೆಯನ್ನು ಉಂಟುಮಾಡುತ್ತದೆ ಎಂದು ತಿಳಿದಿದ್ದೀರಿ.
ಯಾಕೋಬನು 1 : 4 (OCVKN)
ಆ ದೃಢ ನಿಷ್ಠೆಯು ನಿಮ್ಮಲ್ಲಿ ಪೂರ್ಣ ಕ್ರಿಯೆಯನ್ನು ಉಂಟುಮಾಡಿದಾಗ, ಆಗ ನೀವು ಪರಿಪಕ್ವತೆಗೆ ಬಂದವರೂ ಪರಿಪೂರ್ಣರೂ ಯಾವ ಕೊರತೆಯೂ ಇಲ್ಲದವರೂ ಆಗಿರುವಿರಿ.
ಯಾಕೋಬನು 1 : 5 (OCVKN)
ನಿಮ್ಮಲ್ಲಿ ಯಾರಿಗಾದರೂ ಜ್ಞಾನ ಕಡಿಮೆಯಾಗಿದ್ದರೆ, ಅವರು ದೇವರನ್ನು ಕೇಳಿಕೊಳ್ಳಲಿ, ಅದು ಅವರಿಗೆ ದೊರಕುವುದು. ದೇವರು ತಪ್ಪು ಕಂಡುಹಿಡಿಯದೆ ಎಲ್ಲರಿಗೂ ಉದಾರಮನಸ್ಸಿನಿಂದ ಕೊಡುವರು.
ಯಾಕೋಬನು 1 : 6 (OCVKN)
ನೀವು ಕೇಳಿಕೊಂಡಾಗ ಸ್ವಲ್ಪವೂ ಸಂದೇಹ ಪಡದೆ ನಂಬಿಕೆಯಿಂದ ಕೇಳಿಕೊಳ್ಳಿರಿ. ಏಕೆಂದರೆ ಸಂದೇಹ ಪಡುವವನು ಬಿರುಗಾಳಿಯ ಬಡಿತಕ್ಕೆ ಒಳಗಾದ ಸಮುದ್ರದ ತೆರೆಯಂತೆ ಅಲೆದಾಡುತ್ತಿರುವನು.
ಯಾಕೋಬನು 1 : 7 (OCVKN)
ಅಂಥವನು ತಾನು ಕರ್ತ ದೇವರಿಂದ ಏನಾದರೂ ಹೊಂದುವೆನೆಂದು ನಿರೀಕ್ಷಿಸದೆ ಇರಲಿ.
ಯಾಕೋಬನು 1 : 8 (OCVKN)
ಅಂತಹ ವ್ಯಕ್ತಿ ಎರಡು ಮನಸ್ಸುಳ್ಳವನೂ ತನ್ನ ಮಾರ್ಗಗಳಲ್ಲೆಲ್ಲಾ ಚಂಚಲನೂ ಆಗಿದ್ದಾನೆ.
ಯಾಕೋಬನು 1 : 9 (OCVKN)
ಹೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತಸ್ಥಿತಿಗೆ ಬಂದೆನೆಂದು ಅಭಿಮಾನಪಡಲಿ.
ಯಾಕೋಬನು 1 : 10 (OCVKN)
ಐಶ್ವರ್ಯವಂತನಾದ ಸಹೋದರನು, ತಾನು ದೀನಸ್ಥಿತಿಗೆ ಬಂದೆನೆಂದು ಅಭಿಮಾನಪಡಲಿ. ಆದರೆ ಐಶ್ವರ್ಯವಂತನು ಕಾಡು ಹೂವಿನಂತೆ ಮರೆಯಾಗುವನು.
ಯಾಕೋಬನು 1 : 11 (OCVKN)
ಸೂರ್ಯನು ಉದಯಿಸಿದ ತರುವಾಯ ಉಷ್ಣತೆಯಿಂದ ಗಿಡ ಬಾಡಲು, ಅದರ ಹೂವು ಉದುರಿ ಅದರ ರೂಪದ ಸೊಗಸು ನಾಶವಾಗುವುದಷ್ಟೆ. ಹೀಗೆಯೇ ಐಶ್ವರ್ಯವಂತನು ತನ್ನ ದಾರಿಗಳಲ್ಲಿ ಬಾಡಿಹೋಗುವನು.
ಯಾಕೋಬನು 1 : 12 (OCVKN)
ಯಾಕೋಬನು 1 : 13 (OCVKN)
ಕಷ್ಟಗಳನ್ನು ಸಹಿಸಿಕೊಳ್ಳುವವನು ಧನ್ಯನು. ಅವನು ಪರಿಶೋಧಿತನಾದ ಮೇಲೆ ಕರ್ತದೇವರು ತಮ್ಮನ್ನು ಪ್ರೀತಿಸುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ಹೊಂದುವನು. ಯಾರಿಗಾದರೂ ಶೋಧನೆ ಬಂದಾಗ, “ದೇವರು ನನ್ನನ್ನು ಶೋಧಿಸುತ್ತಿದ್ದಾರೆ ಎಂದು ಹೇಳಬಾರದು,” ಏಕೆಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರರು. ಅವರು ಯಾರನ್ನೂ ಶೋಧಿಸುವುದೂ ಇಲ್ಲ.
ಯಾಕೋಬನು 1 : 14 (OCVKN)
ಆದರೆ ಪ್ರತಿಯೊಬ್ಬನು ತನ್ನ ಸ್ವಂತ ದುರಾಶೆಯಿಂದ ಆಕರ್ಷಿಸಿ ಮರುಳುಗೊಂಡವನಾಗಿ ಶೋಧನೆಗೆ ಒಳಗಾಗುವನು.
ಯಾಕೋಬನು 1 : 15 (OCVKN)
ಆಮೇಲೆ ದುರಾಶೆಯು ಗರ್ಭಧರಿಸಿ ಪಾಪವನ್ನು ಹೆರುತ್ತದೆ. ಪಾಪವು ಸಂಪೂರ್ಣವಾದ ಮೇಲೆ ಮರಣವನ್ನು ಹೆರುತ್ತದೆ.
ಯಾಕೋಬನು 1 : 16 (OCVKN)
ನನ್ನ ಪ್ರಿಯ ಸಹೋದರರೇ, ಮೋಸಹೋಗಬೇಡಿರಿ.
ಯಾಕೋಬನು 1 : 17 (OCVKN)
ಎಲ್ಲಾ ಉತ್ತಮ ಮತ್ತು ಪೂರ್ಣವಾದ ವರಗಳೂ ಮೇಲಿನಿಂದ ಬಂದವುಗಳೇ, ಅವು ಪರಲೋಕದ ಬೆಳಕಿನ ತಂದೆಯಿಂದ ಇಳಿದು ಬರುತ್ತವೆ. ಆ ತಂದೆಯು ಬದಲಾಗುವ ನೆರಳಿನಂತೆ ಬದಲಾಗುವವರಲ್ಲ.
ಯಾಕೋಬನು 1 : 18 (OCVKN)
ತಂದೆಯು ತಮ್ಮ ಚಿತ್ತದ ಪ್ರಕಾರ ಸತ್ಯವಾಕ್ಯದಿಂದ ನಮ್ಮನ್ನು ಹುಟ್ಟಿಸಲಾಗಿ ನಾವು ಅವರ ಸರ್ವ ಸೃಷ್ಟಿಗಳಲ್ಲಿ ಪ್ರಥಮ ಫಲವಾದೆವು.
ಯಾಕೋಬನು 1 : 19 (OCVKN)
ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯುವುದು ನನ್ನ ಪ್ರಿಯರೇ ಇದನ್ನು ತಿಳಿಯಿರಿ, ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ತೀವ್ರವಾಗಿಯೂ ಮಾತನಾಡುವುದರಲ್ಲಿ ಮತ್ತು ಕೋಪಿಸುವುದರಲ್ಲಿ ನಿಧಾನವಾಗಿಯೂ ಇರಲಿ.
ಯಾಕೋಬನು 1 : 20 (OCVKN)
ಏಕೆಂದರೆ ಮನುಷ್ಯನ ಕೋಪವು ದೇವರು ಬಯಸುವ ನೀತಿಯ ಜೀವನವನ್ನು ತರುವುದಿಲ್ಲ.
ಯಾಕೋಬನು 1 : 21 (OCVKN)
ಆದಕಾರಣ ಎಲ್ಲಾ ಮಾಲಿನ್ಯವನ್ನೂ ಉಳಿದಿರುವ ದುಷ್ಟತನವನ್ನೂ ತೆಗೆದುಹಾಕಿ, ನಿಮ್ಮೊಳಗೆ ಬೇರೂರಿರುವ ವಾಕ್ಯವನ್ನು ನಮ್ರತೆಯಿಂದ ಸ್ವೀಕರಿಸಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳದ್ದಾಗಿದೆ.
ಯಾಕೋಬನು 1 : 22 (OCVKN)
ನೀವು ವಾಕ್ಯದ ಪ್ರಕಾರ ನಡೆಯುವವರಾಗಿರಿ, ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳಬೇಡಿರಿ.
ಯಾಕೋಬನು 1 : 23 (OCVKN)
ಯಾವನಾದರೂ ವಾಕ್ಯವನ್ನು ಕೇಳುವವನಾಗಿದ್ದು ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡ ಮನುಷ್ಯನಂತಿರುವನು.
ಯಾಕೋಬನು 1 : 24 (OCVKN)
ಏಕೆಂದರೆ ಇವನು ತನ್ನನ್ನು ಕನ್ನಡಿಯಲ್ಲಿ ನೋಡಿಕೊಂಡು ಹೋಗಿದ್ದರೂ ತಾನು ಹೀಗಿದ್ದೇನೆಂಬುದನ್ನು ಆ ಕ್ಷಣವೇ ಮರೆತುಬಿಡುವನು.
ಯಾಕೋಬನು 1 : 25 (OCVKN)
ಆದರೆ ಸ್ವಾತಂತ್ರ್ಯವನ್ನುಂಟುಮಾಡುವ ಪರಿಪೂರ್ಣವಾದ ನಿಯಮವನ್ನು ಲಕ್ಷ್ಯವಿಟ್ಟು ನೋಡುತ್ತಲೇ ಇರುವವನು, ಆ ವಾಕ್ಯವನ್ನು ಕೇಳಿದರೂ ಮರೆತು ಹೋಗದೆ ಅದರಂತೆ ನಡೆಯುವವನಾದ್ದರಿಂದ ಅವನು ಧನ್ಯನಾಗುವನು.
ಯಾಕೋಬನು 1 : 26 (OCVKN)
ನಿಮ್ಮಲ್ಲಿ ಭಕ್ತನೆಂದೆಣಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆ ತನ್ನ ಹೃದಯವನ್ನು ಮೋಸಗೊಳಿಸುವವನಾದರೆ ಅವನ ಭಕ್ತಿ ನಿಷ್ಪ್ರಯೋಜಕವಾಗಿದೆ.
ಯಾಕೋಬನು 1 : 27 (OCVKN)
ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಅವರ ಸಂಕಟದಲ್ಲಿ ಪರಾಮರಿಸಿ, ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವುದೇ ತಂದೆ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ದೋಷವೂ ಆಗಿರುವ ಭಕ್ತಿ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27